ರಂಗ ಮಾಲಿಕೆ -೫೬ ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ 'ಎಂ.ಶ್ರೀನಿವಾಸುಲು'
ಬಣ್ಣದ ಬದುಕು ರಂಗ ಮಾಲಿಕೆ -೫೬ ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ 'ಎಂ.ಶ್ರೀನಿವಾಸುಲು' ಬದುಕಿನುದ್ದಕ್ಕೂ ಹಲವಾರು ಅಡತಡೆಗಳು ಇದ್ದಿದ್ದೇ.ಆದರೆ ಅವುಗಳನ್ನು ಎದುರಿಸುವಲ್ಲಿ ಕೆಲವರು ಸೋತು ಸತ್ತರೆ ಇನ್ನು ಕೆಲವರು ಗೆದ್ದು ಬೀಗುತ್ತಾರೆ.ಆದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆಲ್ಲುವ ಚೈತನ್ಯ ತುಂಬುವ ಹಲವು ಮಾರ್ಗಗಳಲ್ಲಿ ರಂಗಭೂಮಿ ಅಗ್ರಮಾನ್ಯವಾದುದ್ದಾಗಿದೆ.ಆ ನಿಟ್ಟಿನಲ್ಲಿ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿ ಬದುಕಿನುದ್ದಕ್ಕೂ ಗೆದ್ದು ಬೀಗಿದ ಹಲವರಲ್ಲಿ ಒಬ್ಬರು ಬಳ್ಳಾರಿ ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಎಂ.ಶ್ರೀನಿವಾಸುಲು. ಇವರು ಕ್ರಿ.ಶ. ೦೧.೦೯.೧೯೬೨ ರಲ್ಲಿ ಬಳ್ಳಾರಿಯ ಸತ್ಯ ನಾರಾಯಣ ಪೇಟೆಯಲ್ಲಿ ಎಂ.ರಾಮುಡು ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು. ಹುಟ್ಟಿದ್ದು ಬಡ ಕುಟುಂಬದಲ್ಲಾದ್ದರಿಂದ ಮತ್ತು ಅಪ್ಪನ ಮಧ್ಯ ವ್ಯಸನದಿಂದಾಗಿ ಒಂದ್ಹೊತ್ತಿನ ಊಟಕ್ಕೂ ಪರದಾಡುವ ಸಂದರ್ಭದಲ್ಲಿ ಅಜ್ಜಿ ಲಕ್ಷಮ್ಮಮ್ಮ ಮತ್ತು ಅಮ್ಮ ಪಾರ್ವತಮ್ಮರ ಛಲಭರಿತ ಪ್ರೋತ್ಸಾಹ ಮತ್ತು ಕಾರ್ಯದಿಂದಾಗಿ, ೧೦ನೇ ತರಗತಿಯವರೆಗೆ ಬಳ್ಳಾರಿಯ ಮದ್ದೀಕೇರಿ ಭೀಮಯ್ಯ ಸ್ವಂತ ಲಿಂಗಣ್ಣ ಶೆಟ್ಟಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು. ಆದರೆ ಮುಂದೆ ಓದಲು ಆರ್ಥಿಕವಾಗಿ ಸಬಲರಿಲ್ಲದ ಕಾರಣ ಆಗ ಕರ್ನಾಟಕ ಸಾರಿಗೆ ಇಲಾಖೆಯವರು ಭದ್ರತಾ ಸಿಬ್ಬ...