ರಂಗ ಮಾಲಿಕೆ-೨ ಬಯಲಾಟ ಉಷಾರಾಣಿ
ಬಣ್ಣದ ಬದುಕು..
ರಂಗ ಮಾಲಿಕೆ-೨
‘ರಂಗ ಮಯೂರಿ’
ಬಯಲಾಟ ಉಷಾರಾಣಿ
ರಂಗಭೂಮಿಯಲ್ಲಿ ಮೊದಲೆಲ್ಲಾ ಸ್ತಿçà ಪಾತ್ರಗಳನ್ನು ಸಹ ಗಂಡಸರೇ ಮಾಡುತ್ತಿದ್ದರು. ಆದರೆ ಕಾಲಕ್ರಮೇಣ ಸ್ತಿçà ಪಾತ್ರಗಳನ್ನು ಸ್ತಿçÃಯರೇ ಮಾಡುವಂತಾದದ್ದು ಸೋಜಿಗವೇ ಸರಿ. ಅದೂ ಆದದ್ದು ೨೦ನೇ ಶತಮಾನದಲ್ಲಿ. ಸ್ತಿçÃಯರಿಗಿದ್ದ ಹಲವು ಕಟ್ಟಳೆಗಳನ್ನು ಒಡೆದುಕೊಂಡು ಬರುವ ಸಾಹಸವನ್ನು ಮೊದ ಮೊದಲು ವೃತ್ತಿ ರಂಗಭೂಮಿಯಲ್ಲಿ ಕಂಡು ಬಂತು. ತದ ನಂತರ ಗ್ರಾಮೀಣ ಭಾಗದ ಜನಪದ ಕಲೆಗಳಾದ ಬಯಲಾಟಗಳಿಗೂ ಅನ್ವಯಿಸಿತು. ಆದರೆ ಅಲ್ಲಿಯು ಮಡಿವಂತಿಕೆಯಿAದಾಗಿ ಕೇವಲ ದಲಿತ ವರ್ಗದ ಮಹಿಳೆಯರು ಹೊಟ್ಟೆ ಪಾಡಿಗಾಗಿ ತಮ್ಮಲ್ಲಿದ್ದ ಕಲೆಯನ್ನು ಆಶ್ರಯಿಸಿದರು. ಅಲ್ಲದೇ ಯವ್ವನದಲ್ಲಿ ರಂಗ ತಂಡದ ಕಲಾವಿದರೊಬ್ಬರನ್ನು ವರಿಸಿ ಅವರನ್ನೇ ಮದುವೆಯಾಗಿ ನಂತರ ಗಂಡನು ದುಶ್ಚಟಗಳಿಗೆ ಬಲಿಯಾಗಿ ಸಂಸಾರ ತೂಗಿಸಲು ಆಗದೇ ಕೈ ಚೆಲ್ಲಿ ಕುಳಿತಾಗ ಮಡದಿಯಾದವಳು ಮತ್ತೆ ಜೀವನ ಪೊರೆಯುವುದಕ್ಕಾಗಿ ಕಲೆಯನ್ನು ನಂಬಿಕೊಳ್ಳುವುದು. ಆದರೆ ಇನ್ನು ಕೆಲವು ಕಲಾವಿದೆಯರು ಹರೆಯದಲ್ಲಿ ಆ ಪಾತ್ರ ಈ ಪಾತ್ರ ಎನ್ನದೇ ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ರಂಗಭೂಮಿಯಲ್ಲಿ ರಾಣಿಯಂತೆ ಮೆರೆದ ಅದೆಷ್ಟೋ ಸ್ತಿçà ಕಲಾವಿದರು, ಇಂದು ಯಾವುದೋ ಕಿರಾಣಿ ಅಂಗಡಿಯನ್ನೋ, ವ್ಯಾಪಾರವನ್ನೋ ಆಶ್ರಯಿಸಿ ಬದುಕುವಂತಾದದ್ದು ರಂಗಭೂಮಿಯಲ್ಲಿ ಸರ್ವೇ ಸಾಮಾನ್ಯವೆನಿಸಿದೆ. ಇಂತಹ ಕಥೆಗಳನ್ನು ಅಲ್ಲಿ ಇಲ್ಲಿ ಕಂಡಿರಬಹುದು, ಕೇಳಿರಬಹುದು. ಆದರೆ ನಮ್ಮ ಕಣ್ಣೆದುರಿಗೆ ಬದುಕುತ್ತಿರುವ ಮತ್ತು ಎಲೆ ಮರೆ ಕಾಯಿಯಂತೆ ಬದುಕು ಸವೆಸುತ್ತಿರುವ ಹಲವು ಹಿರಿಯ ಕಲಾ ಮನಸ್ಸುಗಳಲ್ಲಿ ಒಬ್ಬರು ಬಳ್ಳಾರಿಯ ಬಯಲಾಟ ಉಷಾರಾಣಿಯವರು.
ಉಷಾರಾಣಿಯವರು ಸಂಡೂರಿನಲ್ಲಿ ಕ್ರಿ.ಶ.೧೯೫೫ರಲ್ಲಿ ತಂದೆ ಹುಚ್ಚಪ್ಪ ಮತ್ತು ತಾಯಿ ಭೀಮಮ್ಮ ರವರ ಮಗಳಾಗಿ ಜನಿಸಿದರು. ಇವರ ಮೊದಲ ಹೆಸರು ಹುಸೇನಮ್ಮ. ಬಯಲಾಟ ಕಲಾವಿದೆಯಾದ ಮೇಲೆ ಇವರ ಅಭಿಮಾನಿಗಳೆಲ್ಲಾ ಹಳ್ಳಿಗಳಲ್ಲಿ ಅಭಿನಯಿಸಲು ಹೋದಾಗ ಉಷಾರಾಣಿ ಎಂದು ಕರೆಯ ತೊಡಗಿದರು. ಅದೇ ಹೆಸರು ಇಂದಿಗೂ ಅವರನ್ನು ಸಾಕಿ ಸಲುಹುತ್ತಿದೆ. ಇವರು ಬಾಲ್ಯವನ್ನು ಅಲೆಮಾರಿಯಾಗಿ ಕಳೆದರು. ಕಾರಣ ತಂದೆ ತಾಯಿ ಗಾರೆ ಕೆಲಸವನ್ನೇ ಮೆಚ್ಚಿಕೊಂಡಿದ್ದರು. ಅಂತೆಯೇ ಬಳ್ಳಾರಿಗೆ ದುಡಿಯಲು ಉಷಾರಾಣಿಯವರ ಕುಟುಂಬ ಬಂದು, ಗಾರೆಯವರಾಗಿದ್ದ ಇವರ ತಂದೆ ಮೇಸ್ತಿçಯಾದರು ಹೀಗೆ ಕಾಲ ಕ್ರಮೇಣವಾಗಿ ಅಲೆಮಾರಿತನ ಬಿಟ್ಟು ಬಳ್ಳಾರಿಯಲ್ಲಿಯೇ ನೆಲೆ ನಿಂತರು.
ಬದುಕಿಗೆ ಬಣ್ಣ ಹಚ್ಚಿಕೊಂಡಿದ್ದು..
ಈಗಿರುವಾಗ ೧೦ನೇ ವಯಸ್ಸಿನಲ್ಲಿದ್ದ ಉಷಾರಾಣಿಯವರು ಮೊಹರಂ ಹಬ್ಬದ ದಿನದಂದು ದೇವರುಗಳ ಸವಾರಿಯ ಸಮಯದಲ್ಲಿ ಹುಡುಗರ ಜೊತೆ ತುಂಬಾ ಅದ್ಭುತವಾಗಿ ಕುಣಿಯುತ್ತಿದ್ದ ಮಗಳನ್ನು ಕಂಡು ಅವರ ತಂದೆ ೧೨ನೇ ವಯಸ್ಸಿನ ಹುಡುಗಿಯನ್ನು ಬಯಲಾಟದಲ್ಲಿ ಅಭಿನಯಿಸಲು ಸೇರಿಸಿದರು. ಆಗ ಅವರ ನೃತ್ಯಗಳಿಗೆ ಮೆಚ್ಚಿ ೨೦-೩೦ ರೂಪಾಯಿಗಳನ್ನು ಕೊಡುತ್ತಿದ್ದರು. ಆಗ ಸ್ವಲ್ಪ ಅಭಿನಯ ಮಾಡುವ ಅವಕಾಶಗಳು ಬರಲು ಆರಂಭವಾದುದರಿAದ ಕೊಳಗಲ್ಲು ವೀರಯ್ಯನವರ ಸಹಾಯದಿಂದ ಸಂಭಾಷಣೆಗಳನ್ನು ಹೇಳಿಸಿಕೊಂಡು ನಾಟಕಕ್ಕೆ ಬಣ್ಣ ಹಚ್ಚಿದರು. ಈ ಮೂಲಕ ಕೊಳಗಲ್ಲು ವೀರಯ್ಯನವರನ್ನು ಗುರುಗಳನ್ನಾಗಿ ಸ್ವೀಕರಿಸಿ ಮೊದಲ ನಾಟಕ ದುಶ್ಯಾಸನ ಕಥೆ ಯಲ್ಲಿ ಗಾಂಧಾರಿ ಯ ಪಾತ್ರ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡರು. ಅಲ್ಲಿಂದ ತುಂಬಾ ಅವಕಾಶಗಳು ಬರಲಾರಂಭಿಸಿದವು.
ಗರ್ಭಿಣಿಯಾಗಿದ್ದಾಗಲೂ ನಟಿಸಿದ ದಿಟ್ಟ ಕಲಾವಿದೆ
ಕಲಾವಿದೆಯಾದ ಮೇಲೆ ಅವರನ್ನು ಜನರು ಕಾಣುವ ದೃಷ್ಠಿಕೋನ ಇಂದಿನ ಕಾಲದಲ್ಲೇ ಶೋಚನೀಯವಾಗಿರುವಾಗ ಇನ್ನೂ ಆಗ ಮಡಿವಂತಿಕೆಯ ಕಾಲದಲ್ಲಿ ಅಸಾಧ್ಯವೆನಿಸಿತ್ತು. ಆದರೆ ಇವರಿದ್ದ ರಂಗ ತಂಡದ ಹರ‍್ಮೋನಿಯಂ ಕಲಾವಿದರಾಗಿದ್ದ ಶೇಖಣ್ಣರು ಇವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು. ಮದುವೆಯಾದ ನಂತರವೂ ಇಬ್ಬರು ನಾಟಕಗಳಿಗೆ ಹೋದರು.ಆದರೆ ಕ್ರಮೇಣವಾಗಿ ಗಂಡನ ಬೇಡಿಕೆ ಕಡಿಮೆಯಾಗುತ್ತಲೇ ಬದುಕನ್ನು ತೂಗಿಸುವುದಕ್ಕಾಗಿ ತಾವು ಗರ್ಭಿಣಿಯಾಗಿದ್ದಾಗಲೂ ನಟಿಸಿದ ಉದಾಹರಣೆಗಳಿವೆ. ಇವರು ೩ ಮತ್ತು ೪ನೇ ಮಗುವಿನ ಗರ್ಭಿಣಿಯಾಗಿದ್ದಾಗ ಸಿರುಗುಪ್ಪ ತಾಲೂಕಿನ ಬೈರಗಾಮದಿನ್ನೆಯಲ್ಲಿ ಪಾಂಡು ವಿಜಯ ನಾಟಕದಲ್ಲಿ ಭಾನಾಮತಿ, ಸುಬೀಷ್ಣೆ, ಪದ್ಮಗಂಧಿ ಎಂಬ ಮೂರು ಪಾತ್ರಗಳನ್ನು ಮತ್ತು ಅಲ್ಲಿಪುರದಲ್ಲಿ ಅಭಿಮನ್ಯು ಕಾಳಗದಲ್ಲಿ ದ್ರೌಪದಿ, ಉತ್ತರೆ, ಕನಕಾಂಗಿ, ಸುಭದ್ರೆ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಧೀಮಂತೆ ಕಲಾವಿದೆಯಾಗಿದ್ದಾರೆ. ಕಲಾವಿದೆ ಉಷಾರಾಣಿಯವರೀಗ ಒಟ್ಟು ೧೦ ಮಕ್ಕಳ ತಾಯಿಯಾಗಿದ್ದಾರೆ.
ಅಭಿಮಾನಿಗಳೇ ಕಲಾವಿದರ ದೇವರು
ನಾಟಕಗಳಲ್ಲಿ ಕ್ರಮೇಣವಾಗಿ ಉಷಾರಾಣಿಯವರಿಗೆ ಮಾತ್ರ ಅವಕಾಶಗಳು ಒದಗಿ ಬರಲಾರಂಭಿಸಿದವು. ಅಂತೆಯೇ ನಿರುದ್ಯೋಗಿಯಾದ ಶೇಖಣ್ಣನವರು ಮನೆಯಲ್ಲಿ ಮಕ್ಕಳ ಆಸರೆಗಾಗಿ ಉಳಿಯ ಬೇಕಾಯಿತು. ಆದರೆ ಕುಟುಂಬದ ನಿರ್ವಹಣೆಗೆ ಉಷಾರಾಣಿಯೊಬ್ಬರ ಸಂಭಾವನೆ ಸಾಲದಾಯಿತು. ಇದನ್ನರಿತ ಕಲಾವಿದರು ಸ್ವತಃ ತಾವೇ ಮಾನವೀಯತೆಯಿಂದಲೇ ತಮ್ಮಲ್ಲಿದ್ದ ದವಸ ಧಾನ್ಯಗಳನ್ನು, ಅಲ್ಪ ಸ್ವಲ್ಪ ಹಣವನ್ನು ನೀಡಿ ನೆರವಾದರು. ಅಂತೆಯೇ ಇಡೀ ಮನೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ಬಂದ ಹಣವನ್ನು ಕೂಡಿಡುತ್ತಾ ಮನೆಯನ್ನು ಕಟ್ಟಿ ಮಕ್ಕಳನ್ನು ಬೆಳೆಸಿದೆನು ಎಂದು ವಿನಮ್ರ ಭಾವದಿಂದ ಸ್ಮರಿಸುತ್ತಾರೆ.
ಉಷಾರಾಣಿಯವರ ಅಭಿನಯಿಸಿದ ನಾಟಕಗಳು
ಉಷಾರಾಣಿಯವರು ಯಾವುದೇ ಓದು ಬರಹ ಬಾರದಿದ್ದರೂ ಇಲ್ಲಿಯವರಿಗೆ ನೂರಾರು ನಾಟಕಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವನ್ನು ಮಾತ್ರ ನೆನಪಿನಿಂದ ಹೆಸರಿಸಿದ್ದಾರೆ. ಅವುಗಳೆಂದರೆ
ದುಶ್ಯಾಸನ ಕಥೆ
ಪಾಂಡು ವಿಜಯ
ಅಭಿಮನ್ಯು ಕಾಳಗ
ಸುಂದೋಪ ಸುಂದರ
ಅಹಿರಾವಣ ಮಹಿರಾವಣ
ಲವಕುಶರ ಕಾಳಗ ....ಇನ್ನು ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಉಷಾರಾಣಿಯವರು ನಿರ್ವಹಿಸಿದ ಪಾತ್ರಗಳು
ಉಷಾರಾಣಿಯವರು ರಂಗಭೂಮಿಗೆ ಕೇವಲ ನರ್ತಕಿಯಾಗಿ ಆಗಮಿಸಿ ಬಯಲಾಟಗಳಲ್ಲಿ ಬರುವ ಬಹುತೇಕ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. ಉದಾಹರಣೆಗೆ....
ಗಾಂಧಾರಿ
ಭಾನಾಮತಿ
ಸುಭೀಷ್ಣೆ
ಪದ್ಮಗAಧಿ
ದ್ರೌಪದಿ
ಉತ್ತರೆ
ಕನಕಾAಗಿ
ತಿಲೋತ್ತಮೆ
ಚAದ್ರಸೇನಿ
ರAಭಾ..ಇನ್ನು ಮುಂತಾದ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬಿದ್ದಾರೆ.
ಪ್ರಶಸ್ತಿ / ಪುರಸ್ಕಾರಗಳು
ಬಳ್ಳಾರಿಯಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೆಡೆ ಅಮೋಘವಾದ ಸಾಧನೆ ಮಾಡಿ ಯಾರಿಗೂ ಕಾಣದಂತೆ ಎಲೆ ಮರೆಯ ಕಾಯಿಯಂತೆ ಬದುಕುತ್ತಿದ್ದಾರೆ. ಆದರೆ ಕೆಲವು ಸಂಸ್ಥೆಗಳು ಮಾತ್ರ ಇಂತಹ ಕಲಾವಿದರನ್ನು ಗುರುತಿಸಿ ಸನ್ಮಾಸಿ ಗೌರವಿಸುವಂತಹ ಅಳಿಲು ಸೇವೆಯನ್ನು ಮಾಡುತ್ತಿವೆ. ಅಂತಹ ಸಂಸ್ಥೆಗಳು ಉಷಾರಾಣಿಯವರ ಪಾಲಿಗೆ ತೀರಾ ವಿರಳವಾಗಿರುವುದು ವಿಪರ್ಯಾಸ.
ಕಾರಂತ ರಂಗಲೋಕ ಸಂಸ್ಥೆಯಿAದ ಕಾರಂತ ರತ್ನ ಪ್ರಶಸ್ತಿ
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಪ್ರಶಸ್ತಿ
ಹೊನ್ನೂರುಸ್ವಾಮಿ ತೊಗಲುಗೊಂಬೆ ಟ್ರಸ್ಟ್ನಿಂದ ಸನ್ಮಾನ
ಗೆಜ್ಜೆ ಹೆಜ್ಜೆ ತಂಡದಿAದ ಸನ್ಮಾನ
ಓಂ ಶಾಂತಿ ತಂಡದಿAದ ಸನ್ಮಾನ...ಮತ್ತಿತರೆ.
ಬಣ್ಣ ಅಳಿಸಿದ ಮೇಲೆ ಉಷಾರಾಣಿಯವರು
ಜಾಗತಿಕ ಭರಾಟೆಯಲ್ಲಿ ಸಮೂಹ ಮಾಧ್ಯಮಗಳ ಒಡೆತಕ್ಕೆ ಸಿಕ್ಕು ಬಯಲಾಟಗಳಂತಹ ಅನೇಕ ಜಾನಪದ ಕಲೆಗಳು ಮಯವಾಗ ತೊಡಗಿದವು. ಅಂತೆಯೇ ಜಾನಪದ ಕಲಾವಿದರು ಕೆಲವರು ಬೀದಿ ಪಾಲಾಗಿ ಹೋದರು, ಇನ್ನೂ ಕೆಲವರು ಹೊಟ್ಟೆ ಪಾಡಿಗಾಗಿ ಅನ್ಯಮಾರ್ಗ ಕಾಣದೇ ಸಣ್ಣ ಪುಟ್ಟ ವ್ಯಾಪಾರಗಳ ಮೊರೆ ಹೋದರು. ಅಂತೆಯೇ ಉಷಾರಾಣಿಯವರು ಸಹ ಬಣ್ಣ ಅಳಿಸಿದಾಗಿನಿಂದ ಮನೆಯ ಮುಂದಿನ ಬೀದಿಯ ಬದಿಯಲ್ಲಿ ಪುಟ್ಟದಾದ ದೋಸೆಯ ಅಂಗಡಿಯನ್ನು ಇಟ್ಟು ಇಷ್ಟು ವರ್ಷ ನಟನೆಯ ಅಭಿರುಚಿ ತೋರಿಸಿದ ಇವರು ಈಗ ದೋಸೆಯ ಸವಿರುಚಿಯನ್ನು ಜನಸಾಮಾನ್ಯರಿಗೆ ಉಣಬಡಿಸುತ್ತಿದ್ದಾರೆ. ಈ ಸ್ಥಿತಿ ಅಂದಿನ ಗರುಡ ಸದಾಶಿವರಾಯರಂತಹ ಕಲಾವಿದರಿಂದ ಹಿಡಿದು ಇಂದಿನ ಉಷಾರಾಣಿಯಂತಹ ಕಲಾವಿದರವರೆಗೂ ಹೀಗೆ ಶೋಚನೀಯ ಸ್ಥಿತಿಯಲ್ಲಿಯೇ ಕಲಾವಿದರ ಕೊನೆಯ ದಿನಗಳು ಸಾಗಿವೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಲಾವಿದರನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಸತ್ಕಾರಿಸಿದ ಈ ನಾಡಿನಲ್ಲಿ ಇಂದು ಕಲಾವಿದರ ಒಂದೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಒದಗಿರುವುದು ಕಲಾವಿದರ ದುರದೃಷ್ಟಕರ ಸಂಗತಿಯಾಗಿದೆ. ಈ ಸ್ಥಿತಿ ಹೀಗೆ ಮುಂದುವರೆದರೆ ಉದಯೋನ್ಮುಖ ಕಲಾವಿದರೂ ಸಹ ರಂಗಭೂಮಿಯನ್ನು ಬಿಟ್ಟು ಅನ್ಯಕ್ಷೇತ್ರಗಳತ್ತ ಮುಖ ಮಾಡಿದ್ದಲ್ಲಿ ರಂಗಭೂಮಿಯು ಅವಶೇಷಗಳಿಲ್ಲದಂತೆ ಕಾಣೆಯಾಗುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಕಲೆಯನ್ನು ರಕ್ಷಿಸುವುದರ ಜೊತೆಯಲ್ಲಿ ಕಲಾವಿದರ ಜೀವನಕ್ಕೂ ನೆರವಾಗುವುದು ಅವಶ್ಯಕವೆನಿಸಿದೆ.
ಅಂತೆಯೇ ಉಷಾರಾಣಿಯವರು ಕಲೆಯನ್ನು ನೆಚ್ಚಿಕೊಂಡು ಬರುವ ಉದಯೋನ್ಮುಖ ಕಲಾವಿದರಿಗೆ ಉಷಾರಾಣಿಯವರು “ಕಲಾವಿದರೆಂದರೆ ಕಲೆಯ ಅರ್ಚಕರು. ದೇವಾಲಯಗಳ ಅರ್ಚಕರಿಗೆ ಸಿಗುವ ಗೌರವ, ಮನ್ನಣೆ ಕಲಾವಿದರಿಗೆ ಸಿಗುವಂತಾಗಲಿ. ಅಲ್ಲದೇ ಕಲೆಯನ್ನು ಬಹಳಷ್ಟು ಜನರು ನಂಬಿ ಬರುತ್ತಾರೆ. ಆದರೆ ಅದರಲ್ಲಿ ಕೆಲವರು ಮಾತ್ರ ಕಲಾಮಾತೆಯನ್ನು ಒಲಿಸಿಕೊಳ್ಳುವರು. ಆದ್ದರಿಂದ ಆ ಮಾತೆಯನ್ನು ಒಲಿಸಿಕೊಳ್ಳುವುದಕ್ಕಾಗಿ ಅಗತ್ಯವಾದ ಸಿದ್ಧತೆ-ಬದ್ಧತೆ ಅತ್ಯಾವಶ್ಯಕವಾಗಿದೆ” ಎಂದು ಕಿವಿಮಾತನ್ನು ಹೇಳಿದ್ದಾರೆ.
ಲೇಖನ : ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿ ಮತ್ತು ಬರಹಗಾರರು
mob-೯೩೭೯೮೫೭೭೭೫
mಚಿಟಿರಿuಚಿmಚಿziಟಿg೭@gmಚಿiಟ.ಛಿom
Comments
Post a Comment