ರಂಗ ಮಾಲಿಕೆ-೯- ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮ
ಬಣ್ಣದ ಬದುಕು
ರಂಗ ಮಾಲಿಕೆ - ೯
*ಎಂದೂ ಬಾಡದ ರಂಗ ಪುಷ್ಪ ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮ.*
ಕರ್ನಾಟಕದ ಸಾಂಸ್ಕೃತಿಕ ಲೋಕದ ಶ್ರೀಮಂತ ಜಿಲ್ಲೆ ಬಳ್ಳಾರಿ ಜಿಲ್ಲೆ.ಅದಕ್ಕೆ ಉತ್ತಮ ನಿದರ್ಶನವೆಂದರೆ ಮರಿಯಮ್ಮನಹಳ್ಳಿ . ಪುರಾತನ ಕಾಲದ ನಾಣಿ ಕೆರೆ ಅಥವಾ ನಾರಾಯಣದೇವರಕೆರೆಯಲ್ಲಿದ್ದ ದೇವದಾಸಿ ಮಹಿಳೆಯರೆಲ್ಲಾ ತುಂಗಭದ್ರಾ ಅಣೆಕಟ್ಟು ನಿರ್ಮಾಣದಿಂದಾಗಿ ಇದ್ದ ಸ್ಥಳವನ್ನು ಕಳೆದುಕೊಂಡು ಇಂದಿನ ಮರಿಯಮನಹಳ್ಳಿಗೆ ಬಂದು ರಂಗ ಕಲಾವಿದರಾಗಿದ್ದಾರೆ. ರಂಗಭೂಮಿಯನ್ನು ತಮ್ಮ ಜೀವಾಳವನ್ನಾಗಿಸಿಕೊಂಡಿದ್ದಾರೆ. ಅಲ್ಲದೆ ಕನ್ನಡ ರಂಗಭೂಮಿಗೆ ದುರ್ಗಾದಾಸ್,ಡಿ.ಪಾರ್ವತಮ್ಮ, ತಳವಾರ ಹನುಮಂತಮ್ಮ , ಎಲಿವಾಳ ಸಿದ್ದಯ್ಯ ಸ್ವಾಮಿಯ ರಂತಹ ಮೊದಲ ಪೀಳಿಗೆಯ ನಟ-ನಟಿಯರನ್ನು ನೀಡಿದ ಹಳ್ಳಿಯಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ವಿವಿಧ ಬಗೆಯ ಅನೇಕ ಕಲಾವಿದರಿದ್ದಾರೆ. ಅಂತೆಯೇ ಹಳ್ಳಿಯನ್ನು "ಕಲಾವಿದರ ತವರೂರು , ಕಲಾವಿದರ ಸ್ವರ್ಗ" ಎಂತಲೂ ಕರೆಯುವುದುಂಟು. ಇಂತಹ ಹಳ್ಳಿಯಲ್ಲಿ ಜನಿಸಿದ ಹೂವೊಂದು ನಾಡಿನಾದ್ಯಂತ ಗಂಧವನ್ನು ಪಸರಿಸಿ ಹೆಸರಾಗಿದೆ ಡಾ. ಕೆ.ನಾಗರತ್ನಮ್ಮ.
ಬಾಲ್ಯ : ಇವರು ೧೯೫೨ ರಲ್ಲಿ ಕಣಿವೆ ಬಸಾಪುರದಲ್ಲಿ ಜನಿಸಿದರು. ಟಿಬಿ ಡ್ಯಾಮ್ ಕಟ್ಟುವ ಸಮಯದಲ್ಲಿ ಇವರ ತಾಯಿ ತುಂಬು ಗರ್ಭಿಣಿ ಆಗ ಒಮ್ಮೆಲೆ ಬಿಡಲಾಗದೆ ಸಮೀಪದಲ್ಲಿದ್ದ ದೇವಲಾಪುರ ಬಂದು ನೆಲೆಸುತ್ತಾರೆ. ಮಾರಪ್ಪ ಮತ್ತು ಸಿದ್ದಮ್ಮ ಎಂಬ ಬಡ ದಂಪತಿಗಳ ೭ ಮಕ್ಕಳಲ್ಲಿ ನಾಗರತ್ನಮ್ಮನವರು ಹಿರಿಯರು ತಂದೆ ಮರಿಯಮ್ಮನಹಳ್ಳಿ ಯಲ್ಲಿ ದಲ್ಲಾಳಿ ಕೆಲಸ ಮತ್ತು ತಾಯಿ ಕೂಲಿ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಪ್ರತಿನಿತ್ಯ ದೇವಲಾಪುರ ದಿಂದ ಮರಿಯಮ್ಮನಹಳ್ಳಿ ಗೆ ಓಡಾಡಲು ಕಷ್ಟವಾಗುವ ಕಾರಣ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ಮರಿಯಮ್ಮನಹಳ್ಳಿ ಗೆ ಬಂದು ಸೇರಿದರು. ಇವರ ಪ್ರಾಥಮಿಕ ಶಿಕ್ಷಣ ದೇವಲಾಪುರ ಮತ್ತು ಮರಿಯಮ್ಮನಹಳ್ಳಿ ಯಲ್ಲಿ ಸಾಗಿತ್ತು. ಬಾಲ್ಯದಿಂದಲೂ ಇವರು ಶಾಂತ ಸ್ವಭಾವದವರು. ಇವರ ಶಾಲಾ ಹಂತದ ಹೆಸರು ಬಾಲ ನಾಗರತ್ನಮ್ಮ , ಕೆ.ಬಾಲ ನಾಗರತ್ನಮ್ಮ ,ಬಿ.ಕೆ.ಬಾಲ ನಾಗರತ್ನಮ್ಮ ಎಂಬ ಹೆಸರಿನಿಂದ ಕರೆದದ್ದುಂಟು. ಬಾಲ್ಯದ ದಿನಗಳಲ್ಲಿ ಇವರ ಕುಟುಂಬದ ಕಷ್ಟ ಹೇಳತೀರದು ಎರಡು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ. ಅಂತಹ ದಿನಗಳಲ್ಲೂ ಸಹ ಶಾಲೆಯಲ್ಲಿ ನೀಡಿದ ೨ ರೊಟ್ಟಿಯನ್ನು ಮನೆಗೆ ತಂದು ತನ್ನ ತಂಗಿಯರೊAದಿಗೆ ಹಂಚಿತಿನ್ನುವ ಮುಗ್ಧ ಕರುಣಾಮಯಿ.
ರಂಗದೊಲವು: ಇವರಿಗೆ ರಂಗಭೂಮಿಯ ಒಲವು ಮೂಡಿತು ಶಾಲಾ ಹಂತದಲ್ಲಿ ಅಂತೆಯೇ ಅದಕ್ಕೆ ನಿದರ್ಶನವೆಂಬAತೆ ಇವರ ಮೊದಲ ಅಭಿನಯದ ಚಹರೆ ಗವಾಕ್ಷಿ ಪ್ರೊಡಕ್ಷನ್ ೭ನೇ ತರಗತಿಯಲ್ಲಿದ್ದ ಮೈಲಾರಪ್ಪ ಎಂಬ ರಂಗ ಗುರುವಿನ ಮೂಲಕ ಕಂಡುಬAತು. ಇವರ ಅಭಿನಯದ ಜಾದುವನ್ನು ಕಂಡ ಬಯಲಾಟದಲ್ಲಿ ಸಣ್ಣಪುಟ್ಟ ಪಾತ್ರದ ಮೂಲಕ ರಂಗದ ನಂಟನ್ನು ಹೊಂದಿದ್ದ ತಂದೆಗೆ ಮಗಳನ್ನು ದೊಡ್ಡ ನಟಿಯನ್ನಾಗಿಸುವ ಕನಸನ್ನು ಹೊಂದಿದ್ದರು.ಆಗ ೧೯೬೭-೬೮ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಶಿಕ್ಷಕಿಯಾಗುವ ಆಸೆಯ ಹೊಸ್ತಿಲಲ್ಲಿದ್ದ ಇವರಿಗೆ ಅಪ್ಪನ ಒತ್ತಾಯಕ್ಕೆ ಮತ್ತು ಬಡತನದ ನೊಗವನ್ನು ಹೋರಲೇಬೇಕಾದ ಅನಿವಾರ್ಯ ಕಾರಣಕ್ಕೆ ಒಲಿದಿದ್ದು ರಂಗಭೂಮಿ.ಅAತೆಯೇ ಆಕಸ್ಮಿಕವಾಗಿ ೧೯೬೮ರಲ್ಲಿ ಸ್ಥಳೀಯ ರಂಗಕರ್ಮಿ ನಾಗಪ್ಪರ ಮನವಿಗೆ ಓಗೊಟ್ಟು ಹಂಪಸಾಗರದಲ್ಲಿ ಪರಮೇಶ್ವರಪ್ಪ ರಚನೆಯ ಕತ್ತಲೆ ಬೆಳಕು ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿ ಜನಮನ್ನಣೆ ಗಳಿಸಿದರು. ಅಂದಿನಿAದ ಕಲೆಯ ಮೂಲಕ ಇವರ ಕೈ ತುಂಬಿದ ಹಣ ಮತ್ತು ಕಿತ್ತು ತಿನ್ನುವ ಬಡತನ ಇವರ ಬದುಕಿನ ದಿಕ್ಕನ್ನು ಬದಲಾಗುವಂತೆ ಮಾಡಿತು. ಹೊಟ್ಟೆಪಾಡಿಗಾಗಿ ರಂಗಭೂಮಿಯನ್ನು ಆಯ್ಕೆಮಾಡಿಕೊಂಡು ಕೊನೆಗೆ ಕಸುಬನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ ತಾಳ್ಮೆ ಕಲಾವಿದರಲ್ಲಿ ಇದೆ ಆ ಸಾಲಿಗೆ ನಾಗರತ್ನಮ್ಮನವರು ಸಹ ಸೇರುತ್ತಾರೆ. ಶಿಕ್ಷಕಿಯಾಗಿ ಹಲವು ಮಕ್ಕಳ ಭವಿಷ್ಯವನ್ನು ಬೆಳಗ ಬೇಕಾದವರು ಮುಂದೆ ಶ್ರೇಷ್ಠ ಕಲಾವಿದೆಯಾಗಿ ಕೋಟ್ಯಾಂತರ ಕಲಾರಸಿಕರ ಮನಸುಗಳಿಗೆ ಕಲಾಮೃತವನ್ನು ಉಣಿಸುವ ತಾಯಿಯಾಗಿದ್ದಾರೆ.
ಸಂಸಾರದ ಹೊರೆ: ಹೊಸಪೇಟೆಯ ತೈಲಪ್ಪ ಎಂಬ ರಂಗಾಸಕ್ತರಿಗೆ ಒಪ್ಪಂದದೊAದಿಗೆ ಎರಡನೇ ಮಡದಿಯಾದರು. ಎಲ್ಲವೂ ಸರಾಗವಾಗಿ ಹೊಂದಾಣಿಕೆಯಿAದ ನಡೆಯುತ್ತಾ ಕಾಲಕಳೆದಂತೆ ವೆಂಕಟೇಶ ಮತ್ತು ಪಂಕಜ ಎಂಬ ಇಬ್ಬರ ಮಕ್ಕಳ ತರುವಾಯ ಸಂಸಾರ ಬಂಧನದಲ್ಲಿ ವಿರಸ ಉಂಟಾಗಿ ಬಿರುಕು ಉಂಟಾಯಿತು. ಅಂದಿನಿAದ ಎರಡು ಮಕ್ಕಳೊಂದಿಗೆ ರಂಗಭೂಮಿಯನ್ನು ಸಹ ಗಟ್ಟಿಗಿತ್ತಿ ಯಾಗಿ ನಿಭಾಯಿಸಿದರು. ಇದರೊಂದಿಗೆ ಇವರ ರಂಗ ಜೀವನಕ್ಕೆ ನಿಕಟವರ್ತಿಯಾಗಿ ಸಾಣೆ ಹೇಳಿದವರು ಹಗರಿಬೊಮ್ಮನಹಳ್ಳಿಯ ಸರೋಜಾ ಮತ್ತು ನಾಡೋಜ ಸುಭದ್ರಮ್ಮ ಮನ್ಸೂರ್.
ರಂಗ ಜೀವನದ ನೆನಪುಗಳು:
ಇವರ ರಂಗ ಜೀವನದ ಅನೇಕ ಪುಟಗಳಲ್ಲಿ ಅನೇಕ ಕಹಿ ನೆನಪುಗಳು ಸಿಹಿ ನೆನಪುಗಳು ಸಾಲುಗಟ್ಟಿವೆ ಅವುಗಳಲ್ಲಿ ಕೆಲವನ್ನು ಉದಾಹರಿಸಬಹುದು.
ಅನೇಕ ವೃತ್ತಿ ನಟರು ಬಡತನದ ಹಿನ್ನೆಲೆಯಲ್ಲಿ ಬೆಳೆದು ಬಂದವರು ಸ್ಥಿತಿವಂತರು ಹುಟ್ಟಿದರೆ ಮದುವೆಯಾಗಿ ತಾಯಿ ಆಗಿರುತ್ತಿದ್ದರು. ಹಳ್ಳಿಗಾಡಿನ ನಾಟಕಗಳಲ್ಲಿ ಹೆಚ್ಚಾಗಿ ಅಭಿನಯಿಸಬೇಕಾಗಿದ್ದರಿಂದ ಸರಳತೆಯೇ ಇವರಿಗೆ ವರ. ಬಹಳಷ್ಟು ಕಷ್ಟ-ನಷ್ಟಗಳನ್ನು ಸಹಿಸಿಕೊಂಡು ಸಮಯಕ್ಕೆ ಸರಿಯಾಗಿ ನಾಟಕಗಳಿಗೆ ಹೋಗಲು ಸಾಧ್ಯವಾದದ್ದು ಇವರ ಸರಳ ಸ್ವಭಾವ. ಏಕೆಂದರೆ ಹಳ್ಳಿಗಾಡಿನ ಸಾರಿಗೆ ವ್ಯವಸ್ಥೆ ಅಷ್ಟಕಷ್ಟೇ. ಈಚಿನ ದಿನಗಳಲ್ಲಿ ಎಷ್ಟೋ ವಾಸಿ. ಆದರೆ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಬಸ್ಸುಗಳಾಗಲಿ, ವಾಹನಗಳಾಗಲಿ ಹೆಚ್ಚಾಗಿ ಇರಲಿಲ್ಲ ಮೈಲುಗಟ್ಟಲೆ ಬಂಡಿಯಲ್ಲಿ ಇಲ್ಲವೇ ನಡೆದುಕೊಂಡು ಹೋಗುತ್ತಿದ್ದರು.
ಹೀಗೆ ಒಮ್ಮೆ ಕೊಟ್ಟೂರಿನ ಹತ್ತಿರ ಮತ್ತಿಹಳ್ಳಿಯಲ್ಲಿ ಬಸ್ ಹಮಾಲ ನಾಟಕದಲ್ಲಿ ಅಭಿನಯಿಸುವ ಸಲುವಾಗಿ ಹೋಗಬೇಕಿತ್ತು ಆದರೆ ಹಿಂದಿನ ದಿನ ರಾಯಚೂರಿನಲ್ಲಿ ನಾಟಕ ಮುಗಿಸಿಕೊಂಡು ಕೊಟ್ಟೂರಿಗೆ ಬರಬೇಕಾದರೆ ತುಂಬಾ ತಡವಾಗಿ ಬಿಟ್ಟಿತ್ತು .ಹಳ್ಳಿಗೆ ಹೋಗುವ ಕೊನೆಯ ಬಸ್ಸು ಹೋಗಿಬಿಟ್ಟಿತ್ತು.ಮತ್ತೊಂದು ಬಸ್ ಹಿಡಿದು ಹೋಗುವಾಗ ಅಮಾವಾಸ್ಯೆಯ ಕಗ್ಗತ್ತಲು ಕ್ರಾಸಿನಿಂದ ೬ ಕಿ ಮೀ ದೂರ ನಡೆಯಬೇಕಿತ್ತು. ಕೈಯಲ್ಲಿ ಮೂರ್ನಾಲ್ಕು ಲಗೇಜ್ ಗಳಿದ್ದವು. ಎಲ್ಲವನ್ನು ಹಿಡಿದು ತಡಬಡಿಸಿ ನಡೆಯುವಾಗ ಪರಿಚಿತ ಶ್ರೀಮಂತ ವ್ಯಕ್ತಿಯೊಬ್ಬ ಯಾವುದೇ ಶ್ರೀಮಂತಿಕೆ ದರ್ಪವಿಲ್ಲದೇ ಎಲ್ಲವನ್ನು ಹಿಡಿದುಕೊಂಡು ಊರಿಗೆ ತಲುಪಿಸಿ ನಾಟಕವನ್ನು ಯಶಸ್ವಿಗೊಳಿಸುವಲ್ಲಿ ಸಹಾಯವಾಗಿದ್ದರು.
ಮತ್ತೊಮ್ಮೆ ೧೯೮೬ ರಲ್ಲಿ ರೇಣುಕಾ ಎಂಬ ಸಹನಟಿಯೊಡನೆ ಧಾರವಾಡದ ಹಳ್ಳಿಗೆ ನಾಟಕಕ್ಕೆ ಹೋಗುವಾಗ ಹಡಗಲಿ ಮಾಗಳಕ್ಕೆ ಹೋಗಿ ತುಂಗಭದ್ರ ನದಿಯನ್ನು ಬಟ್ಟೆಗಳನ್ನು ತೊಳಿಸಿಕೊಂಡು ದಾಟಿ ನಾಟಕ ಮಾಡಿದ್ದು ಅವಿಸ್ಮರಣೀಯ.
ಹೀಗೆ ನಾಗರತ್ನಮ್ಮ ಕೇವಲ ೧೫ನೇ ವಯಸ್ಸಿನಲ್ಲಿ ಮಾಂಡ್ರೆ ವಿರಚಿತ "ಸಂಸಾರ" ನಾಟಕದಲ್ಲಿ ಅಭಿನಯಿಸುವ ಮೂಲಕ ರಂಗಪ್ರವೇಶ ಮಾಡಿ, ರಂಗಸAಗೀತ ಗುರು " ತೋಟಯ್ಯ ಸ್ವಾಮಿ" ಇವರ ಬಳಿ ಹಾಡು ಸಂಗೀತ ತಾಳ ವಿದ್ಯೆಯನ್ನು ಕಲಿತು ಊಟ, ನಿದ್ದೆ ,ನೀರು ಎಲ್ಲವನ್ನು ಬಿಟ್ಟು ದಿನಕ್ಕೊಂದು ನಾಟಕವಾಡಿ ತಮ್ಮ ಹೊಟ್ಟೆಯನ್ನಷ್ಟೇ ಅಲ್ಲದೆ ಇಡೀ ಕುಟುಂಬದ ಹೊಟ್ಟೆ ತುಂಬಿಸಿ ಎಲ್ಲವನ್ನೂ ನಿರ್ವಹಿಸಿದ ಧೀರೆ ಈ ನಟಿ.
ಹೇಳತೀರದ ನಾಟಕ ಮಾಲೆ: ಇದುವರೆಗೂ ಏಳು ಸಾವಿರಕ್ಕೂ ಅಧಿಕ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ ನಾಗರತ್ನಮ್ಮ. ಸೌಭಾಗ್ಯಲಕ್ಷ್ಮಿ , ಅಣ್ಣ-ತಂಗಿ , ಆದರ್ಶ ಮಗಳು , ವರ ನೋಡಿ ಹೆಣ್ಣು ಕೊಡು , ಪಡೆದ ಮುತ್ತು, ಸಹೋದರರು, ಮಲಮಗಳು, ತವರುಮನೆ ,ಆದರ್ಶ ಪ್ರೇಮ, ಹೆಣ್ಣು ಸಮಾಜದ ಕಣ್ಣು ಮುಂತಾದ ಸಾಮಾಜಿಕ ನಾಟಕಗಳು ಹಾಗೂ ಹೇಮರೆಡ್ಡಿ ಮಲ್ಲಮ್ಮ, ಕುರುಕ್ಷೇತ್ರ , ರಕ್ತರಾತ್ರಿ , ಮತ್ತು ರಾಜಕೀಯ ನಾಟಕಗಳಲ್ಲಿ ಅಭಿನಯಿಸಿ ಉತ್ತಮ ಅಭಿನಯ ನೀಡಿ ರಂಗಸಿರಿ ಎನಿಸಿದ್ದಾರೆ.
ಪ್ರಶಸ್ತಿಗಳ ಮಹಾಪೂರ: ಅವರಿಗೆ ೨೫ಕ್ಕೂ ಹೆಚ್ಚು ಅತ್ಯುತ್ತಮ ನಟಿ ಪ್ರಶಸ್ತಿ, ಸಾವಿತ್ರಮ್ಮ ಪ್ರಶಸ್ತಿ, ದೇಜಗೌ ಪ್ರಶಸ್ತಿ , ಭಾರ್ಗವ ಪ್ರಶಸ್ತಿ, ನಾಡ ಚೇತನ,ಪ್ರಶಸ್ತಿ ಪ್ರಶಸ್ತಿ,ವಾಲ್ಮೀಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಅಧಿಕ ಪ್ರಶಸ್ತಿಗಳು ಇವರ ಒಡಲಿಗೆ ಸೇರಿವೆ.ಇದಲ್ಲದೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಇವರ ಸೇವೆಯನ್ನು ಗುರುತಿಸಿ "ಗೌರವ ಡಾಕ್ಟರೇಟ್" ಪದವಿಯನ್ನು ನೀಡಿದೆ.ಅಲ್ಲದೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಹ ಇವರ ಕುರಿತು "ಮರಿಯಮ್ಮನಹಳ್ಳಿ ರಂಗಸಿರಿ" ಎಂಬ ಆತ್ಮಕಥೆಯನ್ನು ಪ್ರಕಟಿಸಿದೆ.
ರಂಗದಿAದ ಸ್ತ್ರೀ ಶಕ್ತಿಯೆಡೆಗೆ:
ನಾಗರತ್ನಮ್ಮನವರು ೧೯೭೮ ರಲ್ಲಿ ರಕ್ತರಾತ್ರಿ ರೊಚ್ಚಿಗೆದ್ದ ರೈತ ಎಷ್ಟು ನಗ್ತಿ ನಗು ಮುಂತಾದ ನಾಟಕಗಳನ್ನು ಸ್ವತಃ ಮಹಿಳೆಯರಿಗೆ ಕೂಡಿಕೊಂಡು ಯಶಸ್ವಿ ಎನಿಸಿದ್ದಾರೆ. ನಾಗರತ್ನಮ್ಮನವರು ಹಳೆಯ ಹಾಗೂ ಹೊಸ ಕಂಪನಿಗಳೊAದಿಗೆ ನಿಕಟ ಸಂಪರ್ಕ ಹೊಂದಿದ್ದರು. ಲೀಲಾವತಿ ಎಂಬ ನಾಟಕ ಅಂತರಾಷ್ಟ್ರೀಯ ಜನಮನ್ನಣೆ ಪಡೆದಿದೆ. ಕೇರಳದಲ್ಲಿಯೂ ಯಶಸ್ವಿಯಾಗಿದೆ ನಾಗರತ್ನಮ್ಮ ನವರ ಶೀಲಾವತಿ ಪಾತ್ರವೂ ಅತ್ಯಂತ ಪರಿಣಾಮಕಾರಿಯೂ ಆಕರ್ಷಕವೂ ಆಗಿದೆ. ಇವರು ಕೇವಲ ಕಲಾವಿದೆ ಮಾತ್ರವಲ್ಲದೆ ಹೊಸಪೇಟೆ ತಾಲೂಕು ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ರಾಜಕೀಯ ರಂಗ ಪ್ರವೇಶಿಸಿ ಸಾಮಾಜಿಕ ಹಾಗೂ ಪ್ರಗತಿಪರ ಕೆಲಸಗಳನ್ನು ಮಾಡಿ ಮಹಿಳೆ ರಂಗ ಕಲಾವಿದರನ್ನೆಲ್ಲಾ ಒಗ್ಗೂಡಿಸಿ " ಮಹಿಳಾ ವೃತ್ತಿರಂಗ ಕಲಾವಿದರ ಸಂಘ"ವನ್ನು ಇವರು ಅಸ್ತಿತ್ವಕ್ಕೆ ತಂದರು.
ಕಲಾವಿದರ ಬದುಕು ಹೇಳತೀರದು ಒಮ್ಮೊಮ್ಮೆ ರಾಜೈಭೋಗ ಮತ್ತೊಮ್ಮೆ ತಿರುಕನ ಜೀವನಕ್ಕೂ ಕಡೆ.ಅದೆಷ್ಟೋ ಕಲಾವಿದರು ಒಂದೋತ್ತಿನ ಕೂಳಿಗೂ ಗತಿಯಿರದ ಮತ್ತು ಕೆಲವರು ಬೀಡಿ ಸೇದಿ ಹೊಟ್ಟೆ ಪೊರೆದ ಸಂದರ್ಭಗಳನ್ನು ರಂಗಭೂಮಿಯ ಚರಿತ್ರೆಯಲ್ಲಿ ಕಾಣಬಹುದು. ಅಂತೆಯೇ ನಾಗರತ್ನಮ್ಮನವರ ಬಾಳಲ್ಲಿ ಸಹ ಅನೇಕ ಘಟನೆಗಳು ಬಂದು ಹೋಗಿವೆ.ಇನ್ನಾದರೂ ಕಲಾವಿದರ ಬದುಕು ಬವಣೆಯನ್ನು ಅರಿತು ಪ್ರತಿಯೊಬ್ಬರೂ ಪ್ರತಿಸ್ಪಂದಿಸುವ ಮನಸ್ಸುಗಳಾಗಲಿ ಎಂಬುದೇ ಪ್ರತಿ ಕಲಾವಿದರ ಆಶಯ...
✍ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿಗಳು ಮತ್ತು ಬರಹಗಾರರು
ಮೊ-೯೩೭೯೮೫೭೭೭೫
mಚಿಟಿರಿuಚಿmಚಿziಟಿg೭@gmಚಿiಟ.ಛಿom

Comments
Post a Comment