Posts

Showing posts from December, 2021

ರಂಗ ಮಾಲಿಕೆ - ೪೭ ಕರ್ನಾಟಕಾಂಧ್ರದ ಅಭಿನಯ ಚತುರೆ 'ಉಳೇಬೀಡು ರಂಗಮ್ಮ'

Image
   ಬಣ್ಣದ ಬದುಕು ರಂಗ ಮಾಲಿಕೆ - ೪೭ ಕರ್ನಾಟಕಾಂಧ್ರದ ಅಭಿನಯ ಚತುರೆ 'ಉಳೇಬೀಡು ರಂಗಮ್ಮ'. ಒಂದು ಕಾಡಿನ ಕಲ್ಲನ್ನು ಶಿಲ್ಪವಾಗಿಸಿದ ನಂತರ ಅದರ ರೂವಾರಿ ಕಣ್ಮರೆಯಾಗುತ್ತಾನೆ ಅಥವಾ ಶಿಲ್ಪದ ಮೆರಗಿನಲ್ಲಿ ಮರೆಯಾಗುತ್ತಾನೆ. ಅಂತೆಯೇ ಬಳ್ಳಾರಿ ರಂಗಭೂಮಿಯಲ್ಲಿ ಪ್ರಸ್ತುತ ದೃವತಾರೆಯಾಗಿ ಹೊಳೆಯುತ್ತಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಆದೋನಿ ವೀಣಾರ ರಂಗಕಲೆಯ ಹಿಂದಿನ ಶಿಲ್ಪಿಯೇ ಅವರ ತಾಯಿ ಉಳೇಬೀಡು ರಂಗಮ್ಮ.     ಉಳೇಬೀಡು ರಂಗಮ್ಮನವರು ಆದೋನಿಯ ನೇಮಕಲ್ ಲ್ಲಿ ನೇಮಕಲ್ ರಂಗಯ್ಯ ಮತ್ತು ಶೇಷಮ್ಮರ ಮಗಳಾಗಿ ಕ್ರಿ.ಶ.೧೯೩೬ರಲ್ಲಿ ಜನಿಸಿದರು.ಇವರ ತಂದೆ ಬೈರವಿ ರಾಗವನ್ನು ಗಂಟೆಗಟ್ಟಲೆ ಹಾರ್ಮೋನಿಯಂ ಮೂಲಕ ನುಡಿಸಿ 'ಭೈರವಿ ರಂಗಪ್ಪ' ಎಂದು ಪ್ರಸಿದ್ಧರಾಗಿದ್ದರು. ಅಲ್ಲದೆ ಇವರ ಅಕ್ಕ ಮಂಗಮ್ಮ ಸಹ ಪ್ರಸಿದ್ಧ ರಂಗನಟಿಯಾಗಿದ್ದರು. ಕಲೆ ರಕ್ಇತಗತವಾಗಿದ್ದರಿಂದ ಇವರು ಸಹ ತಮ್ಮ ೫ನೇ ವಯಸ್ಸಿಗೆ ತಂದೆಯ ನೇತೃತ್ವದಲ್ಲಿ 'ಲವಕುಶ' ಎಂಬ ನಾಟಕಕ್ಕೆ ಬಣ್ಣ ಹಚ್ಚಿದರು. ಇದರ ಯಶಸ್ಸಿನ ಬೆನ್ನಲ್ಲೇ ನಟಿ ಅದವಾನಿ ಲಕ್ಷಮ್ಮಮ್ಮರ ಪತಿ, ಖ್ಯಾತ ನಟ ೨೫ ಪ್ರಾಯದವರಾಗಿದ್ದ ರಘುರಾಮಯ್ಯರೊಂದಿಗೆ ಕೇವಲ ೧೦ ವಯಸ್ಸಿನ ರಂಗಮ್ಮ ರುಕ್ಮಿಣಿಯಾಗಿ ಗರುಡ ಗರ್ವವಂಗ ನಾಟಕದಲ್ಲಿ ಅಮೋಘವಾಗಿ ಅಭಿನಯ ನೀಡಿದ್ದರು.ಇದಕ್ಕಾಗಿ ರಘುರಾಮಯ್ಯನವರು ಸಿನಿಮಾಗೆ ಕರೆದೊಯ್ಯವುದಾಗಿ ರಂಗಯ್ಯರಲ್ಲಿ ವಿನಂತಿಸಿದ್ದರು.ಆದರೆ  ಮಗಳನ್ನು ಕೇವಲ ರಂಗನಟಿ...

ರಂಗ ಮಾಲಿಕೆ -೪೬ ರಂಗ ಕಾಯಕದ ಸಾಕಾರ ಮೂರ್ತಿ 'ಬಯಲಾಟ ಅಂಬುಜಮ್ಮ'

Image
  ಬಣ್ಣದ ಬದುಕು ರಂಗ ಮಾಲಿಕೆ -೪೬ ರಂಗ ಕಾಯಕದ ಸಾಕಾರ ಮೂರ್ತಿ 'ಬಯಲಾಟ ಅಂಬುಜಮ್ಮ' 'ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬಂತೆ ಏನು ವಿದ್ಯೆಯಿಲ್ಲದಿದ್ದರೂ ಸುಮಾರು ಪುಟಗಳ ಕಾವ್ಯವನ್ನು ಸರಾಗವಾಗಿ ಓದಿ ಅರ್ಥೈಸುವ ಜಾಣ್ಮೆ  ಈ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಅದಕ್ಕಾಗಿ ಹಿರಿಯ ಕವಿಗಳು 'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಣಿತ ಮತಿಗಳ್' ಎಂಬ ವಿಷಯಾಂಶವನ್ನು ಈ ನಾಡಿಗೆ ಸಾರಿದ್ದಾರೆ. ಈ ಚಾಕಚಕ್ಯತೆ  ರಂಗದೊಲವುಳ್ಳ ರಂಗಕರ್ಮಿಗಳಿಗೆ ಬಲು ಸರಳವಾಗಿ ದಕ್ಕುತ್ತದೆ.ಅದಕ್ಕೊಂದು ನಿದರ್ಶನವೆಂಬಂತೆ ಓದಿದ್ದು ಒಂದನೇ ತರಗತಿಯಾದರು ನಿರರ್ಗಳವಾಗಿ ಹಲವು ಕಾವ್ಯಗಳ ಸಂಭಾಷಣೆಯನ್ನು ಹೇಳುವ ರಂಗ ಕಲಾವಿದೆ ಬಳ್ಳಾರಿಯ 'ಬಯಲಾಟ ಅಂಬುಜಮ್ಮ' ಸೋಜಿಗ ಮೂರ್ತಿಯೇ ಸರಿ.    ಇವರು ಕ್ರಿ.ಶ.೧೯೬೪ ರಲ್ಲಿ ಅವಿಭಜಿತ ಬಳ್ಳಾರಿಯ ಹೊಸಪೇಟೆಯ ಮಲಪನಗುಡಿಯ ಭರಮಪ್ಪ ಮತ್ತು ಹುಲಿಗೆಮ್ಮರ ಮಗಳಾಗಿ ಜನಿಸಿದರು.ಇವರ ಮೂಲನಾಮ ಹನುಮಕ್ಕ ಆಗಿದ್ದರೂ ಮುಂದೆ ತಮ್ಮ ಬಯಲಾಟ ರಂಗ ಕ್ಷೇತ್ರದ ಮೂಲಕ ಬಯಲಾಟ ಅಂಬುಜಮ್ಮ ಆಗಿದ್ದು ಮಾತ್ರ ಶ್ಲಾಘನೀಯ. ಆಗಿನ ಕಾಲದ ಪ್ರಸಿದ್ಧ ರಂಗ ನಟಿ ಮಲಪನ ಗುಡಿ ಅಂಜಿನಮ್ಮ ಇವರ ಅಕ್ಕ ಆಗಿದ್ದರಿಂದ, ಇವರ ಮನೆ ನಿಜಕ್ಕೂ ಒಂದು ರಂಗಮನೆಯಾಗಿದ್ದರಿಂದಲೂ ರಂಗಭೂಮಿಯ ಚಟುವಟಿಕೆಗಳನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ತಮ್ಮನ್ನು ತಾವೇ ರಂಗಭೂಮಿಗೆ ಸಮರ್ಪಿಸಿಕೊಂಡರು.     ಆ ದಿಸೆಯಲ್ಲಿ ಅಂಬುಜಮ...

ರಂಗ ಮಾಲಿಕೆ -೪೫ ಹಾಸ್ಯ ಕಲಾ ಚತುರೆ 'ಎ.ವರಲಕ್ಷ್ಮಿ'

Image
  ಬಣ್ಣದ ಬದುಕು ರಂಗ ಮಾಲಿಕೆ - ೪೫ ಕರ್ನಾಟಕಾಂಧ್ರದ ಹಾಸ್ಯ ಕಲಾ ಚತುರೆ ' ಬಳ್ಳಾರಿಯ ಎ.ವರಲಕ್ಷ್ಮೀ '. ಬಾಲ್ಯ , ಹರೆಯ, ವೃದಾಪ್ಯ ,ಭಜಾರಿ, ಸೌಮ್ಯ, ಸರಳ ಹೀಗೆ ನಾನಾ ವಿಧಧ ಪಾತ್ರಗಳಿಗೆ ಹೊಂದಿಕೊಳ್ಳುವ ಶರೀರ ಮತ್ತು ಶಾರೀರ ಇರುವ ಅಭಿನೇತೃಗಳು ದೊರೆಯುವುದು ತೀರ ವಿರಳ.ಅಂತಹ ವಿರಳ ಅಭಿನೇತ್ರಿಯಲ್ಲೊಬ್ಬರು ನಮ್ಮ ಬಳ್ಳಾರಿಯ ಎ.ವರಲಕ್ಷ್ಮೀಯವರು.    ಇವರು ಬಳ್ಳಾರಿ ನಗರದಲ್ಲಿ ಕ್ರಿ.ಶ.೧೯೫೪ ರಲ್ಲಿ ವೆಂಕಟೇಶಪ್ಪ ಮತ್ತು ಹುಲಿಗೆಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರ ತಾಯಿ ಬಳ್ಳಾರಿಯ 'ಲಲಿತಕಲಾ  ನಾಟ್ಯ ಕಲಾ ನಾಟ್ಯ ಸಂಘ' ದ ಒಡತಿ ಬಳ್ಳಾರಿ ಲಲಿತಮ್ಮರ ಸಾಕು ಮಗಳಾಗಿದ್ದರು.ಅಲ್ಲದೆ ರಂಗಾಸಕ್ತರಾಗಿದ್ದರಿಂದ ಮಗಳಲ್ಲಿನ ರಂಗಾಸಕ್ತಿಗೆ ಪ್ರೇರಣೆ ನೀಡಿದರು.ಅಂತೆಯೇ ವರಲಕ್ಷ್ಮೀಯವರು ತಮ್ಮ ೫ನೇ ತರಗತಿ ಶಿಕ್ಷಣ ಪೂರೈಸುವ ಮೊದಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಲಲಿತಮ್ಮರ ಕಂಪನಿಯಲ್ಲಿ 'ಮಕ್ಮಲ್ ಟೋಪಿ' ನಾಟಕದ ಭಿಕ್ಷುಕಿ ಪಾತ್ರದ ಮೂಲಕ ಗುರುತಿಸಿಕೊಂಡರು.ಅಲ್ಲದೆ ಇದೇ ಕಂಪನಿಯ ಟಿಪ್ಪು ಸುಲ್ತಾನ್ ನಾಟಕದಲ್ಲಿ ಮಗನಾಗಿ, ಬ್ರೋಕರ್ ಭೀಷ್ಮಚಾರಿಯಲ್ಲಿ ಕುಮಾರಿ (ಮುದುಕಿ),ಲವಕುಶದಲ್ಲಿ ಲವನ,ಸಿದ್ಧಲಿಂಗೇಶ್ವರ ನಾಟಕದಲ್ಲಿ ಬಾಲಕನ ಪಾತ್ರದಲ್ಲಿ ಮಿಂಚುವ ಮೂಲಕ ಹಾಗೂ ತಮ್ಮ ಅಭೂತಪೂರ್ವ ನಟನೆ ಮತ್ತು ಲಲಿತಮ್ಮರ ಒಡನಾಟದಿಂದ  ಮೊದಲಿಗೆ ಮಾಂಡ್ರೆ ಕಂಪನಿಯಲ್ಲಿ ಕೆಲಕಾಲ ನಟನೆ ಮಾಡಿ ತದನಂತರ  ಬೆಳಗಾವಿಯ ಏಣಗಿ ಬಾ...

ರಂಗ ಮಾಲಿಕೆ -೪೪ ಬಳ್ಳಾರಿ ಬಯಲಾಟದ ರಂಗ ನಾಯಕಿ 'ಕಪ್ಪಗಲ್ ಪದ್ಮಮ್ಮ'

Image
 ಬಣ್ಣದ ಬದುಕು ರಂಗ ಮಾಲಿಕೆ -೪೪  ಬಳ್ಳಾರಿ ಬಯಲಾಟದ ರಂಗನಾಯಕಿ 'ಕಪ್ಪಗಲ್ ಪದ್ಮಮ್ಮ' ಜಾತಿ ಕೆಲವರನ್ನು ಮೇಲಾಗಿಸಿದರೆ,ಇನ್ನೂ ಕೆಲವರನ್ನು ಕೀಳಾಗಿಸುತ್ತದೆ.ಆದರೆ ಜಾತಿಯಿಂದ ಪ್ರಾದೇಶಿಕವಾಗಿ ಕೀಳಾಗಿದ್ದರೂ ರಂಗಕಲೆಯ ಮೂಲಕ ತುಳಿದವರ ನಡುವಲ್ಲಿ ಎದ್ದು ನಿಂತು ಅರಳಿ ಇಡೀ ನಾಡಿಗೆ ರಂಗ ಸುವಾಸನೆ ಬೀರಿದ ಕೆಲವರಲ್ಲಿ ಕೆಲವರು ' ಕಪ್ಪಗಲ್ ಪದ್ಮಮ್ಮ'.ಕೇವಲ ತಮ್ಮ ನಟನೆಯಿಂದಲೇ ನಾಡಿನ ಶ್ರೇಷ್ಠ ಪ್ರಶಸ್ತಿಯಲ್ಲೊಂದಾದ 'ನಾಡೋಜ' ಪ್ರಶಸ್ತಿಯನ್ನೂ ಪಡೆದು ಇಡೀ ನಾಡಿಗೆ ಮಾದರಿ ಎನಿಸಿದ್ದಾರೆ.     ಇವರು ಕ್ರಿ.ಶ.೧೯೪೧ರಲ್ಲಿ ಆಗಿನ ಕಾಲದ ಶ್ರೇಷ್ಠ ಬಯಲಾಟ ರಂಗನಟಿಯರಲ್ಲೊಬ್ಬರಾಗಿದ್ದ ಗಂಗಮ್ಮರ ಮಗಳಾಗಿ ಜನಿಸಿದರು. ವರ್ಷದ ಎಲ್ಲ ದಿನಗಳು ಬಯಲಾಟಕ್ಕೋಗಿ ಕೇವಲ ಮೊಹರಂ ದಿನದಂದು ಮನೆಗೆ ಬಂದು ಮಕ್ಕಳಿಗೆ ಪ್ರೀತಿ ಹಂಚುತ್ತಿದ್ದ ಗಂಗಮ್ಮರ ಕಲಾರಾಧನೆಯೇ ಮಗಳು ಪದ್ಮಮ್ಮರಲ್ಲಿ ರಂಗಾಸಕ್ತಿ ಮೂಡಲು ಪ್ರಮುಖ ಕಾರಣ.ಇದಲ್ಲದೇ ಇವರು ತಮ್ಮ ವಿದ್ಯಾಭ್ಯಾಸವನ್ನು ೪ ನೇ ತರಗತಿಯವರೆಗೆ ಹುಟ್ಟೂರಿನಲ್ಲಿ ಮುಗಿಸಿ.ನಂತರ ತಮ್ಮ ತಾಯಿಯ ಮತ್ತು ಅಜ್ಜಿ  ಉಳ್ಳಮ್ಮರ ಅಭಿನಯ ಚತುರತೆಯನ್ನು ನೋಡುತ್ತಲೇ ಅವಿರ್ಭವಿಸಿಕೊಂಡರು.ಅಂತೆಯೇ ಸಂಸಾರದ ಹೊರೆಯನ್ನು ತೂಗಿಸಲೆಂದು ಹಾಗೂ ರಂಗ ಗುರು ಕಪ್ಪಗಲ್ ಯರ್ರಿಬಸಪ್ಪ ಮತ್ತು ಪರಮೇಶ್ವರಪ್ಪ ಪ್ರೋತ್ಸಾಹದಿಂದಾಗಿ 'ಶಶಿರೇಖಾ ಭರಣ' ಎಂಬ ಬಯಲಾಟದಲ್ಲಿ ೧೬ನೇ ವಯಸ್ಸಿಗೆ ಬಣ್ಣ ಹಚ್ಚುವ ಮೂಲಕ ರಂಗಭೂಮಿ...