Posts

Showing posts from July, 2017
Image
ಮನುಕುಲಕ್ಕೆ ಅಳಿವಿದೆ..ಜನಪದಕ್ಕೆ ಅಳಿವಿಲ್ಲ - ಪ್ರೊ.ಸುಧೀಂದ್ರ ಶರ್ಮ         ಬೆಂಗಳೂರು.ಜುಲೈ.೧೭. ಹಳೆ ಪಾತ್ರೆ ಹಳೆ ಕಬ್ಬಣ ಎಂಬ ಪಡ್ಡೆ ಹುಡುಗರ ಮೈ ಕುಣಿಸುವ ಹಾಡುಗಳು ಬರ‍್ತಾವೆ ಹೋಗ್ತಾವೆ. ಆದರೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿರುವ ಜನಪದಗಳಿಗೆ ಅಳಿವಿಲ್ಲ ಎಂದು ಪ್ರೊ.ಸುಧೀಂದ್ರ ಶರ್ಮ ಅಭಿಪ್ರಾಯ ಪಟ್ಟರು.    ಕಲಾಮೈತ್ರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಅನೂಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಪ್ರೊ.ವೆಂಕಟಗಿರಿಗವಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕೋತ್ಸವ -೨೦೧೭ನ್ನು ಉದ್ಘಾಟಿಸಿ ಮಾತಾನಾಡಿದ ಅವರು ಥಿಯೇಟರ್ ಈಸ್ ಟೀಮ್ ವರ್ಕ್ ಆದ್ದರಿಂದ ನಾಟಕ ಕಟ್ಟಲು ಒಂದು ಕೈಯಿಂದ ಸಾಧ್ಯವಿಲ್ಲ.ಅಂತೆಯೇ ಒಂದು ತಂಡ ಕಟ್ಟಿದ ಮೇಲೆ ಅದರ ಉಸ್ತುವಾರಿ ಅಷ್ಟೇ ಕಷ್ಟ. ಸಮಾಜದಲ್ಲಿ ಮಾಡುವ ಕಾರ‍್ಯದಲ್ಲಿ ಯಾರಿಗಾದರೂ ತೃಪ್ತಿ ಇರಲಿ ಕಲಾವಿದರಿಗೆ ಮಾತ್ರ ಇರಬಾರದು. ಒಬ್ಬ ನಟನಾದವನು ಒಂದು ಸಾರಿ ಬೆಳ್ಳಿತೆರೆ ಮೇಲೆ ಮಿಂಚಿದರೆ ಸಾಕು ಅವರ ಹಾವಭಾವವೇ ಬದಲಾಗುತ್ತದೆ. ಆದರೆ ರಂಗನಟರಲ್ಲಿ ಈ ಆಹಂಭಾವ ಇರುವುದಿಲ್ಲ, ಆದರೆ ಇತ್ತೀಚಿಗೆ ಈ ರೋಗ ರಂಗನಟರಿಗೂ ಆವರಿಸುತ್ತಿರುವುದು ವಿಷಾಧನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.   ಗ್ರಾಮೀಣ ಜನರಿಂದಲೇ ಜನಪದ ರಂಗಭೂಮಿ ನಿಂತಿರುವುದು. ಜನಪದ ಕಲೆಗಳಲ್ಲಿ ಅತ್ಯಾಕರ್ಷಣೆ ಇದೆ. ಅದು ಎಂ...

ರಂಗಭೂಮಿ ಎಂದರೆ ಅದೊಂದು ಕಾದಾಟ

                                ರಂಗಭೂಮಿ ಎಂದರೆ ಅದೊಂದು ಕಾದಾಟ        ರಂಗಭೂಮಿಯೆಂದರೆ ಕೇವಲ ಬಣ್ಣದ ಆಟವಲ್ಲ, ಬದಲಾಗಿ ಅದೊಂದು ಬಣ್ಣ ಮತ್ತು ಬದುಕಿನ ಕಾದಾಟವೂ ಆಗಿದೆ. ಅಂತೆಯೇ ಅದರಲ್ಲಿನ ಕಲಾವಿದರು ಒಂದು ರೀತಿಯ ಆಟಗಾರರೇ ಸರಿ. ಕೆಲವರು ಗೆಲ್ಲುತ್ತಾರೆ, ಕೆಲವರು ಸೋತು ಸುಣ್ಣವಾಗುತ್ತಾರೆ. ಇನ್ನೂ ಕೆಲವರು ಬಿರುಸಿನ ಆಟಕ್ಕೆ ಸೋತು ಓಡಿ ಹೋದವರು, ಹೋಗುವವರೂ ಇದ್ದಾರೆ. ಈ ಬದಲಾವಣೆಗೆ ಕಾರಣವೂ ಒಂದೇ ಅದು ‘ರಂಗಭೂಮಿ ನಿತ್ಯ ನಿರಂತರ ಪರಿರ‍್ತನಾಶೀಲವಾದದ್ದು’. ಬಣ್ಣ ಮತ್ತು ಬದುಕನ್ನು ಸಮವಾಗಿ ತೂಗಿಸಿದವನು ಗೆಲ್ಲುತ್ತಾನೆ. ಅವರೆಡರ ಜಂಜಾಟಕ್ಕೆ ಸಿಲುಕಿದವನು ಸೋಲುತ್ತಾನೆ ಅಂತೆಯೇ ನನ್ನ ಕರ‍್ಯಕ್ಷೇತ್ರದಲ್ಲಿ ಕಂಡ ಎಲ್ಲಾ ರಂಗರ‍್ಮಿಗಳು ಉದಯೋನ್ಮುಖ ರಂಗ ಕಲಾವಿದರಿಗೆ ಹೇಳಿದ್ದು “ಬಣ್ಣದ ಬದುಕು ಬಹು ಆರ‍್ಷೀಣೀಯವಾದದ್ದು ಮೊದ ಮೊದಲು ಸ(ರಿ)ವಿಯೆನ್ನಿಸುತ್ತದೆ. ತದನಂತರ ಕಲಾವಿದನ ಗಟ್ಟಿತನವನ್ನು ಪರೀಕ್ಷಿಸಲೋಸುಗ ಅನೇಕ ಪರೀಕ್ಷೆಗಳನ್ನು ಒಡ್ಡುತ್ತದೆ. ಆಗಲೂ ತನ್ನ ರ‍್ಮದೊಳಗೆ ಶ್ರದ್ಧೆ, ಬದ್ಧತೆ, ನಿತ್ಯಶ್ರಮ ತೋರಿದ್ದಲ್ಲಿ ಶ್ರೇಷ್ಠ ರಂಗರ‍್ಮಿ” ಎನ್ನಿಸುತ್ತಾನೆ.    ಏಕೆಂದರೆ ಇದೇ ರಂಗಭೂಮಿಯಲ್ಲಿ ತುಂಡು ಬೀಡಿ ಸೇದುವುದರ ಮೂಲಕ ಹಸಿವನ್ನು ಇಂಗಿಸಿಕೊಳ್ಳುತ್ತಿದ್ದ ಗರುಡ ಸದಾಶಿವರಾಯ...