ರಂಗ ಮಾಲಿಕೆ -೩೩ ದಣಿವರಿಯದ ರಂಗ ಸಂಚಾರಿ "ಗುಡಿಹಳ್ಳಿ ನಾಗರಾಜ್"
ಬಣ್ಣದ ಬದುಕು ರಂಗ ಮಾಲಿಕೆ -೩೨ ದಣಿವರಿಯದ ರಂಗ ಸಂಚಾರಿ " ಗುಡಿಹಳ್ಳಿ ನಾಗರಾಜ್" ರಂಗಭೂಮಿಗೆ ಪೂರಕವಾಗಿ ಯಾವುದೇ ಕಾರ್ಯ ಕೈಗೊಂಡರು ಅದು ರಂಗ ಕಾಯಕ ಎನಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ತೆರೆಮರೆ ಹಿಂದೆ ಇದ್ದುಕೊಂಡು ಇಡೀ ನಾಡಿನಾದ್ಯಂತ ಸಂಚರಿಸಿ ಎಲೆಮರೆಯ ಕಾಯಿಯಂತಿದ್ದ ಹಲವಾರು ರಂಗಮಣಿಗಳನ್ನು ಗುರುತಿಸಿ, ಮುಖ್ಯ ವಾಹಿನಿಗೆ ತಂದು ಅವರ ಬಣ್ಣದ ಬದುಕಿಗೆ ಬೆಳಕಾದವರೆಂದರೇ ಬಳ್ಳಾರಿಯ ಹೆಮ್ಮೆಯ ಪುತ್ರ ಗುಡಿಹಳ್ಳಿ ನಾಗರಾಜ್. ಇವರು ಬಿಸಿಲುನಾಡು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕರೆಗುಡಿಹಳ್ಳಿಯ ಚಿಕ್ರಪ್ಪ ಮತ್ತು ಗಂಗಮ್ಮ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೧೯೫೪ ರಲ್ಲಿ ಜನಿಸಿದರು. ಇವರು ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ರಂಗಭೂಮಿಯ ಹಲವು ವಿಚಾರಗಳ ಕುರಿತಾದ ಸಮಗ್ರ ಜ್ಞಾನವನ್ನು ಹೊಂದಿದ್ದರು.ರಂಗಭೂಮಿ ಕುರಿತಾದ ಇವರ ಬರಹಗಳು ರಂಗಭೂಮಿ ಇತಿಹಾಸದಲ್ಲಿ ಹಾಸು ಹೊಕ್ಕಾಗಿವೆ.ಅಲ್ಲದೆ ಮುಂದಿನ ಪೀಳಿಗೆಗೆ ದಾಖಲೆಗಳಾಗಿವೆ.ಅಲ್ಲದೇ ಅನೇಕ ರಂಗತAಡಗಳ ರೂವಾರಿಯಾಗಿ ,ತೆರೆಯ ಹಿಂದಿನ ಶಕ್ತಿಯಾಗಿ ರಂಗಕಾಯಕವನ್ನು ಸದ್ದಿಯಿಲ್ಲದೆ ಮಾಡಿ ಸುದ್ಧಿಯಾಗಿದ್ದಾರೆ. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿದರು.ನಂತರ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಇಂಗ್ಲೀಷ್ ಪದವಿ ಗಳಿಸಿ ಊರಿಗೆ ಹಿಂತಿರುಗಿದರು.ಅಲ್ಲದೆ ೧೯೮೦ರಲ್ಲ...