Posts

Showing posts from August, 2020

ರಂಗ ಮಾಲಿಕೆ - ೧. ಡಾ.ಸುಭದ್ರಮ್ಮ ಮನ್ಸೂರ್

Image
 ಬಣ್ಣದ ಬದುಕು ರಂಗ ಮಾಲಿಕೆ -೧ “ಉಭಯ ಕಲಾ ಶಾರದೆ”  ಸುಭದ್ರಮ್ಮ ಮನ್ಸೂರ್   ಬಳ್ಳಾರಿಯ ಬಹುತೇಕ ರಂಗಸ್ಥಳಗಳಲ್ಲಿ ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ...’ ಎಂಬ ಗಾಯನ ಕೇಳಿ ಬಂತೆAದರೆ ಅಂದು ರಂಗ ಮಂದಿರವೆಲ್ಲ ಹೌಸ್‌ಫುಲ್ ಅದಕ್ಕೆ ಕಾರಣ ಎಂತವರನ್ನಾದರೂ ಮಂತ್ರಮುಗ್ಧರನ್ನಾಗಿಸುವ ಕಂಠದ ‘ಉಭಯ ಕಲಾ ಶಾರದೆ ಮನ್ಸೂರು ಸುಭದ್ರಮ್ಮನವರು. ಇವರ ಪ್ರತಿಭೆ ಎಷ್ಟೊಂದು ಎತ್ತರದ್ದು ಎಂಬುದರ ಪರಿಚಯ (ಪ್ರಚಾರದ ಕೊರತೆಯಿಂದ) ನಮ್ಮ ಸಾರಸ್ವತ ಲೋಕಕ್ಕೆ ಆಗಿಲ್ಲ. ಸಂಗೀತದಲ್ಲಿ ಸಾಧನೆ ಸಿದ್ಧಿ ಕಂಡವರಿರಬಹುದು, ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು, ಆದರೆ ಹಾಡುಗಾರಿಕೆ ಮತ್ತು ಅಭಿನಯ ಎರಡರಲ್ಲೂ ಸಾಧನೆಯ ಶಿಖರಕ್ಕೇರಿದ ಕಲಾವಿದರೆಂದರೆ, ಕರ್ನಾಟಕದಲ್ಲಿ ಅದು ಈಗ ಶ್ರೀಮತಿ ಸುಭದ್ರಮ್ಮ ಮನ್ಸೂರು ಅವರೇ ಎಂದರೆ ತಪ್ಪಾಗಲಾರದು. ತಂದೆ ತಾಯಿಯವರಿಂದಲೇ ಸಂಗೀತದ ಶಿಕ್ಷಣ ಪಡೆದ ಸುಭದ್ರಮ್ಮನವರದು ಎಂತಹ ಮಧುರ ಕಂಠ ಎಂದರೆ ಹಾಡುಗಾರಿಕೆಯಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ರಾಷ್ಟç-ಅಂತರರಾಷ್ಟಿçÃಯ ಮಟ್ಟದ ಕೀರ್ತಿ ಪಡೆದಿದ್ದಾರೆ. ಹಾಗೆಂದಾಕ್ಷಣ ಅಭಿನಯದಿಂದ ಅವರ ಸಂಗೀತದ ಬೆಳವಣಿಗೆಗೆ ಕುಂದುAಟಾಗಿಲ್ಲ. ಈಗಲೂ ಅವರದು ರಾಷ್ಟç-ಅಂತರರಾಷ್ಟಿçÃಯ ಮಟ್ಟದ ಪ್ರತಿಭೆಯೇ. ಅಭಿನಯ ಮತ್ತು ಗಾಯನದಲ್ಲಿ ಒಟ್ಟೊಟ್ಟಿಗೇ ಸಾಧನೆಯ ಶಿಖರಕ್ಕೇರಿದವರು ಇಲ್ಲವೆನ್ನುವಷ್ಟು ವಿರಳ. ಈ ವಿರಳರಲ್ಲಿ ವಿರಳರಾಗಿ...