Posts

Showing posts from March, 2022

ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'.

Image
 ಬಣ್ಣದ ಬದುಕು ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'. ಬಳ್ಳಾರಿ ಕೇವಲ ಕಬ್ಬಿಣದ ಅದಿರಿನ ಗಣಿಯಲ್ಲ, ಬದಲಾಗಿ ಅದು ಕಲಾವಿದರ ಗಣಿಯೂ ಹೌದು. ಅಂತೆಯೇ ಇಲ್ಲಿ ಕಲಾವಿದರ ಗುರು-ಶಿಷ್ಯ ಪರಂಪರೆಯಿದೆ. ಅದಕ್ಕೆ ಒಂದು ಉದಾಹರಣೆಯೆಂದರೆ ಅಪ್ಪ-ಅಮ್ಮನ ಹಾರೈಕೆಯಲ್ಲಿ ಬೆಳೆದು ಗುರುಗಳ ನೆರವಿನಿಂದ ಕಲಾಪ್ರಪಂಚದಲ್ಲಿ ಬಹುಬೇಗನೆ ಗುರುವನ್ನು ಮೀರಿಸುವ ಮಟ್ಟಿಗೆ ಬೆಳೆದುನಿಂತ ಶಿಷ್ಯರಲ್ಲಿ ಒಬ್ಬರೆಂದರೆ ಅದು ಅಣ್ಣಾಜಿ ಕೃಷ್ಣಾರೆಡ್ಡಿ. ಇವರು ತಮ್ಮ ಗುರುಗಳ ಮಾರ್ಗದಲ್ಲೇ ರಂಗ ಮಾರ್ಗವನ್ನು ಹಿಡಿದು ತಮ್ಮ ಶಿಷ್ಯರಿಗೂ ಅದೇ ಮಾರ್ಗವನ್ನು ತೋರಿಸಿ ಗುರುವಿನಂತೆ ಶಿಷ್ಯ ಎಂಬ ಮಾತನ್ನು ನಿಜವಾಗಿ ಸಿದರು. ರಂಗಭೂಮಿಯನ್ನು ಮೆಚ್ಚಿಕೊಂಡು ಬರುವ ಶಿಷ್ಯರು ಭವಿಷ್ಯತ್ತಿನಲ್ಲಿ ಯಾವುದೇ ತೊಂದರೆ ಅನುಭವಿಸದೆ ಇರಲಿ ಎಂಬ ಅಗಾಧ ಚಿಂತನೆಯೊಂದಿಗೆ ರಂಗಭೂಮಿಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಹೊರಟವರು. ಇಂಥ ಮಹಾನ್ ಕಲಾವಿದರ ಪರಿಚಯದ ಪ್ರಯತ್ನ ಇಲ್ಲಿ ಅಕ್ಷರಶಃ ಅರ್ಥಪೂರ್ಣವೆನಿಸುತ್ತದೆ.    ಅಣ್ಣಾಜಿಯವರು ಬಳ್ಳಾರಿಯ ಡಿ.ಕಗ್ಗಲ್ ಗ್ರಾಮದ ರಾಮನಗೌಡ ಮತ್ತು ವೆಂಕಮ್ಮನವರ ಸುಪುತ್ರನಾಗಿ 01 ಜೂನ್ 1980ರಲ್ಲಿ ಜನಿಸಿದರು. ಬಾಲ್ಯದಲ್ಲಿ ಯಾವುದೇ ರಂಗಾಸಕ್ತಿ ಇಲ್ಲದ ಇವರಿಗೆ ತಮ್ಮದೇ ಊರಿನ ಕಲಾವಿದ ದೊಡ್ಡಬಸವ ಗವಾಯಿಗಳಿಂದ ಪ್ರಭಾವಿತರಾಗಿ ಅವರ ಬಳಿಯಲ್ಲಿ ಸುಗಮ ಸಂಗೀತದ ಅಭ್ಯಾಸ ಮಾಡಿದರು. ಕ್ರಮೇಣ ಅವರ ಸಹಾಯದಿಂದಲ...

ರಂಗ ಮಾಲಿಕೆ - ೫೮ ಕನ್ನಡದ ಕಲಾ ಕುಂಜ ' ಜೋಯಿಸ ಗೋವಿಂದಾಚಾರ್ '.

Image
 ಬಣ್ಣದ ಬದುಕು ರಂಗ ಮಾಲಿಕೆ - ೫೮ ಕನ್ನಡದ ಕಲಾ ಕುಂಜ ' ಜೋಯಿಸ ಗೋವಿಂದಾಚಾರ್ '.       ನಮ್ಮ ನಡುವೆಯೇ ಎಲೆ ಮರೆಯ ಕಾಯಿಯಂತೆ ಇದ್ದು , ಇದ್ದ ಅಲ್ಪಾವಧಿಯಲ್ಲೇ ಅಗಾಧವಾದ ಪ್ರತಿಭೆಯನ್ನು ಪ್ರದರ್ಶಿಸಿ ಅರೆಗಳಿಗೆಯಲ್ಲೇ ಅಗಲಿದ ಹಲವರಲ್ಲಿ ಒಬ್ಬರು ಬಳ್ಳಾರಿಯ ರಂಗ ದಿಗ್ಗಜ 'ಜೋಯಿಸ ಗೋವಿಂದಾಚಾರ್'.   ಇವರು ೯ ಸೆಪ್ಟೆಂಬರ್  ೧೯೫೩ರಲ್ಲಿ  ಜೋಯಿಸ ಕೃಷ್ಣಾಚಾರ್ ಮತ್ತು ಸುಮಿತ್ರಾ ಬಾಯಿಯವರ ಮಗನಾಗಿ ಬಳ್ಳಾರಿಯಲ್ಲಿ ಜನಿಸಿದರು. ಇವರ ಶಿಕ್ಷಣ ಬಳ್ಳಾರಿಯ ಹಳೆಯ ಶಾಲೆಗಳಲ್ಲಿ ಒಂದಾದ ವಾರ್ಡ್ಲಾ ಶಾಲೆಯಲ್ಲಿ ಆರಂಭವಾಗಿ ಇದೇ ನಗರದ ಕೊಟ್ಟೂರು ಸ್ವಾಮಿ ಬಿ.ಎಡ್ ಕಾಲೇಜಿನಲ್ಲಿ ಬಿ.ಎಡ್ ವಿಧ್ಯಾಭ್ಯಾಸದ ಹಾದಿಯಲ್ಲಿರುವಾಗಲೇ ಎಸ್.ಬಿ.ಐ ಬ್ಯಾಂಕ್ ನೌಕರಿಯನ್ನು ಗಿಟ್ಟಿಸಿಕೊಂಡರು.     ಮೊದಲಿನಿಂದಲೂ ಕಲೆ,ಸಾಹಿತ್ಯದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರು. ಅಂತೆಯೇ ಶಾಲೆಯ ವಾರ್ಷಿಕೋತ್ಸವ, ಗಣೇಶ ಉತ್ಸವಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇಷಭೂಷಣ, ಕಿರು ನಾಟಕ ಹಾಗೂ ಕವನ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನ ಮನ್ನಣೆ ಪಡೆದ ಉದಾಹರಣೆಗಳು ಅಧಿಕವಾಗಿವೆ.ಆ ಮೂಲಕವೇ ರಂಗಾಸಕ್ತಿಯನ್ನೂ ಮೈಗೂಡಿಸಿಕೊಂಡ ಜೋಯಿಸರು ಮುಂದೆ    1968ರಲ್ಲಿ ಬಳ್ಳಾರಿಯ ಘೋಷ್ ಆಸ್ಪತ್ರೆಯಲ್ಲಿ ನಡೆದ ಕೇಂದ್ರ ಸರ್ಕಾರದ ಸಾಮೂಹಿಕ ಮಿತ ಸಂತಾನ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದಲ್ಲಿ ಒಂ...

ರಂಗ ಮಾಲಿಕೆ -೫೭. ಬಿಸಿಲುನಾಡಿನ ರಂಗ ಚೇತನ ' ಮರಿಯಮ್ಮನಹಳ್ಳಿ ಜಹಾಂಗೀರ್'

Image
 ಬಣ್ಣದ ಬದುಕು ರಂಗ ಮಾಲಿಕೆ -೫೭  ಬಿಸಿಲುನಾಡಿನ ರಂಗ ಚೇತನ ' ಮರಿಯಮ್ಮನಹಳ್ಳಿ ಜಹಾಂಗೀರ್' ನಟನೆಗೆ ಇರುವ ಶಕ್ತಿ ಅತಿಯಾದದ್ದು.ಅದನ್ನು ನಂಬಿ ಬಂದ ಎಂತವರನ್ನೂ ಉನ್ನತ್ತಕೇರಿಸುವ ಅದಮ್ಯ ಶಕ್ತಿಯಿದೆ. ಅಂತೆಯೇ ಬಾಲ್ಯದಲ್ಲಿ ನಟನೆಯ ಅತೀವ ಆಸಕ್ತಿಯಿಂದ ಹುಟ್ಟೂರು ತೊರೆದು ಕಲಾಕ್ಷೇತ್ರ ಸೇರಿ, ನಿಂದಿಸಿದವರ ಮುಂದೆ ಮೇಲಕ್ಕೆ ಬೆಳೆದು ಅವರಿಂದಲೇ ಶಹಬ್ಬಾಷ್ ಗಿರಿಯನ್ನು ಪಡೆದವರು ಅನೇಕರು.ಅಂತವರಲ್ಲಿ ಕುಟುಂಬದಿಂದಲೇ ನಿಂದನೆಗೆ ಒಳಗಾಗಿ ರಂಗದಿಂದಲೇ ಕಿರುತೆರೆ ,ಹಿರಿತೆರೆಯನ್ನು ಕಂಡು ಮಿಂಚಿ ಕೊನೆಗೆ ಮನೆಯವರಿಂದಲೇ ಪ್ರಶಂಸೆ ಪಡೆದವರಲ್ಲಿ ಒಬ್ಬರು ಮರಿಯಮ್ಮನಹಳ್ಳಿಯ ಜಂಹಾಗೀರ್ ಒಬ್ಬರು.     ಜಹಂಗೀರರು ಮೂಲತಃ ಇಂದಿನ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯವರು. ಇವರ ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ವಿದ್ಯಾಭ್ಯಾಸದಲ್ಲಿ ಇವರು ಚುರುಕಾಗಿದ್ದರು.ಆದ್ರೆ ಇವರಿಗೆ ಶಿಕ್ಷಕ ವೃತ್ತಿ ಇಷ್ಟವಿರಲಿಲ್ಲ. ಚೆನ್ನಾಗಿ ಓದಿದರೆ ತಮ್ಮನ್ನು ಶಿಕ್ಷಕನಾಗಿ ಮಾಡುತ್ತಾರೆ ಎಂದು ಹೆದರಿ ಪಿಯುಸಿಯಲ್ಲಿ ಬೇಕಂತಲೇ ಫೇಲಾದರು.ಬೇರೇನಾದರೂ ಮಾಡಬೇಕು ಎಂದು ಆಲೋಚಿಸುವ ಹೊತ್ತಲ್ಲಿ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಮನಸ್ಸಾಯಿತು. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಅತ್ತ ಗಮನ ಹರಿಸಿದರು.ಮೊದ ಮೊದಲು ಸಿನಿ ನಟರ ಅನುಕರಣೆ ಮಾಡುತ್ತಾ ಹೆಸರಾಗಿದ್ದರು.ನಂತರ ೧೯೯೪ರಲ್ಲಿ 'ಸಾಕ್ಷರತಾ ಕಲಾ ಜಾಥಾ' ದಲ್ಲಿ ಭಾಗವಹಿಸಿದರು.ನಂತರ ಮ.ಬ.ಸೋಮ...