Posts

Showing posts from July, 2021

ರಂಗ ಮಾಲಿಕೆ -೩೦ ರಂಗಭೂಮಿಯ ಮಿನುಗುತಾರೆ ' ವೀಣಾ ಆದೋನಿ'.

Image
  ಬಣ್ಣದ ಬದುಕು ರಂಗ ಮಾಲಿಕೆ-೩೦ ರಂಗಭೂಮಿಯ ಮಿನುಗು ತಾರೆ ' ವೀಣಾ ಕುಮಾರಿ ಆದೋನಿ'. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಮಾತಾನಾಡುವುದಾಗಲಿ ಅಥವಾ ಕನ್ನಡದಲ್ಲಿ ಪ್ರೌಢಿಮೆ ತೋರುವುದೇನು ದೊಡ್ಡಷ್ತಿಕೆ ಎನಿಸುವುದಿಲ್ಲ.ಆದರೆ ಪರಭಾಷಿಯೊರ್ವರು ಕನ್ನಡದಲ್ಲಿ ಮಾತಾಡುವ, ಕನ್ನಡಿಗರನ್ನು ನಾಚಿಸುವಂತೆ ತುಂಬಾ ಮನೋಜ್ಞವಾಗಿ ಅಭಿನಯಿಸುವ ಚಾಕಚಕ್ಯತೆ ಹೊಂದಿರುವ ಕಲಾವಿದರು ನಮ್ಮಲ್ಲಿ ಕೆಲವರಿದ್ದಾರೆ. ಅಂತಹ ವಿರಳಾತಿ ವಿರಳರಲ್ಲೊಬ್ಬರೆಂದರೆ ಬಳ್ಳಾರಿಯ ವೀಣಾ ಕುಮಾರಿ ಆದೋನಿ.   ಇವರು ೦೨-೦೨-೧೯೬೨ರಂದು ಕರ್ನೂಲು ಜಿಲ್ಲೆಯ ಆಲೂರು ತಾಲ್ಲೂಕಿನ ಉಳೇಬೀಡು ಎಂಬಲ್ಲಿ  ಗೋವಿಂದರೆಡ್ಡಿ ಮತ್ತು ಉಳೇಬೀಡು ರಂಗಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.  ಕುಟುಂಬದ ಹಿನ್ನಲೆಯಲ್ಲಿ ಇವರ ತಾತ ನೇಮಕಲ್ ರಂಗಪ್ಪನವರು ಖ್ಯಾತ ಹಾರ್ಮೋನಿಯಂ ವಾದಕರು ಹಾಗೂ ದಕ್ಷಿಣಾದಿ ಸಂಗೀತ ಗಾಯಕರಾಗಿದ್ದರು.ಇದಲ್ಲದೇ ಬೈರವಿ ರಾಗವನ್ನು ಅತ್ಯದ್ಭುತವಾಗಿ ನುಡಿಸುವ ಮೂಲಕ ಹೈದರಾಬಾದ್ ನಲ್ಲಿ ಹಿರಿಯ ನಟಿ ಆದೋನಿ ಲಕ್ಷಮ್ಮಮ್ಮರ ಪತಿ ಆದೋನಿ ರಘುರಾಮಯ್ಯರಿಂದ ' ಬೈರವಿ ರಂಗಪ್ಪ' ಬಿರುದು ಪಡೆದಿದ್ದರು. ಇನ್ನು ತಾಯಿ ಉಳೇಬೀಡು ರಂಗಮ್ಮ ಪ್ರಸಿದ್ಧ ವೃತ್ತಿ ರಂಗಭೂಮಿ ಕಲಾವಿದರು ಕೊಟ್ಟೂರು ಸುಜಾತಮ್ನ,ಸುಭದ್ರಮ್ಮ ಮನ್ಸೂರ್,ಮದಿರೆ ಮರಿಸ್ವಾಮಿ, ಕುಂಟನಹಾಳ್ ಸಿದ್ಧನಗೌಡರಂತಹ ಮೇಧಾವಿ ನಟರೊಡನೆ ರಂಗಸಖ್ಯ ಹೊಂದಿದವರು.ಹಾಗೂ ತಂದೆ ಗೋವಿಂದ ರೆಡ್ಡಿಯವರು ಗೌಡಿಕೆ ಮಾಡುತ...

ರಂಗ ಮಾಲಿಕೆ -೨೯ ಸಿರಿನಾಡಿನ ರಂಗ ಜ್ಯೋತಿಷ್ಯಿ ' ಜೆ.ವಾಸುದೇವಾಚಾರ್ಯರು.'

Image
 ಬಣ್ಣದ ಬದುಕು ರಂಗ ಮಾಲಿಕೆ-೨೯ ಸಿರಿನಾಡಿನ ರಂಗ ಜ್ಯೋತಿಷ್ಯಿ " ಜೆ.ವಾಸುದೇವಾಚಾರ್ಯರು". ಕಲೆಯೆಂಬುದಕೆ ಕುಲವಿಲ್ಲ. ಕುಲದ ಮದದಲ್ಲಿ ಮೆರೆಯುವ ಮಹಿಮರಿಗೆ ಕಲೆಯ ಮಹಿಮೆ ಅರಿವಾಗದು.ಆದರೆ ಕುಲವ ಕಟ್ಟಿ ಮೂಲೆಗಿಟ್ಟು ರಂಗಕ್ಕೆ ಬಂದು  ಉತ್ತಂಗಕ್ಕೇರಿದ ಅನೇಕ ಮಹನೀಯರನ್ನು ಕಾಣಬಹುದು. ಅಂತವರಲ್ಲೊಬ್ಬರು ಸಿರಿನಾಡಿನ ರಂಗ ಜ್ಯೋತಿಷ್ಯಿ ಜೆ.ವಾಸುದೇವಾಚಾರ್ಯರು.   ಇವರು 11.10.1955ರಲ್ಲಿ ಅಶ್ವತಾಚಾರ್ಯ ಮತ್ತು ಶಾರದಮ್ಮ ಎಂಬ ದಂಪತಿಗಳ ಮಗನಾಗಿ ಸಿರುಗುಪ್ಪ ತಾಲ್ಲೂಕಿನ ರಾವಿಹಾಳು ಗ್ರಾಮದಲ್ಲಿ ಜನಿಸಿದರು.  ಮಧ್ಯಮ ವರ್ಗದ ಕುಟುಂಬದಿಂದ  ಬಂದ ಇವರು ನಾಟಕ ಎಂದರೆ ತುಶ್ಚವಾಗಿ ಕಾಣುವ ವರ್ಗದಲ್ಲಿ ಜನಿಸಿದರೂ, ತಾತನ ಕಾಲದಿಂದಲೂ ಯಾವುದಾದರೊಂದು ಕಲೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಅಂತೆಯೇ ಇವರ ತಾತ ಬಯಲಾಟ ಕಲಾವಿದರು, ತಂದೆ ಹೆಸರಾದ ಢಕ್ಕೆ ವಾದಕರು ಹಾಗೂ ರಂಗ ಕಲಾವಿದರು ಹಾಗೂ ಇವರ ತಾಯಿಯು ಸಹ ದಾಸ ಸಾಹಿತ್ಯದ ಆರಾಧಕರಾಗಿದ್ದರು.ಈ ಮೂಲಕವೇ ವಾಸುದೇವಾಚಾರ್ಯರ ರಂಗಕಲೆಯ ಮೇಲೆ ಪ್ರಭಾವ ಬೀರಿದೆ.    ಅಪ್ಪನ ಹಿಂದೆ ಪ್ರತಿವಾರ ಗುಡಿಯಲ್ಲಿ ಮಾಡುತ್ತಿದ್ದ ಭಜನೆಗೋಗಿ ಹಾಡಿನ ಲಯಕ್ಕೆ ತಾಳವಾಗುತ್ತಿದ್ದರು. ಅಲ್ಲದೆ 7ನೇ ತರಗತಿ ವಿದ್ಯಾಭ್ಯಾಸಕ್ಕೆಂದು ಹಚ್ಚೊಳ್ಳಿಗೆ ಹೋದಾಗ ಅಲ್ಲಿ ತಮ್ಮ ಶಿಕ್ಷಕರಾಗಿದ್ದ ವೀರೇಶಪ್ಪರ ನಿರ್ದೇಶನದಲ್ಲಿ ಕೆ.ಗುಂಡಣ್ಣರ  ಶಂಕವಾದ್ಯ ವಿಚಾರತ್ಮಕ ನಗೆ ನಾಟಕವನ್ನು ಶಾಲ...

ರಂಗ ಮಾಲಿಕೆ - ೨೮ ಸಿರಿನಾಡ ರಂಗ ಸಾಧಕ " ಬೀರಹಳ್ಳಿ ರಾಮರೆಡ್ಡಿ".

Image
 ಬಣ್ಣದ ಬದುಕು ರಂಗ ಮಾಲಿಕೆ-೨೮   ಸಿರಿನಾಡ ರಂಗ ಸಾಧಕ " ಬೀರಹಳ್ಳಿ ರಾಮರೆಡ್ಡಿ". ಬಯಲಾಟ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ವಲಯದ ಸಂಪದ್ಭರಿತ ಆಸ್ತಿ. ಈ ಮೂಲಕ ಧಾವಿಸಿ ನಾಟಕ ಎಂಬ ಕ್ಷೀರ ಸಾಗರದಲ್ಲಿ ಶ್ವೇತ ಹಂಸಗಳಂತೆ ತೇಲಾಡಿದ ಮಹನೀಯರೆಷ್ಟೋ! ಆ ನಿಟ್ಟಿನಲ್ಲಿ ಕಾಣ ಬರುವ ಬಹುತೇಕ ಮಹನೀಯರು ಸಿರುಗುಪ್ಪ ತಾಲ್ಲೂಕಿನವರೇ ಆಗಿದ್ದಾರೆ.ಅಂತವರಲ್ಲಿ ಒಬ್ಬರು ಬೀರಹಳ್ಳಿ ರಾಮರೆಡ್ಡಿಯವರು.ಇವರು ಸಹಜ ಮತ್ತು ಮುಗ್ಧ ಮೊಗದ ಚೆನ್ನಿಗರು.ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಗಟ್ಟಿಗರು.ಗಡಿನಾಡ ಸಾಧಕರು.ಇವರ ಬಗ್ಗೆ ಅರಿಯುವ ಚಿಕ್ಕ ಪ್ರಯತ್ನವೇ ಈ ಲೇಖನ.    ಇವರು ೧೯೪೭ರಲ್ಲಿ ಸಿರುಗುಪ್ಪ ತಾಲ್ಲೂಕಿನ ಬೀರಹಳ್ಳಿಯಲ್ಲಿ  ಮಹಾದೇವಮ್ಮ ಮತ್ತು ಬಸವನಗೌಡ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಆದರೆ ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡು ತಮ್ಮ ತಾಯಿಯ ಅಕ್ಕ ಲಕ್ಷ್ಮಮ್ಮ (ದೊಡ್ಡಮ್ಮ) ರ ಹಾರೈಕೆಯಲ್ಲಿ ಅಂದಿನ ಕರ್ನಾಟಕದ ಆಲೂರು ತಾಲ್ಲೂಕಿನ ಹೆಬ್ಬುಟ ಗ್ರಾಮದಲ್ಲಿ ಬೆಳೆದರು.ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರಿಂದ ಅಷ್ಟೇನೂ ಸಿರಿವಂತರಾಗಿರಲಿಲ್ಲ.ಅಲ್ಲದೇ ಹೆಬ್ಬುಟದಲ್ಲೇ ಪ್ರಾಥಮಿಕ ಶಿಕ್ಷಣ ಪಡೆಯುವ ಕಾಲದಲ್ಲೇ ವೀರಾಪುರ ಬಸಯ್ಯನವರ ಬಳಿ ಇವರ  ಮಾವ ಶಂಕರರೆಡ್ಡಿ (ಅಕ್ಕನ ಗಂಡ ) ಮತ್ತು ಕರೂರು ತಿಮ್ಮಪ್ಪ ಮೇಷ್ಟ್ರು ದಕ್ಷಿಣಾದಿ ಸಂಗೀತ ಪಡೆಯುತ್ತಿದ್ದರು. ೫-೬ ವಯಸ್ಸಿನ ರಾಮರೆಡ್ಡಿಯವರು ಮಾವನ ಹಿಂದೆ ಸಂಗೀತ ತಾಲೀಮ...

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.

Image
 ಬಣ್ಣದ ಬದುಕು ರಂಗ ಮಾಲಿಕೆ - ೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'. ನಾವ್ಯಾರೂ ದ್ರೋಣ - ಏಕಲವ್ಯರನ್ನು ಕಾಣದಿರಬಹುದು.ಆದರೆ ಆ ಮಾದರಿಯ ಗುರು ಶಿಷ್ಯ ಪರಂಪರೆ ಇಂದಿಗೂ ಜೀವಂತ.ಈ ಪರಂಪರೆ ರಂಗಭೂಮಿಯಲ್ಲಂತೂ ಆಳವಾಗಿ ಬೇರೂರಿದೆ. ಏಕಲವ್ಯರಂತೆ ಬೆಳೆದು ನಾಡಿಗೆ ಹೆಸರಾದ ಅನೇಕ ಮಹನೀಯರಿದ್ದಾರೆ ಅಂತವರಲ್ಲಿ  ಹೂವಿನ ಹಡಗಲಿಯ ಸೋಗಿ ನಾಗರತ್ನಮನವರು ಒಬ್ಬರೆಂದರೆ ತಪ್ಪಾಗಲಾರದು.       ಇವರು 1960 ರಲ್ಲಿ ಹೂವಿನ ಹಡಗಲಿ ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ತುಮ್ನೆಪ್ಪ ಮತ್ತು ಕಾಳಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರು ಹುಟ್ಟಿನಿಂದಲೇ ತೀವ್ರ ಬಡತನದ ಬೇಗೆಯಲ್ಲಿ ಬೆಂದರು. ತಂದೆ-ತಾಯಿ ಪರರ ಜಮೀನಿನಲ್ಲಿ ಕೂಲಿಯನ್ನು ಮಾಡುತ್ತಾ ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು.ಇದ್ದ ಒಬ್ಬ ತಂಗಿಯನ್ನು ನೋಡಿಕೊಳ್ಳುವ ಸಲುವಾಗಿ 2ನೇ ತರಗತಿಗೆ ವಿದ್ಯೆ ನೈವೇದ್ಯವಾಗಿ ಕಲಾಭಿರುಚಿಯೇ ಮೈಗೂಡಿಸಿಕೊಂಡಿತು.   ಬಾಲ್ಯದ ದಿನಗಳಲ್ಲಿ ಇವರ ಹಳ್ಳಿಗೆ ನಾಟಕ ಪ್ರದರ್ಶನಕ್ಕೆ ಬರುತ್ತಿದ್ದ ನಾಡೋಜ ಸುಭದ್ರಮ್ಮ ಮನ್ಸೂರ್ ಮತ್ತು ನಾಡೋಜ ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮನವರೇ ರಂಗಭೂಮಿಯ ದ್ರೋಣಾಚಾರ್ಯರಾಗಿ ರಂಗದೊಲವು ಮೈಮನಸ್ಸಿಗಂಟಿತು.ಅಂತೆಯೇ ಪ್ರತಿಸಾರಿ ಅವರ ಹಳ್ಳಿಗೆ ಬಂದಾಗಲಲ್ಲೇ ಅವರೊಡನೆ ಇದ್ದು ಬ್ಯಾಗ್ ಹಿಡಿದು, ತಾಲೀಮು ಕೋಣೆಯನ್ನು ಸ್ವಚ್ಛ ಮಾಡುತ್ತಾ ಅವರ ಅಭಿನಯವನ್ನೇ ಅನುಕರಿಸಿದರು.     ...