ಮನುಷ್ಯನ ಪರಿಪೂರ್ಣತೆಗೆ ಪ್ರದರ್ಶಕ ಕಲೆಗಳು ಸಹಾಯಕ- ಪ್ರೊ.ಐ.ಎಸ್.ಶಿವಕುಮಾರ್ ಮನುಷ್ಯನು ತನ್ನ ಆಂತರ್ಯದಲ್ಲಿ ಕಲ್ಮಶಗಳಿಂದ ಅಪೂರ್ಣನಾಗಿರುತ್ತಾನೆ ಆದರೆ ಅವನನ್ನು ಪರಿಪೂರ್ಣನನ್ನಾಗಿಸುವಲ್ಲಿ ಪ್ರದರ್ಶಕ ಕಲೆಗಳು ಸಹಕಾರಿಯಾಗುತ್ತವೆ ಎಂದು ಕುಲಪತಿ ಪ್ರೊ.ಐ.ಎಸ್.ಶಿವಕುಮಾರ್ ಅಭಿಪ್ರಾಯ ಪಟ್ಟರು. ಪ್ರದರ್ಶನ ಕಲಾ ವಿಭಾಗದ ವತಿಯಿಂದ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ''ವಿಶ್ವ ನೃತ್ಯ ದಿನಾಚರಣೆ''ಯನ್ನು ಉದ್ಘಾಟಿಸಿ ಮಾತಾನಾಡುತ್ತಾ ಪ್ರತಿಯೊಬ್ಬರಲ್ಲೂ ತನ್ನದೇ ಆದ ಅಂತಃಶಕ್ತಿಗಳಿರುತ್ತವೆ.ಅವುಗಳನ್ನು ಗುರುತಿಸಿ ಪ್ರಚೋದಿಸುವ ಕಾರ್ಯಗಳು ಹೇರಳವಾಗಬೇಕಾಗಿವೆ. ಅಲ್ಲದೇ ಪ್ರದರ್ಶಿಸುವ ಕಲೆಗಳೆಂದರೆ ನೃತ್ಯ ಸಂಗೀತ ನಾಟಕ ವಿಭಾಗಳನ್ನು ಒಳಗೊಂಡಿದೆ. ಅವುಗಳಿಗೆ ಸೂಕ್ತ ಗೌರವ, ಮಾನ್ಯತೆ ದೊರಕುವ ವ್ಯವಸ್ಥೆ ಸಮಾಜದಿಂದ ಆಗದಿರುವುದು ವಿಷಾದನೀಯ ಎಂದು ಹೇಳಿದರು. ನಂತರ ಕುಲಸಚಿವ(ಮೌಲ್ಯ ಮಾಪನ) ಶಿವರಾಜ್ ಮಾತಾನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಪ್ರದರ್ಶಕ ಕಲೆಗಳನ್ನು ಅಳವಡಿಸಿಕೊಂಡರೆ ಆಗಾಧ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬಹುದೆಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರೊ .ಪದ್ಮಾಮೂರ್ತಿಯವರು ಮನುಷ್ಯ ತನ್ನನ್ನು ತಾನು ಕಲೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನಸ್ಸಿನ ತುಮುಲಗಳನ್ನು ನಿವಾರಿಸಿಕೊಂಡು ನಿರಾಳನಾಗುತ್ತಾನೆ.ಆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬಹುದ...
Posts
Showing posts from May, 2018
- Get link
- X
- Other Apps
ಅಸಮರ್ಥರು ಆಡಳಿತದ ದ್ಯೋತಕವೇ ಕೋಡ್ ರೆಡ್ ಯಾವುದೇ ದೋಷಪೂರಿತ ವ್ಯವಸ್ಥೆಯಲ್ಲಾಗಲಿ, ಮೇಲಾಗಿ ಎಲ್ಲೆಡೆ ಜೇನಿನ ಮಳೆ ಸುರಿಯುತ್ತಿದೆ,ಹಾಲಿನ ಹೊಳೆ ಹರಿಯುತ್ತಿದೆ ಎಂಬ ಭ್ರಮೆಯಲ್ಲಿರುವ ಅಸಮರ್ಥರ ಆಡಳಿತದಲ್ಲಾಗಲಿ ಜನ ಸಾಮಾನ್ಯರ ಬದುಕಿನ ಸ್ಥಿತಿಗತಿಗಳು ಹೇಳತೀರದು. ಕ್ಷಣಕ್ಷಣಕ್ಕೂ ಭಯದ ನೆರಳಿನಲ್ಲೇ ಬದುಕು ಸವೆಸುವಂತಹ ಸಂದರ್ಭಗಳೇ ಅಧಿಕವಾಗಿರುತ್ತವೆ.ಅಲ್ಲದೆ ಎತ್ತತ್ತೆಲೂ ಅರಾಜಕತೆ, ಅಸಮಾನತೆ, ಅಮಾನವೀಯತೆಯೇ ತಾಂಡವವಾಡುವಂತಹ ಸ್ಥಿತಿ. ಇಂತಹ ಸಂದಿಗ್ಧ ಪರಿಸ್ಥಿತಿಯ ಸ್ಥೂಲ ಚಿತ್ರಣ ಸಿ.ಜಿ.ಕೆ ನಾಟಕೋತ್ಸವದಲ್ಲಿ ಪ್ರಯೋಗಗೊಂಡ ಡಾ.ಇಂದುದೀಪ್ ಸಿನ್ಹಾ ನಿರ್ದೇಶನದ 'ಕೋಡ್ ರೆಡ್' ನಾಟಕದಲ್ಲಿ ಅನಾವರಣಗೊಂಡಿತು. ಇಡೀ ನಾಟಕವನ್ನು ನೃತ್ಯ ಮತ್ತು ಶೈಲೀಕೃತ ಚೌಕಟ್ಟಿನಲ್ಲಿ ಮನೋವಿಜ್ಞಾನದ ಗುಣಾವಗುಣಗಳೊಂದಿಗೆ ಇರುವ ವಾಸ್ತವ ಕಥೆಯನ್ನೇ ಅದ್ಭುತವಾಗಿ ಹೆಣೆಯಲಾಗಿತ್ತು. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬಳು ನರಳುತ್ತಾ ಆಸ್ಪತ್ರೆ ಸೇರಿ ಜಡಸ್ಥಿತಿಗೆ ತಲುಪಿ ನಿಸ್ತೇಜಗೊಂಡಿರುತ್ತಾಳೆ.ಆದರೆ ಯುದ್ಧಭೂಮಿಯಲ್ಲಿ ಪ್ರತಿನಿತ್ಯ ಆ ಹೆಣಗಳ ರಾಶಿ,ಯುದ್ಧದ ಪರಿಣಾಮಗಳನ್ನು ಸ್ವ ಅನುಭವಗಳಿಂದ ಕಣ್ತುಂಬಿಕೊಂಡು ರೋಸಿ ಹೋಗಿ ಕೊನೆಗೆ ದಾರಿಗಾಣದೆ ಆಸ್ಪತ್ರೆಯೊಂದಕ್ಕೆ ವರ್ಗವಾಗಿ ಬಂದ ಮನಃಶಾಸ್ತ್ರಜ್ಞನ ಒಡನಾಟದಿಂದ ಆ ಶೋಷಿತಳು ಪುನಃ ಜೀವನದಲ್ಲಿ ಹೊಸ ಬೆಳಕನ್ನು ಕಂಡುಕೊಂಡು ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸುತ್ತಾಳೆ.ಇಲ್ಲಿ...
- Get link
- X
- Other Apps
ಕನ್ನಡಿಗರಿಗೆ ತಮಿಳಿನಲ್ಲಿ ತಮಿಳಿನ 'ಅವೈ'ಳ ಕಥೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ನಿರಂತರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಯೋಗದಲ್ಲಿ ಏಪ್ರೀಲ್ ೨೮ ರಿಂದ ಮೇ ೪ ರವರಗೆ ನಡೆಯುತ್ತಿರುವ ಸಿ.ಜಿ.ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ನಿನ್ನೆ ಪ್ರದರ್ಶನಗೊಂಡ ಮೊದಲ ನಾಟಕ ತಮಿಳ್ನಾಡಿನ ಎ.ಮಂಗೈ ನಿರ್ದೇಶನ,ಇಂಕ್ವಿಲಾಬ್ ರಚನೆ ಹಾಗೂ ಮರಪ್ಪಚ್ಚಿ ತಂಡದ "ಅವೈ". ಸಂಗಂ ಕಾಲದಲ್ಲಿನ ಮಹಿಳಾ ಸ್ಥಿತಿ ಗತಿಗಳನ್ನು ಅವೈಯು ತಾನು ತನ್ನ ಹರೆಯ ಮತ್ತು ಮುಪ್ಪಿನಲಿ ಕಂಡುಂಡ ನೈಜ ಅನುಭವಗಳನ್ನು ಕಥೆಯಾಗಿಸಿ ತನ್ನ ಪೀಳಿಗೆಗೆ ಹೇಳುತ್ತಾ ಸಾಗುವ ಸುಂದರ ನಾಟಕವಾಗಿದೆ. ಕಥೆಯನ್ನು ಹೇಳುವ ಮತ್ತು ಕೇಳುವವರೇ ಕಥೆಯೊಳಗೆ ಹೊಕ್ಕು ಅಸ್ವಾಧಿಸುವ ವಿಭಿನ್ನ ಶೈಲಿಯಲ್ಲಿ ರಂಗಕ್ಕೆ ತೆರೆದುಕೊಳ್ಳುತ್ತದೆ. ಆರಂಭದಲ್ಲಿನ ಕಬ್ಬಡಿ ಮತ್ತು ಹಿಮ್ಮೇಳದ ಸಂಗೀತ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು, ಭಾಷೆ ಸಮಸ್ಯೆ ಮತ್ತು ಅಭಿನಯದ ಕೊರತೆಯಿಂದ ನಾಟಕದ ಅಂತ್ಯಕ್ಕೆಲ್ಲಾ ಪ್ರೇಕ್ಷಾಂಗಣವನ್ನು ಸಡಿಲಗೊಳಿಸಿಕೊಂಡಿತು.ನಾಟಕದಲ್ಲಿ ಕೇವಲ ಒಂದು ಬಟ್ಟೆ ಹಾರದಿಂದಲೇ ಅವೈಳ ಕಥೆ ಹರೆಯದಿಂದ ಮುಪ್ಪಿಗೆ ವರ್ಗವಾಗುವ ತಂತ್ರಗಾರಿಕೆ ಮತ್ತು ಯುದ್ಧದಲ್ಲಿ ಮಗನನ್ನು ಕಳೆದುಕೊಂಡು ಸ್ಮಶಾನದ ಗೋರಿ ಮುಂದೆ ತಾಯಿ "ಇವನಿಗೆ ಗರ್ಭಿಣಿ ಇರುವಾಗ ನಾನು ಮಣ್ಣಿನ ರುಚಿ ನೋಡಿದೆ, ಈಗ ಅದೇ ಮಣ್ಣು ಇವನ ರುಚಿ ನೋಡಿತು " ಎಂದು...
- Get link
- X
- Other Apps
ನಿಸರ್ಗವೇ ಸಂಗೀತಾಲಯ- ಕುಲ ಸಚಿವ ಬಿ.ಕೆ.ರವಿ ಪ್ರಪಂಚದಲ್ಲಿ ಅತಿ ಸುಖಿಯಾಗಿ ಇರುವವರೆಂದರೆ ಅದು ಸಂಗೀತಗಾರ ಮಾತ್ರ. ಅಂತೆಯೇ ಸಂಗೀತ ಅಸ್ವಾಧಿಸುವ ಗುಣವುಳ್ಳವನಿಗೆ ನಿಸರ್ಗವೆಲ್ಲ ಸಂಗೀತಮಯವಾಗಿ ಕಾಣುತ್ತದೆ ಎಂದು ಬೆಂ.ವಿ.ವಿ ಕುಲಸಚಿವ ಬಿ.ಕೆ.ರವಿ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರದರ್ಶನ ಕಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ತ್ಯಾಗರಾಜರ ಮತ್ತು ಪುರಂದರದಾಸರ ಆರಾಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಸಂಗೀತಕ್ಕೆ ಸರ್ವಸ್ವವನ್ನು ಮನಸೆಳೆಯುವ ಶಕ್ತಿ ಇದೆ.ಅಂತೆಯೇ ಸಂಗೀತ ಅಸ್ವಾಧಿಸುವ ಮನಸ್ಸುಗಳಿಗೆ ಯಾವುದೇ ಸಂದರ್ಭಗಳನ್ನಾದರೂ ಯಶಸ್ವಿಯಾಗಿ ನಿಭಾಯಿಸುವ ಜಾಣ್ಮೆಯು ಸಹ ಒದಗುತ್ತದೆ ಎಂದು ಹೇಳಿದರು.ನಂತರ ಕುಲಪತಿ ಐ.ಎಸ್.ಶಿವಕುಮಾರ್ ಮಾತಾನಾಡಿ ಸಂಗೀತದ ಭಾಷೆ ಎಲ್ಲ ಭಾಷೆಗಿಂತಲೂ ವಿಭಿನ್ನ ಮತ್ತು ಅನನ್ಯವಾದುದಾಗಿದೆ ಅಂತೆಯೇ ಅದಕ್ಕೆ ವಿಶ್ವಮನ್ನಣೆ ದೊರೆತಿದೆ. ಅಲ್ಲದೆ ಅದರ ಸಾಧಕರಿಗೆ ವಿದ್ವಾನ್, ವಿಧೂಷಿ ಎಂಬ ನಾನಾ ನಾಮಧೇಯ ಇರುವುದು ಎಂದು ಸಂಗೀತದ ಪಾರಿಭಾಷಿಕತೆಯನ್ನು ವಿವರಿಸಿದರು.ಇದೇ ಸಂದರ್ಭದಲ್ಲಿ ಗಾನ ವಿದ್ವಾನ್ ಆರ್.ಕೆ.ಪದ್ಮಾನಾಭನ್ ಮತ್ತು ವಿಭಾಗದ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ನೆಡೆಸಿಕೊಡಲಾಯಿತು.ನಂತರ ಪ್ರೊ ಬಿ.ಎಂ.ಜಯಶ್ರೀ,ವಿದ್ವಾನ್ ಆರ್.ಕೆ.ಪದ್ಮಾನಾಭನ್, ವಿಧೂಷಿ ಟಿ.ಎಸ್.ವಸಂತ ಮಾಧವಿ ಹಾಗೂ ವಿದ್ವಾನ್ ಬಿ.ಸಿ.ಮಂಜುನಾಥ್ ರಿಗೆ ಆಭಿನಂದನೆ ಸಲ್ಲಿಸಲಾಯಿತು.ಅಲ್ಲದೆ ವಿಭಾಗದ ಮುಖ್ಯ...
- Get link
- X
- Other Apps
ಪ್ರೇಕ್ಷಕರ ಮನಗೆದ್ದ 'ಕಕೇಶಿಯನ್ ಚಾಕ್ ಸರ್ಕಲ್' ಮೂರ್ತವಾಗಿಯೋ ಅಮೂರ್ತವಾಗಿಯೋ ಇಡೀ ಸೃಷ್ಟಿಯೇ ಹಣ್ತನದ ಸಂಕೇತ.ಅದರಲ್ಲೂ ತಾಯ್ತನವೆಂಬುದು ಏಕಮೇವವಾದದ್ದು.ಈ ಪ್ರಕೃತಿಯಲ್ಲಿ ಕಲ್ಮಶ ರಹಿತವಾದ ಅಂಶ ಯಾವುದಾದರೂ ಇದ್ದರೇ ಅದು ತಾಯಿಯ ಪ್ರೀತಿ ತುಂಬಿದ ಮಮತೆ ಮಾತ್ರ.ಅವಳ ಹೊರತಾಗಿ ಮತ್ತೊಂದಿಲ್ಲ.ಆ ಮಾತೃಪ್ರೇಮದ ಗುಣಗಾನ ಮಾಡುವ ನಾಟಕವಾಗಿ ಸಿ.ಜಿ.ಕೆ ನಾಟಕೋತ್ಸವದಲ್ಲಿ ಬ್ರೆಕ್ಟ್ ನ 'ಕಕೇಶಿಯನ್ ಚಾಕ್ ಸರ್ಕಲ್ ' ಅನಾವರಣಗೊಂಡಿತು. ಜಾಗತೀಕರಣದ ಭರಾಟೆಯಲ್ಲಿ ಮಾನವೀಯ ಮೌಲ್ಯಗಳೆಲ್ಲ ಮರೆಯಾಗುತ್ತಿರುವ ಪ್ರಸ್ತುತತೆಗೆ ಅತ್ಯಾವಶ್ಯಕ ಎನಿಸುವ ನಾಟಕ ಬಿತ್ತಾರಗೊಂಡು ಪ್ರೇಕ್ಷಕರ ಮನಸೊರೆಗೊಂಡಿದ್ದಂತು ಅಕ್ಷರಶಃ ಸತ್ಯ. ಒಂದು ಮಗುವಿನ ನಿಜವಾದ ತಾಯಿಯನ್ನು ಪತ್ತೆ ಹಚ್ಚುವ ಸಲುವಾಗಿ ಸಾಕುತಾಯಿ ಮತ್ತು ಹೆತ್ತತಾಯಿಯ ನಡುವೆ ನೆಡಯುವಂತಹ ರೋಮಾಂಚಕ ಪ್ರಸಂಗವೇ ನಾಟಕದ ಕಥಾವಸ್ತು. ನಾಟಕ ಸಾಂಪ್ರದಾಯಿಕ ಕಥಾ ನಿರೂಪಣೆ ಶೈಲಿಯಲ್ಲಿಯೇ ಆರಂಭವಾದರೂ ಕ್ರಮೇಣವಾಗಿ ನಾಟಕದ ಗತಿ ಮತ್ತು ಶೈಲಿ ವಿಭಿನ್ನ ಎನ್ನಿಸುತ್ತದೆ. ಕಕೇಶಿಯನ್ ನಲ್ಲಿ ಸದಾಕಾಲ ವೈಭೋಗದಲ್ಲಿದ್ದ ದೊರೆ ಮತ್ತು ಸೊಕ್ಕಿನ ರಾಣಿಗೆ ಮುದ್ದಾದ ಮಗುವಿನ ಜನನ ನಂತರ ವೈರಿಪಡೆಯಿಂದ ದಾಳಿಯಾಗುತ್ತದೆ. ಆಗ ತರಾತುರಿಯಲ್ಲಿ ಮಗುವನ್ನೂ ಬಿಟ್ಟು ಕೇವಲ ತನ್ನ ಐಷರಾಮಿ ವಸ್ತುಗಳೊಂದಿಗೆ ರಾಣಿ ಪಲಾಯನಗೈಯುತ್ತಾಳೆ.ಆದರೆ ಆಸ್ಥಾನದ ದಾಸಿಯ ವಶವಾದ ಮಗು ಅವಳ ಹಾರೈಕೆಯಲ್ಲಿ ಬೆಳೆಯುತ್ತ...