ರಂಗ ಮಾಲಿಕೆ- ೭ ಕೆ.ಮಲ್ಲೇಶ್
ಬಣ್ಣದ ಬದುಕು..
ರಂಗ ಮಾಲಿಕೆ-೭
ಕೆ.ಮಲ್ಲೇಶ್.
ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಗಾದೆ ಇದೆ. ಅಂದರೆ ಯಾವುದೇ ಅಗಲಿ ಬೆಳೆಯುವ ಹಂತದಲ್ಲಿ ಅದರ ಬೆಳವಣಿಗೆಯ ಶೈಲಿಯನ್ನು ನೋಡಿ ಅದರ ಮುಂದಿನ ಬೆಳವಣಿಗೆಯ ಸ್ವರೂಪವನ್ನು ಅಂದಾಜಿಸಬಹುದೆAಬುದು ಈ ಗಾಧೆಯ ಅರ್ಥ. ಅದಕ್ಕೆ ಉದಾಹರಣೆಗಳನ್ನು ಸಾಕಷ್ಟು ನೀಡಬಹುದು. ನನ್ನ ಈ ಕ್ಷೇತ್ರ ಕರ‍್ಯದಲ್ಲಿ ಕಂಡ ಒಂದು ಸಂಗತಿಯನ್ನು ಇಲ್ಲಿ ಉದಾಹರಿಸಲು ಇಚ್ಚಿಸುತ್ತೇನೆ. ಆ ಸಂಗತಿಯ ನಾಯಕನಟರೇ ರಂಗ ಕಲಾವಿದರಾದ ಕೆ.ಮಲ್ಲೇಶ್‌ರವರು.
ಬಾಲ್ಯ ಮತ್ತು ಆರಂಭಿಕ ಜೀವನ
ಕೆ.ಮಲ್ಲೇಶ್‌ರವರು ೦೩ ಜುಲೈ ೧೯೫೭ರಲ್ಲಿ ಬಳ್ಳಾರಿಯಲ್ಲಿ ತಂದೆ ಮಲ್ಲಪ್ಪ ಮತ್ತು ತಾಯಿ ನೀಲಮ್ಮರ ಪ್ರಥಮ ಮಗನಾಗಿ ಜನಿಸಿದರು. ಇವರು ಕೇವಲ ಹತ್ತನೇ ತರಗತಿಯವರೆಗೆ ಓದಿ ನಂತರ ಆರ್ಥಿಕ ಕಾರಣದಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಸಣ್ಣ ಪುಟ್ಟ ಕೆಲಸಗಳಲ್ಲಿ ನಿರತರಾದರು. ತದ ನಂತರ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ಸಣ್ಣ ಸಣ್ಣ ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.
ರಂಗ ಪ್ರವೇಶ
ಕೆ.ಮಲ್ಲೇಶ್‌ರವರು ತಮ್ಮ ಬಾಲ್ಯದ ದಿನಗಳಲ್ಲಿಯೇ ಅವರ ತಂದೆ ಮಾಡುತ್ತಿದ್ದ ಬಯಲಾಟಗಳಿಂದ ಪ್ರಭಾವಿತರಾಗಿ ಮೊದಲೆಲ್ಲಾ ಶಾಲೆಗಳಲ್ಲಿ ಸಣ್ಣ ಪುಟ್ಟ ನಾಟಕದ ಸನ್ನಿವೇಶಗಳನ್ನು ಮಾಡುತ್ತಿದ್ದರು. ಅಲ್ಲದೇ ಕಂಬಳಿ ಬಜಾರನ ತಮ್ಮ ಮನೆಯ ನೆರೆಹೊರೆಯ ಗೆಳೆಯರೊಂದಿಗೆ ಸೇರಿಕೊಂಡು, ಆ ಓಣಿಯ ನಿವೃತ್ತ ಪೋಲಿಸ್ ಅಧಿಕಾರಿ ಮಹಾದೇವಪ್ಪÀ ರ ರಾಜರಾಜೇಶ್ವರಿ ಕಲಾ ಸಂಘದಿAದ ೧೯೭೬ರಲ್ಲಿ ಹಮ್ಮಿಕೊಂಡಿದ್ದ ಮಹಾದೇವಪ್ಪÀ ನಿರ್ದೇಶನದ “ವೀರ ಸ್ವರ್ಗ” ನಾಟಕದಲ್ಲಿ ಇನ್ಸ್ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಆಕಸ್ಮಿಕವಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಅಂತೆಯೇ ಈ ನಾಟಕದಲ್ಲಿ ತಮ್ಮ ಅಮೂಲ್ಯ ಅಭೀನಯದ ಮೂಲಕ ಗುರುತಿಸಿಕೊಂಡು ರಂಗಗುರು ಮಹಾದೇವಪ್ಪ ಶಿಷ್ಯನಾಗಿ ಹೊರಹೊಮ್ಮಿದರು. ನಂತರ ಅದೇ ತಂಡದಲ್ಲಿ ಸಕ್ಕರೆ ಕರಡೀಶ ನಾಟಕದಲ್ಲಿ ಜಂಗಮನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದರು.
ಸಂಘ ಸ್ಥಾಪನೆಯ ಕನಸು
ಕಾಲಕ್ರಮೇಣ ರಾಜರಾಜೇಶ್ವರಿ ಕಲಾ ಸಂಘದಲ್ಲಿ ವೈಮನಸ್ಸು ಉಂಟಾಗಿ ತಮ್ಮ ಬಾಲ್ಯದ ಆತ್ಮೀಯ ಸ್ನೇಹಿತರಾದ ಸಿದ್ದಲಿಂಗಯ್ಯ, ಕೆ.ಜಗದೀಶ್, ಕೆ.ಎಂ.ಗುರುಬಸವರಾಜ ಮತ್ತು ತಾವು ಸೇರಿ ಒಟ್ಟು ನಾಲ್ಕು ಜನರಿಂದ ರಂಗ ಸಂಸ್ಥೆಯೊAದನ್ನು ಕಟ್ಟುವ ಯೋಚನೆ ಮಾಡಿದರು. ಅದಕ್ಕೆ ಹೆಸರನ್ನು ಜಗದೀಶರವರು ಸೂಚಿಸಿ ೧೯೭೮ರಲ್ಲಿ “ಮಯೂರ ಕಲಾ ಸಂಘ” ಎಂದು ನಾಮಕರಣ ಮಾಡಿದರು. ಅದರ ಅಧ್ಯಕ್ಷತೆಯನ್ನು ಇವರೇ ವಹಿಸಿಕೊಂಡರು.ಸAಸ್ಥೆ ಕಟ್ಟಿದ ವರ್ಷದಲ್ಲೇ “ಒಂದು ಊರಿನ ಕಥೆ” ನಾಟಕವನ್ನು ಗಣೇಶ ಉತ್ಸವದ ನಿಮ್ಮಿತ್ತವಾಗಿ ಎಲೆ ಬಜಾರನಲ್ಲಿ ಮೊದಲ ಪ್ರದರ್ಶನ ನೀಡಿ ಯಶಸ್ವಿಯಾದರು. ನಂತರ ನಾಲ್ವರು ಗೆಳೆಯರು ಸೇರಿ ಶ್ರದ್ಧೆಯಿಂದ ಶ್ರಮವಹಿಸಿ ಸಂಸ್ಥೆಯ ಏಳ್ಗೆಗೆ ಹಗಲಿರುಳು ಶ್ರಮಿಸಿದರು.
ಸಾಗಿ ಬಂದ ಹಾದಿ
ಸಂಸ್ಥೆಯ ಮೂಲಕ ತಮ್ಮ ರಂಗ ಚಟುವಟಿಕೆಗಳಿಗೆ ನೀರೆರೆಯಲಾರಂಭಿಸಿದರು. ಅಂತೆಯೇ ಬಳ್ಳಾರಿಯ ರಂಗಭೂಮಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ೧೯೯೦ರಲ್ಲಿ ‘ಮ.ಕ.ಸಂ ನಾಟಕ ಸ್ಪರ್ಧೆ’ಯನ್ನು ಏರ್ಪಡಿಸಿದರು. ನಂತರ ಅನೇಕ ಜನ ಜಾಗೃತಿ ಬೀದಿ ನಾಟಕಗಳನ್ನು ಮಾಡಿದರು. ಅಲ್ಲದೇ ಇತರ ಸಂಘ ಸಂಸ್ಥೆಗಳು ಏರ್ಪಡಿಸಿದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ದೋಣಿಮಲೈ, ಉಡುಪಿ, ಜೋಗ್‌ಫಾಲ್ಸ್, ಶಿವಮೊಗ್ಗ, ಸಿರಿಗೆರೆ, ಹೊಸಪೇಟೆ, ಕೆ.ಆರ್.ನಗರ ಮುಂತಾದ ಕಡೆಗಳಲ್ಲಿ ಹೋಗಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿರುವ ಅನೇಕ ಪ್ರಸಂಗಗಳನ್ನು ಮಂದಹಾಸದ ಬೆರಗು ಕಣ್ಣಿನಿಂದಲೇ ವಿವರಿಸುತ್ತಾರೆ.
“ಒಮ್ಮೆ ದೋಣಿಮಲೈನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಗೆಳೆಯ ಜಗದೀಶ್‌ರ ನಿರ್ದೇಶನ ಮತ್ತು ರಚನೆಯ ‘ಬಚ್ಚಿಟ್ಟುಕೊಂಡವರು’ ನಾಟಕವನ್ನು ಪ್ರಸ್ತುತ ಪಡಿಸಲು ಹೋದಾಗ ಆ ಸ್ಪರ್ಧೆಗೆ ರಾಷ್ಟçಪ್ರಶಸ್ತಿ ವಿಜೇತ ಚೋಮನದುಡಿ ವಾಸುದೇವರಾವ್‌ರು ತಮ್ಮ ನೇತೃತ್ವದಲ್ಲಿ ಒಂದು ನಾಟಕವನ್ನು ತಂದಿದ್ದರು.ಅಲ್ಲದೇ ಅದರಲ್ಲಿ ಸ್ವತಃ ನಟಿಸುವ ಮುನ್ಸೂಚನೆ ನೀಡಿದ್ದರು. ಇದರೊಂದಿಗೆ ಅವರ ಲಾರಿಗಟ್ಟಲೆ ತುಂಬಿದ ನಾಟಕದಲ್ಲಿ ಬಳಸಲು ತಂದ ರಂಗ ಪರಿಕರಗಳನ್ನು ಕಂಡು ನಾನು ಮತ್ತು ನಮ್ಮ ತಂಡದ ಕಲಾವಿದರೆಲ್ಲ ನಾವು ಸ್ಪರ್ಧೆಯಲ್ಲಿ ಸೋಲುತ್ತೇವೆ ಎಂದು ನಿರಾಸೆಯನ್ನು ಹೊಂದಿದ್ದೆವು. ಆಗ ನಿರ್ದೇಶಕ ಜಗದೀಶ್‌ರವರು ಬಂದು ಸೋಲು-ಗೆಲುವಿನ ಬಗ್ಗೆ ಪಾಠ ಹೇಳಿ ತಂಡವನ್ನು ಹುರಿದುಂಬಿಸಿ ಅಭಿನಯಿಸಲು ಸಹಾಯವಾದರು. ಆಗ ನಾಟಕವು ಸಹ ಅದ್ಭುತವಾಗಿ ಮೂಡಿ ಬಂದಿತು. ಅಂತೆಯೇ ರಾಷ್ಟçಪ್ರಶಸ್ತಿ ವಿಜೇತರು ಭಾಗವಹಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೇ ಅಂತಹ ಕಲಾವಿದರನ್ನು ಹಿಂದಿಕ್ಕಿ ಸ್ಪರ್ಧೆಯ ಪ್ರಥಮ ಬಹುಮಾನ ಗಳಿಸಿದ್ದು ನಮಗೆ ಡಬಲ್ ಧಮಾಕ ಹೊಡೆದ ಖುಷಿಯನ್ನು ಆ ನಾಟಕ ತಂದು ಕೊಟ್ಟಿತ್ತು. ಅಲ್ಲದೇ ಅಂದಿನಿAದ ರಂಗ ಚಟುವಟಿಕೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆವು” ಎಂದು ಹೆಮ್ಮೆಯ ನುಡಿಗಳನ್ನು ನುಡಿದರು.
ಇದಲ್ಲದೇ ಇನ್ನೊಮ್ಮೆ ಚಿಕ್ಕ ಬಳ್ಳಾಪುರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ‘ನೆಲದಡಿಯ ಬುರುಡೆಗಳು’ ನಾಟಕ ಮಾಡಿ ನಾಟಕ ವಿಭಾಗಕ್ಕೆ ನೀಡಲಾಗುತ್ತಿದ್ದ ಎಲ್ಲ ಬಹುಮಾನಗಳನ್ನು ನಾವು ದೋಚಿದ್ದೆವು. ಅಲ್ಲದೇ ಅದರಲ್ಲಿ ನನ್ನ ಮಂತ್ರವಾದಿ ಪಾತ್ರಕ್ಕೆ ಉತ್ತಮ ನಟ ಪ್ರಶಸ್ತಿಯು ಬಂದಿತ್ತು. ಈ ಮೂಲಕ ಪತ್ರಿಕೆ ವರಧಿಗಾರ ಮತ್ತು ಗೆಳೆಯನಾದ ವಾಗೀಶ್ ನಮ್ಮ ತಂಡವನ್ನು ಕುರಿತಾಗಿ ‘ಬಳ್ಳಾರಿ ದರೋಡೆಕೋರರು’ ಎಂದು ಅನ್ವರ್ಥವಾಗಿ ಬರೆದಿದ್ದನ್ನು ಅವರು ಸ್ಮರಿಸಿದರು.
ಕೆಲವೊಮ್ಮೆ ನಾಟಕಗಳಿಗೆ ಹಣಕಾಸಿನ ನೆರವಿಲ್ಲದೇ ಸ್ವತಃ ಗೆಳೆಯರೆಲ್ಲಾ ಸೇರಿ ಹಣ ಕೂಡಿಸಿ ನಾಟಕ ಮಾಡುತ್ತಿದ್ದ ಸಂದರ್ಭಗಳನ್ನು ಹೇಳಿದರು. ಅಲ್ಲದೇ ಸ್ತಿçà ಕಲಾವಿದರಿಗೆ ಸಂಭಾವನೆಯನ್ನು ನೀಡಲು ಶಕ್ಯರಾಗದೆ ತಮ್ಮ ಕಟುಂಬದ ಪುರುಷ ಕಲಾವಿದರಿಗೆ ಸ್ತಿçà ಪಾತ್ರವನ್ನು ಹಾಕಿ ನಾಟಕ ಮಾಡಿಸಿ. ಪಕ್ಕ ಸ್ತಿçÃಯರನ್ನು ಮೀರಿಸುವಂತೆ ನಟನೆ ಮಾಡಿದ್ದನ್ನು ಹೇಳಿದರು. ಅಲ್ಲದೇ ಅಂತಹ ಸಂದರ್ಭಗಳಲ್ಲೂ ಗೆಳೆಯರಲ್ಲಿ ಒಗ್ಗಟ್ಟು ಮನೋಭಾವ ಉಳಿಸಿಕೊಳ್ಳಲು ಶ್ರೀಯುತರ ಮುಖ್ಯ ಪಾತ್ರ ವಹಿಸುತ್ತಿದ್ದದ್ದು ಸೋಜಿಗದ ಸಂಗತಿ. ಹೀಗೆ ಮಲ್ಲೇಶರ ಜೀವನದುದ್ದಕ್ಕೂ ರಂಗಭೂಮಿ ಮತ್ತು ತಾವು ಎಂಬತಾಗಿರುವುದು ಅವರ ರಂಗಭೂಮಿಯ ಮೇಲಿನ ಪ್ರೀತಿ ಮತ್ತು ಬದ್ಧತೆಯೆ ಪ್ರಮುಖ ಕಾರಣವಾಗಿದೆ.
ಮಲ್ಲೇಶ್‌ರವರ ರಂಗಯಾತ್ರೆಯಲಿ
ಶ್ರೀಯುತರ ರಂಗಯಾತ್ರೆಯಲ್ಲಿ ಹತ್ತಾರು ನೆನಪುಗಳಿವೆ ಅದರಲ್ಲಿ ತುಂಬಾ ಆತ್ಮೀಯ ಎನಿಸುವ ಕೆಲವು ಸಂಗತಿಗಳನ್ನು ಇಲ್ಲಿ ಬಿತ್ತರಿಸುತ್ತಿದ್ದೇನೆ. ಒಮ್ಮೆ ಹೊಸಪೇಟೆಯ ಅಂದಿನ ಕಾಲದ ಬಹು ಪ್ರತಿಷ್ಠಿತ ಹವ್ಯಾಸಿ ರಂಗತAಡವಾದ ‘ಟಿ.ಬಿ.ಡ್ಯಾ ಕಲಾ ಸಂಘ’ದ ವತಿಯಿಂದ ಪ್ರತಿವರ್ಷ ರಾಜ್ಯ ಮಟ್ಟದ ನಾಟಕ ಸ್ಪರ್ಧೆಹಮ್ಮಿಕೊಳ್ಳುವ ಕಾಲದಲ್ಲಿ ಒಮ್ಮೆ ಬಚ್ಚಿಟ್ಟುಕೊಂಡವರು ನಾಟಕದಲ್ಲಿ ಒಬ್ಬ ರಾಜಕೀಯ ಮುಖಂಡ ಸಹಚರ್ಯನಾಗಿ ಅಭಿನಯಿಸುವಾಗ ‘ನಮ್ಮ ಮುಖಂಡರು ಪಾರ್ಟಿಯಲ್ಲಿ ಒಬ್ಬ ವ್ಯಕ್ತಿಯನ್ನು ಅವನ ಪಾತ್ರದ ಕುರಿತಾಗಿ ಯಾವುದನ್ನು ಅರಿಯದೆ ತಬ್ಬಿಕೊಳ್ಳುತ್ತಾರೆ. ಆದರೆ ಆ ಪಾತ್ರ ಸೇವಕನಾಗಿರುತ್ತಾನೆ. ಆಗ ಎಲ್ಲರೂ ತಬ್ಬಿಬ್ಬಾಗುವ ಕ್ಷಣದಲ್ಲೇ ನಾನು ತಕ್ಷಣವೇ ನೋಡಿದಿರಾ ನಮ್ಮ ಮುಖಂಡರು ಸೇವಕರನ್ನೂ ಸಹ ತಬ್ಬಿಕೊಂಡು ಸಂತೈಸುವ ಸರಳ ಗುಣದವರು’ ಎಂದು ಹೇಳಿ ನಾಟಕಕ್ಕೆ ಚ್ಯುತಿ ಬರದಂತೆ ಮುನ್ನೆಡೆಸಿದೆವು. ಇನ್ನೊಮ್ಮೆ ಅದೇ ಸಂಘದ ನಾಟಕ ಸ್ಪರ್ಧೆಯಲ್ಲಿ ೫ ದೃಶ್ಯಗಳಿರುವ ‘ನೆಲದಡಿಯ ಬುರುಡೆಗಳು’ ನಾಕದಲ್ಲಿ ಅಭಿನಯಿಸುವಾಗ ೨ನೇ ದೃಶ್ಯದ ಮಾತುಗಳನ್ನು ಹೇಳುವ ಸಂದರ್ಭದಲ್ಲಿ ೪ನೇ ದೃಶ್ಯದ ಮಾತುಗಳನ್ನು ಆಕಸ್ಮಿಕವಾಗಿ ಹೇಳುತ್ತಿರುವಾಗ ಸಹನಟನಾಗಿದ್ದ ಗೆಳೆಯ ನಾಗಳ್ಳಿ ನಾಗೇಶರ ಕಣ್ಸನ್ನೆ ಮೂಲಕ ಮತ್ತೆ ನಾಟಕವನ್ನು ಪ್ರೇಕ್ಷಕರಿಗೆ ಅಭಾಸವಾಗದಂತೆ ನಿರ್ವಹಿಸಿದ ನೆನೆಪು ಇನ್ನು ಹಸಿ ಹಸಿಯಾಗಿದೆ ಎಂದರು. ಇವೆಲ್ಲದರ ನಡುವೆಯೂ ಶ್ರೀಯುತರು ಜನ ಜಾಗೃತಿ ಮತ್ತ ಜನ ರಂಜನೆಯ ನಾಟಕವೆಂದು ಎರಡು ರೀತಿಯ ನಾಟಕಗಳ ಪ್ರಯೋಗಕ್ಕೆ ಮುಂದಾಗಿ ಸರ್ಕಾರದ ಯೋಜನೆಗಳನ್ನು ಜನಜಾಗೃತಿ ಮೂಡಿಸಲು ಅವೆಷ್ಟೋ ಬೀದಿ ನಾಟಕಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೆಲವು ಸಾಮಾಜಿಕ ನಾಟಕಗಳು, ಏಕಾಂಕ ನಾಟಕಗಳನ್ನು ಮಾಡಿರುವುದನ್ನು ಇಲ್ಲಿ ಕಾಣಹುದು.ಇವರು ಅಭಿನಯಿಸಿದ ಬೀದಿ ನಾಟಕ ಮತ್ತು ಇತರೆ ನಾಟಕಗಳು ಎಂದರೆ
ಏಡ್ಸ್ ಬಂತು ಏಡ್ಸ್
ಮಗುವಿನ ಆರೋಗ್ಯ
ಕುಡಿಯುವ ನೀರಿನ ರಕ್ಷಣೆ
ಸಾಕ್ಷಾರತಾ
ಡಿ.ಪಿ.ಇ.ಪಿ ಯೋಜನೆ
ರಸ್ತೆ ಸುರಕ್ಷತಾ ಸಪ್ತಾಹ
ಪರಿಸರ ಸಂರಕ್ಷಣೆ
ಬಚ್ಚಿಟ್ಟು ಕೊಂಡವರು
ನೆಲದಡಿಯ ಬುರುಡೆಗಳು
ಹುಚ್ಚಿ ಹಚ್ಚಿದ ದೀಪ
ಪ್ರೀತಿಯ ದೇವರು
ಅನುಬಂಧವೋ ಅಣುಬಂಧವೋ
ಮುದುಕನ ಮದುವೆ
ಬದುಕು ಬರೀದಾಯಿತು
ಗುಣವಂತ ನನಗಂಡ
ಬೆಪ್ಪು ತಕ್ಕಡಿ ಬೋಳೆಶಂಕರ...ಮತ್ತಿತೆರೆ
ನಿರ್ದೇಶಿಸಿದ ಕೆಲವು ನಾಟಕಗಳು
ಇವರು ಅಭಿನಯಾಸಕ್ತರಾಗಿದ್ದರಿಂದ ನಿರ್ದೇಶನದ ಕಡೆ ಹೆಚ್ಚಾಗಿ ಗಮನ ಹರಿಸಲಿಲ್ಲ. ಆದರೆ ಕೆಲವು ನಾಟಕಗಳಿಗೆ ಮಾತ್ರ ನಿರ್ದೇಶನ ಮಾಡಿದ್ದಾರೆ. ಅವುಗಳೆಂದೆರೆ
ಸನ್ಮಾನ ಸುಖ
ಭಾರಿ ರಾವಣಾಯಾಣ
ಅನ್ಯಭಾಷೆಯೊಂದಿಗೆ ಇವರ ಒಡನಾಟ
ಇವರು ಮಯೂರ ಕಲಾ ಸಂಘದ ಅಧ್ಯಕ್ಷತೆಯನ್ನು ವಹಿಸಿಕೊಂಡು ನಾಟಕಗಳನ್ನಲ್ಲದೇ ಕನ್ನಡ ಮತ್ತು ತೆಲುಗು ರಂಗ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ರಂಗಕರ್ಮಿ ಮತ್ತು ರಂಗಾಸಕ್ತರಿಗೆ ರಂಗ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದರು. ಕನ್ನಡ ಭಾಷಾ ಭಾಂದವ್ಯವನ್ನು ವೃದ್ಧಿಸುವುದಕ್ಕಾಗಿ ತೆಲುಗು ಶಾಲೆಗಳಲ್ಲಿ ರಂಗ ಕಮ್ಮಟವನ್ನು ಏರ್ಪಡಿಸಿ ಕನ್ನಡ ಭಾಷೆಯ ಉಳಿವಿಗಾಗಿಯೂ ಶ್ರಮಿಸಿದ್ದಾರೆ.
ಇತರೆ ಕ್ಷೇತ್ರದೊಂದಿಗೆ ಮಲ್ಲೇಶರ ಒಡನಾಟ
ಮಲ್ಲೇಶವರು ತಮ್ಮ ತಂದೆಯ ಜೊತೆಯಲ್ಲಿ ದೇವಾಲಯಗಳಲ್ಲಿ ನಡೆಯುತ್ತಿದ್ದ ಭಜಣಾ ಕರ‍್ಯಕ್ರಮಗಳಿಗೆ ತೆರಳುತ್ತಿದ್ದರಿಂದ ತಂದೆಯ ಮೂಲಕ ಬಳುವಳಿಯಾಗಿ ಭಜನೆ ಮಾಡುವುದನ್ನು ಮತ್ತು ಡೋಲಕ್, ಢಕ್ಕೆ, ತಾಳ ಬಾರಿಸುವುದನ್ನು ಕಲಿತಿದ್ದಾರೆ. ಇದರೊಂದಿಗೆ ಭಾವಗೀತೆ, ಜನಪದ ಗೀತೆಗಳಿಗೆ ಧ್ವನಿ ನೀಡಿದ ಕೆಲವು ಸಂದರ್ಭಗಳನ್ನು ಅವರಿಲ್ಲಿ ವ್ಯಕ್ತ ಪಡಿಸಿದರು.ಇವರ ಭಜನೆ ಗಾಯನದಿಂದಲೇ ರಂಗಭೂಮಿಗೆ ಬಂದರು ಅದಲ್ಲದೇ ಇವರ `ವಾದ್ಯ ಚಾತರ‍್ಯದಿಂದಲೇ ಅದೆಷ್ಟೋ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.ಇದರ ನಡುವೆಯೂ ಜನಪದ ಗೀತೆಗಳ ಗಾಯನದಲ್ಲಿ ಮುಂದುವರೆದಿದ್ದರು.
ಮಲ್ಲೇಶರಿಗೆ ಇಲ್ಲಿಯವರೆಗೂ ಸಂದ ಪ್ರಶಸ್ತಿಗಳು
ಮಲ್ಲೇಶರವರು ತಮ್ಮ ಬಾಲ್ಯದಿಂದಲೇ ರಂಗಾಸಕ್ತಿಯನ್ನು ಮೂಡಿಸಿಕೊಂಡು ಅದರೊಟ್ಟಿಗೆ ಬೆಳೆದು ಬಂದಿದ್ದಾರೆ. ಸುಮಾರು ೪೧ ವರ್ಷಗಳಿಂದಲೂ ರಂಗಭೂಮಿಯನ್ನು ಮೆಚ್ಚಿಕೊಂಡ ಬಂದಿರುವ ಇವರಿಗೆ ಕೆಲವು ಗೌರವ ಪುರಸ್ಕಾರಗಳು ಸಂದಿವೆ.
ಅವುಗಳೆಂದರೆ
ದೋಣಿಮಲೈ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
ಚಿಕ್ಕ ಬಳ್ಳಾಪುರದಲ್ಲಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ನಾಟಕ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ
ಬಿಜಾಪುರದಲ್ಲಿ ಬಸವ ಶ್ರೀ ಪ್ರಶಸ್ತಿ
ಬಳ್ಳಾರಿಯ ರಾಘವ ಪ್ರಶಸ್ತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವ ಸನ್ಮಾನ
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸನ್ಮಾನ..ಮತ್ತತೆರೆ ಅನೇಕ ಸಂಘ ಸಂಸ್ಥೆಗಳಿAದ ಗೌರವ ಸನ್ಮಾನಗಳು ಸಂದಿವೆ
ಬಳ್ಳಾರಿ ರಂಗಭೂಮಿ ಕಂಡ ಅಪ್ಪಟ ಕಲಾವಿದರಲ್ಲಿ ಮಲ್ಲೇಶರವರು ಒಬ್ಬರಾಗಿದ್ದಾರೆ. ಬಳ್ಳಾರಿಯ ಮ.ಕ.ಸಂ ಎಂದರೆ ‘ಮಲ್ಲೇಶಿ ಕಟ್ಟಿದ ಸಂಘ’ ಎನ್ನುವಂತಾಗಿ ೧೯೭೮ರಿಂದ ಇಂದಿನವರೆಗೂ ಸಂಸ್ಥಾಪಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಮುನ್ನೆಡೆದಿದ್ದಾರೆ. ಈಲ್ಲೆಯ ರಂಗಕಳಸವನ್ನು ನಾಡಿನ ತುಂಬೆಲ್ಲಾ ಹರಡುವಲ್ಲಿಯೂ ಇವರ ಸೇವೆಯೂ ಸೂಪ್ತವಾಗಿ ಬೆರೆತುಹೋಗಿದೆ ಎಂದರು ತಪ್ಪಾಗಲಾರದು. ಇಂತಹ ಕಲಾಮಾನ್ಯರು ಬೆಳಕಿಗೆ ಬರಲು ಆಗದಿರುವುದನ್ನು ಗಮನಿಸಿದರೆ ತುಂಬಾ ಖೇಧವೆನಿಸುತ್ತದೆ. ಇವರು ಒಮ್ಮೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ ಸಾಹಿತ್ಯದಿಂದ ಬೇಸತ್ತ ಮನಗಳಿಗೆ ರಂಜನೆ ನೀಡುವ ಸಲುವಾಗಿ ‘ಮುದುಕನ ಮದುವೆ’ ನಾಟಕವನ್ನು ತಂದು ಪ್ರಯೋಗಿಸಿ ಇಡೀ ಸಭಾ ಜನರನ್ನು ಆಕರ್ಷಿಸಿದ್ದರು.ಅದರಲ್ಲಿ ನಾನೂ ಒಬ್ಬನು. ಇವರು ಉದಯೋನ್ಮುಖ ಕಲಾವಿದರಿಗೆ “ಹಿರಿಯರ ಹಾದಿಯಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ರಂಗಸೇವೆ ಮಾಡಿದ ಕಲಾವಿದರಿಗೆ ಜಯ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ಉಡಾಫೆ ಬಿಟ್ಟು, ರಂಗಭೂಮಿಗೆ ಶ್ರಮಿಸಿ” ಎಂದು ಕಿವಿಮಾತು ಹೇಳಿದರು.
ಲೇಖನ : ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿ ಮತ್ತು ಬರಹಗಾರರು
mob-೯೩೭೯೮೫೭೭೭೫
mಚಿಟಿರಿuಚಿmಚಿziಟಿg೭@gmಚಿiಟ.ಛಿom

Comments
Post a Comment