ಕಥೆಯೇ ಕಥೆಯಾದಾಗ..
ಮೂಲ ಕಥೆಯ ನಾಯಕಿ ಸಾಂದರ್ಭಿಕ ಚಿತ್ರ ಕಥೆಯೇ ಮತ್ತೊಂದು ಕಥೆಯಾದಾಗ... ಇವತ್ತು ಸ್ವಲ್ಪ ಬೇಗನೇ ಲೈಬ್ರರಿ ಓದಿಗೆ ತಿಲಾಂಜಲಿ ಹೇಳಿ ಹೆಗಲಿಗೆ ಬ್ಯಾಗ್ ಹಾಕೊಂಡು ಹೊರಬಂದೆ. ಬರುವಾಗ ಏನೋ, ಇವತ್ತು ಹೋಗುವ ದಾರಿಯನ್ನು ಬದಲಾಯಿಸೋಣ ಎಂದೇನಿಸಿ ನವರಂಗದ ಕಡೆಯಿಂದ ಬರಲು ನಿರ್ಧರಿಸಿ ಹಾದಿ ಬದಲಿದೆ. ಕೊನೆಗೆ ಅಲ್ಲಿಗೂ ಬಂದು ನವರಂಗ ಮಂಟಪದ ಮೇಲೆ ಸಂಶೋಧನಾ ಬುದ್ಧಿ ತೋರಿಸಲು ಆರಂಭಿಸಿದೆ. ಉಸಿರು ಗಟ್ಟುವ ಸ್ಥಳ, ಬಡ್ದಾಕಿದ್ರು ಕೇಳೋಕೆ ಅಲ್ಲಿ ಒಂದು ನರಪಿಳ್ಳೆನು ಇರಲಿಲ್ಲ. ಆದರೂ ಧೈರ್ಯ ಮಾಡಿಕೊಂಡು ತುಂಬಾ ಗಾಢವಾಗಿ, ತದೇಕ ಚಿತ್ತದಿಂದ ಅಲ್ಲಿನ ಕೆಳ ಮಂಟಪ ನೋಡಲೆಂದು ಅಲ್ಲಿನ ಎರಡು ಕೋಣೆಯ ತೆರದ ಕಿಟಿಕಿಯ ಅಂಚಿಗೆ ಕಣ್ಣಾರಳಿಸಿದೆ. ಅದೇನೋ ಇದ್ದಕ್ಕಿದ್ದಂತೆ ಹಕ್ಕಿ ಪಿಕ್ಕಿಗಳ ಧ್ವನಿಯ ನಡುವಿಂದ ಯಾರೋ ಗದರಿದ ಹಾಗೆ, ವಿಸಿಲ್ ಹೊಡೆದ ಹಾಗೆ ಭಾಸವಾಯಿತು. ಮನಸ್ಸು ಆ ಕ್ಷಣ ಜಲ್ಲೆಂದು ಅರೆಕ್ಷಣದಲ್ಲೇ ಬಲಗೈ ತಾನಾಗಿಯೇ ಉಗಳಚ್ಚಿಕೊಂಡು ಬೆನ್ನು ಮುಟ್ಟಿ ಧೈರ್ಯ ಹೇಳಿತು. ಆದರೂ ಮತ್ತದೇ ಗತ್ತಲ್ಲಿ ಕೆಳಗಿನಿಂದ ಮೇಲಿನ ವೇದಿಕೆಗೆ ಬಂದು ಅತ್ತ ಇತ್ತ ಕತ್ತಾಡಿಸಿದೆ. ಅಚ್ಚರಿಯಂಬಂತೆ ನನ್ನ ಕಣ್ಣೆದುರೆ ಒಂದು ಮುಗ್ಧ ಮೊಗದ ಅಂದದ ಚಲುವೆ,ಕೆದರಿದ ಕೂದಲು, ಹಳೆಯ ಜೀನ್ಸ್ ಪ್ಯಾಂಟ್, ಹಳೆಯದಾದ ತುಂಬು...