Posts

Showing posts from April, 2018
Image
ಬುದ್ಧ- ಬಸವ-ಅಂಬೇಡ್ಕರ್ ರ ಜನ್ಮ ದಿನಾಚರಣೆ ಅರ್ಥಪೂರ್ಣ - ಪ್ರೊ.ಬಿ.ಕೆ.ರವಿ ಸಾಮಾಜಿಕ ವೈರುಧ್ಯಗಳನ್ನು ತಿದ್ದಿತೀಡಿದ ಬುದ್ಧ,ಬಸವ,ಅಂಬೇಡ್ಕರ್ ರ ಜನ್ಮ ದಿನಾಚರಣೆ ತುಂಬಾ ಮಹತ್ವ ಮತ್ತು ಅರ್ಥಪೂರ್ಣವಾದುದ್ದಾಗಿದೆ ಅಲ್ಲದೆ ಶ್ರಮ ಮತ್ತು ಸಮ ಸಮಾಜದ ನಿರ್ಮಾಣವೇ ಬಹುಮುಖ್ಯವಾದ ವಿಷಯವಾಗಿದೆ ಎಂದು ಕುಲಸಚಿವ ಪ್ರೊ.ಬಿ.ಕೆ.ರವಿ ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪ್ರದರ್ಶನ ಕಲಾ ವಿಭಾಗದ ಸಂಯುಕ್ತಾಶ್ರಯದಲ್ಲಿ "ಬುದ್ಧ-ಬಸವ-ಅಂಬೇಡ್ಕರ್ ರ ಜನ್ಮ ದಿನಾಚರಣೆ ಹಾಗೂ ದೆಹಲಿಯಲ್ಲಿ ನಡೆದ ೮ನೇ ಥಿಯೇಟರ್ ಒಲಂಪಿಕ್ ಅಂತರರಾಷ್ಟ್ರೀಯ ನಾಟಕೋತ್ಸವದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ"ವನ್ನು ಉದ್ದೇಶಿಸಿ ಮಾತಾನಾಡುತ್ತಾ ಭಾಷಣಗಳು ಮಾನವೀಯ ಮೌಲ್ಯಗಳನ್ನು ಸಮಾಜದ ಮೂಲೆ ಮೂಲೆಗೆ ತಲುಪಿಸುವಲ್ಲಿ ವಿಫಲವಾಗುತ್ತಿರುವ ಈ ಸಂದರ್ಭದಲ್ಲಿ ರಂಗ ಮಾಧ್ಯಮಗಳು ಆ ಕಾರ್ಯವನ್ನು ಯಶಸ್ವಿಯಾಗಿ ಪರಿಪೂರ್ಣಗೊಳಿಸುತ್ತವೆ.ಇಂದಿನ ಸಾಮಾಜಿಕ ನ್ಯಾಯದ ರಥವನ್ನು ಎಳೆಯುವ ಪೂರ್ಣ ಜವಾಬ್ದಾರಿ ಪ್ರಸ್ತುತ ಯುವ ಸಮುದಾಯದ ಹೆಗಲ ಮೇಲೆ ನಿಂತಿದೆ ಎಂದು ಅವರು ಹೇಳಿದರು. ನಂತರ ಮಾತಾನಾಡಿದ  ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ  ಅವರು ಒಂದೇ ಚಿಂತನೆಯಡಿಯಲ್ಲಿ ಆಲೋಚಿಸಿದ ಮಹನೀಯರ ಜಯಂತಿಯನ್ನು ಸಂಯುಕ್ತವಾಗಿ ಆಚರಿಸುವ ಅನಿವಾರ್ಯತೆ ಅವಶ್ಯಕವೆನಿಸಿದೆ. ಈ ಮೂಲಕ ಸಮಾನತೆ, ಒಗ್ಗಟ್ಟು ಮತ್ತು ಸರಳತೆಯನ್...