Posts

Showing posts from April, 2021

ರಂಗ ಮಾಲಿಕೆ -೧೯ ರಂಗ ಜಂಗಮ 'ಡಾ.ಶಿವಕುಮಾರ ತಾತ'

Image
  ಬಣ್ಣದ ಬದುಕು ರಂಗ ಮಾಲಿಕೆ - ೧೯ ರಂಗ ಜಂಗಮ ' ಡಾ.ಶಿವಕುಮಾರ ತಾತ' ರಂಗಭೂಮಿ ಮತ್ತು ರಣಭೂಮಿ ಇವೆರಡೂ ಒಂದಕ್ಕೊಂದು ಪರ್ಯಾಯವಾಗಿ ಬಳಸಲ್ಪಡುವ ಪದಗಳಾಗಿವೆ.ಯಾವುದೇ ಭೂಮಿಗೆ ಕಾಲಿಡುವ ಮುನ್ನ ಯೋಧ ಎನ್ನಿಸ ಬೇಕಾದ್ರೆ ಅವರು ಸಕಲ ವಿದ್ಯೆ ಸಂಪನ್ನರಾಗಿದ್ದರೆ ಮಾತ್ರ ಉಳಿಗಾಲ.ಇಲ್ಲವಾದರೆ ಅವರಿಗದುವೆ ಕೊನೆಗಾಲ.ಈ ನಿಟ್ಟಿನಲ್ಲಿ ರಂಗಭೂಮಿಯ ಬಹುತೇಕ ಕಲಾವಿದರು ಬಹುಮುಖ ಪ್ರತಿಭಾಶಾಲಿಯಾಗಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ.ಆದರೆ ಯಶಸ್ವಿಯಾಗುವ ಅಭಿನೇತೃಗಳು ಮಾತ್ರ ವಿರಳ.ಬಳ್ಳಾರಿ ರಂಗಭೂಮಿಗೆ ಅನ್ವಯಿಸಿದಂತೆ ಅಂತಹ ವಿರಳಾತಿ ವಿರಳರೆಂದರೆ ಅದು ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳ್ ಗ್ರಾಮದ ಡಾ.ಶಿವಕುಮಾರ ತಾತಾ.   ಇವರು 1948ರ ಜೂನ್ 01 ರಂದು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಕೃಷಿಕ ಬಡಕುಟುಂಬದ ಭದ್ರಣ್ಣ ಮತ್ತು ಪಾರ್ವತಿ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಇವರು ತಾಯಿ ಗರ್ಭದಲ್ಲಿ 8 ತಿಂಗಳ ಶಿಶುವಿರುವಾಗಲೇ ತಂದೆಯನ್ನು ಕಳೆದುಕೊಂಡರು. ಅಲ್ಲಿಂದ ಅನೇಕ ಸಂಕಷ್ಟಗಳ ನಡುವೆ ಭೂಮಿಗೆ ಬಂದು ಮುಂದೆ ರಂಗ ಜಂಗಮನೆನೆಸಿದರು.  ಮೂಲತಃ ಬಯಲಾಟದ ಸಾರಥಿಯಾಗಿ ಜನರನ್ನು ನಗಿಸುವ ಹವ್ಯಾಸಿ ಕಲಾವಿದರಾಗಿದ್ದ ಭದ್ರಣ್ಣನವರಿಂದ ಬಳುವಳಿಯಾಗಿ ಶಿವಕುಮಾರಿಗೆ ಬಣ್ಣದ ನಂಟು ಅಂಟಿಕೊಂಡು ಬಂದಿದೆ.ಇವರು ಪ್ರಾಥಮಿಕ ಶಿಕ್ಷಣ ಪಡೆಯುವ ಕಾಲಕ್ಕೆ ನಾಟಕ ಮತ್ತು ಸಂಗೀತದ ಅಭಿರುಚಿ ಇವರನ್ನು ಅವರಿಸಿತು.ಅಂತೆಯೇ ತಮ್ಮ ಎಳೆಯ ...

ಯುಗಾದಿ ನಮ್ಮತನದ ಸಂಕೇತ - ಆರ್.ಪಿ.ಈಶಪ್ಪ

Image
  ಯುಗಾದಿ ಎಂದರೆ ಕೇವಲ ಹಬ್ಬದ ಆಚರಣೆಯಲ್ಲ..! ನಮ್ಮತನದ ಸಂಕೇತ. "ಯುಗ ಯುಗಾದಿ ಕಳೆದರು  ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.." ಈ ಹಾಡು ಕೇಳಿದ ಕೂಡಲೇ ಒಂದು ಬೇಂದ್ರೆಯಜ್ಜ ನೆನಪಾಗ್ತಾರೆ ಇನ್ನೊಂದು ಯುಗಾದಿ ಹಬ್ಬ ನೆನಪಾಗುತ್ತೆ. ಇಷ್ಟು ವರ್ಷ ನಾನಂತೂ ಯುಗಾದಿ ಹಬ್ಬದ ಇತಿಹಾಸ ತಿಳಿಯುವಲ್ಲಿ ಅರೆಬೆಂದ ಮಡಕೆಯಾಗಿದ್ದೇ. ಆದರೆ ಈ ನಮ್ಮ ಕನ್ನಡ ನಾಡು ಪತ್ರಿಕೆಗೆ ಲೇಖನ ಬರೆಯುವ ಅವಕಾಶ ದೊರಕಿದ್ದರಿಂದ ಯುಗಾದಿಯ ಇತಿಹಾಸ ಅರಿಯವಂತಾಯಿತು.ನಾನರಿತದ್ದನ್ನು ನಿಮ್ಮ ಮುಂದೆ ಅರಹುವ ಸಣ್ಣ ಪ್ರಯತ್ನವೇ ಈ ಲೇಖನ.  ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು ಪದವೇ ಸೂಚಿಸುತ್ತದೆ. ಈ ಹಬ್ಬದ ನಮ್ಮ ಭಾರತೀಯರಿಗೆ ಹೊಸ ವರ್ಷವಾಗಿದೆ.ಆದರೆ ಈ ಸವಿಯನ್ನು ಪರದೇಶಿ ಜನವರಿಯಂದೇ ಪಡೆಯುತ್ತೇವೆ.ಈ ಹೊಸ ಸಂವತ್ಸರಕ್ಕೆ ಆರ್ಥವಿದೆ.ಹೇಗೆಂದರೆ ಎಲ್ಲವೂ ನವನವೀನ. ಹೊಸ ಚಿಗುರು, ಹೊಸ ಹುರುಪು,ಹೊಸ ಹೊಳಪು ಹೀಗೆ ಎಲ್ಲವೂ ಹೊಸತಾಗಿ ಕಾಣುವ ದಿನ.ಆದರೆ ನಾವು ನೀವು ಆಚರಿಸುವ ಹೊಸವರ್ಷ ಕೇವಲ ಮೋಜು ಮಸ್ತಿಯ ಸಂಕೇತ ಎಂದರೂ ತಪ್ಪಾಗಲಿಕ್ಕಿಲ್ಲ. ನಮ್ಮ ದೇಶಿಯರಲ್ಲಿ ಈ ಹಬ್ಬದ ಕುರಿತಾದ ಅನೇಕ ಮಾಹಿತಿಗಳಿವೆ....

ಯುಗಾದಿ ಅವಳಿ ಜಾತ್ರೆ - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ

Image
 ನೋಡ ಬನ್ನಿ , ನಮ್ಮೂರ ಯುಗಾದಿ ಅವಳಿ ಜಾತ್ರೆ..! " ಚೆಂಬೆಳಕಿನ ಸುಳಿಯಲ್ಲಿ ಹೊಸದೊಂದು ಕಾಂತಿಯಿತ್ತು ಮಾವಿನ ಬೇವಿನ ಗಿಡದಲ್ಲೊಂದು ಚಿಗುರು ಹೂವಿನ ಸಂಗಮವಿತ್ತು ಉದಿಸಿದ ರವಿಯ ಮೊಗದಲ್ಲೊಂದು ಚೆಲುವಿನ ಬುಗ್ಗೆ ಹೊಡೆದಿತ್ತು ಯುಗಾದಿಗೆ ನಾಂದಿಯ ಹಾಡಿತ್ತು..!   ಯುಗಾದಿ ಎಂದರೆ ಕೇವಲ ಭಾರತೀಯ ಹಬ್ಬದ ಆಚರಣೆಯಲ್ಲ.ಹೆಸರೇ ಸೂಚಿಸುವಂತೆ "ಯುಗ + ಆದಿ" ಅಂದರೆ ಹೊಸದೊಂದು ಯುಗದ, ಸಂವತ್ಸರ ,ವರ್ಷದ ಆರಂಭ.ಆದರೆ ನಾವೆಲ್ಲ ಜನವರಿ ೦೧ ನೇ ಹೊಸವರ್ಷವೆಂದು ನಂಬಿದ್ದೇವೆ.ಆದರೆ ನಮ್ಮ ಪೂರ್ವಿಕರು ನಮ್ಮಷ್ಟು ಮೌಢ್ಯರಲ್ಲ.ಅನಕ್ಷರಸ್ಥರಾಗಿದ್ದರೂ, ಅವರ ಹಬ್ಬ - ಆಚರಣೆಗಳ ವಿಚಾರದಲ್ಲಿ ಅವರಷ್ಟು ವಿವೇಕಿಗಳು ಯಾವ ವಿಜ್ಞಾನಿಗಳು ಸಾಟಿಯಾಗಲಾರರು. ಅದಕ್ಕೊಂದು ನಿದರ್ಶನವನ್ನು ಯುಗಾದಿಯ ದೆಸೆಯಲ್ಲಿ ನೀಡುವುದಾದರೆ ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊ...

ರಂಗ ಮಾಲಿಕೆ - ೧೮ ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿ.

Image
 ಬಣ್ಣದ ಬದುಕು ರಂಗ ಮಾಲಿಕೆ - ೧೮ ರಂಗ ಮಾಂತ್ರಿಕ ' ಮದಿರೆ ಮರಿಸ್ವಾಮಿ' ನಟನೆ ಮತ್ತು ಸಂಗೀತ ಒಂದು ನಾಣ್ಯದ ಎರಡು ಮುಖಗಳ ಹಾಗೆ ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.ಎಷ್ಟೋ ಗಾಯಕರು ನಟರಾಗಿದ್ದಾರೆ,ಎಷ್ಟೋ ನಟರು ಗಾಯಕರಾಗಿದ್ದಾರೆ.ಇನ್ನೂ ಕೆಲವರು ನಟನೆ ಮತ್ತು ಗಾಯನದಲ್ಲಿ ಮೇರು ಪ್ರತಿಭಾಶಾಲಿಗಳಾಗಿರುವುದನ್ನು ರಂಗಭೂಮಿಯಲ್ಲಿ ಕಾಣಬಹುದು.ಇನ್ನು ನಮ್ಮ ಬಳ್ಳಾರಿ ರಂಗಭೂಮಿಗೆ ಅನ್ವಯಿಸಿದರೆ ಇಲ್ಲಿ ಅವಳಿ ಕಲಾವಿದರ ದಂಡೆ ಇದೆ.ಅದಕ್ಕೊಂದು ನಿದರ್ಶನವೆಂದರೆ ಸಿರಿಗೇರಿ ನಾಗನಗೌಡರು ಮತ್ತು ಮದಿರೆ ಮರಿಸ್ವಾಮಿ. ಇವರು ಕೇವಲ ಸ್ನೇಹಿತರಷ್ಟೇ ಅಲ್ಲ ಎರಡು ರಾಜ್ಯಗಳ ಬಾಂಧವ್ಯದ ಪ್ರತೀಕವಾಗಿದ್ದರು.ಇವರಿರ್ವರ ಕಲಾ ನೈಪುಣ್ಯತೆ ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ಪಸರಿಸಿತ್ತೆಂದರು ತಪ್ಪಾಗಲಾರದು.ಈ ಇಬ್ಬರು ಕಲಾವಿದರಲ್ಲಿ ನಾವಿಂದು ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿಯವರ ಕುರಿತಾಗಿ ತಿಳಿಯೋಣ.  ಇವರು ಕ್ರಿ.ಶ.09.11.1940 ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲ್ಲೂಕಿನ ಮದಿರೆ ಗ್ರಾಮದಲ್ಲಿ ವೀರಯ್ಯ ಮತ್ತು ನೀಲಮ್ಮರ ಮಗನಾಗಿ ಜನಿಸಿದರು. ಸಂಗೀತದ ಪ್ರಾಥಮಿಕ ಜ್ಞಾನದ ಅರಿವು ತಂದೆ ವೀರಯ್ಯರ ಮಾರ್ಗದರ್ಶನದಲ್ಲಿ ದೊರೆಯಿತು. ಕಾರಣ ತಂದೆಯು ಸಹ ಬಯಲಾಟದ ಪಿಟೀಲು ವಾದಕರಾಗಿದ್ದರು.    ವೀರಯ್ಯನವರು ತಮ್ಮ ಕಲೆಯ ಬೆಳವಣಿಗೆಯನ್ನು ಮಗನಲ್ಲಿ ಕಾಣಬೇಕೆಂಬ ಹೆಬ್ಬಯಕೆಯಿಂದ ಸದಾ ಮಗನ ಕಲೆಯ ಬಗೆಗಿನ ವಿ...

ರಂಗ ಮಾಲಿಕೆ - ೧೬ ಬಳ್ಳಾರಿಯ ರಂಗ ಶಿಖರ - ಬಳ್ಳಾರಿ ರಾಘವ

Image
 ಬಣ್ಣದ ಬದುಕು ರಂಗ ಮಾಲಿಕೆ - ೧೬ ಬಳ್ಳಾರಿಯ ರಂಗ ಶಿಖರ ' ಬಳ್ಳಾರಿ ರಾಘವ '  ಬಳ್ಳಾರಿ ಎಂದರೆ ಈಗಿನ ಬಹಿತೇಕರಿಗೆ ನೆನಪಾಗುವುದು ಅದು ಗಣಿನಾಡು,ಬಿಸಿಲನಾಡು ಎಂಬುದು ಆದರೆ ಹಿಂದೆ ಒಂದು ಕಾಲದಲ್ಲಿ ಬಳ್ಳಾರಿ ಎಂದರೆ ರಂಗಭೂಮಿಯ ತವರೂರು ,ಕಲೆಯ ನಾಡು ಎಂದು ಅನ್ವರ್ಥಕವಾಗಿ ಬಳಸುವ  ಕಾಲವೊಂದಿತ್ತು.ಅಂತಹ ಮೇರು ಶಿಖರಕ್ಕೆ ಬಳ್ಳಾರಿಯನ್ನು ಕೊಂಡೊಯ್ದ ಮಹನೀಯರೆಂದರೆ ತಾಡಪತ್ರಿ ರಾಘವ.ಇವರು ಹುಟ್ಟಿದ್ದ ಊರಿನ ಹೆಸರನ್ನೂ ಬಿಟ್ಟು ಮುಂದೆ ಲಾಯರ್ ವೃತ್ತಿ ಮಾಡುತ್ತಾ ಬದುಕು ಮತ್ತು ಹೆಸರು ಕೊಟ್ಟ ಬಳ್ಳಾರಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡು ಇಡೀ ವಿಶ್ವದಾದ್ಯಂತ ಹೊತ್ತು ತಿರುಗಿ ಮೆರೆಸಿದರು. ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಆಗಸ್ಟ್ 2, 1880ರ ವರ್ಷದಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ತಂದೆ ನರಸಿಂಹಾಚಾರ್ಯರು ಮತ್ತು ತಾಯಿ ಶೇಷಮ್ಮನವರು. ಬಳ್ಳಾರಿಯಲ್ಲಿ ಎಫ್‌.ಎ ವಿದ್ಯಾಭ್ಯಾಸವನ್ನು ಪೂರೈಸಿದ ರಾಘವರು ಮುಂದೆ ಮದರಾಸಿನಲ್ಲಿ ಬಿ.ಎ, ಬಿ.ಎಲ್‌ ಪದವಿ ಗಳಿಸಿದರು. ಧರ್ಮಾವರಂ ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ ಪಡೆದು 1906ರಲ್ಲಿ ಸ್ವತಂತ್ರ ವಕೀಲರಾಗಿ ಪ್ರಸಿದ್ಧಿ ಗಳಿಸಿದರು. ಮದರಾಸಿನಲ್ಲಿದ್ದಾಗಲೇ ಪಾರಸಿ ಥಿಯೆಟ್ರಿಕಲ್ ಕಂಪನಿಯ ನಾಟಕಗಳನ್ನು ನೋಡುವ ಹವ್ಯಾಸ ಅವರಲ್ಲಿ ಮೂಡಿತ್ತು. ನಟ ದಾದಾಬಾಯಿ ಮಿಸ್ತ್ರಿಯವರ ಅಭಿನಯ ಅವರ ಮೇಲೆ ಅಪಾರ ಪ್ರಭಾವ ಬೀರಿತ್ತು. ರಾಘವರು ಸ್ವಯಂ ಮೊದಲು ಅಭಿನಯಿಸಿದ ...

ರಂಗ ಮಾಲಿಕೆ - ೧೭ ಗೂಳ್ಯಂ ವಿಶ್ವನಾಥಸ್ವಾಮಿ

Image
 ಬಣ್ಣದ ಬದುಕು ರಂಗ ಮಾಲಿಕೆ - ೧೭ ರಂಗಭೂಮಿಯ ಅಗಸ್ತ್ಯ ನಕ್ಷತ್ರ - ಗೂಳ್ಯಂ ವಿಶ್ವನಾಥಸ್ವಾಮಿ ಕನ್ನಡದ ಬಳಕೆಯಾಗಲಿ ಅಭಿಮಾನವಾಗಲಿ ಹೆಚ್ಚಾಗಿ ಕಾಣಸಿಗುವುದು ಬಳ್ಳಾರಿಗಿಂತ ಬಳ್ಳಾರಿಯ ಗಡಿ ಭಾಗಗಳಲ್ಲಿ. ಅಂತೆಯೇ ರಾಘವ,ಧರ್ಮಾವರಂ ರಾಮಕೃಷ್ಣಮಾಚಾರ್ಯ,ಕೋಲಚಲಂ ಶ್ರೀನಿವಾಸರಾಯರಂತಹ ಅನೇಕ ಮಹನೀಯರು ಬಳ್ಳಾರಿ ಸಾಂಸ್ಕೃತಿಕ ಲೋಕದಲ್ಲಿ ಮೆರೆದಿದ್ದಾರೆ.ಅಂತಹ ಮಹಾನ್ ಚೇತನರಲ್ಲೊಬ್ಬರು ಗೂಳ್ಯಂ ವಿಶ್ವನಾಥ್ ಸ್ವಾಮಿ. ನೀಳಕಾಯ,ಗಡಸು ಧ್ವನಿ,ಮುಗ್ಧ ನೋಟದ ಸ್ವಾಮಿಯವರ ಚೆಲುವಿನ ರೂಪ ಕಂಡ ಎಂತವರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಇವರು ಕ್ರಿ.ಶ.07.07.1957 ರಂದು ಕರ್ನಾಟಕಾಂಧ್ರ ಗಡಿಭಾಗದ ಗೂಳ್ಯಂ ನಲ್ಲಿ ಶಿವಮೂರ್ತಿ ಶರ್ಮ ಮತ್ತು ಹಂಪಾಂಭ ದೇವಿ(ಸಿರುಗುಪ್ಪ ಶಾಸಕ ಸಿರಿಗೇರಿ ಎಚ್.ಎಂ.ರೇವಣಸಿದ್ದಯ್ಯರ ತಂಗಿ)ಯವರ ಮಗನಾಗಿ ಜನಿಸಿದರು. ಮನೆಯೇ ಮೊದಲ ಪಾಠಶಾಲೆಯಂಬಂತೆ ಮೂಲತಃ ಇವರ ತಂದೆ ಶರ್ಮರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ಹಾಗೂ ವಿದ್ಯಾವಂತೆ ಮತ್ತು ಗಾನಜ್ಞಾನವಿದ್ದ ತಾಯಿ ಹಂಪಾಂಭರೇ ಮೊದಲ ಗುರುಗಳಾದರು. ಇವರು ತಮ್ಮ ಪ್ರಾಥಮಿಕ ಗೂಳ್ಯಂನ ಕನ್ನಡ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುನ್ಸಿಪಲ್ ಹೈಸ್ಕೂಲ್,ಹಾಗೂ ಪಿ.ಯುಸಿಯನ್ನು ವಾರ್ಡ್ಲಾ ಕಾಲೇಜಿನಲ್ಲಿ ರವಿಬೆಳಗೆರೆಯವರ ಜೊತೆಯಲ್ಲಿ ಓದಿದರು.ಅಲ್ಲದೆ ಟಿಸಿಹೆಚ್ ಯನ್ನು ಸಹ ಓದಿ ಅಪ್ಪನ ದುಡಿಮೆಯಿಂದಾಗಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.  ಸ್ವಾಮಿಯವರಲ್ಲಿ  ರಂಗಾ...