Posts

Showing posts from November, 2021

ರಂಗ ಮಾಲಿಕೆ - ೪೩ ಎಮ್ಮಿಗನೂರು ಹೇಮರೆಡ್ಡಿ

Image
  ಬಣ್ಣದ ಬದುಕು  ರಂಗ ಮಾಲಿಕೆ -೩೪ ಬಯಲಾಟದ ಮುಮ್ಮೇಳಗಾರ "ಕೊತ್ತಲಚಿಂತ ಹೇಮರೆಡ್ಡಿ" ಪ್ರಾಚೀನ ಕಾಲದಿಂದಲೂ ಬಹುತೇಕ ಹಳ್ಳಿಗಳಲ್ಲಿ ಯಾರಾದರೂ ನಾಟಕಗಳಲ್ಲಿ ,ಅದರಲ್ಲೂ ಬಯಲಾಟಗಳಲ್ಲಿ ಅಭಿನಯಿಸಿದರೆ ಅದನ್ನು ಆ ಅಭಿನೇತೃಗಳ ವರ್ಚಸ್ಸು, ಶ್ರೇಯಸ್ಸು ಎಂದು ಭಾವಿಸಿದ ಕಾಲ ನಮ್ಮ ಕಾಲಮಾನದೊಂದಿಗೆ ಬೆಸೆದು ಕೊಂಡಿದೆ.ಅಂತೆಯೇ ಇಂದಿಗೂ ಪ್ರತಿಹಳ್ಳಿಗಳಲ್ಲಿ ಗ್ರಾಮೋದ್ಧಾರಕ್ಕಾಗಿ,ಕುಟುಂಬದ ಶ್ರೇಯಸ್ಸಿಗೆ, ವೈಯಕ್ತಿಕ ಪ್ರತಿಷ್ಠೆಗೆ ನಾಟಕಗಳನ್ನು ಮಾಡುವುದನ್ನು ಕಾಣಬಹುದು.ಅದರಲ್ಲೂ ಬಹುತೇಕರು ಉದರ ಪೋಷಣೆಗೂ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಕೌಟುಂಬಿಕ ಹಿನ್ನೆಲೆಯಲ್ಲಿ ಧನವಂತರಾಗಿದ್ದರು ಊರಿನ ಆಸಕ್ತರೊಡನೆ ಸೇರಿ ಸ್ವಂತ ಖರ್ಚಿನಲ್ಲಿ ಗ್ರಾಮೋದ್ಧಾರಕ್ಕಾಗಿ ನಾಟಕಗಳನ್ನು ಮಾಡಿ ಹೆಸರಾದ ಕೆಲವರಲ್ಲಿ ಒರ್ವರು ಎಮ್ಮಿಗನೂರಿನ ಕೊತ್ತಲಚಿಂತ ಹೇಮರೆಡ್ಡಿ.       ಇವರು ಕಂಪ್ಲಿ ತಾಲೂಕಿನ ಎಮ್ಮಿಗನೂರಿನ ಗಿರಿರೆಡ್ಡಿ ಮತ್ತು ಜಡಿಯಮ್ಮ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೦೧.೦೬.೧೯೫೫ ರಲ್ಲಿ ಜನಿಸಿದರು.ಹುಟ್ಟೂರಿನಲ್ಲೇ ೯ ನೇತರಗತಿಯ ಓದಿ ನಂತರ ಅರ್ಧಕ್ಕೆ ನಿಲ್ಲಿಸಿದರು.             ಕೌಟುಂಬಿಕವಾಗಿ ಉಳ್ಳವರಾಗಿದ್ದರಿಂದ ಇವರ ತಂದೆ ಊರಿನ ಸರಿಕರೊಡನೆ ಸೇರಿ ವರ್ಷಕ್ಕೆ ಎರಡು ಬಾರಿ ನಡೆಯುವ ಜಾತ್ರೆ ಪ್ರಯುಕ್ತ ಗಿರಿಜಾ ಕಲ್ಯಾಣ ಬಯಲಾಟವಾಡಲು ಮುಂದಾದರು.ಅಲ್ಲದೇ...

ರಂಗ ಮಾಲಿಕೆ - ೪೨ ಉಭಯ ರಂಗಭೂಮಿಯ ಧೃವತಾರೆ "ಅದವಾನಿ ಲಕ್ಷ್ಮೀದೇವಿ"

Image
  ಬಣ್ಣದ ಬದುಕು ರಂಗ ಮಾಲಿಕೆ -42 ಉಭಯ ರಂಗಭೂಮಿಯ ಧೃವತಾರೆ "ಅದವಾನಿ ಲಕ್ಷ್ಮೀದೇವಿ"      ರಂಗಭೂಮಿಯ ಹಿನ್ನೆಲೆಯಿಂದ ಕನ್ನಡ ರಂಗಭೂಮಿಗೆ ಬಂದ ಅನೇಕ ಕಲಾವಿದರು ಕನ್ನಡಿಗರನ್ನೂ ನಾಚಿಸುವಷ್ಟು ಅತ್ಯಾಕರ್ಷಕವಾಗಿ ಕನ್ನಡ ನುಡಿಯುವ ಮತ್ತು ಈ ನಾಡಿನ ಬಗ್ಗೆ ಅಪಾರ ಅಭಿಮಾನ ತೋರುವ ಮನಸ್ಸುಗಳನ್ನು ನಾವು ನೀವು ನೋಡಿದ್ದೇವೆ,ನಾಚಿದ್ದೇವೆ.ಅಂತವರ ಸಾಲಿನಲ್ಲಿ ನಿಲ್ಲಬಲ್ಲ ಬಳ್ಳಾರಿ ರಂಗಭೂಮಿ ಇತಿಹಾಸದಲ್ಲಿ ಆ ಬಗೆಯ ಸಂಚಲನ ಮೂಡಿಸಿದ ನಟರಲ್ಲಿ ಓರ್ವರೆಂದರೆ ಅದವಾನಿ ಲಕ್ಷ್ಮೀದೇವಿ.   ಇವರು ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದವಾನಿಯವರಾಗಿದ್ದರಿಂದ ಇವರನ್ನು 'ಅದವಾನಿ ಲಕ್ಷ್ಮೀದೇವಿ' ಎಂದೇ ಖ್ಯಾತರಾದರು. ಇವರು ತಮ್ಮ ಬಾಲ್ಯದಲ್ಲಿ ನಟನೆಗಿಂತಲೂ ಸಂಗೀತದ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ರಂಗ ಸಂಗೀತದ ಜೀವಾಳವಾಗಿದ್ದ ಸಿಡಿಗಿನಮೊಳ ಚಂದ್ರಯ್ಯನವರಲ್ಲಿ ಸಂಗೀತ ಕಲಿತಿದ್ದರು.ಇದಲ್ಲದೇ ಇವರ ಸಹೋದರಿ ರಂಗನಟಿಯಾಗಿದ್ದರಿಂದ ಅವರ ಹಿಂದೆ ನಾಟಕಗಳಿಗೆ ಹೋಗುತ್ತಿದ್ದರು.ಆಗ ದೃಶ್ಯ ಬದಲಾವಣೆ ಸಂದರ್ಭದಲ್ಲಿ ತಡವಾದರೆ ಜನರ ಕೂಗಾಟ ಗಲಾಟೆಗಳನ್ನು ನಿಯಂತ್ರಿಸುವ ಸಲುವಾಗಿ ಇವರನ್ನು ಮೊದಲ ಬಾರಿಗೆ ಹಾಡಲು ಬಿಟ್ಟರು. ಇವರ ಸುಶ್ರವ್ಯ ಕಂಠಕ್ಕೆ  ಮಾರುಹೋದರು.ಅದಲ್ಲದೇ ಅಕ್ಕನ ಹಿಂದೆ ಹೋದ ಕಡೆಯಲೆಲ್ಲ ಹಾಡಲು ಕೇಳುತ್ತಿದ್ದರು.ಹೀಗೆ ಹಾಡುತ್ತಾ ಒಮ್ಮೆ ಗುರು ಚಂದ್ರಯ್ಯನವರ ನೇತೃತ್ವದಲ್ಲಿ ಏಳನೇ ವಯಸ್ಸಿನ ದೇವಿಯವರಿಗೆ ...

ರಂಗ ಮಾಲಿಕೆ -೪೧ ಮಾದರಿಯ ಬಯಲಾಟದ ಮೇಷ್ಟ್ರು "ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ"

Image
  ಬಣ್ಣದ ಬದುಕು ರಂಗ ಮಾಲಿಕೆ - ೪೧ ಮಾದರಿಯ ಬಯಲಾಟದ ಮೇಷ್ಟ್ರು " ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ ". ಬಯಲಾಟ ಎಂದರೆ ಕೇವಲ ಬಯಲಲ್ಲಿ ಆಡುವ ಗ್ರಾಮೀಣ ಭಾಗದ ಆಟವಲ್ಲ.ಬದಲಾಗಿ ಅದು ಎಲ್ಲ ರಂಗಭೂಮಿಯ ತಾಯಿ ಎಂದರೂ ತಪ್ಪಾಗಲಾರದು.ಇದು ಇಂದು ಜಾಗತೀಕರಣದ ನೆಪದಲ್ಲಿ ಅವಸಾನದ ಅಂಚಿಗೆ ಸರಿಯುತ್ತಿದೆ.ಅಂತೆಯೇ ಬಯಲಾಟ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಕಟ್ಟಿ ಬೆಳೆಸುವ ಮನೋಭಾವದಿಂದ ದುಡಿಯುತ್ತಿರುವ ಕೆಲವರಲ್ಲಿ ಒಬ್ಬರು ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ. ಇವರು ೨೦.೦೭.೧೯೭೮ ರಂದು ಹಾರ್ಮೋನಿಯಂ ಕಲಾವಿದ ಹೆಚ್.ಪಂಪಾಪತಿ ಮತ್ತು ರುದ್ರಮ್ಮರ ಮಗನಾಗಿ ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರಿನಲ್ಲಿ  ಜನಿಸಿದರು.ಓದಿದ್ದು ೧೦ನೇ ತರಗತಿಯವರೆಗೆ ಮಾತ್ರ.ನಂತರ ಅಪ್ಪನ ಅಣತಿಯಂತೆ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಮಾರು ೭ ವರ್ಷಗಳ ಕಾಲ ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್,ಸೀನಿಯರ್ ವಿದ್ಯೆಯನ್ನು ಗುರುಗಳಾದ ಇಟಗಿ ವಿರೂಪಾಕ್ಷ ಮತ್ತು ರವೀಂದ್ರ ಹಂದಿಗನೂರರ ಬಳಿ ಕಲಿತರು.ಕೇವಲ ಸಂಗೀತದತ್ತ ಓಲಬೇಕಿದ್ದ ತಿಪ್ಪೇಸ್ವಾಮಿಯವರು ಬಯಲಾಟದ ನಟನೆಯತ್ತಲು ಇವರ ಚಿತ್ತ ಹರಿಯಲು ಪ್ರಮುಖ ಕಾರಣವೇ ಇವರ ರಂಗ ಗುರು ತಂದೆ ಹೆಚ್.ಪಂಪಾಪತಿ.ಅಪ್ಪನ ಕಲೆಯೇ ಅತಿಯಾಗಿ ಅಕರ್ಷಿಸಿದ್ದರಿಂದ ಸಾಂಪ್ರದಾಯಿಕ ವಿದ್ಯೆ ನೈವೇದ್ಯವಾಯಿತು.ಭತ್ತದ ನಾಡಲ್ಲಿ ಸಾಂಸ್ಕೃತಿಕ ಪರಂಪರೆ ಬತ್ತುವ ಮುನ್ನವೇ ಮತ್ತೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಆಶ್ರಮದಿ...