ರಂಗ ಮಾಲಿಕೆ- ೮.ಆರ್ ಪ್ರಕಾಶ್ ಗೌಡರು


 ಬಣ್ಣದ ಬದುಕು..

ರಂಗ ಮಾಲಿಕೆ -೮ 



 *ರಂಗ ಪರಂಪರೆಯ ಮೂಲಾಧಾರ ಆರ್ ಪ್ರಕಾಶ್ ಗೌಡರು.*


ಬಹುತೇಕವಾಗಿ ಹಳ್ಳಿಗಳಲ್ಲಿ ನಾಟಕ ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಸೀಮಿತವಾಗಿರುತ್ತದೆ.ಅಲ್ಲದೆ ತಂದೆ ನಾಟಕ ಮಾಡಿದರೆ ಮಗ ಮಾಡಬಾರದು,ಮಗ ಮಾಡಿದರೆ ಮೊಮ್ಮಗ ಮಾಡ ಬಾರದು ಎಂಬ ಪದ್ಧತಿ ತುಂಬಾ ಜನರಲ್ಲಿ ಇದೆ ಆದರೆ ಇಲ್ಲೊಬ್ಬ ಮಹನೀಯರು ರಂಗಭೂಮಿಯನ್ನು ವಂಶ ಪಾರಂಪರ್ಯವಾಗಿ ಬೆಳೆಸಿಕೊಂಡು ಬಂದು ಹೆಸರುವಾಸಿಯಾದರು ಅವರೇ ಆರ್ ಪ್ರಕಾಶ್ ಗೌಡರು . ಇವರು ಮೂಲತಃ ಲಿಂಗಾಯಿತ ಕುಲದ ಸಿರುಗುಪ್ಪ ತಾಲ್ಲೂಕಿನ ಭೈರಗಾಮದಿನ್ನೆಯ ಗೌಡಿಕೆ ವಂಶದ ಅಂದರೆ ಊರು ಮಾಡೋ ಕುಟುಂಬದ ಆರ್ ನರಸನಗೌಡ ಮತ್ತು ನಾಗಮ್ಮ ಎಂಬುವರ ದಂಪತಿಗಳ ಹುಟ್ಟಿದರು.ಇವರು ತೃತೀಯ ಸುಪುತ್ರ. ಒಟ್ಟು  ಆರು ಜನ ಅಣ್ಣ ತಮ್ಮಂದಿರು ಇವರ ತಂದೆಯವರು ಗೌಡಿಕೆ ಮಾಡುತ್ತಿದ್ದರು.ಇಡೀ ಊರಿನ ಮತ್ತು ಸುತ್ತಮುತ್ತಲೆಲ್ಲ ತುಂಬಾ ಮರ್ಯಾದಸ್ಥ ಕುಟುಂಬದವರಾಗಿದ್ದರು .ಅಲ್ಲದೆ ಜನಸಂಪರ್ಕ ಅತೀವ ವಾಗಿತ್ತು.ಆದರೆ ಇವರ ತಂದೆಯ ಕಾಲದಲ್ಲಿ ಸಂಪಾದಿಸಿದ್ದ ಎಲ್ಲಾ ಜಮೀನು ಇಂದಿರಾ ಗಾಂಧಿ ಅವರ ಉಳುವವನೇ ಭೂಮಿಯ ಒಡೆಯ ಮತ್ತು ಜಮೀನ್ದಾರ ನಿಷೇಧ ಪದ್ಧತಿಯಿಂದಾಗಿ ೨೦೦ ಎಕರೆ ಭೂಮಿಯನ್ನೆಲ್ಲ ಕಳೆದುಕೊಂಡು ಕೇವಲ ಇಪ್ಪತ್ತು ಎಕರೆ ಉಳಿಯಿತು .ಅದರಲ್ಲಿ ಆರು ಜನರಿಗೆ ತಲಾ ಎರಡು ಎಕರೆ ಹೊಲ ಬಂದು ಇನ್ನುಳಿದ  ಎಂಟು ಎಕರೆ ದೊಡ್ಡಪ್ಪನ ಮಗನಿಗೆ ಸಂದಿತು. ಬಾಳಿದ ಮನೆ ಬೀದಿಗೆ ಬಂದು ತಿನ್ನಲು ಗತಿ ಇಲ್ಲದಾಗಿ ಅಣ್ಣ ತಮ್ಮಂದಿರು ಹರಿದು ಹಂಚಿ ಹೋದರು .ಆಗ ಸ್ವಲ್ಪ ದಿನಗಳ ಕಾಲ ಊರಿನ ತಮ್ಮ ಓಣಿಯಲ್ಲಿ ಹಿಟ್ಟು ಹಿಡಿದು ರೊಟ್ಟಿ ಮಾಡಿಕೊಡಿ ಎಂದು ಮನೆ ಮನೆ ತಿರುಗಿದರು .ಅಲ್ಲದೆ ಇದು ಬದ್ಧ ದವಸ ಧಾನ್ಯಗಳೆಲ್ಲ ಖಾಲಿಯಾದ ನಂತರ ಸ್ವಲ ದಿನ ತಮ್ಮ ಅಕ್ಕ ಪೊರಮ್ಮನವರ ಆಶ್ರಯ ಪಡೆದರು . ಆದು ತಾತ್ಕಾಲಿಕ. ಮಾವನ ಮನೆಯ ತಿರಸ್ಕಾರಕ್ಕೊಳಗಾಗಿ ಬಳ್ಳಾರಿಯ ವೈ ಕಗ್ಗಲ್ ಗ್ರಾಮದಲ್ಲಿನ ಇನ್ನೊಬ್ಬ ಅಕ್ಕನ ಮನೆಯಲ್ಲಿ ದುಡಿದು ಮದುವೆಯಾಗಿ ಸುಖವಾಗಿ ಇರಬೇಕು ಎಂಬ ಬಯಕೆಯಲ್ಲಿದ್ದ ಪ್ರಕಾಶ್ ಗೌಡರಿಗೆ ದಕ್ಕಿದ್ದು ನಿರಾಸೆ ಮತ್ತು ತಿರಸ್ಕಾರ . ಮತ್ತೆ ಅಲ್ಲಿಂದ ಸಂಡೂರಿನ ಸ್ವಾಮಿಹಳ್ಳಿಗೆ ಬಂದು ಅಲ್ಲಿಯೇ ತಮ್ಮ ಕುಟುಂಬದ ಬೀಗರ ಮನೆಯಲ್ಲಿದ್ದು ದುಡಿದು ಹಣ ಕೂಡಿಟ್ಟರು .


ಬದುಕಿನಿಂದ ಬಣ್ಣದೆಡೆಗೆ : 


ಹೀಗೆ ಸ್ವಾಮಿ ಹಳ್ಳಿಯಲ್ಲಿ ದುಡಿಯುತ್ತಿರುವಾಗ ಊರಿನ ಯುವಕರೆಲ್ಲ ಸೇರಿ ದುಗ್ಗಮ್ಮನ ಜಾತ್ರೆಗೆ ಪಾಂಡು ವಿಜಯ ನಾಟಕದ ತಯಾರಿ ನಡೆದಿತ್ತು.ಆಗ ಅದನ್ನು ನೋಡಲು ಹೋದ ಪ್ರಕಾಶರನ್ನು ನೋಡಿ ಅವರ ಮಾವನವರು ದ್ರೌಪದಿ ಪಾತ್ರ ಮಾಡಲು ಒತ್ತಾಯಿಸಿದರು.ಕಾರಣ ಆಗ ಹೆಂಗಸರ ಪಾತ್ರವನ್ನು ಗಂಡಸರೇ ಮಾಡುತ್ತಿದ್ದರ.ಅದಕ್ಕೆ ಒಪ್ಪಿ ತಾಲೀಮು ಮಾಡಲು ಮುಂದಾದರೂ ತಾಲೀಮಿನಲ್ಲಿ ಜನಮನ್ನಣೆ ಪಡೆದು ಉತ್ಸಾಹದಿಂದ ನಾಟಕದಲ್ಲಿ ಅಭಿನಯಿಸಿ ಎಲ್ಲರ ಮನಸೂರೆಗೊಂಡರು. ಆ ಮೂಲಕ ಬಣ್ಣದ ಗೀಳು ಹೆಚ್ಚಿಸಿಕೊಂಡರು .ನಂತರ ತಮ್ಮ ಹುಟ್ಟೂರು ಭೈರಗಾಮದಿನ್ನೆಗೆ ಬಂದು ತಮ್ಮ ದೊಡ್ಡಣ್ಣನ ಮೂಲಕ ಅನ್ನಪೂರ್ಣರನ್ನು ವರಿಸಿದರು .


ಪ್ರಕಾಶರ ಬದುಕಿನ ಆಧಾರ ಸ್ತಂಭ :


ಮದುವೆಯಾದ ನಂತರ ಮದುವೆಯ ಸಾಲವನ್ನು ತೀರಿಸುವ ಸಲುವಾಗಿ ಗುಂಟೂರು ರೆಡ್ಡಿಯವರ ಅಂದ್ರೆ ತ್ಯಾಗರಾಜ್ ಕ್ಯಾಂಪ್ನಲ್ಲಿದ್ದ ಬಾಬುರೆಡ್ಡಿಯವರ ಹತ್ತಿರ ಒಂದು ವರ್ಷ ಜೀತಕ್ಕಿದ್ದರು. ನಂತರ ಸ್ವತಃ ತಾವು ತಮ್ಮ ಮಡದಿಯೊಂದಿಗೆ ಪ್ರತಿನಿತ್ಯ ಕೇವಲ ಎರಡು ರೂಪಾಯಿಗೆ ಸಂಜೆಯವರಿಗೆ ದುಡಿದು ಹಣ ಕೂಡಿಟ್ಟವರು. ಇದರ ನಡುವೆ ಹದಿನೈದರಲ್ಲಿ ಉಳಿದ ೬ ಜನ ಮಕ್ಕಳನ್ನು ಕಟ್ಟಿಕೊಂಡು ಸಣ್ಣದಾಗಿ ಹೋಟೆಲ್ ತೆಗೆದರು. ಆಗ ಏನು ಅರಿಯದ ಅನ್ನಪೂರ್ಣಮ್ಮ ಸಹ  ಇಡೀ ಹೋಟೆಲ್ ಉಸ್ತುವಾರಿಯನ್ನು ನಿಭಾಯಿಸಿದರು. ಇಡೀ ಊರಿಗೆ ಅನ್ನವಿಟ್ಟರು.ಕೊನೆಗೆ ಸಂಸಾರದ ನೌಕೆ ಬಂದು ದಡ ಸೇರಿದಾಗ ಮತ್ತೆ ಪ್ರಕಾಶರಿಗೆ ಬಣ್ಣದ ಆಸೆ ಬಂತು. ಏಕೆಂದರೆ ಹೋಟೆಲ್ನಲ್ಲಿ ಯಶಸ್ವಿಯಾಗಿ ಸ್ವಲ್ಪ ಸ್ವಲ್ಪವೇ ಮೇಲೆ ಬಂದು ಮನೆ ಜಮೀನು ಟ್ರ‍್ಯಾಕ್ಟರ್ ಖರೀದಿಸಿದ್ದರು .


ದ್ರೌಪದಿಯಿಂದ ಕೌರವನಾದ :


ಈಗಾಗಲೇ ದ್ರೌಪದಿಯ ಪಾತ್ರದ ಮೂಲಕ ಮನ್ನಣೆ ಗಳಿಸಿದ ಪ್ರಕಾಶರಿಗೆ ಗಂಡು ಪಾತ್ರದ ಒಲವು ಮೂಡಿತು. ಅಂತೆಯೇ ಬಹು ಹತ್ತಿರದಿಂದ ಕಂಡ ಪಾಂಡು ವಿಜಯ ನಾಟಕದಲ್ಲಿ ಕೌರವನ ಮುಖ್ಯ ಪಾತ್ರ ಮಾಡುವ ಆಸೆಯಿಂದಲೇ ಬಣ್ಣ ಹಚ್ಚಿದರು .ತುಂಬಾ ಯಶಸ್ವಿಯಾಯಿತು .


ಪೌರಾಣಿಕ ನಾಟಕದಿಂದ ಸಾಮಾಜಿಕ ನಾಟಕದೆಡೆಗೆ :


ಪ್ರಕಾಶರು ಪೌರಾಣಿಕ ನಾಟಕದಲ್ಲಿ ಗಳಿಸಿದ ಹೆಗ್ಗಳಿಕೆ ಮನ್ನಣೆಯೇ ಸಾಮಾಜಿಕ ನಾಟಕಕ್ಕೆ ಮುನ್ನುಡಿಯಾಯಿತು. ಅಂತೆಯೇ ಮೊದಲ ಬಾರಿಗೆ ಸತ್ಯದ ಕೊಲೆಗೆ ಶವದ ಸಾಕ್ಷಿ ಎಂಬ ಸಾಮಾಜಿಕ ನಾಟಕದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು .ಆದರೆ ದುರದೃಷ್ಟವಶಾತ್ ನಾಟಕ ಪ್ರದರ್ಶನಗೊಳ್ಳುತ್ತಿರುವ ಸಮಯದಲ್ಲಿ ಯಾರೋ ಕಿಡಿಗೇಡಿಗಳಿಂದ ಬಣವೆಗೆ ಬೆಂಕಿ ಬಿದ್ದು ನಾಟಕ ಅರ್ಧಕ್ಕೇ ನಿಂತಿತ್ತು .ಆದರೂ ಗೌಡರ ವರ್ಚಸ್ಸು ಕಡಿಮೆಯಾಗಿಲ್ಲ .


ನಾಯಕನಿಂದ ನಾಯಕನ ಪಾತ್ರಕ್ಕೆ ಲಗ್ಗೆ :


ಪ್ರಕಾಶರು ಈಗಾಗಲೇ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು. ಮತ್ತೆ ಹೊಸತನ್ನು ಕಂಡುಕೊಳ್ಳುವ ಉತ್ಸಾಹದಲ್ಲಿ ಮರು ವರ್ಷವೇ ಗೌರಿ ಗೆದ್ದಳು ಎಂಬ ನಾಟಕವನ್ನು ಮಾಡಲು ಮುಂದಾದರು ನಾಟಕದಲ್ಲಿ ಪ್ರಕಾಶರದೆ ಮುಖ್ಯ ಪಾತ್ರ ಶೇಖರ್.ಹಳ್ಳಿಗಳಲ್ಲಿ ಬಹುತೇಕ ಮಕ್ಕಳು ಮದುವೆಯ ವಯಸ್ಸಿಗೆ ಬಂದ ಕೂಡಲೇ ನಾಟಕ ಇತ್ಯಾದಿ ಹವ್ಯಾಸಗಳನ್ನು ಬಿಡುವುದುಂಟು. ಆದರೆ ಗೌಡರಿಗೆ ಮಾತ್ರ ನಾಟಕದ ಹುಚ್ಚು ಮಕ್ಕಳ ಮದುವೆಯ ನಂತರವೂ ಮುಂದುವರಿಯಿತು. ಅದಕ್ಕೆ ಉದಾಹರಣೆ ಈ ಗೌರಿ ಗೆದ್ದಳು .ತಂದೆ ನಾಟಕ ಮಾಡುತ್ತಿದ್ದಾನೆ ಎಂದು ಅರಿತ ಮಕ್ಕಳು ಸ್ವತಃ ತಾವೇ ಬಂದು ಅಪ್ಪನನ್ನು ರೆಡಿ ಮಾಡುತ್ತಿದ್ದರು. ಹಂತ ಹಂತವಾಗಿ ಮೊದಲ ಪ್ರಾಮುಖ್ಯತೆಯನ್ನು ರಂಗ ಭೂಮಿಯಲ್ಲಿ ಗಿಟ್ಟಿಸಿಕೊಂಡಿದ್ಧರು.


 ಕೆಲವು ವರ್ಷಗಳ ನಂತರ ಪ್ರಕಾಶರಿಗೆ ಮತ್ತೆ ಸಾಮಾಜಿಕ ನಾಟಕದತ್ತ ಒಲವು ಮಾಡಿತ್ತು. ಅಂತೆಯೆ ತಮ್ಮ ಹಳೆಯ ತಂಡವನ್ನು ಕಟ್ಟಿಕೊಂಡು ಪ್ರತಿಯೊಬ್ಬರಿಗೂ ತಲಾ ಹತ್ತು ಸಾವಿರದಂತೆ ಪಟ್ಟಿಯನ್ನು ಸಂಗ್ರಹಿಸಿ ಅಣ್ಣನ ಓಡಲು ಬಂಗಾರದ ಕಡಲು ಎಂಬ ಸಾಮಾಜಿಕ ನಾಟಕವನ್ನು ಮಾಡಲು ಮುಂದಾದರೂ. ಅಂತೆಯೇ ಇದರಲ್ಲೂ ಸಹ ಪ್ರಕಾಶರಿಗೆ ಮುಖ್ಯ ಪಾತ್ರ.ಪ್ರಕಾಶರ ಸಾಮರ್ಥ್ಯಕ್ಕನುಗುಣವಾಗಿ ಪಾತ್ರಗಳು ಸಿಗುತ್ತಿದ್ದವು .ಅಂತೆಯೇ ಅವರೂ ಸಹ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು .ಆದರೆ ಅಣ್ಣನ ಓಡಲು ಬಂಗಾರದ ಕಡಲು ನಾಟಕದಲ್ಲಿ ಪ್ರಕಾಶರ ಅಭಿನಯ ಇತರೆ ಪಾತ್ರಗಳಿಂದ ತುಂಬಾ ಕಳಪೆಯಾಯಿತು. ಜನರ ನಿರಾಶೆಗೆuಟಿಜeಜಿiಟಿeಜಳಗಾಗಿತ್ತು.ಅಂದಿನಿAದಲೇ ಪ್ರಕಾಶರು ನ‍ಟನೆಗೆ ತಿಲಾಂಜಲಿಯನ್ನು ಇಟ್ಟರು .


ತಮ್ಮ ಹಾದಿಯಲ್ಲಿ ತಮ್ಮ ಮಕ್ಕಳ ಪಯಣ :


ನಟನೆಗೆ ವಿಧಾಯ ಹೇಳಿದ್ದರೂ ಕೊನೆಯವರೆಗೂ ರಂಗಭೂಮಿಯನ್ನು ಬಿಡಲೇ ಇಲ್ಲ . ತಮ್ಮ ಅಭಿನಯದ ಒಲವನ್ನು ತಮ್ಮ ಮಕ್ಕಳಿಗೆ ಹಂಚಿ ಮರು ವರ್ಷ ಮಕ್ಕಳನ್ನು ನಾಟಕ ಮಾಡಿಸಲು ಮುಂದಾದರು .ತಮ್ಮ ಎರಡನೆಯ ಮಗ ಭೀಮನಗೌಡ ಪಕ್ಕದ ಊರಿನಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿ ಅಪ್ಪನಂತೆ ಸೈ ಎನಿಸಿಕೊಂಡರೆ ,ಇನ್ನು  ಮೊದಲನೆಯ ಮಗ ಮಲ್ಲನಗೌಡನ ಸಹ ಪಾಂಡು ವಿಜಯ ನಾಟಕದಲ್ಲಿ  ಅಪ್ಪನಂತೆ ಪಾಂಡು ವಿಜಯ ನಾಟಕದಲ್ಲಿ ಕೌರವನ ಪಾತ್ರವನ್ನು ಮಾಡಿ ಮಧ್ಯಮ ಮನ್ನಣೆಯನ್ನು ಪಡೆದರು .


ಇನ್ನು ತಂದೆಯ ತೃತೀಯ ಸುಪುತ್ರ  ಮಂಜುನಾಥ್  ಬಾಲ್ಯದಲ್ಲೇ ಹಳ್ಳಿಯ ಮಕ್ಕಳನ್ನು ಕಟ್ಟಿಕೊಂಡು ಗಣೇಶನ ಹಬ್ಬಕ್ಕೆ ನಾಟಕ ನಡೆಸುತ್ತಿದ್ದಂತ ಮಂಜುನಾಥ್. ಮುಂದೆ ರಂಗಕಲೆಯಲ್ಲಿ ಡಿಪ್ಲೋಮಾ ರಂಗ ಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ರಂಗಕಲೆಯಲ್ಲಿ ಇಡೀ ರಾಜ್ಯಕ್ಕೆ ಕೆ ಸೆಟ್ ನಲ್ಲಿ ಪ್ರಥಮ ಬಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ ಮೂರು ಬಂಗಾರದ ಪದಕಗಳನ್ನು ಪಡೆದರು. ಅಲ್ಲದೆ ದೆಹಲಿಯಲ್ಲಿ  ನಡೆದ ಥಿಯೇಟರ್ ಒಲಿಂಪಿಕ್ ನಲ್ಲಿ ಮತ್ತು ರಾಷ್ಟ್ರದ ಸುತ್ತಮುತ್ತ ಭಾಗವಹಿಸಿ ಬಳ್ಳಾರಿಗೆ ಕೀರ್ತಿಯನ್ನು ತಂದರು .

ಇನ್ನು ನಾಲ್ಕನೇ ಸುಪುತ್ರ ಈಶಪ್ಪ ನವರು ಕೂಡ  ರಂಗಕಲೆಯಲ್ಲಿ ಡಿಪ್ಲೋಮಾ ಮಾಡಿ ಡಿಗ್ರಿಯಲ್ಲಿ ರಂಗತೋರಣ ನಾಟಕೋತ್ಸವದಲ್ಲಿ ಭಾಗವಹಿಸಿ ಇಡೀ ರಾಜ್ಯಕ್ಕೆ ಮೂರನೇ ಬಹುಮಾನವನ್ನು ಪಡೆದು ಕಾಲೇಜಿಗೆ ಹೆಸರು ತಂದು ಇಡೀ ರಾಜ್ಯದಾದ್ಯಂತ ಜನಪದ ಮತ್ತು ನಾಟಕದ ಮೂಲಕ ಸುತ್ತಾಡಿ ಹೆಸರಾದರು . 


ಪ್ರಕಾಶರ ಪ್ರೇರಣೆ :

ಪ್ರಕಾಶರಿಗೆ ರಂಗಭೂಮಿಯ ನಂಟು ಸಿಕ್ಕಿದ್ದು ತಮ್ಮ ತಂದೆ ಆರ್ ನರಸನಗೌಡ ರಿಂದಲೇ .ತಮ್ಮ ತಂದೆ ಇವರು ಬಾಲ್ಯದಲ್ಲಿದ್ದಾಗ ಸತ್ಯ ಹರಿಶ್ಚಂದ್ರ ತ್ರಿಪುರ ದಹನ ಎಂಬ ನಾಟಕಗಳಲ್ಲಿ ಅಭಿನಯಿಸಿ ಸುತ್ತಮುತ್ತಲೆಲ್ಲ  ಹೆಸರಾಗಿದ್ದರು ಅಂತೆಯೇ ಅಪ್ಪನ ಹೆಸರನ್ನು ಉಳಿಸಲು ತಾವು ಸಹ ಬಣ್ಣವನ್ನು ಹಚ್ಚಿದರು.


ಪ್ರಕಾಶರ ರಂಗ ಗುರುಗಳು :

ಇವರ ಮೂಲ ರಂಗ ಗುರುಗಳು ಅವರ ತಂದೆ ಆರ್ ನರಸನಗೌಡ ಆದರೆ ಇವರಿಗೆ ನಟನೆಯಲ್ಲಿ ತುಂಬ ಸಹಾಯ ಸಹಾಯ ಮಾಡಿದವರು ಇವರ ಗೆಳೆಯ ಪಿ.ಕೆ ಕೃಷ್ಣಪ್ಪ ಗೌಡ ಮತ್ತು ಆರ್ ಶಿವರಾಯಪ್ಪ .ಗೆಳೆಯ ಕೃಷ್ಣಪ್ಪ ಪ್ರಕಾಶರು ಮಾತುಗಳನ್ನು ಹೇಳುವಾಗ ತೊದಲಿಸುತ್ತಿದ್ದಾಗಲೆಲ್ಲ ಅವರಿಗೆ ಅನುಕೂಲವಾಗುವಂತೆ ಮಾತುಗಳನ್ನು ಬರೆದುಕೊಡುವ ಚಾಕಚಕ್ಯತೆಯನ್ನು ಹೊಂದಿದ್ದರು ಅಂತೆಯೇ ಇವರು ಗುರುಗಳಾದರು .ಇನ್ನು ಮಾತುಗಳ ಧಾಟಿಯನ್ನು ಮತ್ತು ರಾಗಗಳನ್ನು ತಾಳಗಳನ್ನು ಹೇಳಿಕೊಡುವ ಜವಾಬ್ದಾರಿ ಶಿವರಾಯಪ್ಪ ಅವರಿಗೆ ದಕ್ಕಿತ್ತು ಅಂತೆಯೇ ಇವರು ಸಹ ಗುರುಗಳಾದರು .ನೆನಪಿರಲಿ ಪ್ರಕಾಶ್ ಗೌಡರು ಓದಿದ್ದು ಕೇವಲ ನಾಲ್ಕನೇ ತರಗತಿ .


ಪ್ರಕಾಶ್ ಗೌಡರ ರಂಗ ತಯಾರಿ :

ನಾಟಕ ಬಂತೆAದರೆ ಸಾಕು ಸುಮಾರು ಒಂದು ತಿಂಗಳ ಕಾಲ ರಂಗ ತಯಾರಿಯನ್ನು ಮಾಡಿಕೊಡುತ್ತಿದ್ದರು .ದಿನಾಲು ಮಡದಿಯ ಸಹಾಯದಿಂದ ಉದ್ದಿನ ಬೇಳೆಗಳನ್ನು ಉರಿದು ಬೆಲ್ಲದೊಂದಿಗೆ ಪುಡಿ ಮಾಡಿ ತಿನ್ನುತ್ತಿದ್ದರು ಅಲ್ಲದೆ ಶುಂಠಿ ಬೆಲ್ಲವನ್ನು ಧ್ವನಿಯ ಉಳಿಸಿಕೊಳ್ಳುವಿಕೆ ಯನ್ನು ಕಾಪಾಡಲು ತಿನ್ನುತ್ತಿದ್ದರು .ಅಂತೆಯೇ ನಾಟಕದಲ್ಲಿ ಹೆಚ್ಚಾಗಿ ನಾಟಕದಲ್ಲಿ ಗೌಡರ ಕಂಠ ತಪ್ಪಡಿ ಕಣಿಯಂತೆ  ಇರುತ್ತಿತ್ತು .‍


ನಾಟಕ ಎಂದ ಕೂಡಲೇ ಮೂಗು ಮುರಿಯುವವರ ಸಂಖ್ಯೆ ಹೆಚ್ಚು ಆದರೆ ನಾಟಕವನ್ನು ತಮ್ಮ ವಂಶ ಪಾರಂಪರ್ಯವಾಗಿ ಬೆಳೆಸಿಕೊಂಡು ಬಂದAಥ ಸ್ಥಿತಿಯನ್ನು ಕೇವಲ ವೃತ್ತಿ ರಂಗಭೂಮಿಯಲ್ಲಿ ಕಾಣುತ್ತೇವೆ. ಆದರೆ ಒಬ್ಬ ಮೇಲ್ವರ್ಗದ ಕುಟುಂಬದಲ್ಲಿ ತಂದೆಯಿAದ ಮಗನಿಗೆ ಮಗನಿಂದ ಮಕ್ಕಳಿಗೆ ಉಳಿಸಿಕೊಂಡು ಬಂದ ರಂಗ ಪರಂಪರೆಯನ್ನು ಈ ಕುಟುಂಬದಲ್ಲಿ ಕಾಣಬಹುದು .ಅಂತೆಯೇ ಗೌಡರ ಮಕ್ಕಳು ಸಹ ಅಪ್ಪನ ಹಾದಿಯನ್ನು ಪಾಲಿಸಿ ಈಗ ತಮ್ಮ ಮಕ್ಕಳು ಸಹ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ .ನಾಟಕ ಕೇವಲ ಬಂಡವಾಳಕ್ಕಲ್ಲ  ,ಲಾಭಕ್ಕಾಗಿ ಅಲ್ಲ ಮುಖ್ಯವಾಗಿ ಕಲೆಯು ವಿಕಾಸಕ್ಕಾಗಿ ಎಂಬುದು ಈ ಕುಟುಂಬದ ರಂಗ ಮಂತ್ರ.

✍ಆರ್.ಪಿ.ಮAಜುನಾಥ್.ಬಿ.ಜಿ.ದಿನ್ನೆ

ಸಾಹಿತಿಗಳು ಮತ್ತು ಬರಹಗಾರರು

ಮೊ-೯೩೭೯೮೫೭೭೭೫

mಚಿಟಿರಿuಚಿmಚಿziಟಿg೭@gmಚಿiಟ.ಛಿom

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.