Posts

Showing posts from December, 2020

ರಂಗ ಮಾಲಿಕೆ -೧೧ ಸಾಂಬಶಿವ ದಳವಾಯಿ

Image
 ಬಯಲು ಸೀಮೆಯ ಸಿಂಹ ಧ್ವನಿ - ಸಾಂಬಶಿವ ದಳವಾಯಿ ಅರಳಿದ  ಪ್ರತಿಯೊಂದು ಹೂವು ದೇವರ ಮುಡಿ ಸೇರುವುದಿಲ್ಲ.ಉದಯಿಸಿದ ಪ್ರತಿಯೋರ್ವ ಕಲಾವಿದ ಕಲಾಮಾತೆಯ ಸುತರೆನಿಸುವುದಿಲ್ಲ. ಆದರೆ ಹುಟ್ಟಿನಿಂದಲೇ ಕಲಾ ಪ್ರೇಮಿಯಾಗಿ ಹತ್ತಾರು ಮನೆಗಳಿದ್ದ  ಪುಟ್ಟ ಹಳ್ಳಿಯಿಂದ ದಿಲ್ಲಿಯವರೆಗೆ ತನ್ನ ಕಲಾ ಚೈತನ್ಯವನ್ನು ಪಸರಿಸಿದ ವಿರಳರಲ್ಲಿ ವಿರಳರೆನಿಸಿದ ಒರ್ವರೆಂದರೆ ಅದು ಬಳ್ಳಾರಿ ಬಯಲು ಸೀಮೆಯ ಸಿಂಹ ಧ್ವನಿ ' ಸಾಂಬಶಿವ ದಳವಾಯಿ'. ಬಾಲ್ಯ :   ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿಷ್ಣಹಳ್ಳಿ ಎಂಬ ಪುಟ್ಟ ಹಳ್ಳಿಯ ' ರಾಮ ಸಿದ್ಧಪ್ಪ ದಳವಾಯಿ' ಮತ್ತು 'ಸಿದ್ಧಮ್ಮ' ದಂಪತಿಗಳ ಮಗನಾಗಿ  ೧೩-೦೪-೧೯೫೮ರಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಬಿಷ್ಣಹಳ್ಳಿ ಮತ್ತು ಕೂಡ್ಲಿಗಿಯ ಆಶ್ರಮ ಶಾಲೆಯಲ್ಲಿ ಸಾಗಿ ನಂತರ ಪ್ರೌಢಶಿಕ್ಷಣವನ್ನು ಚಿಕ್ಕಜೋಗಿಹಳ್ಳಿಯಲ್ಲಿ ನಿರ್ವಹಿಸುವಾಗ ಹತ್ತನೇ ತರಗತಿಯಲ್ಲಿ ಅನುತ್ತಿರ್ಣರಾಗುತ್ತಾರೆ.ಈ ಒಂದು ವರ್ಷದಲ್ಲೇ ಕಮಲಾಪುರದ ಪಂಪಾ ವಿದ್ಯಾಪೀಠದಲ್ಲಿ ತೋಟಗಾರಿಕೆ ಮತ್ತು ಕರಕುಶಲ ತರಬೇತಿ ಕೇಂದ್ರದಲ್ಲಿ ತರಬೇತಿ ತರುವಾಯ ಹತ್ತನೇ ತರಗತಿ ಉತ್ತಿರ್ಣರಾಗಿ ನಂತರ ದಾವಣಗೆರೆ  ಮೋತಿ ವೀರಪ್ಪ ಜೂನಿಯರ್‌ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಯಾದರು. ರಂಗದೊಲವು :   ಮೊದಲಿಗೆ ಇವರಲ್ಲಿ ರಂಗದೊಲವನ್ನು ದೊಡ್ಡಾಟದ ಭಾಗವತರಾಗಿದ್ದ ಇವರ ತಂದೆ ತುಂಬಿದರು.ಅಂತೆಯೇ ಆಶ್ರಮ ಶಾಲೆಯಲ್ಲ...

ರಂಗ ಮಾಲಿಕೆ -೧೦ ಕೆ.ಜಗದೀಶ್

Image
  ನೇರ ನಡೆಯ ರಂಗ ಚಿಲುಮೆ - ಕೆ.ಜಗದೀಶ್ ಆಟವಾಡುವ ವಯಸ್ಸಿನಲ್ಲೇ ಅಟ್ಟವೇರಿ ಅಸಾಧಾರಣ ಚಿಂತನೆಯ ಮೂಲಕ ಬಳ್ಳಾರಿ ರಂಗಭೂಮಿಗೆ ಹೊಸದಾಗಿ ಆಯಾಮವನ್ನು ಕಲ್ಪಿಸಿಕೊಟ್ಟು ರಂಗಮಂದಿರವನ್ನೇ ಕಾಣದ ಹೊಸ  ರಂಗ ಪ್ರತಿಭೆ ಮತ್ತು ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದ ಸೃಜನಶೀಲ ರಂಗ ಚಿನ್ಮಯಿಯಂದರೆ ಅದು ಬಯಲುಸೀಮೆಯ ರಂಗಚಿಲುಮೆ ಕೆ.ಜಗದೀಶ್. ಬಾಲ್ಯಜೀವನ  ಇವರು ಶ್ರೀ ಶರಣಪ್ಪ ಮತ್ತು ಶ್ರೀಮತಿ ಹಂಪಮ್ಮ ದಂಪತಿಗಳ ಸುಪುತ್ರರಾಗಿ ಬಳ್ಳಾರಿಯಲ್ಲಿ ೧೯೬೦ ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣ ಮಾಧ್ಯಮಿಕ ಶಿಕ್ಷಣವನ್ನು ಬಳ್ಳಾರಿಯಲ್ಲಿ ಪಡೆದರು. ನಂತರ ಬಿ.ಕಾಂ ಪದವಿಗೆ ವೀರಶೈವ ಕಾಲೇಜಿಗೆ ಸೇರಿದಾಗ ತಮ್ಮ ೧೮ನೇ ವಯಸ್ಸಿನಲ್ಲಿಯೇ ಬಂದ ಪ್ರಗತಿ ಗ್ರಾಮೀಣ ಬ್ಯಾಂಕ್ ಉದ್ಯೋಗವನ್ನು ಗಿಟ್ಟಿಸಿಕೊಂಡು ಆ ಕಾಲದ ಆರು ರೂ.ಗಳ ದಿನಗೂಲಿ ನೌಕರಿಯಾಗಿ ಹಡಗಲಿಗೆ ತೆರಳಿದರು.ಅನೇಕ ಕಷ್ಟಗಳ ನಡುವೆ  ಪದವಿಯನ್ನು ನಂತರ ಕರ್ನಾಟಕ ವಿ.ವಿಯಿಂದ ಪಡೆದರು.ಅಲ್ಲಿಂದ ರಂಗಭೂಮಿ ಮತ್ತು ಸಂಸಾರವನ್ನು ಹೆಗಲ ಮೇಲೋತ್ತು ಎಲ್ಲಿಯೂ ನಿಲ್ಲದೇ ಸಾಗುತ್ತ ನೆಡೆದಿಹರು. ರಂಗಪ್ರವೇಶ ಇವರನ್ನು ಸ್ವತಃ ಭಜನಾ ಗುಂಪಿನಲ್ಲಿ ಹಾರ್ಮೋನಿಯಂ ಕಲಾವಿದರಾಗಿದ್ದ ತಮ್ಮ ತಂದೆಯೇ  ೧೯೬೮ ರಲ್ಲಿ ಗಿರಿಜಾ ಕಲ್ಯಾಣ ಬಯಲಾಟದಲ್ಲಿ ೮ ವರ್ಷ ವಯಸ್ಸಿನ ಜಗದೀಶರಿಗೆ ಬಾಲನಟನ ಅಭಿನಯ ಮಾಡಿಸಲು ಮುಂದಾದಾಗ ಈಗಾಗಲೇ ಭಜನಾ ಗಾಯನದಲ್ಲಿ ಗುರುತಿಸಿಕೊಂಡಿದ್ದ ಜಗದೀಶರಿಗೂ ಅಭಿನಯದ ಒಲುಮೆಯಿ...

ರಂಗ ಮಾಲಿಕೆ- ೭ ಕೆ.ಮಲ್ಲೇಶ್

Image
 ಬಣ್ಣದ ಬದುಕು..             ರಂಗ ಮಾಲಿಕೆ-೭ ಕೆ.ಮಲ್ಲೇಶ್.    ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಗಾದೆ ಇದೆ. ಅಂದರೆ ಯಾವುದೇ ಅಗಲಿ ಬೆಳೆಯುವ ಹಂತದಲ್ಲಿ ಅದರ ಬೆಳವಣಿಗೆಯ ಶೈಲಿಯನ್ನು ನೋಡಿ ಅದರ ಮುಂದಿನ ಬೆಳವಣಿಗೆಯ ಸ್ವರೂಪವನ್ನು ಅಂದಾಜಿಸಬಹುದೆAಬುದು ಈ ಗಾಧೆಯ ಅರ್ಥ. ಅದಕ್ಕೆ ಉದಾಹರಣೆಗಳನ್ನು ಸಾಕಷ್ಟು ನೀಡಬಹುದು. ನನ್ನ ಈ ಕ್ಷೇತ್ರ ಕರ‍್ಯದಲ್ಲಿ ಕಂಡ ಒಂದು ಸಂಗತಿಯನ್ನು ಇಲ್ಲಿ ಉದಾಹರಿಸಲು ಇಚ್ಚಿಸುತ್ತೇನೆ. ಆ ಸಂಗತಿಯ ನಾಯಕನಟರೇ ರಂಗ ಕಲಾವಿದರಾದ ಕೆ.ಮಲ್ಲೇಶ್‌ರವರು. ಬಾಲ್ಯ ಮತ್ತು ಆರಂಭಿಕ ಜೀವನ                      ಕೆ.ಮಲ್ಲೇಶ್‌ರವರು ೦೩ ಜುಲೈ ೧೯೫೭ರಲ್ಲಿ ಬಳ್ಳಾರಿಯಲ್ಲಿ ತಂದೆ ಮಲ್ಲಪ್ಪ ಮತ್ತು ತಾಯಿ ನೀಲಮ್ಮರ ಪ್ರಥಮ ಮಗನಾಗಿ ಜನಿಸಿದರು. ಇವರು ಕೇವಲ ಹತ್ತನೇ ತರಗತಿಯವರೆಗೆ ಓದಿ ನಂತರ ಆರ್ಥಿಕ ಕಾರಣದಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಸಣ್ಣ ಪುಟ್ಟ ಕೆಲಸಗಳಲ್ಲಿ ನಿರತರಾದರು. ತದ ನಂತರ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ಸಣ್ಣ ಸಣ್ಣ ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.  ರಂಗ ಪ್ರವೇಶ     ಕೆ.ಮಲ್ಲೇಶ್‌ರವರು ತಮ್ಮ ಬಾಲ್ಯದ ದಿನಗಳಲ್ಲಿಯೇ ಅವರ ತಂದೆ ಮಾಡುತ್ತಿದ್ದ ಬಯಲಾಟಗಳಿಂದ ಪ್ರಭಾವಿತರಾಗಿ ಮೊದಲೆಲ್...

ನಾವೇಕೆ ದೀಪಾವಳಿ ಆಚರಿಸುತ್ತೇವೆ

Image
 ನಾವೇಕೆ ದೀಪಾವಳಿ ಆಚರಿಸುತ್ತೇವೆ... ದೀಪಾವಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದಕ್ಕೆ ಈಗಾಗಲೇ 6 ವಿವಿಧ ರೋಚಕ ಪುರಾಣ ಕತೆಗಳನ್ನು ನಾವು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇನ್ನು ಉಳಿದ 6 ಕಥೆಗಳನ್ನು ಲೇಖನದ ಮೂಲಕ ತಿಳಿಯೋಣ. ಕಳೆದ ಲೇಖನದಲ್ಲಿ ಲಕ್ಷ್ಮೀ ದೇವತೆಯ ಹುಟ್ಟುಹಬ್ಬದ ದಿನದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಒಂದು ಕಥೆಯಾದರೆ. 2 ನೇ ಕಥೆ ಮಹಾಬಲೀ ರಕ್ಷಸನಿಂದ ಮಹಾಲಕ್ಷ್ಮೀಯನ್ನು ವಿಷ್ಣು ಮೂರ್ತಿ ಮುಕ್ತಳಾಗಿ ಮಾಡಿದ್ದರಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು. 3 ನೇ ಕಥೆಯ ಪ್ರಕಾರ ನರಕಾಸುರನನ್ನು ಸಂಹಾರ ಮಾಡಿದ ದಿನವಾದ್ದರಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು. 4 ನೇ ಕಥೆಯ ಪ್ರಕಾರ ಪಾಂಡವರು ತನ್ನ 12 ವರ್ಷಗಳ ಅಜ್ಞಾತವಾಸದಿಂದ ಮರಳಿದ ದಿನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು. 5 ನೇ ಕಥೆಯ ಪ್ರಕಾರ ರಾವಣಾಸುರನನ್ನು ಕೊಂದು, ರಾಮನು ತನ್ನ 14 ವರ್ಷಗಳ ವನವಾಸದಿಂದ ಆಯೋಧ್ಯೆಗೆ ಹಿಂದಿರುಗಿದ್ದರಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು. 6 ನೇ ಕಥೆಯ ಪ್ರಕಾರ ವಿಕ್ರಮಾದಿತ್ಯನ ಪಟ್ಟಾಭಿಷೇಕದ ದಿನವಾಗಿ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ ಎಂದು ಈಗಾಗಲೇ ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೀರಾ. ಕಾಳಿ ದೇವತೆ ಕಾಳಿ ದೇವತೆಯನ್ನು ಶ್ಯಾಮ ಕಾಳಿ ಎಂದು ಕೂಡ ಕರೆಯುತ್ತಾರೆ. ಕಾಳಿಯ 10 ಅವತಾರಗಳಲ್ಲಿ ಈ ಅವತಾರ ಮೊದಲನೆಯದು. ಪಾರ್ವತಿಯ ಸ್ವರೂಪವಾದ ...

ರಂಗ ಮಾಲಿಕೆ- ೮.ಆರ್ ಪ್ರಕಾಶ್ ಗೌಡರು

Image
 ಬಣ್ಣದ ಬದುಕು.. ರಂಗ ಮಾಲಿಕೆ -೮   *ರಂಗ ಪರಂಪರೆಯ ಮೂಲಾಧಾರ ಆರ್ ಪ್ರಕಾಶ್ ಗೌಡರು.* ಬಹುತೇಕವಾಗಿ ಹಳ್ಳಿಗಳಲ್ಲಿ ನಾಟಕ ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಸೀಮಿತವಾಗಿರುತ್ತದೆ.ಅಲ್ಲದೆ ತಂದೆ ನಾಟಕ ಮಾಡಿದರೆ ಮಗ ಮಾಡಬಾರದು,ಮಗ ಮಾಡಿದರೆ ಮೊಮ್ಮಗ ಮಾಡ ಬಾರದು ಎಂಬ ಪದ್ಧತಿ ತುಂಬಾ ಜನರಲ್ಲಿ ಇದೆ ಆದರೆ ಇಲ್ಲೊಬ್ಬ ಮಹನೀಯರು ರಂಗಭೂಮಿಯನ್ನು ವಂಶ ಪಾರಂಪರ್ಯವಾಗಿ ಬೆಳೆಸಿಕೊಂಡು ಬಂದು ಹೆಸರುವಾಸಿಯಾದರು ಅವರೇ ಆರ್ ಪ್ರಕಾಶ್ ಗೌಡರು . ಇವರು ಮೂಲತಃ ಲಿಂಗಾಯಿತ ಕುಲದ ಸಿರುಗುಪ್ಪ ತಾಲ್ಲೂಕಿನ ಭೈರಗಾಮದಿನ್ನೆಯ ಗೌಡಿಕೆ ವಂಶದ ಅಂದರೆ ಊರು ಮಾಡೋ ಕುಟುಂಬದ ಆರ್ ನರಸನಗೌಡ ಮತ್ತು ನಾಗಮ್ಮ ಎಂಬುವರ ದಂಪತಿಗಳ ಹುಟ್ಟಿದರು.ಇವರು ತೃತೀಯ ಸುಪುತ್ರ. ಒಟ್ಟು  ಆರು ಜನ ಅಣ್ಣ ತಮ್ಮಂದಿರು ಇವರ ತಂದೆಯವರು ಗೌಡಿಕೆ ಮಾಡುತ್ತಿದ್ದರು.ಇಡೀ ಊರಿನ ಮತ್ತು ಸುತ್ತಮುತ್ತಲೆಲ್ಲ ತುಂಬಾ ಮರ್ಯಾದಸ್ಥ ಕುಟುಂಬದವರಾಗಿದ್ದರು .ಅಲ್ಲದೆ ಜನಸಂಪರ್ಕ ಅತೀವ ವಾಗಿತ್ತು.ಆದರೆ ಇವರ ತಂದೆಯ ಕಾಲದಲ್ಲಿ ಸಂಪಾದಿಸಿದ್ದ ಎಲ್ಲಾ ಜಮೀನು ಇಂದಿರಾ ಗಾಂಧಿ ಅವರ ಉಳುವವನೇ ಭೂಮಿಯ ಒಡೆಯ ಮತ್ತು ಜಮೀನ್ದಾರ ನಿಷೇಧ ಪದ್ಧತಿಯಿಂದಾಗಿ ೨೦೦ ಎಕರೆ ಭೂಮಿಯನ್ನೆಲ್ಲ ಕಳೆದುಕೊಂಡು ಕೇವಲ ಇಪ್ಪತ್ತು ಎಕರೆ ಉಳಿಯಿತು .ಅದರಲ್ಲಿ ಆರು ಜನರಿಗೆ ತಲಾ ಎರಡು ಎಕರೆ ಹೊಲ ಬಂದು ಇನ್ನುಳಿದ  ಎಂಟು ಎಕರೆ ದೊಡ್ಡಪ್ಪನ ಮಗನಿಗೆ ಸಂದಿತು. ಬಾಳಿದ ಮನೆ ಬೀದಿಗೆ ಬಂದು ತಿನ್ನಲು ಗತಿ ಇಲ್...

ರಂಗ ಮಾಲಿಕೆ-೯- ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮ

Image
  ಬಣ್ಣದ ಬದುಕು ರಂಗ ಮಾಲಿಕೆ - ೯ *ಎಂದೂ ಬಾಡದ ರಂಗ ಪುಷ್ಪ ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮ.* ಕರ್ನಾಟಕದ ಸಾಂಸ್ಕೃತಿಕ ಲೋಕದ ಶ್ರೀಮಂತ ಜಿಲ್ಲೆ ಬಳ್ಳಾರಿ ಜಿಲ್ಲೆ.ಅದಕ್ಕೆ ಉತ್ತಮ ನಿದರ್ಶನವೆಂದರೆ ಮರಿಯಮ್ಮನಹಳ್ಳಿ . ಪುರಾತನ ಕಾಲದ ನಾಣಿ ಕೆರೆ ಅಥವಾ ನಾರಾಯಣದೇವರಕೆರೆಯಲ್ಲಿದ್ದ ದೇವದಾಸಿ ಮಹಿಳೆಯರೆಲ್ಲಾ ತುಂಗಭದ್ರಾ ಅಣೆಕಟ್ಟು ನಿರ್ಮಾಣದಿಂದಾಗಿ ಇದ್ದ ಸ್ಥಳವನ್ನು ಕಳೆದುಕೊಂಡು ಇಂದಿನ ಮರಿಯಮನಹಳ್ಳಿಗೆ ಬಂದು ರಂಗ ಕಲಾವಿದರಾಗಿದ್ದಾರೆ. ರಂಗಭೂಮಿಯನ್ನು ತಮ್ಮ ಜೀವಾಳವನ್ನಾಗಿಸಿಕೊಂಡಿದ್ದಾರೆ. ಅಲ್ಲದೆ ಕನ್ನಡ ರಂಗಭೂಮಿಗೆ ದುರ್ಗಾದಾಸ್,ಡಿ.ಪಾರ್ವತಮ್ಮ, ತಳವಾರ ಹನುಮಂತಮ್ಮ , ಎಲಿವಾಳ ಸಿದ್ದಯ್ಯ ಸ್ವಾಮಿಯ ರಂತಹ ಮೊದಲ ಪೀಳಿಗೆಯ ನಟ-ನಟಿಯರನ್ನು ನೀಡಿದ ಹಳ್ಳಿಯಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ವಿವಿಧ ಬಗೆಯ ಅನೇಕ ಕಲಾವಿದರಿದ್ದಾರೆ. ಅಂತೆಯೇ ಹಳ್ಳಿಯನ್ನು "ಕಲಾವಿದರ ತವರೂರು , ಕಲಾವಿದರ ಸ್ವರ್ಗ" ಎಂತಲೂ ಕರೆಯುವುದುಂಟು. ಇಂತಹ ಹಳ್ಳಿಯಲ್ಲಿ ಜನಿಸಿದ ಹೂವೊಂದು ನಾಡಿನಾದ್ಯಂತ ಗಂಧವನ್ನು ಪಸರಿಸಿ ಹೆಸರಾಗಿದೆ ಡಾ. ಕೆ.ನಾಗರತ್ನಮ್ಮ. ಬಾಲ್ಯ : ಇವರು  ೧೯೫೨ ರಲ್ಲಿ ಕಣಿವೆ ಬಸಾಪುರದಲ್ಲಿ ಜನಿಸಿದರು. ಟಿಬಿ ಡ್ಯಾಮ್ ಕಟ್ಟುವ ಸಮಯದಲ್ಲಿ ಇವರ ತಾಯಿ ತುಂಬು ಗರ್ಭಿಣಿ ಆಗ ಒಮ್ಮೆಲೆ ಬಿಡಲಾಗದೆ ಸಮೀಪದಲ್ಲಿದ್ದ ದೇವಲಾಪುರ ಬಂದು ನೆಲೆಸುತ್ತಾರೆ. ಮಾರಪ್ಪ ಮತ್ತು ಸಿದ್ದಮ್ಮ ಎಂಬ ಬಡ ದಂಪತಿಗಳ ೭ ಮಕ್ಕಳಲ್ಲಿ ನಾಗರತ್ನಮ್ಮನವರು ಹಿರಿಯರು ತ...