Posts

Showing posts from February, 2021

ರಂಗ ಮಾಲಿಕೆ-13- ಸಿರಿಗೇರಿ ನಾಗನಗೌಡರು.

Image
ಬಣ್ಣದ ಬದುಕು ರಂಗ ಮಾಲಿಕೆ- 13 ರಂಗಭೂಮಿಯ ಹಾರ್ಮೋನಿಯಂ ಚತುರ ' ಸಿರಿಗೇರಿ ನಾಗನಗೌಡರು' ಬಳ್ಳಾರಿ ರಂಗಭೂಮಿಗಾಗಿ ತಮ್ಮ ಜೀವಮಾನ ಸಾಧನೆಗೈದ ಅನೇಕ ರಂಗ ದಿಗ್ಗಜರನ್ನು ನಾವು-ನೀವೆಲ್ಲ ಮರೆತಿದ್ದೇವೆ.ಅಂತಹ ಮರೆತು ಹೋದ ಮಹನೀಯರಲ್ಲಿ ಒಬ್ಬರಾದ ರಂಗ ದಿಗ್ಗಜ,ಉಭಯ ಕಲಾ ವಿಶಾರದ ಸಿರಿಗೇರಿ ನಾಗನಗೌಡರು. ಇವರು ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ 1940ರಲ್ಲಿ ತಂದೆ ಪಂಪನಗೌಡ ತಾಯಿ ಲಿಂಗಮ್ಮ ರ ಮಗನಾಗಿ ಜನಿಸಿದರು. ತಂದೆಯು ಸಹ ಹಾರ್ಮೋನಿಯಂ ಮಾಸ್ತರರಾಗಿದ್ದರಿಂದಲೇ ಗೌಡರಿಗೆ ಬಳುವಳಿಯಾಗಿ ಕಲಾಸಕ್ತಿ ಬಂದಂತಿದೆ.ಅಂತೆಯೇ ಗೌಡರು ತಮ್ಮ ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ 12ನೇ ವಯಸ್ಸಿನಲ್ಲಿ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ವನ್ನು ಸೇರಿ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತ ಮತ್ತು ಹಾರ್ಮೋನಿಯಂ ಶಿಕ್ಷಣವನ್ನು ಪಡೆದರು. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಗುರುಗಳ ಪ್ರೀತಿ ಮತ್ತು ಮಾರ್ಗದರ್ಶನದಿಂದ ಸಂಗೀತದಲ್ಲಿ ಅತ್ಯುನ್ನತ ಪರಿಣಿತಿಯನ್ನು ಪಡೆದು "ಸಂಗೀತ ವಿಶಾರದ" ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಕಟ್ಟಲ್ಪಟ್ಟ ಸಂಸ್ಥೆಗೆ ಕಳಶಪ್ರಾಯವಾಗಿ ಹೆಸರು ತಂದರು. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಹಿಂದೂಸ್ತಾನಿ ಗಾಯನದಲ್ಲಿ ಹಾಗೂ ಹಾರ್ಮೋನಿಯಂ ವಾದನದಲ್ಲಿ ಕರತಲಮಲಕವಾಗಿ ತೊಡಗಿಸಿಕೊಂಡಿದ್ದಷ್ಟೇ ಅಲ್...

ರಂಗ ಮಾಲಿಕೆ-೬-ಕೋಗಳಿ ಪಂಪಣ್ಣ

Image
 ಬಣ್ಣದ ಬದುಕು..             ರಂಗ ಮಾಲಿಕೆ-೬ ‘ಗ್ರಾಮೀಣ ಕಲಾಭೂಷಣ’ ಎಂ.ಪAಪಣ್ಣ ಕನ್ನಡದ ಮೊಟ್ಟ ಮೊದಲ ಗದ್ಯ ಗ್ರಂಥ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ. ಈ ಗ್ರಂಥ ರಚನೆಯಾದ ಸ್ಥಳವೆಂದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮ. ಇದು ಪ್ರಾಚೀನದಿಂದಲೂ ಹಲವು ಪ್ರಖ್ಯಾತ ಮಹನೀಯರನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಪುಣ್ಯ ಭೂಮಿಯಾಗಿದೆ. ಪ್ರಸ್ತುತ ದಿನಮಾನದಲ್ಲಿ ಮತ್ತೆ ಕೋಗಳಿ ಗ್ರಾಮ ಬೆಳಕಿಗೆ ಬರಲು ಕಾರಣಕರ್ತರಾದ ಹಲವು ಮಹನೀಯರಲ್ಲಿ  ಒಬ್ಬರಾದ, ‘ಎಂ.ಪಿ.ಕೋಗಿಲೆ' ಎಂದು ಪ್ರಖ್ಯಾತರಾದ ಖ್ಯಾತ ಹಿರಿಯ ರಂಗಕರ್ಮಿ, ರಾಜಕಾರಣಿ ಮುತ್ಸದ್ದಿ, ಉತ್ತಮ ಕವಿಗಳು, ವಾಗ್ಮಿಗಳು, ಕೃಷಿಕರು ಆದಂತಹ ‘ಎಂ ಪಂಪಣ್ಣ’ನವರು. ಶ್ರೀಯುತರು ತಮ್ಮ ಕಂಚಿನ ಕಂಠದಿAದಲೇ ಹೆಸರುವಾಸಿಯಾದಂತವರು. ಕೊಟ್ಟೂರಿನ ಹಲವು ಭಾಗಗಳಲ್ಲಿ "ಎಲೆ ಉತ್ತರ ದಿನ ಮೂರು ಕಳೆಯುವುದರೊಳಗಾಗಿ ಈ ಪೃಥ್ವಿ ನಿಃಪಾಂಡವ ಪೃಥ್ವಿ" ಎಂಬ ಗಡಸು ಧ್ವನಿಯ ಕೇಳಿಬಂದರೆ ಅದು ಎಂಪಿ ಕೋಗಿಲೆ ಅವರದೇ ಎಂಬ ಕಾಲಮಾನವಿತ್ತು. ಅಂತೆಯೇ ಯಾವುದೇ ಪಾತ್ರವಿರಲಿ, ಯಾವುದೇ ಸ್ಥಳವಿರಲಿ ಆ ಪಾತ್ರಕ್ಕೆ ಜೀವತುಂಬುವ ಚಾಕಚಕ್ಯತೆ ಎಂ ಪಂಪಣ್ಣನವರಿಗೆ ಸಿದ್ಧಿಯಾಗಿತ್ತು. ಶ್ರೀಯುತರಿಗೆ ರಕ್ತರಾತ್ರಿಯ ಯಾವುದೇ ಪಾತ್ರ ಕೊಟ್ಟರೂ ತುಂಬಾ ಅಚ್ಚುಕಟ್ಟಾಗಿ ಯಾವುದೇ ಬಹು ದಿನದ ತಾಲೀಮು ಇಲ್ಲದೆ ರಂಗದ ಮೇಲೆ ನಿಂತು ಎಲ್ಲರನ್ನೂ ರಂಜಿಸುವ ಅಗಮ್ಯ ಕಲೆಯ ...

ರಂಗ ಮಾಲಿಕೆ-೪-ರಮೇಶಗೌಡ ಪಾಟೀಲ್

Image
ಬಣ್ಣದ ಬದುಕು..             ರಂಗ ಮಾಲಿಕೆ-೪ ‘ಬಳ್ಳಾರಿಯ ರಂಗ ಕೌಸ್ತುಭ’  ರಮೇಶಗೌಡ ಪಾಟೀಲ್ ‘ಬಳ್ಳಾರಿಯ ರಾಘವ’ ಎಂದರೆ ಸಾಕು .ಅವರೊಂದು ಬಳ್ಳಾರಿಯ ‘ರಂಗ ಕಳಸ’ ಎಂತಲೇ ಬಿಂಬಿತವಾಗಿದೆ. ಅವರನ್ನು ಅರಿಯದ ಯಾವೋಬ್ಬ ರಂಗಕರ್ಮಿಯೇ ಇಲ್ಲ.ಏಕೆಂದರೆ ಹವ್ಯಾಸಿ ರಂಗಭೂಮಿಗೆ ಅಡಿಪಾಯ ಹಾಕಿದವರೇ ಬಳ್ಳಾರಿ ರಾಘವರು. ಅಂತವರ ಶಿಲಾರೂಪ ಬಳ್ಳಾರಿ ನಗರದ ಗಡಿಯಾರ ಟವರ್ ಬಳಿ ಕಾಣಬಹುದು.ಆದರೆ ಅವರ ನಿಜರೂಪವನ್ನು ಹೋಲುವವರು ಯಾರಾದರೂ ಇದ್ದರೆ ಅದು ಬಳ್ಳಾರಿ ಖ್ಯಾತ ಉದ್ಯಮಿ ಹಾಗೂ ರಂಗಕರ್ಮಿಯೂ ಆದ ರಮೇಶ್‌ಗೌಡ ಪಾಟೀಲ್‌ರವರು. ಇವರು ಬಳ್ಳಾರಿ ಜಿಲ್ಲೆಯ ವೃತ್ತಿ ಮತ್ತು ಹವ್ಯಾಸಿ ನಾಟಕಗಳಲ್ಲಿ ತೊಡಗಿಸಿಕೊಂಡ ಮಹಾನ್ ವ್ಯಕ್ತಿಯಾಗಿ, ಹಿರಿಯ ನಟರಾಗಿದ್ದಾರೆ. ೫ ದಶಕಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವವನ್ನು ತಂದುಕೊಟ್ಟ ಮಹಾನ್ ಕಲಾವಿದರು. ಬಳ್ಳಾರಿಯ ಪ್ರತಿಷ್ಠಿತರಲ್ಲಿ ಒಬ್ಬರಾದ ಇವರು ಯಾವೂದೇ ಆಹಂ ಇಲ್ಲದೇ ಎಲ್ಲರನ್ನು ಸಜ್ಜನಿಕೆಯಿಂದ ನೋಡುವ ಆಗಾಧ ವ್ಯಕ್ತಿತ್ವವುಳ್ಳ ಶ್ರೇಷ್ಠ ನಟರು. ಬಳ್ಳಾರಿಯ ರಂಗಭೂಮಿ ನಿರ್ಮಾತೃಗಳಲ್ಲಿ ಇವರು ಒಬ್ಬರು ಎಂದರೂ ತಪ್ಪಾಗಲಾರದು. ರಂಗಭೂಮಿಯೊAದಿಗಿನ ನಂಟು   ರಮೇಶಗೌಡ ಪಾಟೀಲ್ ಇವರು ಶ್ರೀ ರಾಮನಗೌಡ ಮತ್ತು ಶ್ರೀಮತಿ ಟಿ.ಓಂಕಾರಮ್ಮ ಇವರ ದಂಪತಿಗಳ ಸುಪುತ್ರರಾಗಿ ಉರವಕೊಂಡ ಹತ್ತಿರದ ಲತ್ವಾರ ಗ್ರಾಮದಲ್ಲಿ ೧.೭.೧೯೪೭ರಲ್ಲಿ ಜನಿಸಿದರು. ...

ರಂಗ ಮಾಲಿಕೆ-೩-ಶಿವಶಂಕರ್ ನಾಯ್ಡು.

Image
 ಬಣ್ಣದ ಬದುಕು..             ರಂಗ ಮಾಲಿಕೆ-೩ ‘ಸಕಲ ಕಲಾ ವಲ್ಲಭ’ ಸಿ.ಶಿವಶಂಕರ ನಾಯ್ಡು    ಬಳ್ಳಾರಿಯ ರಕ್ತರಾತ್ರಿಯ ನವಲಿಪಕ್ಕ ಎಂದ ಕೂಡಲೇ ಸುತ್ತಮುತ್ತಲಿನ ಗ್ರಾಮೀಣ ಭಾಗದ ಎಲ್ಲರಿಗೂ ಚಿರಪರಿಚಿತರಾದ ಕಲಾವಿದರೆಂದರೆ ಅದು ಶಂಕರ್ ನಾಯ್ಡು. ಇವರು ವೃತ್ತಿಯಲ್ಲಿ ಲಾಯರ್ ಪ್ರವೃತ್ತಿಯಲ್ಲಿ ರಂಗಕಲಾವಿದರು. ಇವರು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ತೊಡಗಿಸಿಕೊಂಡ ನಟರು ಮತ್ತು ನಿರ್ದೇಕರಾಗಿದ್ದಾರೆ. ಇವರು ೫ ದಶಕಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವವನ್ನು ತಂದು ಕೊಟ್ಟವರು. ಇಂದಿಗೂ ನಗರದಲ್ಲಿ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ಶಂಕರ್‌ನಾಯ್ಡು ಅಂದ ತಕ್ಷಣ ಮಂದಹಾಸದೊAದಿಗೆ ವಿಚಾರಿಸದೆ ಇರುವವರಿಲ್ಲ. ಅಷ್ಟರ ಮಟ್ಟಿಗೆ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.     ಶಂಕರ್‌ನಾಯ್ಡುರವರು ಬಳ್ಳಾರಿಯಲ್ಲಿ ತಂದೆ ಕೇಶವುಲು ನಾಯುಡು ತಾಯಿ ಜ್ಯೋತಿಶ್ವರಿ ದಂಪತಿಗಳ ಪುತ್ರರಾಗಿ ೧೨.೦೧.೧೯೬೧ ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ನಗರದ ವಾರ್ಡ್ಲ್ ಶಾಲೆಯಲ್ಲಿ ಮುಗಿಸಿದರು. ಬಿ.ಕಾಂ. ಎಲ್.ಎಲ್.ಬಿ ಪದವಿ ಪಡೆದು ವೃತ್ತಿಯಲ್ಲಿ ಲಾಯರ್ ಅಗಿದ್ದವರು ರಂಗಭೂಮಿಯೆಡೆಗೆ ಇವರ ಬದುಕಿನ ಪಯಣ ಸಾಗಿದ್ದು ಒಂದು ಸೋಜಿಗವೇ ಸರಿ. ಇವರು ತಮ್ಮ ಶಾಲಾ ಹಂತದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮನಸಾಗಿ ಮೊಟ್ಟ ಮ...

ರಂಗ ಮಾಲಿಕೆ-೨ ಬಯಲಾಟ ಉಷಾರಾಣಿ

Image
 ಬಣ್ಣದ ಬದುಕು..             ರಂಗ ಮಾಲಿಕೆ-೨ ‘ರಂಗ ಮಯೂರಿ’ ಬಯಲಾಟ ಉಷಾರಾಣಿ         ರಂಗಭೂಮಿಯಲ್ಲಿ ಮೊದಲೆಲ್ಲಾ ಸ್ತಿçà ಪಾತ್ರಗಳನ್ನು ಸಹ ಗಂಡಸರೇ ಮಾಡುತ್ತಿದ್ದರು. ಆದರೆ ಕಾಲಕ್ರಮೇಣ ಸ್ತಿçà ಪಾತ್ರಗಳನ್ನು ಸ್ತಿçÃಯರೇ ಮಾಡುವಂತಾದದ್ದು ಸೋಜಿಗವೇ ಸರಿ. ಅದೂ ಆದದ್ದು ೨೦ನೇ ಶತಮಾನದಲ್ಲಿ. ಸ್ತಿçÃಯರಿಗಿದ್ದ ಹಲವು ಕಟ್ಟಳೆಗಳನ್ನು ಒಡೆದುಕೊಂಡು ಬರುವ ಸಾಹಸವನ್ನು ಮೊದ ಮೊದಲು ವೃತ್ತಿ ರಂಗಭೂಮಿಯಲ್ಲಿ ಕಂಡು ಬಂತು. ತದ ನಂತರ ಗ್ರಾಮೀಣ ಭಾಗದ ಜನಪದ ಕಲೆಗಳಾದ ಬಯಲಾಟಗಳಿಗೂ ಅನ್ವಯಿಸಿತು. ಆದರೆ ಅಲ್ಲಿಯು ಮಡಿವಂತಿಕೆಯಿAದಾಗಿ ಕೇವಲ ದಲಿತ ವರ್ಗದ ಮಹಿಳೆಯರು ಹೊಟ್ಟೆ ಪಾಡಿಗಾಗಿ ತಮ್ಮಲ್ಲಿದ್ದ ಕಲೆಯನ್ನು ಆಶ್ರಯಿಸಿದರು. ಅಲ್ಲದೇ ಯವ್ವನದಲ್ಲಿ ರಂಗ ತಂಡದ ಕಲಾವಿದರೊಬ್ಬರನ್ನು ವರಿಸಿ ಅವರನ್ನೇ ಮದುವೆಯಾಗಿ ನಂತರ ಗಂಡನು ದುಶ್ಚಟಗಳಿಗೆ ಬಲಿಯಾಗಿ ಸಂಸಾರ ತೂಗಿಸಲು ಆಗದೇ ಕೈ ಚೆಲ್ಲಿ ಕುಳಿತಾಗ ಮಡದಿಯಾದವಳು ಮತ್ತೆ ಜೀವನ ಪೊರೆಯುವುದಕ್ಕಾಗಿ ಕಲೆಯನ್ನು ನಂಬಿಕೊಳ್ಳುವುದು. ಆದರೆ ಇನ್ನು ಕೆಲವು ಕಲಾವಿದೆಯರು ಹರೆಯದಲ್ಲಿ ಆ ಪಾತ್ರ ಈ ಪಾತ್ರ ಎನ್ನದೇ ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ರಂಗಭೂಮಿಯಲ್ಲಿ ರಾಣಿಯಂತೆ ಮೆರೆದ ಅದೆಷ್ಟೋ ಸ್ತಿçà ಕಲಾವಿದರು, ಇಂದು ಯಾವುದೋ ಕಿರಾಣಿ ಅಂಗಡಿಯನ್ನೋ, ವ್ಯಾಪಾರವನ್ನೋ ಆಶ್ರಯಿಸಿ ಬದುಕುವಂತಾದದ್ದು ರಂಗಭೂಮಿಯಲ್ಲಿ ಸರ್ವೇ ಸಾಮಾನ್ಯವೆನಿ...

ರಂಗ ಮಾಲಿಕೆ-೧೨- ಎಲಿವಾಳ ಸಿದ್ದಯ್ಯಸ್ವಾಮಿ

Image
ಬಣ್ಣದ ಬದುಕು..! ರಂಗ ಮಾಲಿಕೆ-೧೨ ಕಲಿಯುಗದ ಅಶ್ವತ್ಥಾಮ ' ಎಲಿವಾಳ ಸಿದ್ದಯ್ಯಸ್ವಾಮಿ. ರಂಗಭೂಮಿಯಲ್ಲಿ ರಾಜನಂತೆ ಮೆರೆದು ಕೊನೆಯಲ್ಲಿ ತುತ್ತು ಕೂಳಿಗೂ ಗತಿಯಿಲ್ಲದೆ ಹಾದಿಯಲ್ಲಿ ಹತರಾದ ಅನೇಕ ಕಲಾವಿದರನ್ನು ಕಾಣಬಹುದು. ಆ ನಿಟ್ಟಿನಲ್ಲಿ ಹೆಸರಿಸಬಹುದಾದ ಮತ್ತು ಬಳ್ಳಾರಿ ವೃತ್ತಿ ರಂಗಭೂಮಿ ಇತಿಹಾಸದಲ್ಲಿ ಹೊಳೆಯುವ ಅಗಸ್ತ್ಯ ನಕ್ಷತ್ರ ಎಂದು ಖ್ಯಾತರಾಗಿದ್ದ ಎಲಿವಾಳ ಸಿದ್ದಯ್ಯಸ್ವಾಮಿಯವರು ಒಬ್ಬರು. ಇವರು ಡಾ.ರಾಜಕುಮಾರ್ ರ ಸಮಕಾಲೀನರಾಗಿದ್ದೂ ಮತ್ತು ಅವರಿಗಿಂತ ಉನ್ನತ ಮಟ್ಟದ ಕಲಾ ಪ್ರೌಢಿಮೆಯನ್ನು ಹೊಂದಿದ್ದ ಸರಳ ಜೀವಿಯಾಗಿದ್ದರು. ಇವರು ಕ್ರಿ.ಶ.1924 ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಚೆನ್ನಯ್ಯ ಮತ್ತು ಅಡಿವೆಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು.ಅಲ್ಲದೆ ಸ್ವತಃ ಹಾರ್ಮೋನಿಯಂ ಮತ್ತು ಪಿಟೀಲು ವಾದಕರಾಗಿದ್ದ ತಂದೆಯಿಂದಲೇ ಕಲಾ ನೈಪುಣ್ಯತೆ ಬಳುವಳಿಯಾಗಿ ಇವರಿಗೆ ಬಂದಿತ್ತು. ಅಂತೆಯೇ ಕೇವಲ ನಾಲ್ಕನೇ ತರಗತಿಗೆ ಶಿಕ್ಷಣಕ್ಕೆ ವಿದಾಯ ಹೇಳಿ ದೇವಗಿರಿಯ ಚಂದ್ರಶೇಖರಯ್ಯ ಸ್ವಾಮಿ ಅವರ ಬಳಿಗೆ ಸಂಗೀತ ವಿದ್ಯಾಭ್ಯಾಸಕ್ಕೆಂದು ತೆರಳಿದರು. ಹೀಗೆ ಒಮ್ಮೆ ತಮ್ಮ ಊರಿನಲ್ಲಿ ಭಕ್ತ ಮಾರ್ಕಂಡಯ್ಯ ಎಂಬ ನಾಟಕ ಹಮ್ಮಿಕೊಳ್ಳಲಾಗಿತ್ತು ಆದರೆ ಕೆಲವೇ ದಿನಗಳಲ್ಲಿ ಮಾರ್ಕಂಡೇಯ ಪಾತ್ರದಾರಿ ಅಚಾನಕ್ಕಾಗಿ ಕೈಕೊಟ್ಟಿದ್ದರಿಂದ ಆ ಪಾತ್ರಕ್ಕೆ ಸಿದ್ದ ತಯಾರು ಮಾಡಲಾಗಿತ್ತು ಅಂತೆಯೇ ನಾಟಕದ ದಿನ ಎಲ್ಲರ ನಂಬಿಕೆ, ವಿಶ್ವಾಸ ,ಪ್ರೀತಿ...