ಯಶಸ್ವಿಯಾದ ಕಂಪನಿಯ ಕೃಷ್ಣಾಲೀಲೆ ಬೆಂಗಳೂರು . ಆ . ೨೩ . ಬೆಂಗಳೂರಿನ ಹೃದಯ ಭಾಗದಲ್ಲಿರುವ ಸಾಂಸ್ಕೃತಿಕ ಕೇಂದ್ರ ಮತ್ತು ಕಲಾವಿದರ ತಾಣವಾಗಿರುವ ರವೀಂದ್ರ ಕಲಾಕ್ಷೇತ್ರವು ಆಗಸ್ಟ್ ೨೩ ರಂದು ಹಬ್ಬದ ವಾತವರಣದಿಂದ ಕೂಡಿತ್ತು . ಕಾರಣ ಈ ಮೆಟ್ರೋ ನಗರದಲ್ಲಿ ಅದು ಆಧುನಿಕ ಜಗತ್ತಿಗೆ ತಲೆಬಾಗಿರುವ ಭಾರತದ ಪ್ರಭಾವಿ ನಗರಗಳಲ್ಲಿ ಒಂದಾದ ಈ ಬೆಂಗಳೂರಿನಲ್ಲಿ ಸದಾ ಸಮೂಹ ಮಾಧ್ಯಮಗಳಿಗೆ ದಾಸರಾಗಿದ್ದ ಜನರನ್ನು ರಂಗಭೂಮಿಯತ್ತ ಸೆಳೆಯುವ ಕಾರ ್ಯ ೭೦ರ ದಶಕದಿಂದೀಚಿಗೆ ಭರದಿಂದ ಸಾಗಿದೆ . ಅದೇ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ , ಬೆಂಗಳೂರು ಮತ್ತು ಶ್ರೀ ಗಂಗಾಧರೇಶ್ವರ ಕಲಾ ಸಂಘ , ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಕನ್ನಡ ನಾಡು ಕಂಡ ಕಂಪನಿ ನಾಟಕದ ದಿಗ್ಗಜರಲ್ಲಿ ಒಬ್ಬರಾದ ಮತ್ತು ದಕ್ಷಿಣ ಭಾರತದಲ್ಲಿ ಪ್ರಸ್ತುತ ಏಕೈಕ ಕಂಪನಿ ನಾಟಕ ನಿರ್ದೇಶಕರಾದ ರಂಗ ಸಂಗೀತ ತಜ್ಞ ವಿದ್ವಾನ್ ಆರ್ . ಪರಮಶಿವನ್ ರ ನಿರ್ದೇಶನದ ಮತ್ತು ಬೆಳ್ಳಾವೆ ನರಹರಿಶಾಸ್ತ್ರಿಗಳ ರಚನೆಯ ಶ್ರೀ ಕೃಷ್ಣಾಲೀಲೆ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು . ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ , ಬೆಂಗಳೂರು ಮತ್ತು ಶ್ರೀ ಗಂಗಾಧರೇಶ್ವರ ಕಲಾ ಸಂಘ , ಬೆಂಗಳೂರು ಇ...