ರಂಗ ಮಾಲಿಕೆ-೪-ರಮೇಶಗೌಡ ಪಾಟೀಲ್



ಬಣ್ಣದ ಬದುಕು..    

        ರಂಗ ಮಾಲಿಕೆ-೪


‘ಬಳ್ಳಾರಿಯ ರಂಗ ಕೌಸ್ತುಭ’ 

ರಮೇಶಗೌಡ ಪಾಟೀಲ್


‘ಬಳ್ಳಾರಿಯ ರಾಘವ’ ಎಂದರೆ ಸಾಕು .ಅವರೊಂದು ಬಳ್ಳಾರಿಯ ‘ರಂಗ ಕಳಸ’ ಎಂತಲೇ ಬಿಂಬಿತವಾಗಿದೆ. ಅವರನ್ನು ಅರಿಯದ ಯಾವೋಬ್ಬ ರಂಗಕರ್ಮಿಯೇ ಇಲ್ಲ.ಏಕೆಂದರೆ ಹವ್ಯಾಸಿ ರಂಗಭೂಮಿಗೆ ಅಡಿಪಾಯ ಹಾಕಿದವರೇ ಬಳ್ಳಾರಿ ರಾಘವರು. ಅಂತವರ ಶಿಲಾರೂಪ ಬಳ್ಳಾರಿ ನಗರದ ಗಡಿಯಾರ ಟವರ್ ಬಳಿ ಕಾಣಬಹುದು.ಆದರೆ ಅವರ ನಿಜರೂಪವನ್ನು ಹೋಲುವವರು ಯಾರಾದರೂ ಇದ್ದರೆ ಅದು ಬಳ್ಳಾರಿ ಖ್ಯಾತ ಉದ್ಯಮಿ ಹಾಗೂ ರಂಗಕರ್ಮಿಯೂ ಆದ ರಮೇಶ್‌ಗೌಡ ಪಾಟೀಲ್‌ರವರು. ಇವರು ಬಳ್ಳಾರಿ ಜಿಲ್ಲೆಯ ವೃತ್ತಿ ಮತ್ತು ಹವ್ಯಾಸಿ ನಾಟಕಗಳಲ್ಲಿ ತೊಡಗಿಸಿಕೊಂಡ ಮಹಾನ್ ವ್ಯಕ್ತಿಯಾಗಿ, ಹಿರಿಯ ನಟರಾಗಿದ್ದಾರೆ. ೫ ದಶಕಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವವನ್ನು ತಂದುಕೊಟ್ಟ ಮಹಾನ್ ಕಲಾವಿದರು. ಬಳ್ಳಾರಿಯ ಪ್ರತಿಷ್ಠಿತರಲ್ಲಿ ಒಬ್ಬರಾದ ಇವರು ಯಾವೂದೇ ಆಹಂ ಇಲ್ಲದೇ ಎಲ್ಲರನ್ನು ಸಜ್ಜನಿಕೆಯಿಂದ ನೋಡುವ ಆಗಾಧ ವ್ಯಕ್ತಿತ್ವವುಳ್ಳ ಶ್ರೇಷ್ಠ ನಟರು. ಬಳ್ಳಾರಿಯ ರಂಗಭೂಮಿ ನಿರ್ಮಾತೃಗಳಲ್ಲಿ ಇವರು ಒಬ್ಬರು ಎಂದರೂ ತಪ್ಪಾಗಲಾರದು.



ರಂಗಭೂಮಿಯೊAದಿಗಿನ ನಂಟು


  ರಮೇಶಗೌಡ ಪಾಟೀಲ್ ಇವರು ಶ್ರೀ ರಾಮನಗೌಡ ಮತ್ತು ಶ್ರೀಮತಿ ಟಿ.ಓಂಕಾರಮ್ಮ ಇವರ ದಂಪತಿಗಳ ಸುಪುತ್ರರಾಗಿ ಉರವಕೊಂಡ ಹತ್ತಿರದ ಲತ್ವಾರ ಗ್ರಾಮದಲ್ಲಿ ೧.೭.೧೯೪೭ರಲ್ಲಿ ಜನಿಸಿದರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಬಳ್ಳಾರಿ ವಾರ್ಡ್ಲ ಹೈಸ್ಕೂಲ್‌ನಲ್ಲಿ ಪಡೆದಿದ್ದಾರೆ. ಐ.ಟಿ.ಐ ಹಾಗೂ ಹಿಂದಿ ಪದವಿ ಗಳಿಸಿದ್ದಾರೆ. ಇವರ ತಂದೆಯು ಸಹ ಕಲಾವಿದರಾಗಿದ್ದರಿಂದ ರಂಗಾಭಿರುಚಿಯು ತಾನಾಗಿಯೇ ಒಲಿದು ಬಂದಿದೆ.  ರಮೇಶಗೌಡ ಪಾಟೀಲರು ಕ್ರಿ.ಶ.೧೯೬೬ರಲ್ಲಿ ರಂಗಭೂಮಿಗೆ ‘ಹರಿದ್ರ ಕುಂಕುಮ’ ನಾಟಕದಿಂದ ಪಾದಾರ್ಪಣೆ ಮಾಡುವ ಮೂಲಕ ರಂಗಯಾತ್ರೆ ಅರಂಭಿಸಿದರು. ಇವರು ಆಂಧ್ರದಲ್ಲಿ ಹುಟ್ಟಿದ್ದರೂ ಯಾವುದೇ ತೆರನಾದ ಭಾಷಾ ಸಮಸ್ಯೆ ಎದುರಾಗಲಿಲ್ಲ. ಏಕೆಂದರೆ ಆಗಲೇ ಇವರ ಶಿಕ್ಷಣ ಬಳ್ಳಾರಿಯ ವಾರ್ಡ್ಲದಲ್ಲಿ ಕನ್ನಡ ಮಾಧ್ಯಮದಲ್ಲಿ ಆರಂಭವಾಗಿತ್ತು.  ನಂತರ ತಾಯಿಯ ಊರು ಬಳ್ಳಾರಿಗೆ ಬಂದು  ಎಂ.ಜಿ ಕಂಪನಿಯಲ್ಲಿ ಸೂಪರ್ ವೈಸರಾಗಿ ಕರ‍್ಯ ನಿರ್ವಹಿಸುವಾಗ ೧೯೭೬ರಲ್ಲಿ ಬಳ್ಳಾರಿಯಲ್ಲಿ ಮೊದಲಿಗೆ ಅಭಿನಯಿಸಿದ ನಾಟಕ ತೆಲುಗಿನ ‘ಪ್ರೇಮ ಸಾಗರ ಮಥನಂ’. ಅಲ್ಲಿಂದ ಆರಂಭವಾದ ಬಳ್ಳಾರಿ ರಂಗಭೂಮಿಯೊAದಿಗಿನ ನಂಟು ನೂರಕ್ಕೂ ಹೆಚ್ಚು ನಾಕಗಳವರೆಗೂ ಹಬ್ಬಿತು. ಹೀಗೆ ರಂಗಯಾತ್ರೆ ಸಾಗುತ್ತಾ “ ಒಮ್ಮೆ ಸುಭದ್ರಮ್ಮನವರ ನೇತೃತ್ವದಲ್ಲಿ ಚಿಕ್ಕೋಡಿಗೆ ರಕ್ತರಾತ್ರಿ ನಾಟಕವಾಡಲು ಹೋದಾಗ ರಕ್ತರಾತ್ರಿ ಎಂದರೆ ಬರೀ ಮೈ ಕಾಣಿಸಿ ಕುಣಿಸುವ ನೃತ್ಯದ ಕರ‍್ಯಕ್ರಮವೆಂದು ಬಗೆದು ಆಸೆಯಿಂದ ಕಾದಿದ್ದ ಜನರಿಗೆ ನಾವೆಲ್ಲರೂ ಮಹಾಭಾರತದ ಪಾತ್ರಗಳಲ್ಲಿ ಕಾಣಿಸಿಕೊಂಡ ಕೂಡಲೇ ರೊಚ್ಚಿಗೆದ್ದುÀ ನಮ್ಮ ಮೇಲೆ ಮುಗಿಬಿದ್ದು ನೃತ್ಯಕ್ಕಾಗಿ ಒತ್ತಾಯಿಸಿದರು. ಆಗ ಗತಿಯಿಲ್ಲದೆ ಶಂಕರ್ ನಾಯ್ಡು ಮತ್ತು ಉಮಾರಾಣಿಯವರಿಂದ ನೃತ್ಯ ಮಾಡಿಸಿ ಬಣ್ಣ ಕಳೆದು  ನಾಟಕವಿಲ್ಲದೆ ಮನೆ ಸೇರಿದ್ದೇವು”  ಎಂದು ಬೇಸರಪಟ್ಟು ನಕ್ಕರು. ಅಂದಿನಿAದಲೇ ಕಲಾವಿದರೆಂದರೆ ಎಲ್ಲ ಸಮಯಕ್ಕೆ ಸಲ್ಲುವ ಯುದ್ದ ಸಾಮಾಗ್ರಿಗಳನ್ನಾಗಿಸುವ ಮತ್ತು ಜಿಲ್ಲೆಯಲ್ಲಿ ವ್ಯವಸ್ಥಿತ ರಂಗಕಲೆಯನ್ನು ಕಟ್ಟಿ ಬೆಳೆಸಲು ಕಂಕಣ ಕಟ್ಟುವ ಸಲುವಾಗಿ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಕಾಲದಲ್ಲಿ ಖ್ಯಾತ ರಂಗನಿರ್ದೇಶಕ ಸಿ.ಬಸವಲಿಂಗಯ್ಯನವರನ್ನು ಬಳ್ಳಾರಿಗೆ ಕರೆತಂದು ವಿಭಿನ್ನ ಶೈಲಿಯಲ್ಲಿ ’ಅಂಧಯುಗ’ ನಾಟಕವನ್ನು ಮಾಡಿಸಿ ಯುವಕರಿಗೆ ಅವಕಾಶ ನೀಡಿದ್ದರು. ಅಲ್ಲದೆ ಸ್ವತಃ ಕೈಯಿಂದಲೇ ಹಣ ಸಹಾಯವನ್ನು ಮಾಡಿದ್ದರು. ಅಲ್ಲದೇ ಅಕಾಡಮೆ ಸದಸ್ಯರಾಗಿದ್ದಾಗ ಜಿಲ್ಲೆಯ ಎಲೆ ಮರೆಯ ರಂಗಜೀವಿಗಳಿಗೆ ಅಕಾಡಮೆ ಪ್ರಶಸ್ತಿಯನ್ನು ದೊರಕಿಸುವಲ್ಲಿ ಪ್ರಮುಖರಾಗಿದ್ದಾರೆ. ಆ ಮೂಲಕ ಸುಮಾರು ೫೦ ರ‍್ಷಗಳ ಕಾಲ ಜಿಲ್ಲೆಯಾದ್ಯಂತ ರಂಗಕಲೆಯನ್ನು ಪಸರಿಸಿದ್ದಾರೆ.  ಹರಿದ್ರ ಕುಂಕುಮ ನಾಟಕದಿಂದ ಇಲ್ಲಿಯವರೆಗೂ ಹಿಂದೆ ತಿರುಗಿ ನೋಡದೆ ಸಾವಿರಾರು ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ.

    ತಮ್ಮ ವಿಧ್ಯಾಭ್ಯಾಸದ ಜೊತೆಗೆ ರಂಗಭೂಮಿಯನ್ನು ಪೂರೈಸಿಕೊಂಡು ಯಾವುದೇ ವೃತ್ತಿ, ಹವ್ಯಾಸಿ ರಂಗಭೂಮಿಯೆAಬ ಚೌಕಟ್ಟಿಲ್ಲದೇ ರಂಗಪಯಣ ಮಾಡಿದರು. ಅಂತೆಯೇ ನೂರಾರು ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೇ ಬಹುತೇಕ ಪಾತ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಕೀರ್ತಿ ಇವರದು. ಮೊದಮೊದಲು ಸಣ್ಣ ಪುಟ್ಟ ವೇದಿಕೆಗಳಲ್ಲಿ ಅಭಿನಯಿಸಿದ ಪಾಟೀಲರು ತಮ್ಮ ರಂಗ ಚತುರತೆಯ ವರ್ಚಸ್ಸಿನಿಂದ ಹಂಪಿ ಉತ್ಸವದ ವೇದಿಕೆಗಳಲ್ಲಿ ಶ್ರೀಕೃಷ್ಣ, ದುರ್ಯೋಧನ, ಅಶ್ವತ್ಥಾಮ, ಬುದ್ಧ, ಶ್ರೀನಿವಾಸ, ಹರಿಶ್ಚಂದ್ರ, ಕನಕದಾಸ, ಪುರಂದರದಾಸ, ಶ್ರೀಕೃಷ್ಣದೇವರಾಯ, ಟಿಪ್ಪು ಸುಲ್ತಾನನಾಗಿ ಹಲವಾರು ಬಗೆ ಬಗೆಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಹೆಸರು ಗಳಿಸುವ ಮೂಲಕ ಕ್ರಿ.ಶ.೧೯೮೪ರಲ್ಲಿ ಹಂಪಿಯಲ್ಲಿ ನೆಡೆದ ಭಾರತ ಸರ್ಕಾರದ ಅಡಿಯಲ್ಲಿ ೪೦ ದಿನಗಳ ಕಾಲ ನಡೆದ ಧ್ವನಿ ಮತ್ತು ಬೆಳಕು ಕರ‍್ಯಕ್ರಮದಲ್ಲಿ ೪೦ ದಿನಗಳ ಕಾಲ ಶ್ರೀ ಕೃಷ್ಣದೇವರಾಯನಾಗಿ ಅಭಿನಯಿಸಿ ತಾವು ಕಲಾ ಧೀಮಂತರೆAದು ಪ್ರತೀತಿ ಗಳಿಸಿದರು. ಇದಲ್ಲದೇ ಪಾಟೀಲರ ರಂಗವೈಶಿಷ್ಟö್ಯವೆAದರೆ ಸಾಮಾಜಿಕ ನಾಟಕದಲ್ಲಿ ಅತ್ಯಾದ್ಭುತವಾಗಿ ನೃತ್ಯ ಮಾಡುವ ಮಾಲಕ ಜಿಲ್ಲೆಯ ಎಲ್ಲ ರಂಗ ರ‍್ತಕಿಯರನ್ನು ಮೀರಿಸಿ ‘ಕಲಾ ರಸಿಕ’ರೆನಿಸಿದ್ದಾರೆ. ಅಲ್ಲದೇ ಹಿರಿಯ ರಂಗಕರ್ಮಿ ಬೆಳಗಲ್ಲು ವೀರಣ್ಣನವರಿಂದ ಹಿಡಿದು ಉದಯೋನ್ಮುಖ ನಿದೇರ್ಶಕ ಅಣ್ಣಾಜಿ ಕೃಷ್ಣಾರೆಡ್ಡಿಯವರಂತಹ ನಿದೇರ್ಶನದಲ್ಲಿ ಅಭಿನಯಿಸಿ ಕಲಾಬೇಧವನ್ನು ದೂರ ಮಾಡಿದ್ದಾರೆ. ಅಲ್ಲದೇ ಎಷ್ಟೋ ಬಡ ಕಲಾವಿದರ ಬವಣೆಗಳ ನಿವಾರಣೆಗಾಗಿ ಧನ ಸಹಾಯ ನಾಟಕಗಳಲ್ಲಿ ಉಚಿತವಾಗಿ ಅಭಿನಯಿಸಿ ತಾವೂ ಸಹಾಯ ಮಾಡುವಂತಹ ಗುಣವಂತರೂ ಎಂದು ನಿರೂಪಿಸಿದ್ದಾರೆ.

ಅಭಿನಯಿಸಿದ ಏಕಾಂಕ ನಾಟಕಗಳು

ಹರಿದ್ರಾ ಕುಂಕುಮ, 

ರಕ್ಷಾ ಬಂಧನ,

ಶಾಸ್ತç ಸುಳ್ಳೇ, 

ಎರಡು ಬೇಕು ಮೂರು ಸಾಕು, 

ಸಾಷ್ಟಾಂಗ ನಮಸ್ಕಾರ, 

೩೬ ಅಲ್ಲ ೬೩,

ಕರ್ನಾಟಕ ರಮಾರಮಣ, 

ವರದಕ್ಷಿಣೆ.... ಇತರ ನಾಟಕಗಳು.


ಅಭಿನಯಿಸಿದ ಪೌರಾಣಿಕ ನಾಟಕಗಳು

ಮಹಾರಥಿ ಕರ್ಣ,

ರಕ್ತರಾತ್ರಿ, 

ಕುರುಕ್ಷೇತ್ರ, 

ಬಬ್ರುವಾಹನ, 

ಉತ್ತರ ಭೂಪ, 

ರಾಜಾ ಸತ್ಯ ಹರಿಶ್ಚಂದ್ರ, 

ಶ್ರೀನಿವಾಸ ಕಲ್ಯಾಣ, 

ಮೋಹಿನೀ ಭಸ್ಮಾಸುರ, 

ನಾರದ ವಿನೋದ, 

ನಾರದ ಗರ್ವಭಂಗ ...... ಮುಂತಾದವುಗಳು.


ಅಭಿನಯಿಸಿದ ಐತಿಹಾಸಿಕ ನಾಟಕಗಳು

ಟಿಪ್ಪು ಸುಲ್ತಾನ್, 

ಕರ್ನಾಟಕ ರಮಾರಮಣ, 

ಭಕ್ತ ಕನಕದಾಸ, 

ಪುರಂದರದಾಸ, 

೫ ಕಲ್ಯಾಣದಣ್ಣ ಬಾರೋ ಬಸವಣ್ಣ

ಕರ್ನಾಟಕ ಸಾರ್ವಭೌಮ ಶ್ರೀಕೃಷ್ಣ ದೇವರಾಯ

ಸಾಕ್ರಟೀಸ್ 

ಸಾಯದವನ ಸಮಾದಿ.


ಅಭಿನಯಿಸಿದ ಸಾಮಾಜಿಕ ನಾಟಕಗಳು :

ರತ್ನ ಮಾಂಗಲ್ಯ, 

ಮಾತು ಆಡಿದರೆ ಆಯ್ತು, ಮುತ್ತು ಹೊಡೆದರೆ ಹೋಯ್ತು

ಅಣ್ಣ ತಂಗಿ,

ದಾರಿ ದೀಪ, 

ತಾಳಿ ಇಲ್ಲದೆ ತಾಯಿಯಾದರೆ, 

ಬಂಜೆ ತೊಟ್ಟಿಲು, 

ಗೌಡ್ರ ಗದ್ಲ, 

ಮುಂಡೇ ಮಗ 

ಧರ್ಮ ದೇವತೆ, 

ಧರ್ಮಜ್ಯೋತಿ, 

ಆಶಾ-ಲತ, 

ಪ್ರೇಮದ ಬಲೆ ಪ್ರಾಣ, 

ಕುಂಕುಮ ತಂದ ಕೈಲಾಸ, 

ಮಗಳಾಗಿ ಬಂದಳು ಸೊಸೆಯಾಗಿ ನಿಂತಳು, 

ಅಂಧಯುಗ, 

ಯಾರಿಗೆಬೇಕು ನಿನ್ನ ಕವಿತೆ.... ಮುಂತಾದವುಗಳು.


ಅಭಿನಯಿಸಿದ ಧಾರ್ಮಿಕ ನಾಟಕಗಳು :

ಹೇಮರೆಡ್ಡಿ ವiಲ್ಲಮ್ಮ,

ಜಗಜ್ಯೋತಿ ಬಸವೇಶ್ವರ,

ಸತ್ಕಾರ್ಯ ಪುರುಷ ಸಕ್ಕರೆ ಕರಡೀಶ, 

ರಾಮಕೃಷ್ಣ ಪರಮಹಂಸ, 

ಹೃದಯ ದೇಗುಲ, 

 ಕಲ್ಯಾಣ ಕ್ರಾಂತಿ ..... ಮುಂತಾದ ನಾಟಕಗಳ ಅಭಿನಯ.



ಅನ್ಯಭಾಷೆಯೊಂದಿಗೆ ಪಾಟೀಲರು

     ತಂದೆ ಆಂಧ್ರದವರಾಗಿದ್ದರಿAದ ತೆಲುಗು ಮತ್ತು ತಾಯಿ ಕನ್ನಡತಿಯಾಗಿದ್ದರಿಂದ ಕನ್ನಡ ಬಲ್ಲವರಾಗಿದ್ದರು. ಅಂತೆಯೇ ಪಾಟೀಲರು ಕೇವಲ ಕನ್ನಡ ಒಂದೇಯಲ್ಲದೆ ತೆಲುಗು ಭಾಷೆಯಲ್ಲಿಯು ಅನೇಕ ನಾಟಕಗಳಿಗೆ ಬಣ್ಣ ಹಚ್ಚಿರುವುದನ್ನು ಇಲ್ಲಿ ಉದಾಹರಿಸಬಹುದು. ಈ ಮೂಲಕ ದ್ವಿ ಭಾಷಾ ಪ್ರವೀಣರೆನಿಸಿದ್ದಾರೆ.

ವಿಷಾದ ಸಾರಂಗಧರ, 

ಬಾಲ ನಾಗಮ್ಮ, 

ಒಕೇ ರಕ್ತಂ, 

ಪ್ರೇಮಸಾಗರ ಮಥನಂ, 

ಸಂಭವಾಮಿ ಪದೇ ಪದೇ, 

ಕುರುಕ್ಷೇತ್ರಂ, 

ಶ್ರೀರಾಮ ಪಾದುಕಾ ಪಟ್ಟಾಭಿಷೇಕಂ,

ಪದ್ಮವ್ಯೂಹA, 

ಧೃತರಾಷ್ಟçಕೌಗಿಲಿ ...... ಮುಂತಾದ ನಾಟಕಗಳು.


ಬೆಳ್ಳಿತೆರೆ / ಕಿರುತೆರೆಯೊಂದಿಗೆ ಪಾಟೀಲರ ನಂಟು

  ಪಾಟೀಲರ ರಂಗ ಪ್ರಪಂಚ ವಿಸ್ತಾರಗೊಳ್ಳುತ್ತಾ ಗೊಳ್ಳುತ್ತಾ ತಮ್ಮ ನಟನಾ ಸಾಮರ್ಥ್ಯವನ್ನು ಕೆಲವು ಚಲನಚಿತ್ರ ಮತ್ತು ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಉಣ ಬಡಿಸಿ ಪ್ರೇಕ್ಷಕಕರ ಮನಗಳನ್ನು ಹೊಕ್ಕರು. ಆದರೆ ಕೊನೆಗೆ ರಂಗಬದುಕಿನ ಶ್ರೇಷ್ಟತೆಯನ್ನು ಅರಿತು ಸಿನಿರಂಗಕ್ಕೆ ಬೆನ್ನುತೋರಿ ಪುನಃ ರಂಗಭೂಮಿಗೆ ಮುಖಾಮುಖಿಯಾದರು.

ಬೆಳ್ಳಿನಾಗ, 

ಹತ್ಯಾಕಾಂಡ, 

ಕೆಂಪು ನಿಶಾದಿ, 

ಅಂತರಾಳ, 

ಉಗ್ರಗಾಮಿ .... ಇನ್ನಿತರೆ.


ದೂರದರ್ಶನದಲ್ಲಿ ಅಭಿನಯ :

    ಇದಲ್ಲದೇ ದೂರದರ್ಶನ ವಾಹಿನಿಯಲ್ಲಿ “ರಕ್ತರಾತ್ರಿ” ಯಲ್ಲಿ “ಶ್ರೀಕೃಷ್ಣ”ನ ಪಾತ್ರ , “ಶ್ರೀ ಗುರುರಾಘವೇಂದ್ರ ವೈಭವ”ದಲ್ಲಿ “ಕೃಷ್ಣಪ್ಪನಾಯಕ”ನ ಪಾತ್ರ ಮತ್ತು ಉದಯ ವಾಹಿನಿಯ ಮಾತಿನ ಮಂಟಪ ಕರ‍್ಯಕ್ರಮದಲ್ಲಿ ಭಾಗವಹಿಸಿ ‘ರಂಗ ಚತುರ’ಎನಿಸಿದ್ದಾರೆ.


ಗೌರವ ಮತ್ತು ಪುರಸ್ಕಾರಗಳು

  ಪಾಟೀಲರು ಹಿರಿತೆರೆ, ಕಿರುತೆರೆ,ರಂಗಭೂಮಿ ಎಂಬದೆ ಎಲ್ಲಾ ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸಿ ಇಂದಿಗೂ ರಂಗಕಾರ್ಯವನ್ನು ಮಾಡುತ್ತಿದ್ದಾರೆ. ಇವರ ನಿಸ್ವರ‍್ಥ ರಂಗ ಸೇವೆಯನ್ನು ಗುರುತಿಸಿದ ಅನೇಕ ಸಂಘ - ಸಂಸ್ಥೆಗಳಾದ ರಾಘವ ಮೆಮೋರಿಯಲ್ ಅಸೊಸಿಯೇಷನ್, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟಿçÃಸ್, ವೈ.ನಾಗೇಶ ಶಾಸ್ತಿç ಸಾಹಿತ್ಯ ಸಂಘ, ವೀರಶೈವ ವಿದ್ಯಾವರ್ಧಕ ಸಂಘ, ರಾಘವ ರಂಗ, ಬಳ್ಳಾರಿ ಕಲ್ಚರಲ್ ಅಸೊಸಿಯೇಷನ್, ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಸದಸ್ಯತ್ವವನ್ನು ಇನ್ನು ಕೆಲವು ಸಂಸ್ಥೆಗಳನ್ನು ಉನ್ನತ ಹುದ್ದೆ ನೀಡಿ ಗೌರವ ಸೂಚಿಸಿವೆ. ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಅಕಾಡೆಮಿ ಪ್ರಶಸ್ತಿ, ಬಳ್ಳಾರಿಯ ಬಹುತೇಕ ಸಂಸ್ಥೆಗಳ ರಂಗ ಗೌರವ ಮತ್ತು ಕರ್ನಾಟಕÀ ರಂಗ ಸಂಗೀತ ಪರಿಷತ್ (ರಿ), ಬೆಂಗಳೂರು ಇವರು ರಾಜ್ಯ ಮಟ್ಟದ “ರಂಗ ಕೌಸ್ತುಭ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಸಿವೆ.

  ಬಳ್ಳಾರಿಯ ಕಲಾ ಮನಸ್ಸುಗಳಲ್ಲಿ ದಿ.ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟಕದಲ್ಲಿ ಅಶ್ವತ್ಥಾಮನ ಪಾತ್ರವೆಂದರೆ ಸಾಕು ಇಂತವರೇ ಮಾಡುತ್ತಾರೆ ಎಂದು ಹೇಳುವಷ್ಟರಮಟ್ಟಿಗೆ ಅದ್ಭುತ ಅಭಿನಯ ಸಾಮರ್ಥ್ಯವನ್ನು ಶ್ರೀಯುತರು ಪಡೆದಿದ್ದಾರೆ. ಸಾಂಪ್ರದಾಯಿಕವಾಗಿ ಯಾವುದೇ ಗುರುವಿನ ಬಳಿ ಹೋಗದೆ ಕೇವಲ ಏಕಲವ್ಯರಂತೆ ಖ್ಯಾತನಟ ದಿ.ಸುದೀರ್, ಲಿಂ.ವೇ.ಮೂ. ಎಲೆ ಮರುಳಸಿದ್ಧಯ್ಯ ಸ್ವಾಮಿ ಮತ್ತು  ಬೆಳಗಲ್ಲು ವೀರಣ್ಣನವರ ಅಭಿನಯವನ್ನು ನೋಡಿ ಕೆಲವು ಮಾರ್ಗದರ್ಶನದ ಮುಲಕ ರಂಗಭೂಮಿಯಲ್ಲಿ ಸೇವೆ ಮಾಡಿದ್ದೇನೆ ಎಂದು ಇಂದಿಗೂ ಆದರೀಣಿಯವಾಗಿ ನುಡಿಯುವ ಸರಳ ಸಜ್ಜನಿಕೆಯ ವ್ಯಕ್ತಿತ್ವ ಶ್ರೀಯುತರದು. ಅಲ್ಲದೇ ತಮ್ಮೆಲ್ಲಾ ರಂಗ ಸಾಧನೆಗೆ ಕಾರಣೀಭೂತರಲ್ಲಿ ತಮ್ಮ ಮಡದಿ ಗಂಗಮ್ಮ ಪಾಟೀಲರು ಒಬ್ಬರೆಂದು ಹೆಮ್ಮೆಯ ನುಡಿಯನ್ನಾಡುವರು. ತಮ್ಮ ಆಗಾಧವಾದ ಪ್ರತಿಭೆಯ ಮೂಲಕ ಇಂದಿನ ಉದಯೋನ್ಮಖ ಕಲಾವಿದರ ಹಾದಿಗೆ ಬೆಳಕಾಗಿ ನಿಂತಿರುವ ರಂಗ ಚೇತನರಲ್ಲಿ ರಮೇಶಗೌಡ ಪಾಟೀಲರು ಒಬ್ಬರಾಗಿದ್ದಾರೆ.“ಯಾವುದೇ ಕಲಾವಿದರಾಗಲಿ ಬೆಳೆದೆನೆಂಬ ಆಹಂಕಾರ ಅವನಲ್ಲಿ ಒಡ ಮೂಡಿದ ಕೂಡಲೇ ಅವನ ಅಧಃಪತನ ಆರಂಭವಾದAತೆ”ಎAಬ ಅಮೂಲ್ಯವಾದ ನುಡಿಗಳನ್ನು ಇಂದಿನ ಉದಯೋನ್ಮುಖ ಕಲಾವಿದರಿಗೆ ಇವರ ಹಿತನುಡಿ.

ಇವೆಲ್ಲದರ ನಡುವೆ ನಮ್ಮ ಘನ ಸರ್ಕಾರ ಐದತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಮಾಡಿದವರಿಗೆ ರಾಜ್ಯೋತ್ಸವದಂತಹ ಆಗಮ್ಯ ಪ್ರಶಸ್ತಿಗಳನ್ನು ನೀಡುತ್ತಿದೆ. ಆದರೆ ಐದಾರು ದಶಕಗಳಿಂದ ನಿಸ್ವರ‍್ಥ ರಂಗಸೇವೆಯನ್ನು ಮಾಡುತ್ತಲೆ ಇರುವ ರಮೇಶಗೌಡ ಪಾಟೀಲರಿಗೇಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿಲ್ಲ. ಈ ವಿಚಾರದಲ್ಲಿ ‘ಕಲಾವಿದರನ್ನು ಜಾತಿ ಮಾನದಂಡದಿAದ ಅಳೆಯುವದನ್ನು ಬಿಟ್ಟು ಕಲಾ ನೈಪುಣ್ಯೆತೆಯ ಮಾನದಂಡದ ಮೂಲಕ ಗೌರವಿಸಿ,ಸತ್ಕರಿಸಿ’ ಎಂದು ನೋವಿನ ನುಡಿಗಳನ್ನು ಹೇಳಿ ಪಾಟೀಲರು ಅನುಭವಧಾರೆಗೆ ಪೂರ್ಣ ವಿರಾಮವಿಟ್ಟರು. 

ಇನ್ನಾದರೂ ಇಂತಹ ಹಿರಿಯ ರಂಗ ದಿಗ್ಗಜರಿಗೆ ಸೂಕ್ತ ಗೌರವ ,ಮನ್ನಣೆ ದೊರೆಯುವಂತಾಗಲಿ ಎಂದು ಈ ಮೂಲಕ ನಾವೂ ನೀವೂ ಶುಭ ಹಾರೈಸೋಣ. ಇಲ್ಲದಿದ್ದದರೆ ಇಂತವರ ಸಾಧನೆಗಳು ಮೂಲೆ ಸೇರಿ ಮುಂದಿನ ಪೀಳಿಗೆಗೆ ಕೇವಲ ಪಳಿಯುಳಿಕೆಗಳಾಗುವುದರಲ್ಲಿ ಸಂದೇಹವಿಲ್ಲ.


Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.