ರಂಗ ಮಾಲಿಕೆ-೩-ಶಿವಶಂಕರ್ ನಾಯ್ಡು.


 ಬಣ್ಣದ ಬದುಕು..    

        ರಂಗ ಮಾಲಿಕೆ-೩


‘ಸಕಲ ಕಲಾ ವಲ್ಲಭ’

ಸಿ.ಶಿವಶಂಕರ ನಾಯ್ಡು


   ಬಳ್ಳಾರಿಯ ರಕ್ತರಾತ್ರಿಯ ನವಲಿಪಕ್ಕ ಎಂದ ಕೂಡಲೇ ಸುತ್ತಮುತ್ತಲಿನ ಗ್ರಾಮೀಣ ಭಾಗದ ಎಲ್ಲರಿಗೂ ಚಿರಪರಿಚಿತರಾದ ಕಲಾವಿದರೆಂದರೆ ಅದು ಶಂಕರ್ ನಾಯ್ಡು. ಇವರು ವೃತ್ತಿಯಲ್ಲಿ ಲಾಯರ್ ಪ್ರವೃತ್ತಿಯಲ್ಲಿ ರಂಗಕಲಾವಿದರು. ಇವರು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ತೊಡಗಿಸಿಕೊಂಡ ನಟರು ಮತ್ತು ನಿರ್ದೇಕರಾಗಿದ್ದಾರೆ. ಇವರು ೫ ದಶಕಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವವನ್ನು ತಂದು ಕೊಟ್ಟವರು. ಇಂದಿಗೂ ನಗರದಲ್ಲಿ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ಶಂಕರ್‌ನಾಯ್ಡು ಅಂದ ತಕ್ಷಣ ಮಂದಹಾಸದೊAದಿಗೆ ವಿಚಾರಿಸದೆ ಇರುವವರಿಲ್ಲ. ಅಷ್ಟರ ಮಟ್ಟಿಗೆ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. 



   ಶಂಕರ್‌ನಾಯ್ಡುರವರು ಬಳ್ಳಾರಿಯಲ್ಲಿ ತಂದೆ ಕೇಶವುಲು ನಾಯುಡು ತಾಯಿ ಜ್ಯೋತಿಶ್ವರಿ ದಂಪತಿಗಳ ಪುತ್ರರಾಗಿ ೧೨.೦೧.೧೯೬೧ ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ನಗರದ ವಾರ್ಡ್ಲ್ ಶಾಲೆಯಲ್ಲಿ ಮುಗಿಸಿದರು. ಬಿ.ಕಾಂ. ಎಲ್.ಎಲ್.ಬಿ ಪದವಿ ಪಡೆದು ವೃತ್ತಿಯಲ್ಲಿ ಲಾಯರ್ ಅಗಿದ್ದವರು ರಂಗಭೂಮಿಯೆಡೆಗೆ ಇವರ ಬದುಕಿನ ಪಯಣ ಸಾಗಿದ್ದು ಒಂದು ಸೋಜಿಗವೇ ಸರಿ. ಇವರು ತಮ್ಮ ಶಾಲಾ ಹಂತದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮನಸಾಗಿ ಮೊಟ್ಟ ಮೊದಲ ಬಾರಿಗೆ ಇವರ ಅಣ್ಣ ಪ್ರಭಾಕರ್ ನಾಯುಡು ಮಾರ್ಗದರ್ಶನದಲ್ಲಿ ಕಾಡಿನ ರಾಜನ ವೇಷ ಹಾಕಿ ಪ್ರೇಕ್ಷಕ ಮತ್ತು ನಿರ್ಣಯಕರ ಮನಗೆದ್ದು ಮೊದಲ ಹೆಜ್ಜೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿದರು. ಈ ಗೆಲುವಿನ ಮೂಲಕವೇ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ಇವರ ತಂದೆ ತಾಯಿ ಮೂಲತಃ ಕಲಾವಿದರಾಗಿದ್ದರು ಮಗನ ಕಲೆಯನ್ನು ಸಹಿಸದಾಗಿದ್ದರು ಕಾರಣ ಕಲೆಯಿಂದ ಯಾವ ಸುಖ ಪಡೆಯದೆ ನಿರಾಶೆಯನ್ನು ಹೊಂದಿ ಮಗನಿಗೆ ವಿದ್ಯೆಯನ್ನು ನೀಡಿ ಉತ್ತಮ ಅಧಿಕಾರಿಯನ್ನಾಗಿಸುವ ಕನಸು ಹೊಂದಿದ್ದರು. ಅಂತೆಯೇ ಮಗನ ಕಲೆಗೆ ಬೇಲಿಯನ್ನು ಹಾಕಿದ್ದರು. ಆದರೆ ಅಣ್ಣನ ಪ್ರೇರಣೆ ಮತ್ತು ತಮ್ಮಲ್ಲಿನ ಕಲಾ ಚೈತನ್ಯ ಬೇಲಿ ದಾಟುವಂತೆ ಮಾಡಿತು. ಕೆಲವೊಮ್ಮೆ ತಂದೆ ಕೈಗೆ ಸಿಕ್ಕು ಶಿಕ್ಷೆಗೆ ಗುರಿಯಾಗಿದ್ದುಂಟು. ಆದರೆ ಯವ್ವನಾವಸ್ಥೆಗೆ ಕಾಲಿಟ್ಟು ವೃತ್ತಿಯಲ್ಲಿ ತೊಡಗಿದ್ದಾಗ ವೃತ್ತಿಯಲ್ಲಿನ ಕಟ್ಟುಪಾಡುಗಳನ್ನೆಲ್ಲಾ ಸಹಿಸಲಾಗದೆ ವೃತ್ತಿಗೆ ತಿಲಾಂಜಲಿ ಹೇಳಿ ಪೂರ್ಣವಾಗಿ ರಂಗಭೂಮಿ ಸೇವೆಗೆ ತೊಡಗಿಸಿಕೊಂಡರು. ಶ್ರೀಯುತರು ರಂಗಭೂಮಿಯನ್ನು ಎಷ್ಟರ ಮಟ್ಟಿಗೆ ಆಶ್ರಯಿಸಿದ್ದರೆಂದರೆ ರಂಗಸೇವೆಯ ನಡುವೆ ಮದುವೆ ಆಗುವುದನ್ನೆ ಮರೆತು ಬಿಟ್ಟರು.



 ರಂಗಭೂಮಿ ಅನುಭವ


   ತಮ್ಮ ಅಣ್ಣನನ್ನೇ ಗುರುವಾಗಿಸಿಕೊಂಡು, ಯಲಿವಾಳ ಸಿದ್ದಯ್ಯಸ್ವಾಮಿ, ಬೆಳಗಲ್ಲು ವೀರಣ್ಣ ಮತ್ತು ಸುಭದ್ರಮ್ಮ ಮನ್ಸೂರರ ಮಾರ್ಗದರ್ಶನದಲ್ಲಿ ರಂಗಭೂಮಿಯನ್ನು ನೆಚ್ಚಿಕೊಂಡಿದ್ದಾರೆ. ೧೯೭೨ ರಿಂದ ರಂಗಭೂಮಿ ಸೇವೆಯನ್ನು ಸಾಮಾಜಿಕ, ಅಸಂಗತ, ವೃತ್ತಿ, ಸಾಕ್ಷರತ ಆಂದೋಲನ, ಅಪರಾದ ತಡೆಮಾಹೆ, ಪರಿಸರ, ಆರೋಗ್ಯ, ಶಿಕ್ಷಣ, ಕಾನೂನು ಅರಿವು ಮುಂತಾದ ವಿಷಯಗಳ ಪರವಾಗಿ ಬೀದಿ ನಾಟಕ ಹೀಗೆ ಹತ್ತು ಹಲವು ರಂಗ ಪ್ರಕಾರಗಳಲ್ಲಿ ನಾಟಕ ರಚನೆ, ನಟನೆಯ ಜೊತೆ ನಿರ್ದೇಶನವನ್ನು ಮಾಡಿದ್ದಾರೆ. ೧೯೮೦ ರಿಂದ ೨೦೧೭ರವರಗೆ ಬೆಳಗಲ್ಲು ವೀರಣ್ಣ, ಜನ್ನಿ, ಸಿ.ಬಸವಲಿಂಗಯ್ಯ, ಎಂ.ಎಲ್.ರAಗಸ್ವಾಮಿ, ಅಣ್ಣಾಜಿ ಕೃಷ್ಣಾರೆಡ್ಡಿ ಇನ್ನು ಮುಂತಾದ ಶ್ರೇಷ್ಟ ನಿರ್ದೇಶಕರ ನಿರ್ದೇಶನದಲ್ಲಿ ನವಲಿಪಕ್ಕ, ಶಿಖಂಡಿ, ಅಭಿಮನ್ಯು, ಭೀಷ್ಮ, ವಿದುರ, ದುಶ್ಯಾಸನ, ಸಾತ್ಯಕಿ, ಸಂಜಯ, ಮೀರ್‌ಸಾದೀಕ್, ಸಂಗ್ಯ,  ಕರಿಭಂಟ,  ಶಿಶುಕುಮಾರನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಯುತರೂ ಸಹ ಪೌರಾಣಿಕ, ಸಾಮಾಜಿಕ, ವೃತ್ತಿ, ಹವ್ಯಾಸಿ ಹೀಗೆ ಎಲ್ಲ ಬಗೆಯ ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿಯನ್ನು ಗಳಿಸಿದ್ದಾರೆ.

ಪೌರಾಣಿಕ ನಾಟಕಗಳು:

  ರಕ್ತರಾತ್ರಿ ನಾಟಕದಲ್ಲಿ ೧೯೮೬ ರಿಂದ ೧೦೦ಕ್ಕೂ ಹೆಚ್ಚು ಪ್ರಯೋಗಗಳಲ್ಲಿ ನವಲಿಪಕ್ಕನಾಗಿ, ಕುರುಕ್ಷೇತ್ರ ನಾಟಕದಲ್ಲಿ ಶಿಖಂಡಿಯಾಗಿ ಮೈಸೂರು ದಸರಾ, ಹಂಪಿ ಉತ್ಸವಗಳಲ್ಲಿನÀ ಮಹತ್ತರ ವೇದಿಕೆಯಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಾಸ್ಯಗಡಲಲ್ಲಿ ತೇಲಿಸಿದ್ದಾರೆ. ರಕ್ತರಾತ್ರಿ ನಾಟಕದಲ್ಲಿನ ನವಲಿಪಕ್ಕ ಪಾತ್ರದಿಂದಾಗಿ ‘ನವಲಿ ಪಕ್ಕ ಎಂದರೆ ಅಲ್ಲಿ ವಕೀಲ ಸಾಹೇಬ್ರು ಇದ್ದರೆ ಮಾತ್ರ ಆ ಪಾತ್ರಕ್ಕೊಂದು ಕಳೆ ಇಲ್ಲದಿದ್ದರೆ ಅದು ಕೊಳೆ’ ಎನ್ನುವ ಹಾಗೆ ಮೋಡಿ ಮಾಡಿದ್ದರು. ಅಲ್ಲದೇ ತಮ್ಮ ಯಶಸ್ವಿ ಅಭಿನಯಿನಯದೊಂದಿಗೆ ಖ್ಯಾತ ರಂಗ ನಿರ್ದೇಶಕರ, ನಾಟಕಕಾರರ ಸಂಪರ್ಕದೊAದಿಗೆ ರಾಜ್ಯಾದಂತ ನಟಿಸಿದ ಅನುಭವ ಮತ್ತು ಖ್ಯಾತ ರಂಗ ಕರ್ಮಿಗಳಾದ ಸಿರಿಗೇರಿ ನಾಗನಗೌಡರು ಹಾಗೂ ಬೆಳಗಲ್ಲು ವೀರಣ್ಣನವರೊಂದಿಗೆ ರಂಗ ತರಬೇತಿಯ ಅನುಭವ ಹೊಂದಿದ್ದಾರೆ.


ವೃತ್ತಿ ರಂಗಭೂಮಿ ಹವ್ಯಾಸಿ ನಾಟಕಗಳಲ್ಲಿ ಅಭಿನಯ

  ಉತ್ತರ ಕರ್ನಾಟಕದಲ್ಲಿ ಇಂದಿಗೂ ಕಾಮಿಡಿ ಕಿಂಗ್ ಎಂದೇ ಪ್ರಖ್ಯಾತಿಯನ್ನು ಹೊಂದಿದ ನಾಯುಡುರವರು ಕೇವಲ ಪೌರಾಣಿಕವಲ್ಲದೇ ವೃತ್ತಿ, ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿದ್ದಾರೆ. 

ಕೆಟ್ಟಮೇಲೆ ಬುದ್ಧಿ ಬಂತು (ಸದಾಶಿವ ಪಾತ್ರದಲ್ಲಿ) ೧೯೮೮-೮೯

ಅಣ್ಣತಂಗಿ (ಖಾಸೀಂ ಮತ್ತು ಬಳೆಗಾರ) ೧೯೮೯-೧೯೯೦

ಆಶಾಲತ (ವಾಸು ಪಾತ್ರದಲ್ಲಿ) ೧೯೯೦-೯೧

ಗೌಡ್ರು ಗದ್ಲ ( ಮಲ್ಲೇಶಿ ಮತ್ತು ಜುಮ್ಯಾ) ೧೯೯೦-೯೧

ಪ್ರೀತಿಯ ಸುಳಿಯಲ್ಲಿ (ಮುಕುಂದ ಪಾತ್ರ) ೧೯೯೦-೯೧

ವಿಧಿ ಚಕ್ರ (ರಾಜು ಪಾತ್ರ) ೧೯೯೦-೯೧

ಸಿರಿಮಹಲ್ (ಜಾನಿ ಪಾತ್ರ) ೧೯೯೦-೯೧

ಗೌರಿ ಗೆದ್ಧಳು (ಪೋಸ್ಟಮ್ಯಾನ್) ೧೯೯೧-೯೨

ಬಸ್‌ಕಂಡಕ್ಟರ್ (ಕಾಂಪೌಡರ್) ೧೯೯೪-೯೫

ಪೋಲಿಸ್ ಪ್ರಾಣಕ್ಕೆ ಬೆಲೆ ಇಲ್ಲವೆ (ಗೋಪಿ ಪಾತ್ರ) ೧೯೯೨-೯೩

ಮಂಗಳ ನನ್ನ ಅತ್ತಿಗೆ (ಸುಂದರ ಮತ್ತು ಲಾಲ್ಯ) ೧೯೯೪-೯೫

ಚನ್ನಪ್ಪ ಚನ್ನಗೌಡ (ಕಾಂಪೌಡರ್ ಪಾತ್ರ ) ೨೦೦೦-೨೦೦೧


ಬೀದಿನಾಟಕಗಳು:-

  ಸಾಕ್ಷರತ ಆಂದೋಲನ, ಅಪರಾದ ತಡೆಮಾಹೆ, ಪರಿಸರ, ಆರೋಗ್ಯ, ಶಿಕ್ಷಣ, ಕಾನೂನು ಅರಿವು ಮುಂತಾದ ವಿಷಯಗಳ ಪರವಾಗಿ ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ನಟಿಸುವ ಮೂಲಕ ಅಭಿನಯ ಚತುರ ಎನಿಸಿದ್ದಾರೆ. ಅಲ್ಲದೇ  ‘ಅಕ್ಷರ ವಿಜಯ’ ೧೯೯೪-೯೫ರ ಅಡಿಯಲ್ಲಿ ೧೫೦೦ ಹಳ್ಳಿಗಳಲ್ಲಿ ಸಾಕ್ಷರತೆಯ ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಣ ಮಹತ್ವ ಸಾರುವ ದನ ಕಾಯೋರ ದೊಡ್ಡಾಟದಂತಹ ಹಾಸ್ಯ ನಾಟಕಗಳನ್ನು ರಚಿಸಿ, ಅಭಿನಯಿಸಿದ ಕೀರ್ತಿ ಇವರದು. ಇದಲ್ಲದೇ ಅದೆಷ್ಟೋ ಸಾರಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲು ಹೋದಾಗ ಇವರ ಅಭಿನಯಕ್ಕೆ ಮಾರು ಹೋದ ಜನ ಇವರೇ ಡಾಕ್ಟರ್, ಅಧಿಕಾರಿಯೆಂದು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊAಡ ಪ್ರಸಂಗಳಿವೆ. ಇವು ಇವರ ಮನೋಜ್ಞ ಅಭಿನಯಕ್ಕೆ ಹಿಡಿದ ಕನ್ನಡಿಗಳು.




ಏಕಾಂಕ ನಾಟಕಗಳು

     ಜನರಲ್ಲಿ ರಂಗಾಸಕ್ತಿಯನ್ನು ಮೂಡಿಸುವ ಸಲುವಾಗಿ ಹುಟ್ಟಿಕೊಂಡ ಏಕಾಂಕ ನಾಟಕ ಪ್ರಕಾರದಲ್ಲೂ ಇವರ ಅಭಿನಯ, ನಿರ್ದೇಶನ, ರಚನಾ ಪ್ರತಿಭೆ ತೋರಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು. 

ಸಂಗೀತ ಸಾರ್ವಭೌಮರು

ಪ್ರೇಮಾಯಣ

ಸ್ವಾಮಿ ಮತ್ತು ಸ್ವಾಮಿ

ಗಡಿ ಬಿಡಿ ಗಾಡಿ ಬಂತು ನೋಡಿ

ಹೆಚ್ಚು ಕಡಿಮೆ ಸಂಸಾರ

ಜಾರಿ ಬಿದ್ದ ಜಾಣ

ಬಾಯಿಗೆ ಆಟ ಭಟ್ಟನಿಗೆ ಕಾಟ.


ಅನ್ಯಭಾಷೆಯೊಂದಿಗೆ ಶಂಕರ್‌ನಾಯ್ಡುರವರ ಹೆಸರು

      ಕ್ರಿ.ಶ. ೧೯೮೦-೮೪ರ ಅವಧಿಯಲ್ಲಿ ಶಂಕರ್‌ರು ಕೇವಲ ಕನ್ನಡ ಮಾತ್ರವಲ್ಲದೇ ಅಲ್ಲದೇ ಇವರ ಮಾತೃಭಾಷೆ ಕನ್ನಡವೇ ಅಗಿತ್ತು ಎನ್ನುವಷ್ಟರ ಮಟ್ಟಿಗೆ ಕನ್ನಡದ ಜೊತೆಗೆ ನಂಟು ಇಟ್ಟುಕೊಂಡಿರುವ ಇವರು ಕೆಲವು ತೆಲುಗು ಸಾಮಾಜಿಕ ನಾಟಕಗಳಲ್ಲಿಯೂ ಸಹ ಅಭಿಯಿಸಿದ್ದಾರೆ.

ಗುಂಡೆಲು ವರ್ಚ ಬಡೆನು- ವೈದ್ಯಾಧಿಕಾರಿ

ಇದಿಗೋ ಪ್ರಶ್ನಾ ಏದಿ ಜವಾಬು ನಾದಿ-ನಕ್ಸಲೈಟ್ 

ಪದ್ಮವ್ಯೂಹಂ-ರೇಶನ್ವಾಲ, ಡಾಕ್ಟರ್, ರಾಜಕಾರಿಣಿ, ಪಬ್ಲಿಕ್ ಪ್ರ‍್ರಾಸೀಕ್ಯೂಟರ್

ಅಂತA ಕಾದಿದಿ ಆರಂಭA-ರಾಮಶರ್ಮ

ತೂರ್ಪುಕನುಮಲ್ಲೋ

ಫಾರ್‌ಸೇಲ್-ಪಲ್ಲಿವಾ¯

ಲAಕಾದಹನA-ನಿರುದ್ಯೋಗಿ

ಮಾಯಾಬಜಾರ್-ಚಾಯ್‌ವಾಲಾ (ಆಂಧ್ರ ರಾಜ್ಯದಿಂದ ಉತ್ತಮ ನಟ ಪ್ರಶಸ್ತಿ ೨೦೦೨)


ಹಾಸ್ಯ ಕಿರುಚಿತ್ರಗಳು


   ಇವರ ಪ್ರತಿಭೆ ಯಾವ ಸಿನಿಮಾ ನಟರಿಗೂ ಕಮ್ಮಿಯಿಲ್ಲ ಆದರೆ ಯಾರೊಬ್ಬರು ಇವರನ್ನು ಗುರುತಿಸಲಿಲ್ಲ ಅಲ್ಲದೇ ಕ್ರಿಯಾಶೀಲರಾದ ಇವರು ಯಾವ ಸಿನಿಮಾ ಮೋಹಕ್ಕೆ ಒಳಗಾಗದೆ ಸ್ವತಃ ತಾವೇ ಚಿರು ಸೈನ್ಯಂ ಎಂಬ ಚಿತ್ರ ತಯಾರಿಸಲು ಹೋಗಿ ಆರ್ಥಿಕವಾಗಿ ಕೈ ಸುಟ್ಟುಕೊಂಡು ಸಿನಿಮಾದಿಂದ ದೂರವಾಗಿ ತಮಗೆ ತೃಪ್ತಿ ನೀಡಿದ ಕೆಲವು ಹಾಸ್ಯ ನಾಟಕಗಳನ್ನು ಕಿರುಚಿತ್ರಗಳನ್ನಾಗಿ ತಯಾರಿಸಿದ ಸಾಧನೆ ಶ್ರೀಯುತರದು.

ಜಂತರ್ ಮಂತರ್ 

ಕುಂಟಕೋಣ ಮೂಗ ಜಾಣ

ದುಬಾಯ್ ಗಂಡ

ಕಿAಡಲ್ ಕನ್ನಲ್



ಇವರು ರಚಿಸಿದ ನಾಟಕಗಳು

ದನ ಕಾಯೋರ ದೊಡ್ಡಾಟ

ನನ್ನ ಹೆಂಡ್ತಿನಾ ಹುಡುಕಿಕೊಡಿ ಪ್ಲೀಸ್

ಸೊಳ್ಳೆ ಬಂತು ಸೊಳ್ಳೆ

ನೀನು ನಕ್ಕರೆ ಹಾಲು ಸಕ್ಕರೆ

ನಮ್ಮ ಉಸಿರು

ನಾಯಿಗೆ ಆಟ ಭಟ್ಟನಿಗೆ

ಜಂತರ್ ಮಂತರ್

ಲವ್ ಲಟಕ್ ಜಂಭೋ ಜಟಕ್


ರಂಗಪ್ರಶಸ್ತಿ / ಪುರಸ್ಕಾರಗಳು

೧೯೯೮ ರಲ್ಲಿ ಹರಿರಾವ್ ಕ್ರಿಯೇಶನ್ ಕ್ಲಬ್ ಆದೋನಿ ಇವರ ವತಿಯಿಂದ ನಟಶೇಕರ ಪ್ರಶಸ್ತಿ.

೧೯೮೯ ರಲ್ಲಿ ದೋಣಿಮಲೈನಲ್ಲಿ ನಡೆದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟ ಪ್ರಶಸ್ತಿ

೧೯೯೦ ರಲ್ಲಿ ಸ್ವಾಮಿ ಮತ್ತು ಸ್ವಾಮಿ ನಾಟಕದಲ್ಲಿ ಉತ್ತವi ಹಾಸ್ಯ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

೧೯೯೨ ರಲ್ಲಿ ರಾಯಲ ಕಲಾಭಾರತಿ ನಿರ್ವಹಿಸಿದ ರಾಜ್ಯ ಮಟ್ಟದ ಏಕಾಪಾತ್ರಭಿನಯ ಹಾಗೂ ಹಾಸ್ಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕೆ ಉತ್ತಮ ಹಾಸ್ಯ ಹಾಗೂ ಉತ್ತಮ ನಟ ಪ್ರಶಸ್ತಿ ದೊರೆತಿದೆ. 

೧೯೯೬ರಲ್ಲಿ ಸಿರುಗುಪ್ಪ ತಾಲ್ಲೂಕು ಉಪ್ಪಾರ ಹೊಸಹಳ್ಳಿ ನಾಗಲಿಂಗೇಶ್ವರ ಸ್ವಾಮಿ ಮಠಾಧ್ಯಕ್ಷರರಿಂದ ನಟ ವಿಶಾರದ.

೨೦೦೨ ರಲ್ಲಿ ಆಂಧ್ರ ಪ್ರದೇಶ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆಯಲ್ಲಿ “ಉತ್ತಮ ಹಾಸ್ಯ ನಟ ಪ್ರಶಸ್ತಿ”.

೨೦೦೨ ರಲ್ಲಿ ಶ್ರೀ ಮಹಾಬಳೇಶ್ವರಪ್ಪ ಮತ್ತು ಜೋಳದರಾಶಿ ದೊಡ್ಡನಗೌಡ ದತ್ತಿ ನಿಧಿ ಸಮಿತಿಯಿಂದ ನಾಟಕರಂಗದಲ್ಲಿ ಬಹುಕಾಲ ಸೇವೆಸಲ್ಲಿಸಿದ್ದಕ್ಕೆ ಪ್ರಶಸ್ತಿ. 

ದಿನಾಂಕ ೧೪-೯-೨೦೦೨ ರಂದು ಶಿಕ್ಷಕ ದಿನಾಚರಣೆ ಸೇವೆಸಲ್ಲಿಸಿದ್ದಕ್ಕೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ ಸಚಿವರಾದ ಶ್ರೀ ಎಂ.ವೈ. ಘೋರ್ಪಡೆಯವರಿಂದ ಸನ್ಮಾನ

ಮಾರ್ಚ್ ೨೯ ೨೦೦೩ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸ್ವಿಕಾರ. 

ಪತ್ರಿಕಾ ಸಂಘ, ಪ್ರೆಸ್ ರಿಪೋರ್ಟಸ್ ಗೀಲ್ಡ್ ವತಿಯಿಂದ ಸನ್ಮಾನ ೨೦೧೦

ರಂಗ ಸಾಧಕ ಪ್ರಶಸ್ತಿ ೨೦೧೨.

ರಂಗ ಜಂಗಮ ಪ್ರಶಸ್ತಿ ೨೦೧೨,

ಬಳ್ಳಾರಿ ಮ್ಯೂಸಿಕ್ ಆಕ್ಟಿವಿಟೀಸ್‌ರವರಿಂದ ಪ್ರಶಸ್ತಿ ೨೦೧೪.

ಸಿಜಿಕೆ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಕಾರಂತ ರಂಗಲೋಕ (ರಿ), ಬೈರಗಾಮದಿನ್ನೆ ಇವರ ವತಿಯಿಂದ ೬.೬.೨೦೧೭ರಂದು “ಕಾರಂತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.



   ಶಿವಶಂಕರ್ ನಾಯ್ಡುರವರು ಕೇವಲ ನಟರಷ್ಟೇ ಅಲ್ಲ, ರೇಖಿ ಮಾಸ್ಟರ್, ಉರಗ ಪ್ರೇಮಿಯೂ ಸಹ ಹೌದು. ರಂಗಭೂಮಿಯನ್ನು ಭಲಿಷ್ಟವಾಗಿ ಕಟ್ಟುವ ಮನಸ್ಥಿತಿಯಿಂದ ಡಿ.ಆರ್.ಕೆ ರಂಗಸಿರಿ ಎಂಬ ರಂಗಸAಸ್ಥೆಯನ್ನು ಕಟ್ಟಿ ಬಡ ರಂಗಾಸಕ್ತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಆ ನಿಟ್ಟಿನಲ್ಲಿಯೇ ಅಣ್ಣಾಜಿ ಕೃಷ್ಣಾರೆಡ್ಡಿಯಂತಹ ಅಮೂಲ್ಯವಾದ ಶಿಷ್ಯರ ಬಳಗವನ್ನೆ ಹೊಂದಿದ್ದಾರೆ. ಅಲ್ಲದೇ ರಂಗಭೂಮಿಗಾಗಿಯೇ ತಮ್ಮ ಯವ್ವನವೆಲ್ಲಾ ಧಾರೆಯೆರೆದು ಬ್ರಹ್ಮಚಾರಿಯಾಗಿದ್ದಾರೆ. “ಹೆಣ್ಣು-ಹೊನ್ನು-ಮಣ್ಣು-ಕುಡಿತ ಇವುಗಳ ದಾಸನಾದ ಕಲಾವಿದ ಸ್ವರ್ಗವೊಂದೇ ಅಲ್ಲ ಭೂಮಿಯಲ್ಲೂ ಉತ್ತಮ ಸ್ಥಾನಮಾನವನ್ನು ಹೊಂದಲಾರನು” ಎಂಬುದೇ ಇಂದಿನ ಉದಯೋನ್ನುಖ ಕಲಾವಿದರಿಗೆ ಶಿವಶಂಕರ್ ನಾಯ್ಡುರವರು ನೀಡಿದ ಕಿವಿಮಾತು. ಅಲ್ಲದೇ ನಟನೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿ ಎಲ್ಲ ಕಲಾವಿದರಿಗೆ ಸಿಗದ ಕಲಾ ಮನ್ನಣೆ ಇವರಿಗೆ ದೊರೆಯಿತು.

ಲೇಖನ : ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ

ಸಾಹಿತಿ ಮತ್ತು ಬರಹಗಾರರು

mob-೯೩೭೯೮೫೭೭೭೫

mಚಿಟಿರಿuಚಿmಚಿziಟಿg೭@gmಚಿiಟ.ಛಿom

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.