ರಂಗ ಮಾಲಿಕೆ-೬-ಕೋಗಳಿ ಪಂಪಣ್ಣ
ಬಣ್ಣದ ಬದುಕು..
ರಂಗ ಮಾಲಿಕೆ-೬
‘ಗ್ರಾಮೀಣ ಕಲಾಭೂಷಣ’
ಎಂ.ಪAಪಣ್ಣ
ಕನ್ನಡದ ಮೊಟ್ಟ ಮೊದಲ ಗದ್ಯ ಗ್ರಂಥ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ. ಈ ಗ್ರಂಥ ರಚನೆಯಾದ ಸ್ಥಳವೆಂದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮ. ಇದು ಪ್ರಾಚೀನದಿಂದಲೂ ಹಲವು ಪ್ರಖ್ಯಾತ ಮಹನೀಯರನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಪುಣ್ಯ ಭೂಮಿಯಾಗಿದೆ. ಪ್ರಸ್ತುತ ದಿನಮಾನದಲ್ಲಿ ಮತ್ತೆ ಕೋಗಳಿ ಗ್ರಾಮ ಬೆಳಕಿಗೆ ಬರಲು ಕಾರಣಕರ್ತರಾದ ಹಲವು ಮಹನೀಯರಲ್ಲಿ ಒಬ್ಬರಾದ, ‘ಎಂ.ಪಿ.ಕೋಗಿಲೆ' ಎಂದು ಪ್ರಖ್ಯಾತರಾದ ಖ್ಯಾತ ಹಿರಿಯ ರಂಗಕರ್ಮಿ, ರಾಜಕಾರಣಿ ಮುತ್ಸದ್ದಿ, ಉತ್ತಮ ಕವಿಗಳು, ವಾಗ್ಮಿಗಳು, ಕೃಷಿಕರು ಆದಂತಹ ‘ಎಂ ಪಂಪಣ್ಣ’ನವರು. ಶ್ರೀಯುತರು ತಮ್ಮ ಕಂಚಿನ ಕಂಠದಿAದಲೇ ಹೆಸರುವಾಸಿಯಾದಂತವರು. ಕೊಟ್ಟೂರಿನ ಹಲವು ಭಾಗಗಳಲ್ಲಿ "ಎಲೆ ಉತ್ತರ ದಿನ ಮೂರು ಕಳೆಯುವುದರೊಳಗಾಗಿ ಈ ಪೃಥ್ವಿ ನಿಃಪಾಂಡವ ಪೃಥ್ವಿ" ಎಂಬ ಗಡಸು ಧ್ವನಿಯ ಕೇಳಿಬಂದರೆ ಅದು ಎಂಪಿ ಕೋಗಿಲೆ ಅವರದೇ ಎಂಬ ಕಾಲಮಾನವಿತ್ತು. ಅಂತೆಯೇ ಯಾವುದೇ ಪಾತ್ರವಿರಲಿ, ಯಾವುದೇ ಸ್ಥಳವಿರಲಿ ಆ ಪಾತ್ರಕ್ಕೆ ಜೀವತುಂಬುವ ಚಾಕಚಕ್ಯತೆ ಎಂ ಪಂಪಣ್ಣನವರಿಗೆ ಸಿದ್ಧಿಯಾಗಿತ್ತು. ಶ್ರೀಯುತರಿಗೆ ರಕ್ತರಾತ್ರಿಯ ಯಾವುದೇ ಪಾತ್ರ ಕೊಟ್ಟರೂ ತುಂಬಾ ಅಚ್ಚುಕಟ್ಟಾಗಿ ಯಾವುದೇ ಬಹು ದಿನದ ತಾಲೀಮು ಇಲ್ಲದೆ ರಂಗದ ಮೇಲೆ ನಿಂತು ಎಲ್ಲರನ್ನೂ ರಂಜಿಸುವ ಅಗಮ್ಯ ಕಲೆಯ ವೈಶಿಷ್ಟತೆಯನ್ನು ಹೊಂದಿದ್ದರು.
ಬಾಲ್ಯ ಜೀವನ
ಪಂಪಣ್ಣನವರು ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಒಂದು ಮಧ್ಯಮವರ್ಗದ ತಂದೆ ಚನ್ನಬಸಪ್ಪ ತಾಯಿ ಹನುಮಂತಮ್ಮ ಎಂಬ ದಂಪತಿಗಳ ಮಗನಾಗಿ ೧೯೪೪ ರಲ್ಲಿ ಜನಿಸಿದರು. ಇವರು ಓದಿದ್ದು ಕೇವಲ ನಾಲ್ಕನೇ ತರಗತಿ. ಶಾಲೆಯ ದಿನಗಳಲ್ಲಿ ವರ್ಷಕೊಮ್ಮೆ ಮಾಡುವ ನೀತಿಯುಕ್ತ ನಾಟಕ ನೆಡೆಯುತ್ತಿದ್ದವು.ಅಂತೆಯೇ ಒಮ್ಮೆ ರಂಗ ಗುರು ಜೆ.ಎಂ.ಗುರುಸಿದ್ದಯ್ಯನವರು ‘ಸತ್ಯ ಹರಿಶ್ಚಂದ್ರ’ ಎಂಬ ನಾಟಕದಲ್ಲಿ ನೀಡಿದ ವಸಿಷ್ಠ ಮುನಿಯ ಸಣ್ಣ ಪಾತ್ರವನ್ನು ಅಣ್ಣನಾದ ಉಮಾಪತಿಯವರ ಮಾತಿನಂತೆ ತಿರಸ್ಕರಿಸಿ , ಮುಖ್ಯ ಪಾತ್ರವನ್ನು ಮಾಡಲು ಮನಸ್ಸು ಮಾಡಿದ ಗಟ್ಟಿಗರು. ಆದರೆ ಮುಖ್ಯಪಾತ್ರ ಸಿಗದ ಕಾರಣ ಯಾವ ಪಾತ್ರದ ಮಹತ್ವವನ್ನು ಅರಿಯದ ವಯಸ್ಸಿನಲ್ಲೇ ನಾಟಕವನ್ನೇ ತಿರಸ್ಕರಿಸಿ ತಮ್ಮ ಅಣ್ಣನವರ ಮೂಲಕ ಅವರ ಮಾರ್ಗದರ್ಶನದಲ್ಲೇ ಡಿ.ದುರ್ಗದಾಸ್ ರವರ ‘ನಿರ್ಮಲಾ' ಎಂಬ ನಾಟಕದಲ್ಲಿ ‘ಭಾರತಿ’ ಎಂಬ ಸ್ತಿçà ಪಾತ್ರವನ್ನು ಮಾಡುವುದರ ಮೂಲಕ ೧೨ನೇ ವಯಸ್ಸಿನಲ್ಲಿ ರಂಗಭೂಮಿಗೆ ಕಾಲಿಟ್ಟರು. ಅಲ್ಲದೆ ಇವರು ಸಹ ತಮ್ಮ ತಮ್ಮನ ಮೂಲಕ ತಮ್ಮ ಕನಸನ್ನು ನನಸಾಗಿಸಬೇಕೆಂಬ ಅಣ್ಣನ ಕನಸನ್ನು ನನಸಾಗಿಸಲು ಕಾಲಕ್ರಮೇಣ ಸೀತಾ ಸ್ವಯಂವರ ,ಸೋಹೋಂ, ಪ್ರಪಂಚ ಪರೀಕ್ಷೆ ಎಂಬ ಅನೇಕ ಸಣ್ಣಪುಟ್ಟ ನಾಟಕಗಳಲ್ಲಿ ಸುಮಾರು ಒಂದು ದಶಕದ ಕಾಲ ಸ್ತಿçà ಪಾತ್ರವನ್ನೇ ಮಾಡುತ್ತಾ ಬಂದರು. ಅಲ್ಲದೇ ಆ ಎಳೆ ವಯಸ್ಸಿನಲ್ಲಿ ಸ್ತಿçÃಯರನ್ನು ನಾಚಿಸುವ ಚೆಲುವನ್ನು ಹೊಂದಿದ್ದರು. ರಂಗದ ಹಸಿವು ನೀಗದ ಶ್ರೀಯುತರಿಗೆ ತದನಂತರ ದೇಹದ ಗುಣಧರ್ಮಕ್ಕನುಗುಣವಾಗಿ ಪೌರಾಣಿಕ, ಸಾಮಾಜಿಕ ಐತಿಹಾಸಿಕ ನಾಟಕಗಳಲ್ಲಿ ಭಾಗವಹಿಸಿ ಭೀಮ , ಅಶ್ವಥಾಮ, ದುರ್ಯೋಧನ, ಶಕುನಿ, ಅಂಗುಲಿಮಾಲ ಹೀಗೆ ಹಲವು ಪಾತ್ರಗಳ ಮೂಲಕ ಮನೆಮಾತಾದರು.
ರಂಗ ಪ್ರೇರಕರು:
ರಂಗ ಗುರು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗುರುಗಳಾಗದ್ದಲ್ಲದೆ ೧೪ ವರ್ಷ ರಂಗಾಭ್ಯಾಸ ಮಾಡಿ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ‘ಮಲ್ಲಮ್ಮ' ನ ಪಾತ್ರವನ್ನು ೪೦೦ ಪ್ರದರ್ಶನ ಮಾಡಿದ ದೇವರಾಜ ಗವಾಯಿ ಅಂಬಳಿಯವರ ಹಿರಿಮೆಯೇ ಇವರಿಗೆ ಸ್ತಿçà ಪಾತ್ರ ಮಾಡಲು ಪ್ರೇರಣೆಯಾಯ್ತು ಎಂದಿದ್ದಾರೆ. ಕರ್ನಾಟಕದ ಶೇಕ್ಸಿ÷್ಪಯರ್ ಕಂದಗಲ್ ಹನುಮಂತರಾಯರು ಬರೆದ ಒಟ್ಟು ೩೬ ನಾಟಕಗಳಲ್ಲಿ ಅತಿ ಹೆಚ್ಚು ಪ್ರಾಶಸ್ತ÷್ಯ ಪಡೆದ ಮತ್ತು ಗೋಕಾಕ್ ಬಸವಣ್ಣಪ್ಪ ನಾಟಕ ಕಂಪನಿ ವತಿಯಿಂದ ಬಳ್ಳಾರಿಯಲ್ಲಿ ಪ್ರಥಮ ಪ್ರದರ್ಶನ ಕಂಡAತಹ ನಾಟಕ ರಕ್ತರಾತ್ರಿ. ಅದನ್ನು ತಮ್ಮ ಪಕ್ಕದ ಪುಟ್ಟಹಳ್ಳಿ ಚಿಮ್ನಳ್ಳಿಯಲ್ಲಿ ಶಿವರಾತ್ರಿಯಿಂದ ಮುಂಗಾರು ಮಳೆಯವರಿಗೆ ನಡೆಯುತ್ತಿದ್ದ ದೊಡ್ಡ ಜಾತ್ರೆಯಲ್ಲಿ ೨ ವೃತ್ತಿನಾಟಕ ಕಂಪನಿಯಲ್ಲಿ ನೋಡಿ ರಕ್ತರಾತ್ರಿ ನಾಟಕದೊಲವು ತಮ್ಮೊಳಗೆ ಬೆಳೆಸಿಕೊಂಡರು.
ಶ್ರೀಯುತರ ಇಷ್ಟಾರ್ಥದ ರಂಗದ ಹೂಗಳು:
ಪೌರಾಣಿಕ ಹಿನ್ನೆಲೆಯಲ್ಲಿ ನಟನೆ ಮಾಡುವ ಪೌರಾಣಿಕ ನಾಟಕದ ಕಥಾಭಾಗಗಳು ಮನಸ್ಸಿಗೆ ಮುದ ನೀಡಿದರೆ, ಐತಿಹಾಸಿಕ ನಾಟಕಗಳು ನಾಡು-ನುಡಿ ಸ್ವಾಭಿಮಾನದ ಕಿಚ್ಚನ್ನು ಹೊತ್ತಿಸುತ್ತವೆ. ಇನ್ನು ಸಾಮಾಜಿಕ ನಾಟಕಗಳು ಸಮಾಜದ ಓರೆಕೋರೆಗಳನ್ನು, ಬದುಕಿನ ಏರಿಳಿತಗಳನ್ನು ಪ್ರತಿಬಿಂಬದAತೆ ರಂಗದ ಮೇಲೆ ತೋರ್ಪಡಿಸುತ್ತವೆ. ಈ ಮೂರು ಪ್ರಕಾರದ ನಾಟಕಗಳಲ್ಲಿ ಅಭಿನಯಿಸಿದರೂ , ರುದ್ರ ಮಯವಾದ ಭೀಮ, ದುರ್ಯೋಧನ, ಶಕುನಿ, ಅಶ್ವತ್ಥಾಮ, ಅಂಗುಲಿಮಾಲ ಪಾತ್ರಗಳು ಇವರಿಗೆ ಅಧಿಕ ತೃಪ್ತಿಯನ್ನು ನೀಡಿವೆ. ಆದರೆ ಕ್ರೂರತೆಯಿಂದ ಸೌಮ್ಯತೆ ಕಡೆಗೆ ಬದುಕಿನ ಹಾದಿ ಸಾಗುವ ಮತ್ತು ನರಹಂತಕನಾದ ಅಂಗುಲಿಮಾಲ ಶಾಂತಿಪ್ರಿಯ ಬುದ್ಧನ ವಾತ್ಸಲ್ಯ ಮತ್ತು ಪ್ರೇರಣೆಗೆ ಮಾರುಹೋಗಿ ಶಿಷ್ಯನಾಗುವ ಕಥಾವಸ್ತುವಿನ ಡಾ.ಪ್ರಭುಶಂಕರ್ ವಿರಚಿತ ಅಂಗುಲಿಮಾಲ ನಾಟಕ ಇವರಿಗೆ ರಂಗಭೂಮಿಯಲ್ಲಿ ಮೊದಲಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟ ಮತ್ತು ತುಂಬಾ ಇಷ್ಟದ ನಾಟಕವಾಗಿದೆ. ಇದರ ನಂತರ ಭಾರತೀಯ ನಾರಿಯರ ಪಾತಿವ್ರತೆಯ ಮಹತ್ವವನ್ನು ಎತ್ತಿ ಹಿಡಿಯುವ ನಾಟಕಗಳಲ್ಲಿ ಒಂದಾದ ನಾಲ್ವಡಿ ಶ್ರೀಕಂಠಶಾಸ್ತಿç ವಿರಚಿತ ಹೇಮರೆಡ್ಡಿ ಮಲ್ಲಮ್ಮ. ಈ ನಾಟಕದಲ್ಲಿ ಪೂರ್ವಾರ್ಧ ಮತ್ತು ಉತ್ತರಾರ್ಧ ಎಂಬ ಎರಡು ಭಾಗಗಳಿವೆ ಮೊದಲ ಭಾಗದಲ್ಲಿ ಪ್ರಾಪಂಚಿಕ ವಿಷಯಗಳನ್ನು, ಎರಡನೇ ಭಾಗದಲ್ಲಿ ಪಾರಮಾರ್ಥದ ವಿಷಯಗಳನ್ನು ಚರ್ಚಿಸಲಾಗಿದೆ. ವಯಸ್ಸು, ಪರಿಸರ, ಸ್ನೇಹ, ಸಹವಾಸದಿಂದಾಗಿ ವಿಷಯಾಸಕ್ತನಾಗಿ ಅಧರ್ಮ ಮಾರ್ಗದಿ ನಡೆದು ಕೊನೆಯಲ್ಲಿ ನಗ್ನ ಸತ್ಯಗಳನ್ನು ಅರಿತು ಸರ್ವಜ್ಞನ ಎತ್ತರಕ್ಕೆ ಬೆಳೆಯುವ ವೇಮನ ಪಾತ್ರ ಇವರಿಗೆ ಅಧಿಕ ಹುಮ್ಮಸ್ಸು ನೀಡಿದ ಪಾತ್ರವಾಗಿದೆ.
ಹುಟ್ಟೂರಿನಲ್ಲಿ ಕಲಾ ಸಂಘದ ಸ್ಥಾಪನೆ:
ಇವರು ತಮ್ಮ ರಂಗ ಸಂಚಾರದ ಮೂಲಕ ಪಡೆದ ಹಲವು ಅನುಭವಗಳನ್ನು ಹಿರಿಯ-ಕಿರಿಯ ಎನ್ನದೆ ಎಲ್ಲಾ ರಂಗಾಸಕ್ತರಿಗೆ ಧಾರೆಯೆರೆಯುವ ಸಲುವಾಗಿ ಕ್ರಿ.ಶ.೧೯೭೬ ರಲ್ಲಿ ‘ಶ್ರೀ ಮಾರುತಿ ನಾಟ್ಯ ಸಂಘ'ವನ್ನು ಕೋಗಳಿಯಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ವಿಭಿನ್ನ ಶೈಲಿಯಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವ ಸಲುವಾಗಿ ಸ್ವತಃ ನಾಟಕಗಳನ್ನು ರಚಿಸಿ,ನಿರ್ದೇಶಿಸಿ, ಅಭಿನಯಿಸಿದರು. ಅಭಿನಯದ ಜೊತೆ ಜೊತೆಯಲಿ ಸಂಗೀತದ ಆಸ್ವಾದವನ್ನು ಹಚ್ಚಿಸಿಕೊಂಡು, ಅದನ್ನು ಪಡೆಯಲೆಂದು ಮತ್ತು ಇತರರಿಗೆ ಹಂಚಲೆAದು ಕ್ರಿ.ಶ.೧೯೭೮ ರಲ್ಲಿ ‘ಗಾನಯೋಗಿ ಪಂಡಿತ ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆ' ಸ್ಥಾಪಿಸಿದರು. ಅಲ್ಲದೆ ಪ್ರಥಮ ಗುರುಗಳಾದ ಲಿಂಗೈಕ್ಯ ಗುರುಸಿದ್ದಯ್ಯನವರ ಹೆಸರಲ್ಲಿ ಪ್ರತಿವರ್ಷ ಸಂಗೀತ ಕಛೇರಿಯನ್ನು ಏರ್ಪಡಿಸಿ ಇಡೀ ಸುತ್ತಮುತ್ತಲಿನ ಊರಿನ ಎಲ್ಲರಿಗೂ ಸಂಗೀತ ರಸಸ್ವಾಧವನ್ನು ಉಣ ಬಡಿಸಿದರು.
ಕನ್ನಡ ರಂಗಭೂಮಿಯ ಮಹತ್ವದ ಅರಿವು:
ಒಮ್ಮೆ ಹೊರರಾಜ್ಯ ನಾಟಕೋತ್ಸವಕ್ಕಾಗಿ ಬಾಂಬೆಗೆ ಹೋದಾಗ 'ಅಯ್ಯೋ ! ಇಲ್ಲಿ ಯಾರು ಬಂದು ಕನ್ನಡ ನಾಟಕ ನೋಡ್ತಾರೆ ' ಎಂದು ಕಡೆಗಣಿಸಿದ ಪಂಪಣ್ಣನವರಿಗೆ ತಾವು ಮೇಕಪ್ ಮಾಡಿಕೊಂಡು ರಂಗಕ್ಕೆ ಬರುವ ಮುನ್ನವೇ ಇಡೀ ರಂಗಮAದಿರ ಹೌಸ್ಫುಲ್ ಆಗಿತ್ತು. ಆವತ್ತೇ ನನಗೆ ನನ್ನ ಕನ್ನಡ ಭಾಷೆ ಮತ್ತು ಕನ್ನಡ ರಂಗಭೂಮಿಗೆ ಇರುವ ಮನ್ನಣೆಯ ಸಂಗತಿ ಅರಿವಾಯಿತೆಂದು ನೆನೆದಿದ್ದಾರೆೆ. ಇದಲ್ಲದೇ ಗ್ರಾಮೀಣ ಭಾಗದ ಕಲಾಸಕ್ತರಿಗೆ ಕಲೆ ಬಹುಬೇಗ ಸಿದ್ದಿಸುತ್ತದೆ. ಏಕೆಂದರೆ ಅವರುಗಳು ಪ್ರಕೃತಿಯನ್ನು ಮತ್ತು ತಾವಿರುವ ತಾಣವನ್ನೆ ರಂಗಸ್ಥಳವನ್ನಾಗಿಸಿಕೊAಡು ಪ್ರತಿ ಕ್ಷಣವೂ, ಪ್ರತಿದಿನವೂ ನಟನಾಗಿ ರಂಗಪಠ್ಯವನ್ನು ಗುನುಗುನಿಸುತ್ತಿರುತ್ತಾರೆ. ಇದು ಕಲಾ ಪ್ರಯೋಗದವರೆಗೂ ಮುಂದುವರೆದು, ಪ್ರಯೋಗವಾದ ನಂತರ ನಿರಾಳರಾಗುತ್ತಾರೆ. ಆದರೆ ಅದರ ನಂಟು ಹಾಗೇಯೇ ಸೂಪ್ತವಾಗಿರುತ್ತದೆ. ಸೂಕ್ತ ಸಮಯದಲ್ಲಿ ಮತ್ತೆ ಹೊರಬರುತ್ತದೆ. ಇದು ಒಂದು ರೀತಿಯಲ್ಲಿ ಪ್ರಸವದಂತೆ ಭಾಸವಾಗುತ್ತದೆ. ಅಂತೆಯೇ ಇವರು ಸಹ ಮೂಲತಃ ಕೃಷಿಕರಾಗಿದ್ದರಿಂದ ಹೊಲ ಗದ್ದೆಯಲ್ಲಿ ಬೇಸಾಯದ ಸಮಯದಲ್ಲಿ ಕೃಷಿ ಉಪಕರಣಗಳನ್ನು ರಂಗಪರಿಕರಗಳನ್ನಾಗಿ ಮಾಡಿಕೊಂಡು ಸ್ವಯಂ ರಂಗತಾಲೀಮು ಮಾಡುತ್ತಿದ್ದರು.
ಪಂಪಣ್ಣನವರಿಗೆ ರಂಗ ಸ್ಥಿತಪ್ರಜ್ಞೆಯ ವರದಾನವಿತ್ತು.
ರಂಗದ ಮೇಲೆ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ ಸಹ ಪಾತ್ರಧಾರಿಯೊಂದಿಗೆ ಸ್ಥಿತಪ್ರಜ್ಞೆ ಯನ್ನು ಹೊಂದಿರಬೇಕು ಇಲ್ಲದಿದ್ದರೆ ನಾಟಕಕ್ಕೆ ಧಕ್ಕೆ ಉಂಟಾಗುತ್ತದೆ. ಅದಕ್ಕೆ ನಿದರ್ಶನ ಎಂಬAತೆ ಶ್ರೀಯುತರ ರಂಗ ಬದುಕಿನ ಕೆಲವು ಉದಾಹರಣೆ ಇಲ್ಲಿವೆ.
ಒಮ್ಮೆ ಕಂದಗಲ್‌ರ ಚಿತ್ರಾಂಗದ ನಾಟಕದಲ್ಲಿ ಚಿತ್ರಾಂಗದೆಯಾಗಿದ್ದ ಡಾ ಸುಭದ್ರಮ್ಮ ಮನ್ಸೂರ್ ಅವರೊಂದಿಗೆ ಅಭಿನಯಿಸುವಾಗ ಇವರು ಅರ್ಜುನ ಪಾತ್ರದಲ್ಲಿ ಮತ್ತು ಉಲುಚಿ ಪಾತ್ರದಲ್ಲಿ ಕೆ.ನಾಗರತ್ನಮ್ಮರೊಂದಿಗೆ ಅರ್ಜುನನ ಪಾದ ತೊಳೆದು ಹಸ್ತಿನಾವತಿಗೆ ಬಿಳ್ಕೊಡುವ ಸನ್ನಿವೇಶವನ್ನು ಅಭಿನಯಿಸುವಾಗ (ಸಾಮಾನ್ಯವಾಗಿ ಹಳ್ಳಿಯಲ್ಲಿ ಕೆಲವು ರಂಗಪರಿಕರಗಳು ಸಮಯಕ್ಕೆ ಸರಿಯಾಗಿ ದಕ್ಕುವುದಿಲ್ಲ.) ಸಮಯಕ್ಕೆ ಸರಿಯಾಗಿ ಪಾತ್ರೆ, ತಂಬಿಗೆ, ಹೂ ಸಿಗಲಿಲ್ಲ ಆಗ ಇವರು ಪಾತ್ರಧಾರಿಗಳನ್ನು ವಿಚಲಿತರಾಗಿಸದೆ ತಕ್ಷಣವೇ " ಚಿತ್ರಾ! ಪಾದ ಪೂಜೆಯನು ಮಾಡಿ ಪತಿರಾಯನನ್ನು ಹಸ್ತಿನಾವತಿಗೆ ಕಳಿಸಿಕೊಡಬೇಕೆಂಬ ಬಯಕೆಯಿಂದ ಮಿಡುಕುತ್ತಿರುವೆಯಾ? ನಿನ್ನ ಮನದಾಸೆಯಂತೆ ನನ್ನ ಪಾದಪೂಜೆಯನು ನಿನ್ನ ಅಂತಃಪುರದಲ್ಲಿ ನೆರೆವೇರಿಸುವಂತೆ ನಡೆ" ಎಂದು ಒಳಗೆ ಕರೆದೊಯ್ದು ಸನ್ನಿವೇಶವನ್ನು ಸಮಸ್ಯೆಯಿಂದ ಪಾರಾಗಿಸಿದರು.
ಇನ್ನೊಮ್ಮೆ ಅದೇ ನಾಟಕದಲ್ಲಿ ತೀರ್ಥಯಾತ್ರೆಗೆ ಹೊರಟ ಅರ್ಜುನ ಮತ್ತು ಬೇಡ ಒಂದೇ ಹುಲಿಗೆ ಇಬ್ಬರು ಬಾಣ ಪ್ರಯೋಗಿಸಿ ಕಲಹದ ಸನ್ನಿವೇಶಕ್ಕೆ ರಂಗದ ಹಿನ್ನೆಲೆಯಿಂದ ಹೋಗಬೇಕು. ಆಗ ಸಹನಟರ ಗೊಂದಲದ ಸಲಹೆಗಳಿಂದಾಗಿ ಯಾವ ಪರಿಕರವನ್ನು ಒಯ್ಯದೆ ತರಾತುರಿಯಲ್ಲಿ ಬರಿಗೈಯಲ್ಲಿ ರಂಗಕ್ಕೆ ಬಂದಾಗ ಅಲ್ಲಿ ನ್ಯಾಯ ತೀರ್ಮಾನಕ್ಕಾಗಿ ವೃಕ್ಷವೊಂದನ್ನು ಬಿಲ್ವಿದ್ಯೆ ಮೂಲಕ ಹೊಡೆದುರುಳಿಸುವ ಪ್ರಸಂಗ ಎದುರಾಯಿತು. ಆಗ ಬರಿಗೈಲಿ ಬಂದ ಪಂಪಣ್ಣನವರು ತಬ್ಬಿಬ್ಬಾಗದೆಆ ಕ್ಷಣವೇ " ಶುದ್ಧ ಸುವರ್ಣದ ಬೆಲೆಯು ಅರಿಯ ಬೇಕಾದರೆ, ಕಾಠಿಣ್ಯ ಮಯವಾದ ಒರೆಗಚ್ಚಿದ ಮೇಲಲ್ಲವೆ? ಮಣಿಪುರದ ಅರಸುಕುಮಾರಿ ನಿಮ್ಮ ಧನುವನ್ನು ಕೊಡಿ ಪಾತಾಳಲೋಕದ ಕುವರಿ ನಿಮ್ಮಕುರ್ಗಣಿಯ ಕೊಡಿ" ಎಂದು ಅವರಿರ್ವರ ಬಿಲ್ಲು ಬಾಣದಿಂದ ಹೊಡೆದು ಸನ್ನಿವೇಶವನ್ನು ಅನುಮಾನಕ್ಕೆಡೆ ಇಲ್ಲದೆ ಮುಕ್ತಾಯ ಮಾಡಿದ ಪ್ರಚಂಡ ನಟರಾಗಿದ್ದರು. ಆದ್ದರಿಂದ ರಂಗದ ಮೇಲೆ ಪ್ರತಿಯೊಬ್ಬರಿಗೂ ಸ್ಥಿತಪ್ರಜ್ಞೆ ಇದ್ದರೆ ಸಹೃದಯರಿಗೆ ಅಭಾಸವಾಗದಂತೆ ನಾಟಕವನ್ನು ಪ್ರದರ್ಶಿಸಬಹುದು. ಪ್ರತಿ ಉತ್ತಮ ನಾಟಕಕ್ಕೆ ಹಲವು ಅನುಭವಗಳು, ರಂಗ ತಾಲೀಮುಗಳು ಅತ್ಯಾವಶ್ಯಕ. ಅನುಭವಗಳು ಇಲ್ಲದಿದ್ದರೆ, ನಾಟಕದಲ್ಲಿ ಅಚಾತುರ್ಯಗಳು ಹೆಚ್ಚಾಗಿರುತ್ತವೆ ಎಂದೆಣಿಸಿದ್ದರು. ಇವರು ಅನೇಕ ವಿದ್ವನ್ಮಣಿಗಳ ಪುಸ್ತಕಗಳನ್ನು ಓದಲು ಅಸಮರ್ಥರಾಗಿದ್ದರೂ ರಂಗಭೂಮಿಯೇ ಪಾಠಶಾಲೆ, ನಾಟಕಗಳೇ ಇವರಿಗೆ ನೈಜ ಗುರುವಾಗಿದ್ದವು. ಈ ಮೂಲಕ ಪರೋಕ್ಷವಾಗಿ ಶಾಲಾ ಶಿಕ್ಷಣಕ್ಕಿಂತ ರಂಗ ಶಿಕ್ಷಣವೇ ಸತ್ವಯುತ ಶಿಕ್ಷಣ ಮಾಧ್ಯಮವಾಗಿದೆ ಎಂದಿದ್ದಾರೆ.
ಪAಪಣ್ಣನವರು ರಚಿಸಿದ ನಾಟಕಗಳು:
ಓದಿದ್ದು ನಾಲ್ಕನೇ ತರಗತಿ ಯಾದರೂ,ರಂಗಭೂಮಿ ಇವರಿಗೆ ಜ್ಞಾನದ ಕಣಜವನ್ನು ತುಂಬಿ ಕೊಟ್ಟಿತು ಅಂತೆಯೇ ರಂಗಭೂಮಿಯ ಅನುಭವಗಳನ್ನು ಮತ್ತು ಸಾಮಾಜಿಕ ಸವಾಲುಗಳನ್ನು ಸಮ್ಮಿಶ್ರಗೊಳಿಸಿ ನಾಟಕಗಳನ್ನು ರಚಿಸಿದ್ದಾರೆ.
ಅವುಗಳೆಂದರೆ-
ಯಾರು ನನ್ನವರು?
ಇದು ಯಾರ ತಪ್ಪು?
ಇವನು ನನ್ನ ಗೆಳೆಯನೇ? ಇನ್ನು ಮುಂತಾದವು.
ಇವರಿಗೆ ಸಂದ ಪ್ರಮುಖ ಪ್ರಶಸ್ತಿಗಳು
ಅಪ್ಪಟ ಗ್ರಾಮೀಣ ಪ್ರತಿಭೆಯೆನಿಸಿದ ಪಂಪಣ್ಣನವರು ನಾಡಿನ ಉದ್ದಗಲಕ್ಕೂ ಸಂಚರಿಸಿ ತಮ್ಮ ಕಲಾ ಪ್ರೌಢಿಮೆಯ ಮೂಲಕ ಕಲಾಸಕ್ತರ ಮನಸನದನು ಮುದಗೊಳಿಸಿದ್ದಾರೆ. ಅಂತೆಯೇ ಕಲಾರಸಿಕರೆಲ್ಲರೂ ಸೇರಿ ಮಹನೀಯರಿಗೆ ಹಲವು ಪ್ರಶಸ್ತಿಗಳು ನೀಡಿದ್ದಾರೆ.ಅಂತೆಯೇ ಹತ್ತು ಕಟ್ಟುವಲ್ಲಿ ಮುತ್ತು ಕಟ್ಟು ಎಂಬAತೆ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ. ಅವುಗಳೆಂದರೆ -
* ಬಳ್ಳಾರಿ ರಾಘವ ಪ್ರಶಸ್ತಿ
* ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
* ಪ್ರಶಸ್ತಿ ಜ್ಯೋತಿ ಬಳಗ ಮತ್ತು ಆಂಜನೇಯ ಕಲಾಸಂಘ ಬಳ್ಳಾರಿ ಇವರಿಂದ ನಾಟ್ಯ ಕಲಾಭೂಷಣ ಪ್ರಶಸ್ತಿ.
* ಹಗರಿಬೊಮ್ಮಹಳ್ಳಿ ತಾಲೂಕಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
* ಕರ್ನಾಟಕ ಸರ್ಕಾರದ ೨೦೧೮-೧೯ ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಇವರ ರಂಗ ಮುಡಿಗೆ ಸೇರಿದೆ.
ಕಲೆ ಪ್ರತಿಯೊಬ್ಬರಲ್ಲೂ ಸೂಪ್ತವಾಗಿರುತ್ತದೆ. ಆದರೆ ವಿನಯಶೀಲ ಕಲಾ ಪ್ರತಿಮೆ ಕೆಲವರಲ್ಲಿ ಮಾತ್ರ ಅಂತರ್ಗತವಾಗಿರುತ್ತದೆ. ಅಂತವರಲ್ಲೂ ಅಪ್ಪಟ ಗ್ರಾಮೀಣ ಪ್ರತಿಭೆಯೆನಿಸಿದ ಎಂ.ಪAಪಣ್ಣನವರು ಮೊದಲಿನ ಸಾಲಿಗೆ ಅರ್ಹರು. ಕೋಗಳಿ ಎಂಬ ಪುಟ್ಟ ಗ್ರಾಮದಿಂದ ಬೆಂಗಳೂರಿನAಥ ದೊಡ್ಡ ನಗರದವರೆಗೂ ರಾಜ್ಯದ ಹಲವು ಜಿಲ್ಲೆಗಳಿಗೆ ತಮ್ಮ ಕಲಾ ನೈಪುಣ್ಯತೆಯನ್ನು ಬೇಧವಿಲ್ಲದೇ ಹರಡಿದರು. ಅಲ್ಲದೇ ಡಿ.ದುರ್ಗದಾಸ್, ಡಾ. ಪ್ರಭುಶಂಕರ್,ಚಲನಚಿತ್ರ ನಟ ಸುಧೀರ್, ಎಲಿವಾಳ ಸಿದ್ದಯ್ಯಸ್ವಾಮಿ ಶ್ರೀಮತಿ ಧುತ್ತರಗಿ ಸರೋಜಮ್ಮ, ಜುಬೇದಾ ಬಾಯಿ ಸವಣೂರು, ಡಾ.ಸುಭದ್ರಮ್ಮ ಮನ್ಸೂರ್, ಪ್ರಮೀಳಮ್ಮ ಗುಡೂರು ಅನೇಕ ಕಲಾ ದಿಗ್ಗಜರಿಂದ ಬಣ್ಣ ಹಚ್ಚಿಕೊಂಡು ಆಗಾಧವಾದ ರಂಗಸೇವೆಗೈದಿದ್ದಾರೆ.
ಇಡೀ ರಂಗಕುಲಕ್ಕೆ ತಮ್ಮ ವಿನಯವಂತಿಕೆಯ ಜಾಣ್ಮೆಯಿಂದಲೇ “ನಾಟಕದಲ್ಲಿ ಪಾತ್ರಗಳು ಚಿಕ್ಕದೇ ಇರಲಿ ದೊಡ್ಡದೇ ಇರಲಿ ಆ ಪಾತ್ರಕ್ಕೆ ನ್ಯಾಯವನ್ನು ಒದಗಿಸುವ ಮತ್ತು ಪ್ರೀತಿ ಕಾಳಜಿಯನ್ನು ತೋರುವ ಯೋಗ್ಯತೆ ಕಲಾವಿದರಾದವರಿಗೆ ಅತಿಮುಖ್ಯವಾಗಿ ಇರಬೇಕಾದ ಅರ್ಹತೆ. ಆ ಅರ್ಹತೆಯನ್ನು ದಕ್ಕಿಸಿಕೊಳ್ಳಲು ವಿನಯಪೂರ್ವಕವಾದ ಶ್ರಮ ಮತ್ತು ಶ್ರದ್ಧೆಯಿದ್ದರೆ ಸಾಧ್ಯ” ಎಂದು ಇಂದಿನ ಉದಯೋನ್ಮುಖ ಕಲಾವಿದರಿಗೆ ಶ್ರೀಯುತರು ನೀಡಿದ ವರದಾನವಾಗಿದೆ. ಇಂತಹ ಮಹನೀಯರ ನುಡಿಗಳ ನೆರಳಿನಲ್ಲಿ ನಾವೂ ನೀವು ಸಾಗಿ ಕಲಾಶ್ರೀಮಂತಿಕೆಯನ್ನು ಗಳಿಸೋಣ ಎಂಬುದೇ ಈ ಲೇಖನದ ಆಶಯ.
ಲೇಖನ : ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿ ಮತ್ತು ಬರಹಗಾರರು
mob-೯೩೭೯೮೫೭೭೭೫
mಚಿಟಿರಿuಚಿmಚಿziಟಿg೭@gmಚಿiಟ.ಛಿom

Comments
Post a Comment