ರಂಗ ಮಾಲಿಕೆ -೫೧ ರಕ್ತರಾತ್ರಿಯ ಅಂಬಾಸಿಡರ್ 'ರಾರಾವಿ ಚಿದಾನಂದ ಗವಾಯಿಗಳು'.
ಬಣ್ಣದ ಬದುಕು ರಂಗ ಮಾಲಿಕೆ -೫೧ ರಕ್ತರಾತ್ರಿಯ ಅಂಬಾಸಿಡರ್ 'ರಾರಾವಿ ಚಿದಾನಂದ ಗವಾಯಿ'. ರಂಗಭೂಮಿ ಎನ್ನುವುದು ಕೇವಲ ಒಂದೇ ರಂಗಿನ ಲೋಕವಲ್ಲ, ಬದಲಾಗಿ ಇದೊಂದು ರಂಗ ರಂಗಿನ ಹೂಗಳ ಉದ್ಯಾನವನ. ಹಾಗಾಗಿ ಇಲ್ಲಿನ ಬಣ್ಣ ಬಣ್ಣದ ಹಕ್ಕಿಗಳು ಚಿಲಿಪಿಲಿ ನಿನಾದದ ಮೂಲಕ ಸಹಸ್ರಾರು ಕಲಾ ರಸಿಕರ ಮನಗೆದ್ದ ಸಹಸ್ರಾರು ಕಥಾನಕಗಳನ್ನು ನಾವು ಕಾಣಬಹುದು. ಅಂತಹ ಮನರಂಜನಾ ಕಥಾನಕಗಳ ನಾಯಕ-ನಾಯಕಿಯರಲ್ಲಿ ಒಬ್ಬರಾದ ರಂಗ ಸಾಮಂತರೆಂದರೆ ರಾರಾವಿಯ ಚಿದಾನಂದ ಗವಾಯಿಗಳು. ಇವರು ಕ್ರಿ.ಶ.೧೯೭೬ರಲ್ಲಿ ಸಿರುಗುಪ್ಪ ತಾಲ್ಲೂಕಿನ ರಾರಾವಿಯ ಗೋವಿಂದಪ್ಪ ಮತ್ತು ಅಯ್ಯಮ್ಮರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ತಮ್ಮ ತಾತ ಚಿದಾನಂದಪ್ಪರು ರಂಗ ಕಲಾವಿದರಾಗಿದ್ದರಿಂದ ಕಲೆಯೆಂಬುದು ಇವರಲ್ಲಿ ರಕ್ತಗತವಾಗಿ ಬಂದಿತ್ತು. ಅದಕ್ಕೆ ಇಂಬು ನೀಡುವಂತೆ ರಾರಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೫ ನೇ ತರಗತಿ ಓದುವಾಗ ಶಿಕ್ಷಕರಾದ ಮಾಯಪ್ಪ ಮತ್ತು ಜಂಬಣ್ಣರಿಂದ ಭಾರತವೀರ ಎಂಬ ನಾಟಕದಲ್ಲಿ ಪುರು ಪಾತ್ರಕ್ಕೆ ಬಣ್ಣ ಹಚ್ಚಿದರು.ಅಲ್ಲಿ ತೋರಿದ ರಂಗಾಸಕ್ತಿಯಿಂದ ಮುಂದೆ ಜಂಬ ಕೊಚ್ಚಿದ ಉತ್ತರ ಕುಮಾರ, ಏಕಲವ್ಯ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಏಳನೇ ತರಗತಿಯಲ್ಲಿ ಓದುವಾಗ ಊರಲ್ಲಿ ಕ್ಯಾಂಪ್ ಮಾಡಿದ್ದ ನಾಟಕ ಕಂಪನಿ ವಿನಾಃಕರಣ ಆ ದಿನ ರಜೆ ಮಾಡಿದ್ದರು. ಆಗ ಅದೇ ಸಮಯವನ್ನು ಬಳಸಿಕೊಂಡ ಶಾಲಾ ಮುಖ್ಯೋಪಾಧ್ಯಾಯ ವೀರ...