Posts

Showing posts from June, 2021

ರಂಗ ಮಾಲಿಕೆ - ೨೬ ಸಾತ್ವಿಕ ಗುಣದ ರಂಗ ಸಂಪನ್ನರು ' ಕುಂಟನಾಳ್ ಸಿದ್ಧನಗೌಡರು'

Image
 ಬಣ್ಣದ ಬದುಕು ರಂಗ ಮಾಲಿಕೆ - ೨೬ ಸಾತ್ವಿಕ ಗುಣದ ರಂಗ ಸಂಪನ್ನ "ಕುಂಟನಹಾಳ್ ಸಿದ್ಧನಗೌಡರು." ಬಳ್ಳಾರಿಯ ಸಮೃದ್ಧ ತಾಲ್ಲೂಕು ಎಂದರೆ ಸಿರುಗುಪ್ಪ.ಇಲ್ಲಿ ಹೇರಳ ನೀರಿನ ಸೆಲೆಯಿದೆ, ಹಳೆ ತಲೆಮಾರಿನ ರಂಗ ಸಂಪನ್ನರಿದ್ದಾರೆ,ಪ್ರಾಚೀನ ಐತಿಹಾಸಿಕ ನಲೆಗಳ,ದೇಗುಲಗಳ ಬಿತ್ತಿಯಿದೆ, ಹಲವು ಪ್ರಥಮಗಳ ಸೃಷ್ಟಿಯಿದೆ.ಇಂತಹ ನಾಡಿಗೆ ಅಂಟಿಕೊಂಡಿರುವ ಕರ್ನಾಟಕಾಂಧ್ರ ಪ್ರದೇಶದ ಅಪ್ಪಟ ಗ್ರಾಮೀಣ ಭಾಗದ ಸಾತ್ವಿಕ ಗುಣದ ರಂಗ ಸಂಪನ್ನರೇ ' ಕುಂಟನಹಾಳ್ ಸಿದ್ಧನಗೌಡರು' ಇವರ ಬಣ್ಣದ ಬದುಕಿನ ನೈಜ ದರ್ಶನವೇ ನನ್ನೀ ಲೇಖನ.   ಇವರು ಕ್ರಿ.ಶ.೧೯೨೦ರ ಆಸುಪಾಸಿನಲ್ಲಿ ಚನ್ನನಗೌಡ ಮತ್ತು ಗೌರಮ್ಮ ಎಂಬ ದಂಪತಿಗಳ ಮಗನಾಗಿ ಈಗಿನ ಆದೋನಿ ತಾಲ್ಲೂಕಿನ ಕುಂಟನಹಾಳ್ ಗ್ರಾಮದಲ್ಲಿ ಜನಿಸಿದರು. ಇವರು ಮೂಲ ನಕ್ಷತ್ರದಲ್ಲಿ ಜನಿಸಿದ್ದರಿಂದಲೇ ಹುಟ್ಟಿದ ಮರುದಿನವೇ ತಾಯಿಯನ್ನು , ಕೆಲ ವರ್ಷದ ನಂತರ ಇದ್ದ ೭೦೦ ಎಕರೆ ಜಮೀನಿನಲ್ಲಿ ೪೦೦ ಎಕರೆ ಭೂಮಿ ಕಳೆದುಕೊಂಡರು. ಇದರ ವ್ಯಥೆಯಲ್ಲಿ ತಂದೆಯನ್ನು ಸಹ ಕಳೆದುಕೊಂಡರು. ನಂತರ ತಮ್ಮ ಎಳೆಯ ವಯಸ್ಸಿನಲ್ಲಿ ತಮ್ಮ ಚಿಕ್ಕಪ್ಪ ಬಂಡ್ರಾಳ್ ಪಂಪನಗೌಡರ ಮನೆಯಲ್ಲಿಯೇ ಬೆಳೆದು ಅದೇ ಊರಿನಲ್ಲಿ 3 ನೇ ತರಗತಿಯವರೆಗೆ ಓದಿ, ನಂತರ ಡಂಕನಕಲ್ಲು ಗವಾಯಿ ಸಂಗಣ್ಣನವರ ಬಳಿಯಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಅಲ್ಲಿ ಸಂಗೀತ,ರಂಗಕಲೆ,ನೃತ್ಯವಿದ್ಯೆ ಕಲಿತು ಊರಿಗೆ ಬಂದರು.ಅದೇ ಸಮಯಕ್ಕೆ ಬಂಡ್ರಾಳಿಗೆ ಕಂಪನಿಯು ಬಂದಿತ್ತು.ಸಕಲ ಕಲಾಸಕ್ತರಾ...

ರಂಗ ಮಾಲಿಕೆ -೨೫ ಕಲಿಯುಗದ ಭೀಮ ಹಂಚಿನಮನಿ ರಮೇಶರವರು

Image
 ಬಣ್ಣದ ಬದುಕು ರಂಗಮಾಲಿಕೆ -೨೫   ಕಲಿಯುಗದ ಭೀಮ ಹಗರಿಬೊಮ್ಮನಹಳ್ಳಿಯ ಹಂಚಿನಮನಿ ರಮೇಶರವರು   ಅದೇನೋ ಕಂದಗಲ್ ಬಳ್ಳಾರಿಯ ಕಲಾರಸಿಕರಿಗೆಂದೇ ರಕ್ತರಾತ್ರಿ ನಾಟಕವನ್ನು ಬರೆದರೆನೋ.ಏಕೆಂದರೆ ಜಿಲ್ಲೆಯ ಯಾವುದೇ ಕಲಾವಿದರಾದರೂ ಸರಿ, ಅವರು ಒಮ್ಮೆಯಾದರೂ ರಕ್ತರಾತ್ರಿಯ ಶರಧಿಯನ್ನು ತಾಕದಿರಲಾರರು.ಅಲ್ಲದೇ ಅದರಲ್ಲಿ ಈಜಿ ಮೈ ಪುಳಕಗೊಂಡ ಪ್ರತಿಯೊರ್ವರು ಪ್ರಸಿದ್ಧತೆಯನ್ನು ಹೊಂದದಿರಲಾರರು ಎಂದರು ಅತಿಶಯೋಕ್ತಿ ಎನಿಸಲಾರದು.ಅಂತೆಯೇ ಇದೇ ನಾಟಕದ ಮೂಲಕ ಕಲಿಯುಗದ ಭೀಮ ಎಂಬ ಖ್ಯಾತಿ ಗಳಿಸಿದ ಅಪ್ಪಟ ಗ್ರಾಮೀಣ ಪ್ರತಿಭೆಯೆಂದರೇ ಅದು ಹಗರಿಬೊಮ್ಮನಹಳ್ಳಿಯ ನಾಟಕ ಅಕಾಡೆಮಿ ಪುರಸ್ಕೃತ ಹಂಚಿನಮನಿ ರಮೇಶರವರು.   ಇವರು ಕ್ರಿ.ಶ.01.06.1968 ರಂದು    ಹಂಚಿನಮನಿ ಯಲ್ಲಪ್ಪ ಮತ್ತು ಹಂಚಿನಮನಿ ಹನುಮಮ್ಮರ ಮಗನಾಗಿ ಹಗರಿಬೊಮ್ಮನಹಳ್ಳಿಯ ಭೋವಿ ಕಾಲೋನಿಯಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಗರಿಬೊಮ್ಮನಹಳ್ಳಿಯ ರಾಮನಗರದಲ್ಲಿ ಹಾಗೂ ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕ್ರಮವಾಗಿ ಮೋರಗೇರಿ ಮತ್ತು ಇಟಗಿಯಲ್ಲಿ ಮುಗಿಸಿದರು.  ಮೂಲತಃ ಕಲಾವಿದರ ಕುಟುಂಬದಲ್ಲಿ ಜನಿಸಿದ್ದರಿಂದ ತಮ್ಮ 13ನೇ ವಯಸ್ಸಿನಲ್ಲಿ  ತಮ್ಮ ಅಣ್ಣಂದಿರು,ಸ್ನೇಹಿತರೊಡನೆ ಸೇರಿ ಕ್ರಿ.ಶ.1980-81ರಲ್ಲಿ ತಮ್ಮೂರಿನಲ್ಲಿ  ನಡೆದ ಸುಗಂಧ ಪುಷ್ಪಹರಣ ಎನ್ನುವ ಬಯಲಾಟದಲ್ಲಿ ರುಕ್ಮಿಣಿ ಹಾಗೂ ಬ್ರಹ್ಮನ ಪಾತ್ರದಲ್ಲಿ ಮಿಂಚುವ...

ರಂಗ ಮಾಲಿಕೆ -೨೪ ಗಡಿಭಾಗದ ಕನ್ನಡದ ರಂಗಕಟ್ಟಾಳು - ಬದಿನೆಹಾಳ್ ಭೀಮಣ್ಣನವರು

Image
ಬಣ್ಣದ ಬದುಕು   ರಂಗ ಮಾಲಿಕೆ - 24 ಗಡಿಭಾಗದ ಕನ್ನಡದ ರಂಗ ಕಟ್ಟಾಳು ' ಬದಿನೇಹಾಳ್ ಭೀಮಣ್ಣನವರು'. ಕ್ರಿ.ಶ.1956 ರ ನಂತರ ಕರ್ನಾಟಕಾಂಧ್ರ ವಿಭಜನೆಯಾಗಿ ನಾಡಿನ ಅನೇಕ ಗಡಿಪ್ರದೇಶಗಳು ಅನ್ಯ ಗಡಿ ರಾಜ್ಯಗಳ ಒಲ್ಲದ ಮನಸ್ಸಿನಿಂದ ಸೇರ್ಪಡೆಯಾದವು.ಈ ಮೂಲಕ ಕನ್ನಡ ಮಾತಾನಾಡುವ ಆದೋನಿ ಮತ್ತಿತರೆ ಪ್ರದೇಶಗಳು ಬಳ್ಳಾರಿಗೆ ಸೇರಬೇಕಿತ್ತಾದರೂ ತ್ಯಾಗ ಹೋರಾಟದ ಮೂಲಕ ಆಂಧ್ರದ ಪಾಲಾದವು.ಈ ಎಲ್ಲ ಸ್ಥಳಗಳಲ್ಲಿ ತೆಲುಗು ಭಾಷೆಗಿಂತ ಕನ್ನಡವೇ ಹೆಚ್ಚಾಗಿ ಬಳಸುವ ಜನರಿದ್ದರು. ಅವುಗಳಲ್ಲಿ ಆದೋನಿಯ ಬದಿನೇಹಾಳ್ ಸಹ ಒಂದು.ಇಲ್ಲಿ  ಕನ್ನಡ ರಂಗಭೂಮಿಗಾಗಿ ದುಡಿದ ಊರಿನ ಹಿರಿಯರಾದ ಬ.ರ.ರಂಗನಗೌಡರು,ಅನೇಕ ರಂಗ ದಿಗ್ಗಜರ ರಂಗ ಗುರುಗಳಾದ ತಿಮ್ಮಪ್ಪ ಮಾಸ್ತರರಂತಹ ಅನೇಕ ಮಹನೀಯರಿದ್ದಾರೆ.ಇಂತವರ ಸಾಲಿನಲ್ಲಿ ನಿಲ್ಲಬಲ್ಲ ಆ ಗ್ರಾಮದ ಮತ್ತೊಬ್ಬರೆಂದರೆ ಅದು ಬದಿನೇಹಾಳ್ ಭೀಮಣ್ಣನವರು.   ಇವರು ಕ್ರಿ.ಶ.01.06.1957 ರಂದು ಸೂಳೇಕೆರೆ ವೆಂಕೋಬಣ್ಣ ಮತ್ತು ಸೂಳೇಕೆರೆ ಲಕ್ಷಮ್ಮನವರ ಮಗನಾಗಿ ಕರ್ನೂಲ್ ಜಿಲ್ಲೆಯ ಆದೋನಿ ತಾಲ್ಲೂಕಿನ ಬದಿನೇಹಾಳ್ ನಲ್ಲಿ ಜನಿಸಿದರು. ಹುಟ್ಟಿದ್ದು ಆಂಧ್ರದಲ್ಲಾದರೂ ಪ್ರಾಥಮಿಕ ಹಂತದಿಂದ ಟಿ.ಸಿ.ಎಚ್ ವರೆಗೆ ಕರ್ನಾಟಕದ ಬಳ್ಳಾರಿಯಲ್ಲಿ ಮತ್ತು ರಾಯಚೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು.ನಂತರ 1980ರಲ್ಲಿ ಕೆ.ಲಲಿತರವರೊಂದಿಗೆ ವಿವಾಹವಾಗಿ 1983ರಲ್ಲಿ ಆಂಧ್ರದ ನದಿಚಾಗಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದರು.ಅಲ್ಲಿಂದ 2017...