Posts

ರಂಗಭೂಮಿ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುವ ಸಶಕ್ತ ಮಾಧ್ಯಮ . ಡಾ.ವಿಜಯಾ

ರಂಗಭೂಮಿ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುವ ಸಶಕ್ತ ಮಾಧ್ಯಮ . ಡಾ.ವಿಜಯಾ     ಬಳ್ಳಾರಿ , ಫೆ 24  ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ.   ರಂಗಭೂಮಿ ಸಮಾಜದ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುತ್ತಲೇ ವಿವೇಕವನ್ನು , ಮಾನವೀಯ ಮೌಲ್ಯಗಳನ್ನು ಕಟ್ಟಿ ಕೊಡುವಂತಹ ಸಶಕ್ತವಾದ ಮಾಧ್ಯಮ ಎಂದು ಬೆಂಗಳೂರಿನ ಹಿರಿಯ ನಾಟಕಕಾರ್ತಿಯಾದ ಡಾ.ವಿಜಯಾ ಸುಬ್ಬರಾಜು ನುಡಿದರು.        ನಗರದ ಸರಳಾದೇವಿ  ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಶನಿವಾರ ಕಾರಂತ ರಂಗಲೋಕ ಆಯೋಜಿಸಿದ್ದ ‘ ಕಾರಂತ ಸಾಹಿತ್ಯ ರತ್ನ -2023 ‘  ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.        ಈ ಹೊತ್ತು ಪ್ರೇಕ್ಷಕರ ಅಭಿರುಚಿ ಮನೋಭಾವಗಳು ಬದಲಾಗಿವೆ .ಕಲಾವಿದರಲ್ಲೂ ನಿಷ್ಠೆ ,ಕಲಾಪ್ರಜ್ಞೆ ಕಡಿಮೆಯಾಗಿದೆ ಎಂದು ವಿಷಾದಿಸಿದರು .ನಾನು ವಿದ್ಯಾರ್ಥಿ ಜೀವನದಲ್ಲಿ ಮೊಟ್ಟ ಮೊದಲಿಗೆ ಅಭಿನಯಕ್ಕಾಗಿ ಮುಖಕ್ಕೆ ಬಣ್ಣ ಹಚ್ಚಿಕೊಂಡಾಗ ಮನೆಯಲ್ಲಿ ಎಲ್ಲರೂ ಅಸಹಕಾರ ವ್ಯಕ್ತಪಡಿಸಿದರು. ನನ್ನಲ್ಲಿರುವ ರಂಗ ಪ್ರೀತಿ , ಮನೋಸ್ಥೈರ್ಯದಿಂದಾಗಿ ಹೆಚ್ಚು ನಾಟಕಗಳನ್ನು ಬರೆಯಲು ಮತ್ತು ಅಭಿನಯಿಸಲು ಸಾಧ್ಯವಾಯಿತು ಎಂದರು.       ಪ್ರಶಸ್ತಿ ಪುರಸ್ಕೃತ ನಾಟಕಕಾರ ಬೇಲೂರು ರಘುನಂದನ ಮಾತನಾಡಿ ಹೊಸ ತಲೆಮಾರು ಅಭಿನಯ ಮತ್ತು ಸಾಹಿತ್ಯದ ಕಡೆ ಹೆಚ್ಚು ಮುಖ ಮಾಡಿದಾಗ ಹೊಸ ಸಮಾಜ ನಿರ್ಮಾಣವಾಗಲು ಸಾಧ್ಯ. ಹೊಸಬರು ಈ ...

ರಂಗ ಮಾಲಿಕೆ -೬೭ ಮುಟ್ಟೆಸೂಗೂರು ವೆಂಕಟರೆಡ್ಡಿ

ಸಿರಿನಾಡಿನ ಬಹುಮುಖ ಪ್ರತಿಭೆ ‘ಮಿಟ್ಟೆಸೂಗೂರು ವೆಂಕಟರೆಡ್ಡಿ’. ಪ್ರತಿಯೊAದು ನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಎಂದರೆ ಅದು ಹಳ್ಳಿಗರು. ಅವರ ರಂಗಭೂಮಿಯ ಹೆಜ್ಜೆಗಳೇ ಅವರ ನಿಜವಾದ ಶ್ರೀಮಂತಿಕೆ ಎಂದು ನಂಬಿದವರು, ಅದರಂತೆ ನಡೆದವರು ಕೂಡ. ಈ ಮನೋಮಾರ್ಗದಲ್ಲಿ ನುಡಿದು ನಡೆದ ರಂಗಕರ್ಮಿಯ ಪರಿಚಯ ಇಲ್ಲಿ ಮಾಡಲೊರಟ್ಟಿದ್ದೇನೆ. ಅವರ ಹೆಸರು ಮಿಟ್ಟೆಸೂಗೂರು ವೆಂಕಟರೆಡ್ಡಿ. ಇವರು ಸಿರುಗುಪ್ಪ ಮತ್ತು ಆದೋನಿ ಗಡಿಭಾಗದ ಶ್ರೇಷ್ಠ ಗಮಕಿಗಳು, ಪುರಾಣ ಪ್ರವಚಕರು, ಮುತ್ಸದ್ಧಿ ಮುಖಂಡರು, ಸಾಹಿತಿಗಳು ಹಾಗೂ ರಂಗಕರ್ಮಿಗಳು ಕೂಡ ಆಗಿದ್ದಾರೆ. ಹೀಗೆ ತಮ್ಮ ಬಹುಮುಖ ಪ್ರತಿಭೆಯ ಮೂಲಕವೇ ಈ ಭಾಗದಲ್ಲಿ ಹೆಸರಾಗಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರು ಗ್ರಾಮದವರಾದ ಹನುಮಂತರೆಡ್ಡಿ ಮತ್ತು ಲಿಂಗಮ್ಮ ಎಂಬ ಉಳ್ಳವರ ಕುಟುಂಬದಲ್ಲಿ ಏಕೈಕ ಮಗನಾಗಿ ಕ್ರಿ.ಶ.೧೯೪೬ರಲ್ಲಿ ಜನಿಸಿದರು. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಆಗೀನ ‘ಅಯ್ಯನವರ ಶಾಲೆ’ಯಲ್ಲಿ ಗುರುಗಳಾಗಿದ್ದ ‘ಸಾಲಿ ಭೀಮಯ್ಯ’ರ ಬಳಿ ಮತ್ತು ಈಗಿನ ಆಂಧ್ರದ ಹೆಬ್ಬುಟ ಗ್ರಾಮದಲ್ಲಿ ಅಂದಿನ ಕಾಲಕ್ಕೆ ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತಾನಾಡುತ್ತಿದ್ದ ‘ಬಸರಳ್ಳಿ ಸಿದ್ರಾಮಯ್ಯ’ರ ಬಳಿ ಪಡೆಯುತ್ತಾರೆ. ಆದರೆ ಇವರು ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರಿAದ ಇವರ ಉಪಟಳವನ್ನು ನೋಡಲಾಗದೆ ತಂದೆಯವರ ಆಧ್ಯಾತ್ಮಿಕ ಗುರುವಾಗಿದ್ದ ‘ಹರಿವಾಣದ ಭದ್ರಯ್ಯ ಸ್ವಾಮಿ’ಗಳ ಮಾತಿನಂತೆ ಆದ...

ರಂಗ ಮಾಲಿಕೆ -೬೬ ಅಗಸನೂರು ದತ್ತಪ್ಪ

ಬಣ್ಣದ ಲೋಕದಿಂದ ಮರೆಯಾದ ಕಲಾರತ್ನ ‘ಅಗಸನೂರು ದತ್ತಪ್ಪ' ಸಮಾಜದಲ್ಲಿ ಯಾವುದೇ ಒಂದು ವಸ್ತು, ವ್ಯಕ್ತಿ, ವಿಷಯದ ಕುರಿತಾದ ಅಲ್ಪಸ್ವಲ್ಪ ಅವಶೇಷ ಅಥವಾ ಇತಿಹಾಸದ ಕುರುಹುಗಳು ಇಲ್ಲದೇ ಹೋದರೆ, ಹಿಂದೆ ಆ ವಿಚಾರ ಎಷ್ಟೇ ಪ್ರಸಿದ್ಧಿಯಾಗಿದ್ದರೂ ಅದನ್ನು ಕಾಲಕ್ರಮೇಣ ಮರೆತುಬಿಡುತ್ತಾರೆ. ಅದರ ಪುನರುಚ್ಛಾರವಾಗದ ಹೊರತು ಅದು ಅಸ್ತಿತ್ವದಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ನಾಡು ನುಡಿ ಕಂಡ ಶ್ರೇಷ್ಠ ಕಲಾ ದಿಗ್ಗಜ ‘ಅಗಸನೂರು ದತ್ತಪ್ಪ' ಒಂದು ನೈಜ ನಿದರ್ಶನ. ದತ್ತಪ್ಪನವರು ೨೦ನೇ ಶತಮಾನದ ಆದಿಯಲ್ಲಿ ಕರ್ನಾಟಕಾಂಧ್ರದ ಗಡಿಭಾಗದ ಸಾಂಸ್ಕೃತಿಕ ಪರಂಪರೆಯಲ್ಲಿ ಅದ್ಭುತ ಕಲಾಕರನಾಗಿ ಬಾಳಿ ಬದುಕಿದ ಮಹಾ ಮೇಧಾವಿ. ಆದರೆ ಅವರು ಹತರಾದ ನಂತರ ಕಾಲಕ್ರಮೇಣ ಅವರ ಅವಶೇಷಗಳು ಕಲಾ ಲೋಕದಿಂದ ಕಣ್ಮರೆಯಾದದ್ದು ನೆನೆದರೆ ತುಂಬಾ ವಿಷಾಧನೀಯವೆನಿಸುತ್ತದೆ. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿನಾಡಿನ ಹಳ್ಳಿ ಅಗಸನೂರಿನವರು. ತಂದೆ ಗಡ್ಡೆ ತಿಮ್ಮಣ್ಣನಾಯಕ ತಾಯಿ ಮಾರೆಮ್ಮ. ಬಡ ಕೃಷಿಕ ಕುಟುಂಬದಲ್ಲಿ ೦೬.೦೨.೧೯೩೨ರಲ್ಲಿ ಜನಸಿದ ಇವರಿಗೆ ತಾಯಿಯೇ ಮೂಲ ಪ್ರೇರಣೆ. ಮಾರೆಪ್ಪ ಇವರ ಮೊದಲ ಹೆಸರು. ಮಾರೆಪ್ಪನಿಂದ ದತ್ತಪ್ಪ, ದತ್ತಾತ್ರೇಯ ಆದ ಸಂಗತಿಗಳು ತುಂಬಾ ರೋಚನೀಯವಾಗಿವೆ. ರೈತಾಪಿ ಕೆಲಸಗಳಲ್ಲಿ ಜನಪದ ಗೀತೆಗಳನ್ನು ಹಾಡುತ್ತಾ ಮೈಮನಸ್ಸಿನ ಭಾರ ಇಳಿಸಿಕೊಳ್ಳುತ್ತಿದ್ದ ಮಾರೆಮ್ಮರಿಗೆ ಮಗನದೇ ದೊಡ್ಡ ಚಿಂತೆ. ಆತನನ್ನು ವಿದ್ಯಾವಂತನನ್ನಾಗಿ ಮತ...

ರಂಗ ಮಾಲಿಕೆ -೬೫ ಬಳ್ಳಾರಿ ನೆಲದ ಮಹಾ ಚೇತನ ವೈ.ನಾಗೇಶಶಾಸ್ತ್ರಿಗಳು.

ಬಳ್ಳಾರಿ ನೆಲದ ಮಹಾನ್ ಚೇತನ 'ಸರ್ವದರ್ಶನ ತೀರ್ಥ ವೈ.ನಾಗೇಶ ಶಾಸ್ತ್ರಿಗಳು'. ವ್ಯಕ್ತಿಯೊಬ್ಬ ಒಂದು ನಾಡಿನ ಗಡಿರೇಖೆಯನ್ನು ಗುರುತಿಸುವಲ್ಲಿ ಸಹಾಯವಾಗುತ್ತಾನೆ ಎಂದರೆ, ಬಹುತೇಕ ನಂಬಿಕೆಗೆ ದೂರವಾದ ಮಾತು ಎಂದು ಮೂಗು ಮುರಿಯುವ ಜನರಿದ್ದಾರೆ. ಆದರೆ ಹಲವು ದಶಕಗಳ ಹಿಂದೆ ಅಂತಹದ್ದೊಂದು ನಿದರ್ಶನ ಕಣ್ಮುಂದೆ ನಡೆದುದನ್ನು ನಾವೂ ಈಗಲೂ ಅರಿಯಬಹುದು. ಬಳ್ಳಾರಿಯಂಥ ದ್ವಿಭಾಷಾ ವಾತಾವರಣದ ಜಿಲ್ಲೆಯಲ್ಲಿ ಹುಟ್ಟಿ, ಶೈಕ್ಷಣಿಕ ಪ್ರತಿಕೂಲ ವಾತಾವರಣದಲ್ಲಿ ಬೆಳೆದು, ತಮ್ಮ ಬದುಕಿನ ಬಹುಕಾಲವನ್ನು ಅಲ್ಲಿಯೇ ಕಳೆದು ಸರ್ವದರ್ಶನತೀರ್ಥ, ಸಾಂಖ್ಯತೀರ್ಥಗಳಂಥ ವಿದ್ವತ್ಪದವಿಗಳನ್ನು ಸಂಪಾದಿಸಿ, ಕನ್ನಡದ ಎರಡು ಅರಸು ಮನೆತನಗಳ ಆಸ್ಥಾನ ವಿದ್ವಾಂಸರಾಗಿ, ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಕನ್ನಡ ಕಲಿಯುವವರಿಗೆ ಕಲಿಸುವವರಾಗಿ, ಕಲಿತವರಿಗೆ ಸಂಘಟಕರಾಗಿ, ಸಂಘಟಕರಿಗೆ ಮಾರ್ಗದರ್ಶಕರಾಗಿ ತಮ್ಮ ನಲವತ್ತನೇ ವಯಸ್ಸಿನಲ್ಲಿಯೇ ಒಂದು ನಾಡಿನ ಸಂಸ್ಕೃತಿಯ ಪ್ರಮುಖ ವಿದ್ಯಮಾನವಾದ ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದವರೇ 'ಪಂಡಿತ ವೈ.ನಾಗೇಶ ಶಾಸ್ತ್ರಿಗಳು'. ಇವರು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಏಳುಬೆಂಚಿ ಗ್ರಾಮದಲ್ಲಿ ನೀಲಮ್ಮ ಮತ್ತು ನಯನಯ್ಯ ಎಂಬ ಬಡಜಂಗಮ ದಂಪತಿಗಳ ಏಳನೇ ಮಗನಾಗಿ ೧೮೯೩ರಲ್ಲಿ ಜನಸಿದರು. ಶಾಸ್ತ್ರಿಗಳ ಮೊದಲ ಹೆಸರು ನಾಗಯ್ಯ. ಇವರ ಕುಟು...

ಕಥೆಯೇ ಕಥೆಯಾದಾಗ..

Image
  ಮೂಲ ಕಥೆಯ ನಾಯಕಿ   ಸಾಂದರ್ಭಿಕ ಚಿತ್ರ         ಕಥೆಯೇ ಮತ್ತೊಂದು ಕಥೆಯಾದಾಗ...    ಇವತ್ತು ಸ್ವಲ್ಪ ಬೇಗನೇ ಲೈಬ್ರರಿ ಓದಿಗೆ ತಿಲಾಂಜಲಿ ಹೇಳಿ ಹೆಗಲಿಗೆ ಬ್ಯಾಗ್ ಹಾಕೊಂಡು ಹೊರಬಂದೆ. ಬರುವಾಗ ಏನೋ, ಇವತ್ತು ಹೋಗುವ ದಾರಿಯನ್ನು ಬದಲಾಯಿಸೋಣ ಎಂದೇನಿಸಿ ನವರಂಗದ ಕಡೆಯಿಂದ ಬರಲು ನಿರ್ಧರಿಸಿ ಹಾದಿ ಬದಲಿದೆ. ಕೊನೆಗೆ ಅಲ್ಲಿಗೂ ಬಂದು ನವರಂಗ ಮಂಟಪದ ಮೇಲೆ ಸಂಶೋಧನಾ ಬುದ್ಧಿ ತೋರಿಸಲು ಆರಂಭಿಸಿದೆ.     ಉಸಿರು ಗಟ್ಟುವ ಸ್ಥಳ, ಬಡ್ದಾಕಿದ್ರು ಕೇಳೋಕೆ ಅಲ್ಲಿ ಒಂದು ನರಪಿಳ್ಳೆನು ಇರಲಿಲ್ಲ. ಆದರೂ ಧೈರ್ಯ ಮಾಡಿಕೊಂಡು ತುಂಬಾ ಗಾಢವಾಗಿ, ತದೇಕ ಚಿತ್ತದಿಂದ ಅಲ್ಲಿನ ಕೆಳ ಮಂಟಪ ನೋಡಲೆಂದು ಅಲ್ಲಿನ ಎರಡು ಕೋಣೆಯ ತೆರದ ಕಿಟಿಕಿಯ ಅಂಚಿಗೆ ಕಣ್ಣಾರಳಿಸಿದೆ. ಅದೇನೋ ಇದ್ದಕ್ಕಿದ್ದಂತೆ ಹಕ್ಕಿ ಪಿಕ್ಕಿಗಳ ಧ್ವನಿಯ ನಡುವಿಂದ ಯಾರೋ ಗದರಿದ ಹಾಗೆ, ವಿಸಿಲ್ ಹೊಡೆದ ಹಾಗೆ ಭಾಸವಾಯಿತು. ಮನಸ್ಸು ಆ ಕ್ಷಣ ಜಲ್ಲೆಂದು ಅರೆಕ್ಷಣದಲ್ಲೇ ಬಲಗೈ ತಾನಾಗಿಯೇ ಉಗಳಚ್ಚಿಕೊಂಡು ಬೆನ್ನು ಮುಟ್ಟಿ ಧೈರ್ಯ ಹೇಳಿತು. ಆದರೂ ಮತ್ತದೇ ಗತ್ತಲ್ಲಿ ಕೆಳಗಿನಿಂದ ಮೇಲಿನ ವೇದಿಕೆಗೆ ಬಂದು ಅತ್ತ ಇತ್ತ ಕತ್ತಾಡಿಸಿದೆ.               ಅಚ್ಚರಿಯಂಬಂತೆ ನನ್ನ ಕಣ್ಣೆದುರೆ ಒಂದು ಮುಗ್ಧ ಮೊಗದ ಅಂದದ ಚಲುವೆ,ಕೆದರಿದ ಕೂದಲು, ಹಳೆಯ ಜೀನ್ಸ್ ಪ್ಯಾಂಟ್, ಹಳೆಯದಾದ ತುಂಬು...

ಸಿರಿನಾಡಿನ ಹುಡುಗಿಗೆ ಕಂಚಿನ ಉಡುಗೆ ( ನಂದಿನಿ ಅಗಸರ)

Image
 ಸಿರಿನಾಡಿನ ಹುಡುಗಿಗೆ ಕಂಚಿನ ಉಡುಗೆ ಪ್ರತಿಯೊಬ್ಬ ಸಾಧಕರು ನೆನಪಿಡಬೇಕಾದ ಮೂರು ಅಂಶಗಳೆಂದರೆ 'ಮೊದಲು ಅವಮಾನ, ನಂತರ ಅನುಮಾನ ತದನಂತರವೇ ಸನ್ಮಾನ '  ಇವುಗಳನ್ನು ಮನದಲ್ಲಿಟ್ಟುಕೊಂಡು ಮುಂದುವರೆದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ನಿದರ್ಶನವೆಂದರೆ ಇತ್ತೀಚೆಗೆ ಚೀನಾದ ಹಾಂಗ್ ಝೌ ನಲ್ಲಿ ನಡೆದ ಏಷ್ಯಾನ್ ಗೇಮ್ಸ್ ನಲ್ಲಿ ೮೦೦ ಮೀ ಹೆಪ್ಟಾಥ್ಲಾನ್ ನಲ್ಲಿ ಕಂಚಿನ ಪದಕ ಪಡೆದ ಆಟಗಾರ್ತಿ ಬಳ್ಳಾರಿಯ ಹೆಮ್ಮೆಯ ಪುತ್ರಿ ನಂದಿನ ಅಗಸರ.     ಇವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಸಮೀಪದ ಶ್ರೀನಗರ ಕ್ಯಾಂಪ್ ಎಂಬ ಪುಟ್ಟ ಗ್ರಾಮದಲ್ಲಿ ತಂದೆ  ಯಲ್ಲಪ್ಪ ತಾಯಿ ಅಯ್ಯಮ್ಮರ ಮೊದಲ ಮಗಳಾಗಿ ೭ನೇ ಆಗಸ್ಟ್ ೨೦೦೩ ರಲ್ಲಿ ಜನಿಸಿದರು.      ಕಡು ಬಡತನದಲ್ಲಿ ಹುಟ್ಟಿದ ನಂದಿನಿ ಬಾಲ್ಯದ ದಿನಗಳಲ್ಲಿ ತೀವ್ರತರವಾದ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ತನ್ನ ತಂದೆಯು ಮಾಡಿದ ಸಾಲವನ್ನು ತೀರಿಸಲಾಗದೇ ಹೊಟ್ಟೆಪಾಡಿಗೆಗಾಗಿ ಹೈದ್ರಾಬಾದ್ ಗೆ ದುಡಿಯಲು ೩ ತಿಂಗಳ ನಂದಿನಿಯನ್ನು ಕರೆದುಕೊಂಡು ಇಡೀ ಕುಟುಂಬ ವಲಸೆ ಬರುತ್ತದೆ. ಆರಂಭದಲ್ಲಿ ತಂದೆ ಯಲ್ಲಪ್ಪ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸುಮಾರು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಆಗ ಅಲ್ಲಿನ ಸಹೃದಯರ ಒಲುಮೆಯಿಂದಾಗಿ ಅಂಗಳದಲ್ಲಿ ಆಟವಾಡುತ್ತಿದ್ದ ೭ ವರ್ಷದ ನಂದಿನಿಯವರನ್ನು ಕರೆದುಕೊಂಡು ಹೋಗಿ  ಸೈನಿಕ (ಕೆ...

ಗುಪ್ತಕಾಯಕದ ಹಿರಿಜೀವ 'ಗುಬ್ಬಿಹಾಳ್ ಅಂಬ್ರಮ್ಮವ್ವ'.

Image
   ಗುಪ್ತ ಕಾಯಕದ ಹಿರಿಜೀವ 'ಗುಬ್ಬಿಹಾಳ್ ಅಂಬ್ರಮವ್ವ'.     ನಮ್ಮೂರು ಶಾಲೆ ಮೇಷ್ಟ್ರು ಸುಮಾರು  ದಿನಗಳಿಂದ ಕಣ್ಣು ಒತ್ತುತ್ತಾ ಇವೆ, ಬಹಳಷ್ಟು ನೋವು, ತಡಿಯಲಾಗುತ್ತಿಲ್ಲ ಎನ್ನುತ್ತಾ ಇಂದಿಗೆ ಒಂದು ತಿಂಗಳು ದೂಡಿದ್ದಾರೆ. ಅಲ್ಲದೇ  ನಾನೂ ಸಹ " ಹಾಗೇನಿಲ್ಲ ಬಿಡಿ ಸಾರ್, ಮನೇಲಿ ಚಿಕ್ಕ ಮಕ್ಳು ಇದವಲ್ಲಾ ರಾತ್ರಿ ನಿದ್ದೆ ಸರಿಯಾಗಿ ಆಗಿರುವುದಿಲ್ಲ. ಹಾಗಾಗಿ ನಿಮ್ಗೆ ಕಣ್ಬೇನೆ ಕಾಣ್ಸ್ಕೋತಾ ಇರಬಹುದು. ಅದ್ಕೆ  ನೀವು ಸ್ವಲ್ಪ ಹೊತ್ತು  ಕಣ್ತುಂಬಾ ನಿದ್ದೆ ಮಾಡಿ ಹೋಗಿ ಸಾರ್ " ಎಂದು ಸಲಹೆ ಕೊಟ್ಟಿದ್ದೆ. ಆದರೆ ಇವತ್ತು ಕೂಡ ಶಾಲೆಗೆ ಬಂದ್ಕೂಡಲೇ ಎಂದಿನಂತೆ ಕಣ್ಕಥೆ ಹೇಳ್ತಾ ಇದ್ರು.ಇವತ್ತೇನೋ ಕಥೆಯ ಜೊತೆ ರಸಾನುಭವ ಇದ್ದುದ್ದರಿಂದ ನಾನೂ ಸ್ವಲ್ಪ ಖೇಧ ಪಟ್ಟೆನು. ಅದಕ್ಕಿರುವ ರಹದಾರಿಗಳ ಕುರಿತಾಗಿ ಮತ್ತೆ ಭೂತ, ವರ್ತಮಾನ,ಭವಿಷ್ಯದ ವಿಚಾರಗಳು ನಾಲಗೆ ಮೇಲಾಡ ತೊಡಗಿದವು. ಆ ಹಾದಿಯಲ್ಲಿಯೇ ದೊರೆತದ್ದು ಇಂದಿನ ಈ ಕಥೆಯ ನಾಯಕಿ ಗುಬ್ಬಿಹಾಳ್ ಅಂಬ್ರಮ್ಮವ್ವ.   ನೋಡಲು ಮುಪ್ಪಾಗಿ ಸುಕ್ಕುಗಟ್ಟಿದ ಎಳೆ ಸಣಕಲು ದೇಹ, ಇಂದಿಗೂ ಅಲುಗಾಡದ ಗಟ್ಟಿಮುಟ್ಟಾದ ಹಲ್ಲುಗಳು, ಸರಳ ಸಜ್ಜನಿಕೆಯ ಅವಿರತ ಶ್ರಮದ ಮುಗ್ಧ ಜೀವಿ.ಅಲ್ಲದೇ ಯಾವುದೇ ಫಲಾಪೇಕ್ಷವಿಲ್ಲದೇ ಗುಪ್ತ ಸೇವೆ ಮಾಡುತ್ತಿರುವ ಒಂಟಿ ಬಡಜೀವ.     ಅಂಬ್ರಮ್ಮವ್ವ ನಮ್ಮ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಆಂಧ್ರದ ಗಡಿಭಾ...

ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"

Image
  ಬಣ್ಣದ ಬದುಕು ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"     ಇವರು ಬಳ್ಳಾರಿ ತಾಲ್ಲೂಕಿನ ಹಂದ್ಯಾಳು ಗ್ರಾಮದ ಜಿ.ಹನುಮಂತಪ್ಪ ಮತ್ತು ಲಕ್ಷ್ಮೀದೇವಿಯವರ ಮಗನಾಗಿ ೦೧.೦೬.೧೯೬೬ ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಛಾಯಾಗ್ರಾಹಕರು ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಸುಮಾರು 23 ವರ್ಷಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವ ತಂದುಕೊಟ್ಟರು. ಇದು ಗ್ರಾಮೀಣ ಪ್ರತಿಭೆಗೆ ಸಿಕ್ಕ ಮನ್ನಣೆ ಎಂದರೆ ತಪ್ಪಾಗಲಾರದು. ಇವರು ತಮ್ಮ ಶಿಕ್ಷಣವನ್ನು ಹಂದ್ಯಾಳ್ ಕೊರ್ಲಗುಂದಿ ಬಳ್ಳಾರಿಯಲ್ಲಿ ಮುಗಿಸಿದರು. ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಂಗದೊಲವುಗೆ ಸೆರೆಯಾದರು.ಆ ಮೂಲಕ ಗ್ರಾಮದ ಜಾತ್ರೆ ಉತ್ಸವಗಳಲ್ಲಿ ತಮ್ಮ ಅಭಿನಯದ ಚಾಕಚಕ್ಯತೆಯನ್ನು ತೋರ್ಪಡಿಸಿದರು. ತಮ್ಮ ತಂದೆಯ ಪೂರ್ಣಪ್ರಮಾಣದ ಪ್ರೇರಣೆಯೇ ರಂಗಭೂಮಿಗೆ ಧುಮುಕುವಂತೆ ಮಾಡಿತು.      ಇಡೀ ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧವಾದ ನಾಡು ಅಂತೆಯೇ ಇಲ್ಲಿ ಜಾನಪದ ಹವ್ಯಾಸಿ ಹೀಗೆ ನಾನಾ ವಿಧವಾಗಿ ಸಾಂಸ್ಕೃತಿಕ ವಾತಾವರಣ ಹಚ್ಚಹಸಿರಾಗಿದೆ ಈ ಮೂಲಕ ಶ್ರೀಯುತರ ಹುಟ್ಟೂರಿನಲ್ಲಿ ಬಾಲ್ಯ ಕಲಿಯುವಾಗ ಊರಿನಲ್ಲಿ ಕಾಣಸಿಗುತ್ತಿದ್ದ ನಾಡೋಜ ಬುರ್ರಕಥಾ ಈರಮ್ಮನವರ ಅಭಿನಯ ಪೂರಿತ ಮತ್ತು ವಾಚೀಕ ಸಂಪನ್ನವಾದ ಕಥೆಗಳು, ಬಯಲಾಟದ ಜಂಬಣ್ಣನವರ ಹಾಸ್ಯ ಸದೃಶ್ಯ ದೃಶ್ಯಾವಳಿಗಳು,ಗದ್ಯ ಪದ್ಯ ಮಿಶ್ರಿತ ಪುರಾಣ ಪ...

ರಂಗ ಮಾಲಿಕೆ - ೬೪ ನೇಪಥ್ಯಕ್ಕೆ ಸರಿದ ಬಣ್ಣದ ಮೋಡಿಗಾರ 'ಎಂ.ಮುತ್ಯಾಲ ಶ್ರೀರಾಮುಲು'.

Image
ಬಣ್ಣದ ಬದುಕು ರಂಗ ಮಾಲಿಕೆ - ೬೪ ನೇಪಥ್ಯಕ್ಕೆ ಸರಿದ ಬಣ್ಣದ ಮೋಡಿಗಾರ 'ಎಂ.ಮುತ್ಯಾಲ ಶ್ರೀರಾಮುಲು'.       ನಾಟಕ ಎಂದ ಕೂಡಲೇ ಅಲ್ಲಿ ನಟ,ನಟಯರಲ್ಲದೇ, ನೇಪಥ್ಯದಲ್ಲಿದ್ದಕೊಂಡು ತಮ್ಮ ಭಾವಲಹರಿಯನ್ನು ಅಭಿನೇತೃಗಳ ಮೂಲಕವೇ ಅಭಿವ್ಯಕ್ತಿ ಪಡಿಸುವ ವ್ಯಕ್ತಿಗಳಲ್ಲಿ  'ಪ್ರಸಾಧನಕಾರ ಅಥವಾ ಮೇಕಪ್ ಮ್ಯಾನ್' ಒಬ್ಬರು. ಈಗಿನ ಜಮಾನದಲ್ಲಿ ನಿಜವಾಗಿಯೂ ನಾಟಕವೊಂದಕ್ಕೆ ರಂಗು ಬರುವುದೇ ನೇಪಥ್ಯಗಾರರಿಂದ.ಅದರಲ್ಲೂ ಪ್ರಸಾಧನಕಾರ ತನ್ನ ಕುಂಚದಿಂದ ಅಭಿನೇತ್ರಿಯ ಪಾತ್ರಕ್ಕೆ ಜೀವತುಂಬುತ್ತಾನೆ. ಅವರು ನಾಟಕದ ಕಥಾವಸ್ತುವಿಗೆ ಬಣ್ಣ ತುಂಬುತ್ತಾರೆ. ೮೦ ರ ದಶಕದಲ್ಲಿ ಬಳ್ಳಾರಿಯ ರಂಗಭೂಮಿ ಇತಿಹಾಸದಲ್ಲಿ  ಉತ್ತುಂಗದ ಪ್ರಸಿದ್ಧತೆಯನ್ನು ಗಳಿಸಿದ ಒಬ್ಬ ಶ್ರೇಷ್ಠ ಪ್ರಸಾಧನಕಾರ ಇಂದು ನಮ್ಮ ನಿಮ್ಮೊಡನೆ ಇದ್ದು ಇಲ್ಲದಂತಾಗಿದ್ದಾನೆ.ಆ ವ್ಯಕ್ತಿಯೇ ಬಳ್ಳಾರಿಯ 'ಎಂ.ಮುತ್ಯಾಲ ಶ್ರೀರಾಮುಲು'.     ಸಣ್ಣದಾದ  ಸಣಕಲು ದೇಹ, ಆ ದೇಹಕ್ಕೆ ಅಷ್ಟೇನು ವರ್ಚಸ್ಸಲ್ಲದ ಉಡುಪು, ಒಡೆದ ಸೋಡಾಗ್ಲಾಸು, ಕೈಲೊಂದು ಮೋಟು ಬೀಡಿ ಮತ್ತು ಬಾಯಲ್ಲಿ ಗುಟ್ಕಾ ಜಗಿಯುತ್ತಾ ಆಗಾಗ ಬಳ್ಳಾರಿ ಹೃದಯ ಭಾಗದ ರಾಘವ ಕಲಾ ಮಂದಿರದಲ್ಲಿ ಕಾಣಸಿಗುವ ಈ ಗುರುತಿರುವ ವ್ಯಕ್ತಿಯೇ ಎಂ.ಶ್ರೀರಾಮುಲು. ನಿಜಕ್ಕೂ ಬಹಿರಂಗದಲ್ಲಿ ಸರಳ ಸಜ್ಜನಿಕೆಯ ತೀರಾ ಬಡವರಾದರೂ, ಅಂತರಂಗದಲ್ಲಿ ಎಲ್ಲರನ್ನೂ ಅತಿಯಾಗಿ ಪ್ರೀತಿಸುವ ಹೃದಯವಂತಿಕೆಯ ಶ್ರೀಮಂತರೆನಿಸಿದ್ದಾರೆ. ಇವರು ಸ...

ರಂಗ ಮಾಲಿಕೆ -೬೩ ಕನ್ನಡ ಚಲನಚಿತ್ರರಂಗದ ಗಡಿನಾಡಿನ ರಂಗತಾರೆ 'ಬಳ್ಳಾರಿ ರತ್ನಮಾಲಾ'.

Image
 ಬಣ್ಣದ ಬದುಕು ರಂಗ ಮಾಲಿಕೆ -೬೩  ಕನ್ನಡ ಚಲನಚಿತ್ರರಂಗದ ಗಡಿನಾಡಿನ ರಂಗತಾರೆ 'ಬಳ್ಳಾರಿ ರತ್ನಮಾಲಾ'.      ಭಾರತೀಯ ಚಲನಚಿತ್ರರಂಗದಲ್ಲಿ ಇಂದು ಸ್ಯಾಂಟಲ್ ವುಡ್ ನದ್ದೇ ಅರ್ಭಟ. ಬಾಕ್ಸ್ ಆಫೀಸ್ ನ ಎಲ್ಲಾ ದಾಖಲೆಗಳನ್ನು ಮುರಿದು ಕಟ್ಟುವಷ್ಟರ ಮಟ್ಟಿಗೆ ಬೆಳೆಯುತ್ತಿದೆ.ಅದರ ನಿದರ್ಶನಗಳು ಈಗ ನಮ್ಮ ಕಣ್ಮುಂದೆ ಇರೋ ಕೆ.ಜಿ.ಎಫ್ ನಂತಹ ಅನೇಕ ಸಿನಿಮಾಗಳು. ಆದರೆ ಇಷ್ಟೇಲ್ಲಾ ವೈಭವಪೇತವಾಗಿ ಮೆರೆಯುತ್ತಿರುವ ಸ್ಯಾಂಡಲ್ ವುಡ್ ನೋಣ ಹೊಡೆಯುತ್ತ, ರೋಗಿಯಂತೆ ತೆವಳುತ್ತಾ ಇತ್ತು. ಹಾಗಾದರೆ ಮತ್ತೆ ಪುನಶ್ಚೇತನ ದೊರೆತಿದ್ದು ಯಾವಾಗ? ಆ ಯಶಸ್ಸಿನ ಧೃವತಾರೆಗಳು ಯಾರ್ಯಾರು ? ಅಂತಾ ನೋಡಿದಾಗ ಕಾಣುವ ಹಲವು ಚೇತನಮಣಿಗಳಲ್ಲಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವಂತೆ ಮಾಡಿದ ಹೆಸರೇ ' ಬಳ್ಳಾರಿ ವನಮಾಲಾ'.     ಇವರು ೦೩ನೇ ಮಾರ್ಚ್ ೧೯೨೮ ರಂದು ಬಳ್ಳಾರಿಯ ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದ ತಿಮ್ಮಪ್ಪ ಹಾಗೂ ವೀರಮ್ಮರ ೬ನೇ ಮಗಳಾಗಿ ಜನಿಸಿದರು. ರತ್ನಮಾಲಾರು ನಿಜಕ್ಕೂ ಸುಂದರ ಹೂಗಳಿಂದ ಕಟ್ಟಿದ ಹೂ ಮಾಲೆಯಷ್ಟೇ ಸೌಂದರ್ಯವತಿ ಮತ್ತು ಸ್ಪೂರದ್ರೂಪಿಯಾಗಿದ್ದರು.ನೋಡಿದಾಕ್ಷಣ ಎಂತಹ ರಸಿಕನಾದರೂ ಮನಸೋತು ಶರಣಾಗತಿಯಾಗಿಸುವಷ್ಟು ಚೆಲುವು ಅವರಲ್ಲಿ ಅಡಗಿತ್ತು. ಅಲ್ಲದೇ ಮೂಲತಃ ಕಲೆಯನ್ನಾಶ್ರಯಿಸಿದ ಕುಟುಂಬದಲ್ಲಿ ಬೆಳೆದಿದ್ದರಿಂದ ಕಲೆಯನ್ನು ಒಲಿಸಿಕೊಳ್ಳಲು  ತಡವಾಗಲಿಲ್ಲ. ಬಾಲ್ಯದಿಂದಲೂ ತಮ್ಮ ಸಹೋದರಿಯಾದ ...

ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'..

Image
 ಬಣ್ಣದ ಬದುಕು ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'.     ಗಿಡದಲ್ಲಿ ಅರಳಿದ ಅನೇಕ ಹೂಗಳಲ್ಲಿ ಕೆಲವು ದೇವರ ಪಾದ,ಮುಡಿ ಸೇರಿ ಸಾರ್ಥಕತೆ ಪಡೆದರೆ, ಅನೇಕ ಹೂಗಳು ಕಸದ ಪಾಲಾಗಿ ತಿಪ್ಪೆ ಸೇರುತ್ತವೆ. ಆದರೆ ಅವುಗಳಲ್ಲೂ ಕೆಲವೇ ಕೆಲವು ಹೂಗಳು ನೋಡುಗರ ಕಣ್ಮನ ಸೆಳೆದು ರಸಿಕರ ಅಂತರಾಳ ಸೇರುತ್ತವೆ.  ಮೂರನೇ ಸಾಲಿನಲ್ಲಿ ನಿಲ್ಲಬಲ್ಲ ರಂಗಪುಷ್ಪವೊಂದು ಕರ್ನಾಟಕಾಂಧ್ರದ ಗಡಿಭಾಗದಲ್ಲಿ ಅರಳಿ ಕರುನಾಡ ತುಂಬಾ ಬೀರುತ್ತದೆ. ಆ ಕಲಾಕುಸುಮವೇ 'ಬ್ರಮ್ಮಯ್ಯ ನದಿಚಾಗಿ'.    ಇವರು ಕ್ರಿ.ಶ.೧೯೭೪ರಲ್ಲಿ ದೇವೇಂದ್ರಪ್ಪಾಚಾರಿ ಮತ್ತು ಚಾಮುಂಡೇಶ್ವರಿ ದಂಪತಿಗಳ ಮಗನಾಗಿ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲ್ಲೂಕಿನ ನದಿಚಾಗಿಯಲ್ಲಿ ಜನಿಸಿದರು. ಹುಟ್ಟಿದ್ದು ಕರ್ನಾಟಕಾಂಧ್ರದ ಗಡಿಭಾಗವಾದರೂ ೫ ನೇ ತರಗತಿಯವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರು.ಓರಗೆಯವರನ್ನು ಅಲಾಯಿ ಕುಣಿಗೆ ನೂಕಿ , ಹೊಡೆದು ಬಡಿದು ಪ್ರತಿನಿತ್ಯ ಮನೆಗೆ ಜಗಳ ತರುತ್ತಿದ್ದರು.ಅಲ್ಲದೇ ಇವರ ಬೇಜವಾಬ್ದಾರಿತನ ಮತ್ತು ಅತಿರೇಕದ ತುಂಟತನಕ್ಕೆ ಬೇಸತ್ತ ದೇವೆಂದ್ರಪ್ಪರು ಇವರನ್ನು ತಮ್ಮದೇ ಕುಲವೃತ್ತಿ ಬಡಿಗೆತನದ ಜೊತೆಗೆ ಕಮ್ಮಾರಿಕೆಯ ಕಲಿಕೆಗೆ ಸಹಾಯಕರಾಗಿ ನೇಮಿಸಿಕೊಂಡರು. ಅಲ್ಲದೇ ಕೇವಲ ೧೮ ನೇ ವಯಸ್ಸಿಗೆ ಇವರನ್ನು ಸಾವಿತ್ರಿ ಎಂಬುವುದರೊಂದಿಗೆ ವಿವಾಹ ಮಾಡಿ ಇವರ ಬದುಕಿನ ಪೂರ್ಣ ಚೌಕಟ್...

"ಕಾರಂತ ರಂಗಲೋಕ (ರಿ) ಕಲಾತ್ಮಕ ಮನಸ್ಸುಗಳ ತಾಣಕ್ಕೀಗ ದಶಕ ಸಂಭ್ರಮ"

Image
 "ಕಾರಂತ ರಂಗಲೋಕ (ರಿ) ಕಲಾತ್ಮಕ ಮನಸ್ಸುಗಳ ತಾಣಕ್ಕೀಗ ದಶಕ ಸಂಭ್ರಮ" ಬಳ್ಳಾರಿಯ ಸರಳಾದೇವಿ ಡಿಗ್ರಿ ಕಾಲೇಜಿನಲ್ಲಿ ಓದುತ್ತಿರುವಾಗ  ಒಟ್ಟು ೨೦-೨೫ ಕಲಾಸಕ್ತ ಮನಸ್ಸುಗಳು ಸೇರಿಕೊಂಡು ಮೊದಲ ಬಾರಿಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದುಕೊಟ್ಟೆವು ಎಂದು ನಮ್ಮನ್ನು ಕೀಳಾಗಿ ಕಂಡವರ ಮುಂದೆ ಕಾಲರ್ ಎತ್ಕೊಂಡು ಅಲೆದಾಡಿದೆವು. ಆದಾದ ನಂತರ  ಒಂದರ ಹಿಂದೆ ಮತ್ತೊಂದು ಎಂಬಂತೆ  ಹತ್ತಾರು ಬಹುಮಾನಗಳ ಸುರಿಮಳೆಯೇ ಸುರಿಯ ತೊಡಗಿತು.ಅದಕ್ಕೆಲ್ಲಾ ಕಾರಣ ನಮ್ಮಲ್ಲಿದ್ದ ಟೀಮ್ ಸ್ಪೀರಿಟ್. ಹೀಗೆ ಸತತ ೨೦೧೦ ರಿಂದ ೨೦೧೩ ರವರಗೆ ಕಾಲೇಜಿನಲ್ಲಿ ಸಾಂಸ್ಕೃತಿಕವಾಗಿ ನಮ್ಮ ಹೆಸರು ಅಚ್ಚ ಹಸಿರಾಗಿತ್ತು. ಈಗಿರುವಾಗ ಕಾಲೇಜಿನಿಂದ ನಾವೆಲ್ಲಾ ಬೀಳ್ಕೊಟ್ಟ ನಂತರ ನಮ್ಮಲ್ಲಿನ ಕಲೆಗೆ ಅನಾಥ ಭಾವ ಕಾಡ ತೊಡಗಿತು‌. ಅಲ್ಲಿಯವರೆಗೆ ನಮ್ಮಲ್ಲಿನ ಕಲೆಗೆ ಕಾಲೇಜು ತಾಯಿಯಾಗಿತ್ತೆಂಬುದು ಕಾಲಕ್ರಮೇಣ ಅರಿವಾಗತೊಡಗಿತು. ಅಂತೆಯೇ ರಂಗ ಗುರು ಅಣ್ಣಾಜಿ ಕೃಷ್ಣಾರೆಡ್ಡಿಯವರ ಮಾರ್ಗದರ್ಶನದಲ್ಲಿ  ಕೊನೆಗೂ ಒಂದು ತಂಡ ಕಟ್ಟುವ ನಿರ್ಧಾರ ಮಾಡಿ ಒಟ್ಟು ಹತ್ತು  ಕಲಾತ್ಮಕ ಮನಸ್ಸುಗಳನ್ನು ಸೇರಿಸಿ  ರಂಗ ದಿಗ್ಗಜ ಬಿ.ವಿ.ಕಾರಂತ, ಜಾನಪದ ಗಾರುಡಿಗ ಶಿವರಾಮ ಕಾರಂತ ಹಾಗೂ ನನ್ನ ರಂಗಕಲೆಗೆ ಜೀವ ತುಂಬಿದ ಸಿನಿಮಾ ನಟ,ನಿರ್ದೇಶಕ ರಾಜೇಂದ್ರ ಕಾರಂತರ ಹೆಸರಲ್ಲಿ  "ಕಾರಂತ ರಂಗಲೋಕ - ಕಲಾತ್ಮಕ ಮನಸ್ಸುಗ...

ರಂಗ ಮಾಲಿಕೆ - ೬೦ ಗಡಿನಾಡಿನ ರಂಗ ಚೇತನ " ಕೊತ್ತಲಚಿಂತ ವಿ. ರಾಮಲಿಂಗಪ್ಪ ".

Image
  ಬಣ್ಣದ ಬದುಕು ರಂಗ ಮಾಲಿಕೆ - ೬೦ ಗಡಿನಾಡಿನ ರಂಗ ಚೇತನ " ಕೊತ್ತಲಚಿಂತ ವಿ. ರಾಮಲಿಂಗಪ್ಪ ". ಇವರು ೦೧-೦೬-೧೯೭೧ ರಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಗಡಿನಾಡಾದ ಹಚ್ಚೊಳ್ಳಿ ಗ್ರಾಮದ ವಿ.ರಾಮಪ್ಪ ಮತ್ತು ಸಣ್ಣಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ ಶಿಕ್ಷಣವನ್ನು ಹಚ್ಚೊಳ್ಳಿ ಮತ್ತು ಸಿರುಗುಪ್ಪದಲ್ಲಿ ಪೂರ್ಣಗೊಳಿಸಿದರು. ಮನೆಯಲ್ಲಿ ತುಂಬಾ ಬಡತನ ಇದ್ದುದರಿಂದ ಕೂಲಿ ನಾಲಿ ಮಾಡಿ ಸಾಕಿ ಬೆಳೆಸಿದ ತಂದೆ ತಾಯಿಗೆ ಆಸರೆಯಾಗುವ ದೃಷ್ಟಿಯಿಂದ ಓದುವ ಕಾಲದಲ್ಲೇ ಕ್ಯಾಲೆಂಡರ್ ಮಾರುತ್ತಿದ್ದರು. ಬಿ.ಕಾಂ ಓದಿದ್ದರಿಂದ ಕೆಲ ವರ್ಷಗಳ ಕಾಲ ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸಿ ವಿಫಲರಾದರು. ಆಗ ಹೊಳೆದದ್ದೇ ಅರೆ ವೈದ್ಯ ವೃತ್ತಿ ಮಾಡುವ ಯೋಚನೆ. ಹಾಗಾಗಿ ಹಚ್ಚೊಳ್ಳಿಯಲ್ಲಿ ವಾಸವಾಗಿದ್ದ ಕರ್ನೂಲ್ ಡಾ.ಶ್ರೀನಿವಾಸರ ಬಳಿ ಸಹಾಯಕರಾಗಿ ಸೇರಿ ಸುಮಾರು ವರ್ಷಗಳ ಕಾಲ ತರಬೇತಿ ಪಡೆದರು. ನಂತರ ತಮ್ಮ ತಾಯಿ ತವರಾದ ಕೊತ್ತಲಚಿಂತ ಕ್ಕೆ ಬಂದು ೧೯೯೫ರಲ್ಲಿ  ವಿ.ಸುಧಾ ಎಂಬುವರನ್ನು ವಿವಾಹವಾಗಿ ಅಲ್ಲಿಯೇ ಉಳಿದು ೧೯೯೮ ರಲ್ಲಿ  ಅರೆ ವೈದ್ಯರಾಗಿ (ಆರ್.ಎಂ.ಪಿ) ಸೇವೆ ಸಲ್ಲಿಸಲು ಮುಂದಾದರು.      ಈಗಾಗಲೇ ಹಚ್ಚೊಳ್ಳಿ ಮತ್ತು ಸಿರುಗುಪ್ಪದಲ್ಲಿ ನಡೆಯುತ್ತಿದ್ದ ರಂಗ ಚಟುವಟಿಕೆಗಳ ಪ್ರೇರಣೆಯಿಂದ ಕಾಲೇಜು ದಿನಗಳಲ್ಲಿ ಇವರಲ್ಲಿ ಚಿಗರೊಡೆದಿದ್ದ ನಾಟಕ ಮತ್ತು ಸಾಹಿತ್ಯದ ಸಸಿಗೆ ಆಸರೆಯಾಗಿ ಕೊತ್ತಲಚಿಂತ ವಿರೂಪ...

ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'.

Image
 ಬಣ್ಣದ ಬದುಕು ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'. ಬಳ್ಳಾರಿ ಕೇವಲ ಕಬ್ಬಿಣದ ಅದಿರಿನ ಗಣಿಯಲ್ಲ, ಬದಲಾಗಿ ಅದು ಕಲಾವಿದರ ಗಣಿಯೂ ಹೌದು. ಅಂತೆಯೇ ಇಲ್ಲಿ ಕಲಾವಿದರ ಗುರು-ಶಿಷ್ಯ ಪರಂಪರೆಯಿದೆ. ಅದಕ್ಕೆ ಒಂದು ಉದಾಹರಣೆಯೆಂದರೆ ಅಪ್ಪ-ಅಮ್ಮನ ಹಾರೈಕೆಯಲ್ಲಿ ಬೆಳೆದು ಗುರುಗಳ ನೆರವಿನಿಂದ ಕಲಾಪ್ರಪಂಚದಲ್ಲಿ ಬಹುಬೇಗನೆ ಗುರುವನ್ನು ಮೀರಿಸುವ ಮಟ್ಟಿಗೆ ಬೆಳೆದುನಿಂತ ಶಿಷ್ಯರಲ್ಲಿ ಒಬ್ಬರೆಂದರೆ ಅದು ಅಣ್ಣಾಜಿ ಕೃಷ್ಣಾರೆಡ್ಡಿ. ಇವರು ತಮ್ಮ ಗುರುಗಳ ಮಾರ್ಗದಲ್ಲೇ ರಂಗ ಮಾರ್ಗವನ್ನು ಹಿಡಿದು ತಮ್ಮ ಶಿಷ್ಯರಿಗೂ ಅದೇ ಮಾರ್ಗವನ್ನು ತೋರಿಸಿ ಗುರುವಿನಂತೆ ಶಿಷ್ಯ ಎಂಬ ಮಾತನ್ನು ನಿಜವಾಗಿ ಸಿದರು. ರಂಗಭೂಮಿಯನ್ನು ಮೆಚ್ಚಿಕೊಂಡು ಬರುವ ಶಿಷ್ಯರು ಭವಿಷ್ಯತ್ತಿನಲ್ಲಿ ಯಾವುದೇ ತೊಂದರೆ ಅನುಭವಿಸದೆ ಇರಲಿ ಎಂಬ ಅಗಾಧ ಚಿಂತನೆಯೊಂದಿಗೆ ರಂಗಭೂಮಿಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಹೊರಟವರು. ಇಂಥ ಮಹಾನ್ ಕಲಾವಿದರ ಪರಿಚಯದ ಪ್ರಯತ್ನ ಇಲ್ಲಿ ಅಕ್ಷರಶಃ ಅರ್ಥಪೂರ್ಣವೆನಿಸುತ್ತದೆ.    ಅಣ್ಣಾಜಿಯವರು ಬಳ್ಳಾರಿಯ ಡಿ.ಕಗ್ಗಲ್ ಗ್ರಾಮದ ರಾಮನಗೌಡ ಮತ್ತು ವೆಂಕಮ್ಮನವರ ಸುಪುತ್ರನಾಗಿ 01 ಜೂನ್ 1980ರಲ್ಲಿ ಜನಿಸಿದರು. ಬಾಲ್ಯದಲ್ಲಿ ಯಾವುದೇ ರಂಗಾಸಕ್ತಿ ಇಲ್ಲದ ಇವರಿಗೆ ತಮ್ಮದೇ ಊರಿನ ಕಲಾವಿದ ದೊಡ್ಡಬಸವ ಗವಾಯಿಗಳಿಂದ ಪ್ರಭಾವಿತರಾಗಿ ಅವರ ಬಳಿಯಲ್ಲಿ ಸುಗಮ ಸಂಗೀತದ ಅಭ್ಯಾಸ ಮಾಡಿದರು. ಕ್ರಮೇಣ ಅವರ ಸಹಾಯದಿಂದಲ...

ರಂಗ ಮಾಲಿಕೆ - ೫೮ ಕನ್ನಡದ ಕಲಾ ಕುಂಜ ' ಜೋಯಿಸ ಗೋವಿಂದಾಚಾರ್ '.

Image
 ಬಣ್ಣದ ಬದುಕು ರಂಗ ಮಾಲಿಕೆ - ೫೮ ಕನ್ನಡದ ಕಲಾ ಕುಂಜ ' ಜೋಯಿಸ ಗೋವಿಂದಾಚಾರ್ '.       ನಮ್ಮ ನಡುವೆಯೇ ಎಲೆ ಮರೆಯ ಕಾಯಿಯಂತೆ ಇದ್ದು , ಇದ್ದ ಅಲ್ಪಾವಧಿಯಲ್ಲೇ ಅಗಾಧವಾದ ಪ್ರತಿಭೆಯನ್ನು ಪ್ರದರ್ಶಿಸಿ ಅರೆಗಳಿಗೆಯಲ್ಲೇ ಅಗಲಿದ ಹಲವರಲ್ಲಿ ಒಬ್ಬರು ಬಳ್ಳಾರಿಯ ರಂಗ ದಿಗ್ಗಜ 'ಜೋಯಿಸ ಗೋವಿಂದಾಚಾರ್'.   ಇವರು ೯ ಸೆಪ್ಟೆಂಬರ್  ೧೯೫೩ರಲ್ಲಿ  ಜೋಯಿಸ ಕೃಷ್ಣಾಚಾರ್ ಮತ್ತು ಸುಮಿತ್ರಾ ಬಾಯಿಯವರ ಮಗನಾಗಿ ಬಳ್ಳಾರಿಯಲ್ಲಿ ಜನಿಸಿದರು. ಇವರ ಶಿಕ್ಷಣ ಬಳ್ಳಾರಿಯ ಹಳೆಯ ಶಾಲೆಗಳಲ್ಲಿ ಒಂದಾದ ವಾರ್ಡ್ಲಾ ಶಾಲೆಯಲ್ಲಿ ಆರಂಭವಾಗಿ ಇದೇ ನಗರದ ಕೊಟ್ಟೂರು ಸ್ವಾಮಿ ಬಿ.ಎಡ್ ಕಾಲೇಜಿನಲ್ಲಿ ಬಿ.ಎಡ್ ವಿಧ್ಯಾಭ್ಯಾಸದ ಹಾದಿಯಲ್ಲಿರುವಾಗಲೇ ಎಸ್.ಬಿ.ಐ ಬ್ಯಾಂಕ್ ನೌಕರಿಯನ್ನು ಗಿಟ್ಟಿಸಿಕೊಂಡರು.     ಮೊದಲಿನಿಂದಲೂ ಕಲೆ,ಸಾಹಿತ್ಯದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರು. ಅಂತೆಯೇ ಶಾಲೆಯ ವಾರ್ಷಿಕೋತ್ಸವ, ಗಣೇಶ ಉತ್ಸವಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇಷಭೂಷಣ, ಕಿರು ನಾಟಕ ಹಾಗೂ ಕವನ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನ ಮನ್ನಣೆ ಪಡೆದ ಉದಾಹರಣೆಗಳು ಅಧಿಕವಾಗಿವೆ.ಆ ಮೂಲಕವೇ ರಂಗಾಸಕ್ತಿಯನ್ನೂ ಮೈಗೂಡಿಸಿಕೊಂಡ ಜೋಯಿಸರು ಮುಂದೆ    1968ರಲ್ಲಿ ಬಳ್ಳಾರಿಯ ಘೋಷ್ ಆಸ್ಪತ್ರೆಯಲ್ಲಿ ನಡೆದ ಕೇಂದ್ರ ಸರ್ಕಾರದ ಸಾಮೂಹಿಕ ಮಿತ ಸಂತಾನ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದಲ್ಲಿ ಒಂ...

ರಂಗ ಮಾಲಿಕೆ -೫೭. ಬಿಸಿಲುನಾಡಿನ ರಂಗ ಚೇತನ ' ಮರಿಯಮ್ಮನಹಳ್ಳಿ ಜಹಾಂಗೀರ್'

Image
 ಬಣ್ಣದ ಬದುಕು ರಂಗ ಮಾಲಿಕೆ -೫೭  ಬಿಸಿಲುನಾಡಿನ ರಂಗ ಚೇತನ ' ಮರಿಯಮ್ಮನಹಳ್ಳಿ ಜಹಾಂಗೀರ್' ನಟನೆಗೆ ಇರುವ ಶಕ್ತಿ ಅತಿಯಾದದ್ದು.ಅದನ್ನು ನಂಬಿ ಬಂದ ಎಂತವರನ್ನೂ ಉನ್ನತ್ತಕೇರಿಸುವ ಅದಮ್ಯ ಶಕ್ತಿಯಿದೆ. ಅಂತೆಯೇ ಬಾಲ್ಯದಲ್ಲಿ ನಟನೆಯ ಅತೀವ ಆಸಕ್ತಿಯಿಂದ ಹುಟ್ಟೂರು ತೊರೆದು ಕಲಾಕ್ಷೇತ್ರ ಸೇರಿ, ನಿಂದಿಸಿದವರ ಮುಂದೆ ಮೇಲಕ್ಕೆ ಬೆಳೆದು ಅವರಿಂದಲೇ ಶಹಬ್ಬಾಷ್ ಗಿರಿಯನ್ನು ಪಡೆದವರು ಅನೇಕರು.ಅಂತವರಲ್ಲಿ ಕುಟುಂಬದಿಂದಲೇ ನಿಂದನೆಗೆ ಒಳಗಾಗಿ ರಂಗದಿಂದಲೇ ಕಿರುತೆರೆ ,ಹಿರಿತೆರೆಯನ್ನು ಕಂಡು ಮಿಂಚಿ ಕೊನೆಗೆ ಮನೆಯವರಿಂದಲೇ ಪ್ರಶಂಸೆ ಪಡೆದವರಲ್ಲಿ ಒಬ್ಬರು ಮರಿಯಮ್ಮನಹಳ್ಳಿಯ ಜಂಹಾಗೀರ್ ಒಬ್ಬರು.     ಜಹಂಗೀರರು ಮೂಲತಃ ಇಂದಿನ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯವರು. ಇವರ ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ವಿದ್ಯಾಭ್ಯಾಸದಲ್ಲಿ ಇವರು ಚುರುಕಾಗಿದ್ದರು.ಆದ್ರೆ ಇವರಿಗೆ ಶಿಕ್ಷಕ ವೃತ್ತಿ ಇಷ್ಟವಿರಲಿಲ್ಲ. ಚೆನ್ನಾಗಿ ಓದಿದರೆ ತಮ್ಮನ್ನು ಶಿಕ್ಷಕನಾಗಿ ಮಾಡುತ್ತಾರೆ ಎಂದು ಹೆದರಿ ಪಿಯುಸಿಯಲ್ಲಿ ಬೇಕಂತಲೇ ಫೇಲಾದರು.ಬೇರೇನಾದರೂ ಮಾಡಬೇಕು ಎಂದು ಆಲೋಚಿಸುವ ಹೊತ್ತಲ್ಲಿ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಮನಸ್ಸಾಯಿತು. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಅತ್ತ ಗಮನ ಹರಿಸಿದರು.ಮೊದ ಮೊದಲು ಸಿನಿ ನಟರ ಅನುಕರಣೆ ಮಾಡುತ್ತಾ ಹೆಸರಾಗಿದ್ದರು.ನಂತರ ೧೯೯೪ರಲ್ಲಿ 'ಸಾಕ್ಷರತಾ ಕಲಾ ಜಾಥಾ' ದಲ್ಲಿ ಭಾಗವಹಿಸಿದರು.ನಂತರ ಮ.ಬ.ಸೋಮ...

ರಂಗ ಮಾಲಿಕೆ -೫೬ ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ 'ಎಂ.ಶ್ರೀನಿವಾಸುಲು'

Image
  ಬಣ್ಣದ ಬದುಕು ರಂಗ ಮಾಲಿಕೆ -೫೬    ಬಳ್ಳಾರಿ  ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ 'ಎಂ.ಶ್ರೀನಿವಾಸುಲು'    ಬದುಕಿನುದ್ದಕ್ಕೂ ಹಲವಾರು ಅಡತಡೆಗಳು ಇದ್ದಿದ್ದೇ.ಆದರೆ ಅವುಗಳನ್ನು ಎದುರಿಸುವಲ್ಲಿ ಕೆಲವರು ಸೋತು ಸತ್ತರೆ ಇನ್ನು ಕೆಲವರು ಗೆದ್ದು ಬೀಗುತ್ತಾರೆ.ಆದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆಲ್ಲುವ ಚೈತನ್ಯ ತುಂಬುವ ಹಲವು ಮಾರ್ಗಗಳಲ್ಲಿ ರಂಗಭೂಮಿ ಅಗ್ರಮಾನ್ಯವಾದುದ್ದಾಗಿದೆ.ಆ ನಿಟ್ಟಿನಲ್ಲಿ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿ ಬದುಕಿನುದ್ದಕ್ಕೂ ಗೆದ್ದು ಬೀಗಿದ ಹಲವರಲ್ಲಿ ಒಬ್ಬರು ಬಳ್ಳಾರಿ ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಎಂ.ಶ್ರೀನಿವಾಸುಲು.     ಇವರು ಕ್ರಿ.ಶ. ೦೧.೦೯.೧೯೬೨ ರಲ್ಲಿ ಬಳ್ಳಾರಿಯ ಸತ್ಯ ನಾರಾಯಣ ಪೇಟೆಯಲ್ಲಿ  ಎಂ.ರಾಮುಡು ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು. ಹುಟ್ಟಿದ್ದು ಬಡ ಕುಟುಂಬದಲ್ಲಾದ್ದರಿಂದ ಮತ್ತು ಅಪ್ಪನ ಮಧ್ಯ ವ್ಯಸನದಿಂದಾಗಿ ಒಂದ್ಹೊತ್ತಿನ ಊಟಕ್ಕೂ ಪರದಾಡುವ ಸಂದರ್ಭದಲ್ಲಿ ಅಜ್ಜಿ ಲಕ್ಷಮ್ಮಮ್ಮ ಮತ್ತು ಅಮ್ಮ ಪಾರ್ವತಮ್ಮರ ಛಲಭರಿತ ಪ್ರೋತ್ಸಾಹ ಮತ್ತು ಕಾರ್ಯದಿಂದಾಗಿ, ೧೦ನೇ ತರಗತಿಯವರೆಗೆ ಬಳ್ಳಾರಿಯ ಮದ್ದೀಕೇರಿ ಭೀಮಯ್ಯ ಸ್ವಂತ ಲಿಂಗಣ್ಣ ಶೆಟ್ಟಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು. ಆದರೆ ಮುಂದೆ ಓದಲು ಆರ್ಥಿಕವಾಗಿ ಸಬಲರಿಲ್ಲದ ಕಾರಣ ಆಗ ಕರ್ನಾಟಕ ಸಾರಿಗೆ ಇಲಾಖೆಯವರು ಭದ್ರತಾ ಸಿಬ್ಬ...

ರಂಗ ಮಾಲಿಕೆ -೫೫ ಬಳ್ಳಾರಿ ರಂಗಭೂಮಿಯ ಹಾಸ್ಯ ಕಿರೀಟಿ 'ಗೆಣಕಿಹಾಳ್ ಎಂ.ಪಾರ್ವತೀಶ್'

Image
  ಬಣ್ಣದ ಬದುಕು ರಂಗ ಮಾಲಿಕೆ -೫೫  ಬಳ್ಳಾರಿ ರಂಗಭೂಮಿಯ ಹಾಸ್ಯ ಕಿರೀಟಿ 'ಗೆಣಕಿಹಾಳ್ ಎಂ.ಪಾರ್ವತೀಶ್'       'ಕಲಾಸೇವೆಯೇ ಕಲಾ ಮಾತೆಯ ಸೇವೆ' ಎಂಬ ಭಾವದಲ್ಲಿ ಕಲಾ ಕಾಯಕ ಮಾಡುವ ಮನಸ್ಸುಗಳ ಸಂಖ್ಯೆ ದಿನೇದಿನೇ ಇಳಿಮುಖವಾಗುತ್ತಿರುವಾಗ, ಇಲ್ಲೊಬ್ಬ ರಂಗಕರ್ಮಿ ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತವಾಗಿ,ಯಾವುದೇ ಸಂಭಾವನೆ ಪಡೆಯದೇ ತನ್ನ ನಟನಾ ಸಾಮರ್ಥ್ಯದ ಮೂಲಕ ಹಾಸ್ಯರಸವನ್ನು ಇಡೀ ನಾಡಿಗೆ ಉಣಬಡಿಸಿ ಎಲ್ಲರನ್ನೂ ನಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರೇ ಕುರುಗೋಡು ತಾಲ್ಲೂಕಿನ ಗೆಣಕಿಹಾಳ್ ಗ್ರಾಮದ ಎಂ.ಪಾರ್ವತೀಶ್'.    ಇವರು ೨೩.೧೧.೧೯೭೪ರಲ್ಲಿ ಗೆಣಕಿಹಾಳ್ ಗ್ರಾಮದಲ್ಲಿ ರುದ್ರಯ್ಯ ಸ್ವಾಮಿ ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು.ಮಧ್ಯಮ ಕುಟುಂಬದಲ್ಲಿ ಜನಿಸಿದ್ದರಿಂದ ಪದವಿಯವರೆ ವಿದ್ಯಾಭ್ಯಾಸ ಪಡೆದಿದ್ದಲ್ಲದೇ ಖಾಸಗಿ ಬಯೋಕೆಮಿಕಲ್ ಕಂಪನಿಯ ಮ್ಯಾನೇಜರ್ ನೌಕರಿಯನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಮತ್ತು ಪ್ರವೃತ್ತಿಯಲ್ಲಿ ಯಶಸ್ವಿ ಮಾದರಿ ಎನಿಸಿದ್ದಾರೆ.   ಬಾಲ್ಯದಿಂದಲೂ  ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಹಳ್ಳಿಯಲ್ಲಿನ ವಾತಾವರಣದ ರಸಪಾಕ ಸವಿಯುತ್ತಲೇ ತಮ್ಮೊಳಗೊಬ್ಬ ಅಭಿನೇತೃವನ್ನು ಅವಿರ್ಭವಿಸಿಕೊಂಡರು.ಅಂತೆಯೇ ಶಾಲಾ ಹಂತದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದರ ನೈಜರೂಪ  ಅನಾವರಣಗೊಂಡು, ಅಲ್ಲಿ ದೊರೆತ ಧನಾತ್ಮಕ ಪ್ರೇರಣೆಗಳ ಮೂಲಕ ಮುಂದೆ ತಮ್ಮ ೧೨ ನೇ ವಯಸ್ಸಿ...