ರಂಗ ಮಾಲಿಕೆ -೩೬ ಕರ್ನಾಕಾಂಧ್ರ ರಂಗಭೂಮಿಯ ಅಭಿಜಾತ ರಂಗತಾರೆ " ಬಳ್ಳಾರಿ ಲಲಿತಮ್ಮ"
ಬಣ್ಣದ ಬದುಕು ರಂಗ ಮಾಲಿಕೆ - ೩೬ ಕರ್ನಾಟಕಾಂಧ್ರ ರಂಗಭೂಮಿಯ ಅಭಿಜಾತ ರಂಗತಾರೆ " ಬಳ್ಳಾರಿ ಲಲಿತಮ್ಮ ". ಬಹುತೇಕ ಕಲಾವಿದರು ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಹೋಗಿ ಹೆಸರಾಗಿ ಅಲ್ಲಿಯೇ ನೆಲೆಯೂರಿ ಆಗಾಗ ಮಾತ್ರ ಹವ್ಯಾಸಿಕ್ಕಾಗಿ ರಂಗಭೂಮಿ ಅರಿಸಿದ್ದನ್ನು ನಾವೂ ನೀವೂ ಕಾಣಬಹುದು.ಆದರೆ ಸಿನಿರಂಗದಲ್ಲಿ ಉತ್ತುಂಗಕ್ಕೆ ಏರಿದ್ದರು.ಸಿನಿ ಕ್ಷೇತ್ರವನ್ನು ಸ್ವ ಇಚ್ಛೆಯಿಂದ ತ್ಯಜಿಸಿ. ರಂಗಭೂಮಿಗೆ ಬಂದು ವೃತ್ತಿರಂಗಭೂಮಿಯನ್ನು ಪುನಶ್ಚೇತನಗೊಳಿಸಿದ ವಿರಾತಿವಿರಳಲ್ಲಿ ಒಬ್ಬರು ನಮ್ಮ ಬಳ್ಳಾರಿ ರಂಗಭೂಮಿಯ ಹೊಳೆವ ರಂಗ ತಾರೆ " ಬಳ್ಳಾರಿ ಲಲಿತಮ್ಮ". ಇವರು ಕ್ರಿ.ಶ.09.01.1923ರಲ್ಲಿ ತಿಮ್ಮಪ್ಪ ಮತ್ತು ವೀರಮ್ಮ ಎಂಬ ದಂಪತಿಗಳ ಮಗಳಾಗಿ ಅನಂತಪುರ ಜಿಲ್ಲೆಯ ಉರವಕೊಂಡ ಜಿಲ್ಲೆಯ ಅಮಿದ್ಯಾಲ ಎಂಬಲ್ಲಿ ಜನಿಸಿದರು.ಅಪ್ಪ ಪ್ರಸಿದ್ಧ ಪಿಟೀಲು ವಾದಕರು, ಅಮ್ಮ ರಂಗಾಸಕ್ತರು,ಅಕ್ಕ ವೆಂಕಮ್ಮ ಮತ್ತು ತಂಗಿ ರತ್ನಮಾಲಾ ಖ್ಯಾತ ರಂಗನಟಿಯರು ಹಾಗೂ ಸುಶ್ರಾವ್ಯ ಗಾಯಕಿಯರು,ನೃತ್ಯಗಾರರು. ಹಾಗಾಗಿ ಲಲಿತಮ್ಮನವರಿಗೂ ಸಹ ಕಲೆಯು ರಕ್ತಗತವಾಗಿ ಬಂದಿದೆ. ಇವರು ತಮ್ಮ ಹುಟ್ಟೂರಿನಲ್ಲೇ ತೆಲುಗು ಮಾಧ್ಯಮದಲ್ಲಿ ೫ ನೇ ತರಗತಿಯವರೆಗೆ ವಿಧ್ಯಾಭ್ಯಾಸ ಮಾಡಿದರು.ನಂತರ ಅಕ್ಕ ವೆಂಕಮ್ಮನವರು ಶ್ರೀಮಂತರ ಮನೆಯ ಅಂಗಳದಲ್ಲಿ ಮದುವೆ ಸಮಾರಂಭದಲ್ಲಿ ಹಾಡುವುದಕ್ಕೆ ಹೋಗುವಾಗ ಇವರನ್ನು ಕರೆದೊಯ್ದರು. ಈ ಮೂಲಕ ಶಾಸ್ತ್ರೀಯ ಹಾಡುಗಾರಿಕೆ ಮತ್ತು ಭರತನಾಟ್ಯವನ್ನು ಕಲಿತ...