ರಂಗ ಮಾಲಿಕೆ-_೧೫ 'ರಂಗ ಸಾರಥಿ ' ದಾರದ ಮಿಲ್ ಕೆ.ಪಂಪಾಪತಿ
ಬಣ್ಣದ ಬದುಕು ರಂಗ ಮಾಲಿಕೆ -೧೫ 'ರಂಗ ಸಾರಥಿ' ದಾರದ ಮಿಲ್ ಕೆ.ಪಂಪಾಪತಿ. ಬಯಲಾಟ ಎಂದ ಕೂಡಲೇ ನೆನಪಾಗುವುದು ಬಳ್ಳಾರಿ ಜಿಲ್ಲೆ. ಮೂಲತಃ ಬಯಲಾಟ ಹುಟ್ಟಿದ್ದೆ ಬಳ್ಳಾರಿಯಲ್ಲಿ ಎಂದು ಸೋಮಸಮುದ್ರದ ಈಶ್ವರ ದೇವಸ್ಥಾನದಲ್ಲಿ ಕಾಣಸಿಗುವ ಶಾಸನದಲ್ಲಿ ಉಲ್ಲೇಖವಾಗಿದೆ.ಅದಲ್ಲದೇ ಇಂದಿನ ಯಕ್ಷಗಾನದ ಮೂಲವೇ ಬಯಲಾಟ. ಇಂತಹ ಬಯಲಾಟದಲ್ಲಿ ಪ್ರಮುಖವಾಗಿ ನೋಡಬಹುದಾದ ಪಾತ್ರವೇ ಸಾರಥಿ.ಈ ಪಾತ್ರದಿಂದಲೇ ನಾಟಕದಲ್ಲಿ ನವರಸಾದಿಗಳು ಪ್ರೇಕ್ಷಕರೆಡೆಗೆ ಹರಿಯುವವು. ಇಂತಹ ಪಾತ್ರವನ್ನು ಅಮೋಘವಾಗಿ ಸುಮಾರು 2300 ಹೆಚ್ಚು ಪ್ರಯೋಗಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಬಳ್ಳಾರಿಯ ಏಕೈಕ ರಂಗಕಲಾವಿದ ಕೆ.ಪಂಪಾಪತಿ. ಇವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ (ವಿಜಯನಗರ ಜಿಲ್ಲೆ) ದೇವಲಾಪುರ ಗ್ರಾಮದಲ್ಲಿ ಕೆ ಗಾದೆಪ್ಪ ಮತ್ತು ಗಂಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಅಣ್ಣನ ಲಸ್ಕರ್ ವೃತ್ತಿಯಿಂದ ಬರುತ್ತಿದ್ದ ಸಂಬಳದಲ್ಲಿ ಸಂಸಾರವನ್ನು ನಿಭಾಯಿಸಲಾಗದೆ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸಕ್ಕೆ ವಿಧಾನವನ್ನು ಹೇಳಿ, ಊರಿನ ಹೆಂಗಸರೊಂದಿಗೆ ಕೂಲಿ ಕೆಲಸಕ್ಕೆ ಹೋದರು. ಇವರು ಚಿಕ್ಕವಯಸ್ಸಿನಲ್ಲಿ ಊರಿನ ಸುತ್ತಮುತ್ತ ನಡೆಯುತ್ತಿದ್ದ ಬಯಲಾಟಗಳನ್ನು ನೋಡಲು ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಕದ್ದು ಮುಚ್ಚಿ ಹೋಗುತ್ತಿದ್ದರು. ಈ ಮೂಲಕ ರಂಗ ಪರಿಸರವಿಲ್ಲದೆ ಮನೆಯಲ್ಲಿ ರಂಗ ಚಿಗುರು ಬೆಳೆಯಲಾರಂಭಿಸಿತು. ತಮ್ಮನ್ನು ತಾವೇ ಗುರುವನ್ನಾಗಿಸಿಕೊಂಡು ತಮ್ಮ ...