Posts

Showing posts from October, 2021

ರಂಗ ಮಾಲಿಕೆ - ೪೦ ಬಯಲಾಟದ ಕಲಾ ರಾಣಿ ' ಎಳ್ಳಾರ್ತಿ ಚಾಮುಂಡಿ'

Image
 ಬಣ್ಣದ ಬದುಕು  ರಂಗ ಮಾಲಿಕೆ -೪೦ ಬಯಲಾಟದ  ಕಲಾ ರಾಣಿ 'ಯಳ್ಳಾರ್ತಿ ಚಾಮುಂಡಿ' ಸಿರುಗುಪ್ಪ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಬಯಲಾಟದ ಚಾಮುಂಡಿ ಎಂದರೆ ಸಾಕು.ಅವರ ಬಗೆಗಿನ ಮಾತುಗಳನ್ನು ಅಕ್ಷರಶಃ ಹಿಡಿದಿಡಲು ಅಸಾಧ್ಯ.ಅವರ ಅಭಿನಯ ಚತುರತೆ,ನೃತ್ಯ ತಲ್ಲೀನತೆ ಅಷ್ಟರ ಮಟ್ಟಿಗೆ ಮೋಡಿ ಮಾಡಿದೆ.ಇಂತಹ ಅಭೂತಪೂರ್ವ ಅಭಿನಯದ ಅಭಿನೇತ್ರಿ ನಮ್ಮೊಡನೆ ಇದ್ದಾರೆಂದರೆ ನಮ್ಮ ಬಳ್ಳಾರಿಯ ಹೆಮ್ಮೆ ಎನ್ನಬಹುದಾಗಿದೆ. ಇವರು ೧೯೭೨ ರಲ್ಲಿ ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಳ್ಳಿಯ ಕಂಪನಿಯ ರಂಗ ಕಲಾವಿದರಾಗಿದ್ದ ವೀರಭದ್ರಯ್ಯ ಸ್ವಾಮಿ ಮತ್ತು ಬಸಮ್ಮರ ಮಗಳಾಗಿ ಮೈಸೂರು ಕ್ಯಾಂಪೊಂದರಲ್ಲಿ ಜನಿಸಿದರು. ಸಾಂಪ್ರದಾಯಿಕ ಶಿಕ್ಷಣ ಪಡೆಯಬೇಕಾದ ಬಾಲ್ಯದಲ್ಲೇ ಅಪ್ಪನ ಬಲವಂತಕ್ಕೆ ಮಣಿದು ನಾಟಕ ನೋಡಲು ಮತ್ತು ಉದ್ದೇಶಪೂರ್ವಕವಾಗಿ ನಾಟಕದ ಕಲೆಯನ್ನು ಅನುಕರೀಸುವ ಸಲುವಾಗಿ ಅಪ್ಪನ ಕಂಪನಿಯ ನಾಟಕಗಳಿಗೆ ಹೋಗುವ ಮೂಲಕ ರಂಗ ಶಿಕ್ಷಣ ಪಡೆದರು.ಹಾಗೆ ಹೋದಲೆಲ್ಲಾ ಕ್ರಮೇಣವಾಗಿ ಏಳೆಂಟನೇ ವಯಸ್ಸಿಗೆ ಚಿಕ್ಕ ಗೌನು ಹಾಕಿಕೊಂಡು ನೃತ್ಯ ಮಾಡಲು ಶುರು ಮಾಡಿದರು.ಅದಲ್ಲದೇ ೨೦೦/೩೦೦₹ ಮುಯ್ಯಿ ಪಟ್ಟಿ ಪಡೆಯಲು ಮುಂದಾದರು.ಅಂತೆಯೇ ಇತ್ತ ತಂದೆಗೆ, ತಮ್ಮ ಹೆಗಲಿಗೆ ಮಗಳು ಹೆಗಲಾದ ಖುಷಿಯಲ್ಲಿ ಸಂಭ್ರಮಿಸಿ ಹರಯಕ್ಕೆ ಬಂದಕೂಡಲೇ ಮಗಳಿಗೆ ನೃತ್ಯದಿಂದ ಅಭಿನಯಕ್ಕೆ ಬಡ್ತಿ ನೀಡಿದರು.ಅಲ್ಲದೆ ಅಷ್ಟೋತ್ತಿಗಾಗಲೇ ಇವರು ತಂದೆಯಿಂದಲೇ ಓದು ಬರಹ ಕಲಿತಿದ್ದರು.   ನಂತರ ...

ರಂಗ ಮಾಲಿಕೆ -೩೯. ಕರ್ನಾಟಕದ ಬಾದಲ್ ಸರ್ಕಾರ್ ಪಿ.ಅಬ್ದುಲ್ ಸಾಬ್

Image
  ಬಣ್ಣದ ಬದುಕು ರಂಗ ಮಾಲಿಕೆ - ೩೯ ಕರ್ನಾಟಕದ ಬಾದಲ್ ಸರ್ಕಾರ್ ' ಹೊಸಪೇಟೆ ಪಿ.ಅಬ್ದುಲ್ ಸಾಬ್'. ಆಡಿದ ಅಂಗಳವನ್ನೇ ನಾಟಕದ ಅಂಗಣವನ್ನಾಗಿಸಿಕೊಂಡು ತನ್ನ ಕೇರಿ,ಕೇರಿಯ ಮಕ್ಕಳ ಏಳ್ಗೆಗೆ ಹಾಗೂ ನಾಡಿನಲ್ಲಿದ್ದ ವರದಕ್ಷಿಣೆ, ಕೋಮುಗಲಭೆ,ಅಸ್ಪೃಶ್ಯತೆ, ಮನುಜ ಶೋಷಣೆ,ಮಾನವ ಕಳ್ಳಸಾಗಣೆಯಂತಹ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಈ ನಾಡಿನಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುವ ಹೆಸರಾದ ಬಳ್ಳಾರಿ ಭಾಗದ ರಂಗಕರ್ಮಿಯೆಂದರೆದರ ಹೊಸಪೇಟೆಯ ಪಿ.ಅಬ್ದುಲ್ ಸಾಬ್.     ಇವರು ದಿನಾಂಕ 01 ಜೂನ್ 1958 ರಲ್ಲಿ ಹೊಸಪೇಟೆಯಲ್ಲಿ ಪಿ.ನೂರ್ ಸಾಬ್ ಹಾಗೂ ಅಮೀನಾ ಎಂಬ ದಂಪತಿಗಳ ಮಗನಾಗಿ ಜನಿಸಿದರು.ಇವರ ಪ್ರಾಥಮಿಕ ಶಿಕ್ಷಣವನ್ನು ಹೊಸಪೇಟೆಯ ನೆಹರು ಸರ್ಕಾರಿ ಶಾಲೆಯಲ್ಲಿ ಮುಗಿಸಿ ನಂತರದ ಶಿಕ್ಷಣಕ್ಕಾಗಿ ಶಿವಮೊಗ್ಗದ ಸಿಕ್ರೆಟ್ ಹಾರ್ಟ್ ಶಾಲೆಯಿಂದ ಆರಂಭವಾಗಿ ಶಿವಮೊಗ್ಗದ ಡಿ.ವಿ.ಎಸ್ (ದೇಸಿ ವಿದ್ಯಾ ಶಾಲೆ) ಕಾಲೇಜಿನಲ್ಲಿ ಬಿ.ಎ ಪದವಿಯೊಂದಿಗೆ ಕೊನೆಯಾಯಿತು. ಆದರೆ ೧೯೮೧ರಲ್ಲಿ ಅದೇ ಶಿವಮೊಗ್ಗದ ಅಭಿನಯ ಸಂಸ್ಥೆಯ ವತಿಯಿಂದ ಅಶೋಕ ಬಾದರದಿನ್ನಿ ನೇತೃತ್ವದಲ್ಲಿ ನಡೆದ ರಂಗತರಬೇತಿ ಶಿಬಿರದ ' ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಾಟಕದಿಂದ ಇವರ ರಂಗಯಾತ್ರೆ ಆರಂಭವಾಯಿತು.೧೯೮೩ರಲ್ಲಿ ಶಿವಮೊಗ್ಗದ ಯುಗಾಂತರ ತಂಡದಲ್ಲಿ ತಯಾರಾದ ಡಾ.ಚಂದ್ರಶೇಖರ ಕಂಬಾರರ 'ಜೈಸಿದ ನಾಯಕ' ನಾಟಕದಲ್ಲಿ ಡಂಗುರದವ ಮತ್ತಿತರೆ ಚಿಕ್ಕ ಪಾತ್ರಗಳಲ್ಲಿ ದೊಡ್ಡದಾಗಿ ...

ರಂಗ ಮಾಲಿಕೆ - ೩೮ ನಾಟಕ ಕಂಪನಿಗಳ ಸುಧಾರಕ " ಬಿ.ವಿ.ಈಶ".

Image
 ಬಣ್ಣದ ಬದುಕು ರಂಗ ಮಾಲಿಕೆ -೩೮ ನಾಟಕ ಕಂಪನಿಗಳ ಸುಧಾರಕ " ಬಿ.ವಿ.ಈಶ". ಕನ್ನಡ ಸಿನಿ ಜಗತ್ತಿನ ಸಿಪಾಯಿ ,ಖ್ಯಾತ ಖಳನಾಯಕರಾಗಿದ್ದ ಸುಧೀರ್ ನಂತಹ ಅನೇಕ ನಟರು ಸಿನಿ ರಂಗದಲ್ಲಿ ಮಿನುಗುವಂತೆ ಮಾಡಿದ ರಂಗಭೂಮಿಯ ಐಕನ್ ಎಂದರೆ ಅದು ಬಿ.ವಿ.ಈಶ ಕೃತ ನಾಟಕ 'ಗೌಡ್ರ ಗದ್ಲ'.ಈ ನಾಟಕವನ್ನು ಇಡೀ ನಾಡಿನಲ್ಲಿ ನೋಡದ,ಕೇಳದ ಕಲಾರಸಿಕರಿಲ್ಲ.ಅಲ್ಲದೇ ಆಗಿನ ಕಾಲದ ನಾಟಕ ಕಂಪನಿಗಳ ಗಲ್ಲಾ ಪೆಟ್ಟಿಗೆ ತುಂಬಾ ಹಣದ ಕೋಡಿಯನ್ನು ಹರಿಸಿದ ಯಶಸ್ವಿ ಪ್ರಯೋಗ ಇದಾಗಿತ್ತು.ಆದರೆ ಅಷ್ಟು ಮಟ್ಟದ ಪ್ರಸಿದ್ಧತೆ ಗಳಿಸಿದ್ದು ನಾಟಕ ಮಾತ್ರ, ನಾಟಕಕಾರ ಅಲ್ಲ ಎಂಬುದನ್ನು ನೆನದರೆ ಖೇಧಕರ ಎನ್ನಿಸುತ್ತದೆ.ಅಲ್ಲದೇ ಇಡೀ ಕನ್ನಡ ರಂಗಭೂಮಿಗೆ ಸಂಚಲನ ಮೂಡಿಸಿದ ಹಲವರಲ್ಲಿ ಈಶ ಸಹ ಪ್ರಮುಖರೆಂದರೂ ತಪ್ಪಾಗಲಾರದು.     ಈಶರವರು ನೋಡಲು ಥೇಟ್ ಹಳೆ ಸಿನಿಮಾದ ವಜ್ರಮುನಿ ತರ ಕಾಣುವ, ಸುಂದರ ಸ್ನಿಗ್ಧ ಮೊಗದ ಚೆಲುವ, ಸದಾ ಮಂದಹಾಸ ಬೀರುವ ಚೆನ್ನಿಗ ಅಷ್ಟೇ ಬಹುಮುಖ ವ್ಯಕ್ತಿತ್ವ ಅಪರೂಪದ ಹರಿಕಾರ. ಇವರು ಕ್ರಿ.ಶ.1934 ರಲ್ಲಿ ಬಳ್ಳಾರಿ(ವಿಜಯನಗರ) ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಿರ್ನಾಕೊರ್ನಾ ಹಳ್ಳಿಯಲ್ಲಿ ಬಸಪ್ಪ ಊರಾಳ ಎಂಬುವವರ ಮಗನಾಗಿ ಜನಿಸಿದರು.    ಬಳ್ಳಾರಿಗೆ ಬರ ಬಂದರೂ ಬಳ್ಳಾರಿ ಭಾಗದಲ್ಲಿ ನಡೆಯುವ ನಾಟಕಗಳಿಗೆ ಎಂದೂ ಬರವಿಲ್ಲ.ಅಂತೆಯೇ ಈ ಭಾಗದಲ್ಲಿ ನಡೆಯುವ ನಾಟಕಗಳನ್ನು ನೋಡತ್ತಲೇ ರಂಗ ಕಲೆಯನ್ನು ಮೈಗೂಡಿಸಿಕೊಂಡುಕನ್ನಡ ರಂಗಭೂಮಿಗೆ ಪಾ...

ಶಿಲಾಯುಗದ ಇತಿಹಾಸ ಹೊತ್ತ ಬೈರಗಾಮದಿನ್ನೆ - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.

Image
 ಶಿಲಾಯುಗದ ಇತಿಹಾಸ ಹೊತ್ತ ಬೈರಗಾಮದಿನ್ನೆ    ಕರ್ನಾಟಕ ಶಾಸನಗಳ ತವರೂರು ಇಲ್ಲಿ ಅಸಂಖ್ಯಾತ ಶಾಸನಗಳು ಪತ್ತೆಯಾಗಿವೆ, ಆಗುತ್ತಲೇ ಇವೆ.ಇನ್ನೂ ಅದೆಷ್ಟೋ ಶಾಸನಗಳು ದನಗಳನ್ನು ಕಟ್ಟಲು,ಮನೆಗಳ ಗೋಡೆಗಳಿಗೆ ಕಲ್ಲುಗಳಾಗಿ,ಪೂಜೆಗೆ ದೇವರ ವಿಗ್ರಹಗಳಾಗಿ,ಹರಟೆ ಮಲ್ಲರ ಕಟ್ಟೆಯಾಗಿ,ಹೊಲಗದ್ದೆಗಳ ಮೇರೆಕಲ್ಲುಗಳಾಗಿ ಮತ್ತು ಮಕ್ಕಳ ಆಟಿಕೆಗಳಾಗಿ ಇನ್ನೂ ಅನೇಕ ಹೇಯಸ್ಥಿತಿಯಲ್ಲಿ ಇಂದಿಗೂ ಮರಗುತ್ತಲೇ ಇವೆ. ಅಲ್ಲದೇ ಇವುಗಳಿಗೆ ಇಟ್ಟ ಹೆಸರಿಗಿಂತ ಪಡೆದ ಹೆಸರುಗಳಿಂದಲೇ ಇಂದಿಗೂ ಎಲೆ ಮರೆಯಾಗಿ ಉಳಿದುಕೊಂಡಿವೆ.ಉದಾಹರಣೆಗೆ ಪೋತಪ್ಪನ ಕಲ್ಲು ,ಹಡೆದವರ ಕಲ್ಲು,ಮಡಿದವರ ಕಲ್ಲು ,ದೇವರ ಕಲ್ಲು, ನಿಲುಗಲ್ಲು ಹೀಗೆ ನಾನಾ ನಾಮಗಳಿಂದ ನಾಮಕರಣಗೊಂಡಿವೆ.    ಈ ಶಾಸನಗಳಲ್ಲಿ ದಾನ ಶಾಸನ, ಪ್ರಶಸ್ತಿ ಶಾಸನ, ವೀರಗಲ್ಲು, ಮಾಸ್ತಿಕಲ್ಲು, ನಿಷಿಧಿ ಕಲ್ಲು, ಯೂಪ ಶಾಸನ, ಕೂಟ ಶಾಸನ ಎಂಬಿತ್ಯಾದಿ ಪ್ರಕಾರಗಳಿವೆ. ಆದರೆ ನಾನಿಂದು ನಿಮ್ಮೊಂದಿಗೆ ಪ್ರಸ್ತಾಪಿಸ ಬಯಸುವ ವಿಷಯ ನಮ್ಮೂರಿನ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಿಂದ ೨೫ ಕಿ.ಮೀ ದೂರದಲ್ಲಿ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ಪಕ್ಕ ಕನ್ನಡದ ಗಡಿನಾಡು ಬೈರಗಾಮದಿನ್ನೆ.ಇದು ಕೆಲವು ಐತಿಹ್ಯಗಳನ್ನು ಹೊತ್ತು ನಿಂತು, ಬಹುತೇಕರ ನಿರ್ಲಕ್ಷ್ಯಕ್ಕೊಳಗಾದ ಕುಗ್ರಾಮವಾಗಿದೆ.ಅಂತೆಯೇ ಮಕ್ಕಳಿಗೆ ಆಟವಾಡಲು ಬಳಕೆಯಾಗುತ್ತಿದ್ದ ಇಲ್ಲಿನ ವೀರಗಲ್ಲು ಹಾಗೂ ...

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

Image
  ಬಣ್ಣದ ಬದುಕು ರಂಗ ಮಾಲಿಕೆ -೩೭ ನಡೆದಾಡುವ ರಕ್ತರಾತ್ರಿ 'ನಾಡಂಗ ಬಸವರಾಜ' ಬಾನಲ್ಲಿ ಹಾರುವ ಬಣ್ಣದ ಗಾಳಿಪಟ ಎಲ್ಲರಿಗೂ ಕಾಣುತ್ತದೆ ಮತ್ತು ಅಷ್ಟೇ ಕ್ಷಿಪ್ರವಾಗಿ ಅಕರ್ಷಣಗೊಳಪಡುತ್ತದೆ.ಆದರೆ ಅದು ಹಾರಲಿಕ್ಕೆ ಸಹಾಯಕವಾದ ಅದರ ಬಾಲಂಗೋಚಿ ದಾರ ಬಹುತೇಕರ ಕಣ್ಣಿಂದ ಮರೆಯಾಗಿ ಹೋಗುತ್ತದೆ.ಈ ಸ್ಥಿತಿ ರಂಗಭೂಮಿಗೆ ಅನ್ವಯಿಸಿದರೆ ವೇದಿಕೆ ಮೇಲಿನ ನಟರು ಬಹುಬೇಗ ಎಲ್ಲರಿಗೂ ಪರಿಚಿತರಾಗುತ್ತಾರೆ.ಆದರೆ ಅವರ ನಟನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಿದ ಅನೇಕ ಹಿನ್ನಲೆ ನಟರು ಪ್ರೇಕ್ಷಕರಿಂದ ದೂರ ಉಳಿಯುತ್ತಾರೆ.ಬಳ್ಳಾರಿ ರಂಗಭೂಮಿ ಇತಿಹಾಸದಲ್ಲೂ ಹಾಗೆ ಮರೀಚಿಕೆಯಾಗಿ ಉಳಿದ ಅನೇಕರಲ್ಲಿ 'ನಾಡಂಗ ಬಸವರಾಜ' ಒಬ್ಬರು. ಇವರು ರಂಗದ ಹಿಂದೆ ಪರದೆ ಎಳೆಯಲಲಿಳಿಸಲು,ಕಥಾ ಸಂಚಾಲಕರಾಗಿ ಮತ್ತು ಅವಸರಕ್ಕೆ ಒದುಗುವ ದೀಢಿರ್ ನಟರಾಗಿ ಅನೇಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ರಂಗನಟರಾಗಿದ್ದರು.       ಇವರು ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ವಿರುಪಾಪುರದಲ್ಲಿ ಕ್ರಿ.ಶ.೧೯೪೨ ರಲ್ಲಿ  ಹೆಚ್.ಚೆನ್ನಬಸವನಗೌಡ ಮತ್ತು ಹೆಚ್.ಬಸವಲಿಂಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಮೂಲತಃ ಇವರು ಬಡ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ವಿದ್ಯಾಭ್ಯಾಸಕ್ಕಾಗಲಿ ಮತ್ತು ಕಲಾಭ್ಯಾಸಕ್ಕಾಗಲಿ ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ.ಆದ್ದರಿಂದ ಇವರ ಸೋದರ ಮಾವನ ಸಹಾಯದಿಂದ ಎಸ್.ಎಸ್.ಎಲ್.ಸಿಯವರೆಗೂ ಓದಿದರು. ಊರಲ್ಲಿ ಆಗಾಗ ನಡೆಯುತ್ತಿದ್ದ ರಂಗ ಚಟುವಟಿಕ...