ರಂಗ ಮಾಲಿಕೆ - 23 ಸಂಡೂರಿನ ರಂಗ ಮಯೂರಿ ' ರೇಣುಕಾ ಬಾವಳ್ಳಿ'
ಬಣ್ಣದ ಬದುಕು ರಂಗ ಮಾಲಿಕೆ-23 ಸಂಡೂರಿನ ರಂಗ ಮಯೂರಿ ' ರೇಣುಕಾ ಬಾವಳ್ಳಿ'. ಕಣ್ಮುಂದೆ ಕಾಣುವ ಕಲೆ ನಿಜವಿರಬಹುದು ಆದರೆ ಅದರ ಹಿಂದಣ ಬದುಕು ಕಣ್ಣಗೆ ಕಂಡಷ್ಟು ಸತ್ಯವಲ್ಲ.ಒಂದು ನಾಟಕ ರಂಗಕ್ಕೆ ಬರುವ ವೇಳೆಗೆ ಪ್ರಸವ ವೇದನೆ ಅನುಭವಿಸಿರುವುದಂತು ಅಕ್ಷರಶಃ ಸತ್ಯ.ಅದರಲ್ಲೂ ನಮ್ಮ ಬಳ್ಳಾರಿ ಭಾಗದಲ್ಲಿ ರಂಗ ತೊಡಕಾಗಿ ಕಾಣಸಿಗುವ ಮೊದಲ ಸಮಸ್ಯೆ ಎಂದರೆ ಸ್ತ್ರೀ ಪಾತ್ರಧಾರಿಗಳು.ಆದರೆ ಈ ಭಾಗದಲ್ಲಿ 1930-40 ರ ನಂತರ ಆ ಸಮಸ್ಯೆ ನಿವಾರಣೆಯಾಯಿತು.ಅದಕ್ಕೆ ನಿದರ್ಶನವೆಂಬಂತಿದೆ ಅಭಿನೇತ್ರಿ ರೇಣುಕಾ ಬಾವಳ್ಳಿಯವರ ಈ ಲೇಖನ. ಇವರು 01.06.1974 ರಲ್ಲಿ ಸಂಡೂರು ತಾಲ್ಲೂಕಿನ ಬಾವಳ್ಳಿ (ಸುಶೀಲಾ ನಗರ)ಯಲ್ಲಿ ದಾಸರ ನರಸಿಂಹಪ್ಪ ಮತ್ತು ದಾಸರ ಸಿದ್ದಮ್ಮ ಎಂಬ ಬಡ ದಂಪತಿಗಳ ಮಗಳಾಗಿ ಜನಿಸಿದರು.ಬಾಲ್ಯದಿಂದಲೇ ಕಷ್ಟ ಅನುಭವಿಸಿದ ಇವರು ತಮ್ಮ ತಾಯಿಗೆ ಇದ್ದ ಒಂದು ಸೀರೆಯನ್ನು ಹರಿದು ಎರಡಾಗಿಸಿ ಪ್ರತಿನಿತ್ಯ ಬಳಕೆಗೆ ಮಾಡಿಕೊಂಡಿದ್ದನ್ನು ಕಂಡುಂಡವರು.ಈ ಎಲ್ಲ ಬಡತನದ ಬೇಗೆಯನ್ನು ಕಣ್ಣಾರೆ ಕಂಡ ಇವರಿಗೆ ಈ ಕೂಪದಿಂದ ಆಚೆ ಬರುವುದಕ್ಕೆ ತವಕಿಸುತ್ತಿದ್ದರು.ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರ ಕೈ ಹಿಡಿದಿದ್ದು ರಂಗಭೂಮಿ ಮಾತ್ರ. ಬಡತನದ ದೆಸೆಯಲ್ಲಿ ತಂದೆ ತಾಯಿ ಪ್ರತಿನಿತ್ಯ ಹೊಟ್ಟೆಪಾಡಿಗಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದರು.ಇದರಿಂದಾಗಿ ಓದಿನ ಹಾದಿಯನ್ನು ಕಾಣದ ಬಾವಳ್ಳಿಯವರೆಗೆ ಓರಗೆಯಾವರೊಂದಿಗಿನ ಆಟವೇ ...