Posts

Showing posts from October, 2017
Image
ಮಾಧ್ಯಮಗಳು ಉನ್ನತಿಗೆ ಮಾರಕವಲ್ಲ - ಡಾ.ಕೆ.ರಾಮಕೃಷ್ಣಯ್ಯ ಬಹುತೇಕ ಚಿಂತನಾಶೀಲರ ಪ್ರಕಾರ ಮಾಧ್ಯಮಗಳು ಯುವಕರನ್ನು ಹಾಳುಗೆಡುತ್ತವೆ ಎನ್ನುತ್ತಾರೆ ಆದರೆ ಯಾವುದೇ ಮಾಧ್ಯಮಗಳಾಗಲಿ ವ್ಯಕ್ತಿಯ ಉನ್ನತಿಗೆ ಮಾರಕವಲ್ಲ ಬದಲಾಗಿ ಪೂರಕವೆನಿಸಿವೆ ಎಂಬುದಕ್ಕೆ ಈ ಹಾಸ್ಟೆಲ್  ಕಿರುಚಿತ್ರವೇ ಸಾಕ್ಷಿ ಎಂದು ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾದ ಡಾ.ಕೆ.ರಾಮಕೃಷ್ಣಯ್ಯ ಅಭಿಪ್ರಾಯ ಪಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ಕಲಾಭವನದಲ್ಲಿ ಕಾರಂತ ರಂಗಲೋಕ ® ಸಂಸ್ಥೆ ಹಮ್ಮಿಕೊಂಡಿದ್ದ " ದಿ ಹಾಸ್ಟೆಲ್ " ಕಿರುಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತಾನಾಡುತ್ತಾ  ಯುವಕರು ಮೊಬೈಲ್ ದಾಸರಾಗುವ ಮೂಲಕ ತಮ್ಮ ಕರ್ತವ್ಯಗಳು ಮರೆತಿದ್ದಾರೆ ಎನ್ನುವ ಜನರೇ ಹೇರಳವಾಗಿದ್ದಾರೆ ಆದರೆ ಅದಕ್ಕೆ ಅಪವಾದವೆಂಬಂತೆ ಬಳ್ಳಾರಿಯ ಈ ಮೂರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಓದಲು ಬಂದು ಓದಿನ ಜೊತೆಯಲ್ಲಿ ತಮ್ಮ ಸಿನಿಮಾ ಮಾಡಬೇಕೆಂಬ ಕನಸನ್ನು ತಮ್ಮಲ್ಲಿದ್ದ ಮೊಬೈಲ್ ಬಳಸಿ "ದಿ ಹಾಸ್ಟೆಲ್ "ಎಂಬ ಈ ಕಿರುಚಿತ್ರದ ಮೂಲಕ ನನಸಾಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ನಂತರ ಮಾತಾನಾಡಿದ ಸಿ.ಡಿ.ಸಿ ಮುಖ್ಯಸ್ಥ ಡಾ.ವಿ.ನಾಗೇಶ್ ಬೆಟ್ಟಕೋಟೆ ಮಾತಾನಾಡಿ ಕನಸು ಕಾಣುವುದು ಮುಖ್ಯವಲ್ಲ ಬದಲಾಗಿ ಅವುಗಳ ಸಾಕಾರಕ್ಕೆ ಮಾಡುವ ಪ್ರಯತ್ನ. ಅತ್ಯಾವಶ್ಯಕ.ಅವಕಾಶಗಳು ಎಲ್ಲರಿಗೂ ಒದಗುವವು ಆದರೆ ಅವುಗಳ ಬಳಕೆ ಕೆಲವರಿ...