ನಾವೇಕೆ ದೀಪಾವಳಿ ಆಚರಿಸುತ್ತೇವೆ
ನಾವೇಕೆ ದೀಪಾವಳಿ ಆಚರಿಸುತ್ತೇವೆ...
ದೀಪಾವಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದಕ್ಕೆ ಈಗಾಗಲೇ 6 ವಿವಿಧ ರೋಚಕ ಪುರಾಣ ಕತೆಗಳನ್ನು ನಾವು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇನ್ನು ಉಳಿದ 6 ಕಥೆಗಳನ್ನು ಲೇಖನದ ಮೂಲಕ ತಿಳಿಯೋಣ. ಕಳೆದ ಲೇಖನದಲ್ಲಿ ಲಕ್ಷ್ಮೀ ದೇವತೆಯ ಹುಟ್ಟುಹಬ್ಬದ ದಿನದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಒಂದು ಕಥೆಯಾದರೆ. 2 ನೇ ಕಥೆ ಮಹಾಬಲೀ ರಕ್ಷಸನಿಂದ ಮಹಾಲಕ್ಷ್ಮೀಯನ್ನು ವಿಷ್ಣು ಮೂರ್ತಿ ಮುಕ್ತಳಾಗಿ ಮಾಡಿದ್ದರಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು. 3 ನೇ ಕಥೆಯ ಪ್ರಕಾರ ನರಕಾಸುರನನ್ನು ಸಂಹಾರ ಮಾಡಿದ ದಿನವಾದ್ದರಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು. 4 ನೇ ಕಥೆಯ ಪ್ರಕಾರ ಪಾಂಡವರು ತನ್ನ 12 ವರ್ಷಗಳ ಅಜ್ಞಾತವಾಸದಿಂದ ಮರಳಿದ ದಿನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು. 5 ನೇ ಕಥೆಯ ಪ್ರಕಾರ ರಾವಣಾಸುರನನ್ನು ಕೊಂದು, ರಾಮನು ತನ್ನ 14 ವರ್ಷಗಳ ವನವಾಸದಿಂದ ಆಯೋಧ್ಯೆಗೆ ಹಿಂದಿರುಗಿದ್ದರಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು. 6 ನೇ ಕಥೆಯ ಪ್ರಕಾರ ವಿಕ್ರಮಾದಿತ್ಯನ ಪಟ್ಟಾಭಿಷೇಕದ ದಿನವಾಗಿ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ ಎಂದು ಈಗಾಗಲೇ ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೀರಾ.
ಕಾಳಿ ದೇವತೆ
ಕಾಳಿ ದೇವತೆಯನ್ನು ಶ್ಯಾಮ ಕಾಳಿ ಎಂದು ಕೂಡ ಕರೆಯುತ್ತಾರೆ. ಕಾಳಿಯ 10 ಅವತಾರಗಳಲ್ಲಿ ಈ ಅವತಾರ ಮೊದಲನೆಯದು. ಪಾರ್ವತಿಯ ಸ್ವರೂಪವಾದ ಕಾಳಿಯು ಸ್ವರ್ಗ ಹಾಗು ಭೂಮಿಯ ಮೇಲೆ ಇರುವ ದುಷ್ಟರನ್ನು ಸಂಹಾರ ಮಾಡಲು ಜನಿಸಿದವಳು. ಈಕೆಯು ಕ್ರೌಯದಿಂದ ಮೆರೆಯುತ್ತಿದ್ದ ರಾಕ್ಷಸರನ್ನು ಕೊಂದ ನಂತರ ತನ್ನ ಕೋಪದ ನಿಯಂತ್ರಣ ಕಳೆದುಕೊಳ್ಳುತ್ತಾಳೆ. ತನ್ನ ದಾರಿಗೆ ಅಡ್ಡ ಬಂದವರನ್ನು ನಾಶ ಮಾಡುತ್ತಾ ಇರುತ್ತಾಳೆ ಆ ಸಮದಲ್ಲಿ ಮಹಾ ಶಿವನು ಅಡ್ಡ ಹೋಗುತ್ತಾನೆ. ಆಕೆಯ ಕಾಲಿನ ಕೆಳಗೆ ಶಿವನು ಇರುತ್ತಾನೆ. ಇದನ್ನು ನೆನೆಪಿಸಿಕೊಳ್ಳುವ ಸಲುವಾಗಿಯೇ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಕೂಡ ಹೇಳುತ್ತಾರೆ.
ಸುಗ್ಗಿ
ಈ ದೀಪಾವಳಿಯು ಬೇಳೆಗಳ ಸಮಯದಲ್ಲಿ ಬರುವುದರಿಂದ ಶ್ರೀಮಂತವಾದ ಅಕ್ಕಿ ಸಾಗುವಳಿಗಳನ್ನು ನೀಡಿ ಅದರ ಫಲವನ್ನು ನೀಡುತ್ತದೆ. ಭಾರತವು ಕೃಷಿ-ಆರ್ಥಿಕ ಸಮಾಜವಾಗಿದ್ದು, ಸುಗ್ಗಿಯ ಮಹತ್ವವನ್ನು ನೀಡಿ ಆಚರಣೆ ಮಾಡುತ್ತದೆ ಎಂದೇ ಆಗಿದೆ. ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೊಸ ವರ್ಷ
ಹಿಂದೂ ಧರ್ಮ ಪ್ರಪಂಚದ ಮೂರನೆಯ ದೊಡ್ಡ ಧರ್ಮವಾಗಿದೆ. ಈ ಸಮಯದಲ್ಲಿ ಹಿಂದೂ ಉದ್ಯಮಿಗಳು ಪೂಜೆಗಳನ್ನು ಮಾಡುತ್ತಾರೆ. ಇದರ ಸಂಕೇತ ಹಿಂದು ಧರ್ಮದ ಹೊಸ ವರ್ಷ ಪ್ರಾರಂಭವಾಗಿದೆ ಎಂದೇ ಆಗಿದೆ. ಹಾಗಾಗಿಯೇ ದೀಪಗಳನ್ನು ಬೆಳಗಿ ದೀಪಾವಳಿ ಹಬ್ಬದಂದು ಹೊಸವರ್ಷವನ್ನು ಆಚರಿಸುತ್ತಾರೆ ಎಂದು ಹೇಳಲಾಗಿದೆ.
ಸಿಖ್‍ರಿಗೆ ವಿಶೇಷವಾದ ದಿನ
ಸಿಖ್‍ರಿಗೆ ದೀಪಾವಳಿ ಅತ್ಯಂತ ವಿಶೇಷವಾದ ದಿನವೆಂದು ಮಹತ್ವವನ್ನು ಪಡೆದಿದೆ. 3 ನೇ ಸಿಖ್ ಗುರುವಾದ ಅಮರ್‍ದಾಸ್ ಎಲ್ಲಾ ಸಿಖ್ ಗುರುಗಳ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಂಧಿಸುವ ಸಂದರ್ಭದಲ್ಲಿ ದೀಪಗಳ ಉತ್ಸವವನ್ನು ಸ್ಥಾಪಿಸಿದರು. ಅಮೃತಸರದ ಗೋಲ್ಡನ್ ಟೆಂಪಲ್ ಅಡಿಪಾಯವನ್ನು 1577 ರಲ್ಲಿ ದೀಪಾವಳಿದಿನದಂದು ಹಾಕಲಾಯಿತು.
ವರ್ಧಮಾನ ಮಹಾವೀರ ಜ್ಞಾನೋದಯ
ಜೈನರಿಗೆ ದೀಪಾವಳಿ ಹಬ್ಬವು 15,527 ಬಿ.ಸಿಯಲ್ಲಿಯೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಜೈನರ 24 ಮತ್ತು ಕೊನೆಯ ತೀರ್ಥಂಕರರು ಮತ್ತು ಆಥುನಿಕ ಜೈನ ಧರ್ಮದ ಸ್ಥಾಪಕನ ಜ್ಞಾನೋದಯವನ್ನು ನೆನಪಿಸುತ್ತದೆ.
ಸ್ವಾಮಿ ದಯಾನಂದ ಸರಸ್ವತಿ ಜ್ಞಾನೋದಯ
ಕಾರ್ತಿಕ ದೀಪಾವಳಿ ದಿನದಂದು ಹಿಂದೂ ಧರ್ಮದ ಶ್ರೇಷ್ಠ ಸುಧಾರಣಾಧಿಕಾರಿಗಳಾದ ಸ್ವಾಮಿ ದಯಾನಂದ ಸರಸ್ವತಿಯವರು ಜ್ಞಾನೋದಯ ಪಡೆದಿದ್ದರಿಂದ ಆ ಮಹತ್ವಾಕಾಂಕ್ಷೆಯ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. 1857 ರಲ್ಲಿ ಹಿಂದೂ ಧರ್ಮವನ್ನು ಶುದ್ಧಿಕರಿಸಲು ಹಿಂದೂ ಸುಧಾರಣಾ ಚಳುವಳಿ "ಸೊಸೈಟಿ ಆಫ್ ನೊಬೆಲ್ಸ್" ಎಂಬ ಆರ್ಯ ಸಮಾಜವನ್ನು ಸ್ಥಾಪನೆ ಮಾಡಿದರು. ಪ್ರತಿ ದೀಪಾವಳಿಯಂದು ಈ ಮಹಾನ್ ಸುಧಾರಕರನ್ನು ಹಿಂದೂಗಳು ನೆನಪಿಸಿಕೊಳ್ಳುತ್ತಾರೆ.
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ಹಿಂದೂ ಧರ್ಮ
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.
ಸಿಖ್ ಧರ್ಮ
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ[೧] ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ಜೈನ ಧರ್ಮ
ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ. ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ. ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ ೧೬ ಗಣ-ಚಕ್ರವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.
ಹಬ್ಬಗಳ ವೈಶಿಷ್ಟ್ಯ
* ಮನೆಮನೆಯಲ್ಲೂ ಉತ್ಸಾಹದಿಂದ ಆಚರಿಸಲಾಗುವ ವಿಶೇಷ ಉತ್ಸವಗಳನ್ನು ಹಬ್ಬವೆನ್ನಬಹುದು. ಮೂಲತಃ ಈ ಹಬ್ಬಗಳು ವಿಜಯೋತ್ಸವಗಳಾಗಿರಬೇಕು. ದುಷ್ಟಶಕ್ತಿಯನ್ನು ದಮನ ಮಾಡಿದುದರ ಜ್ಞಾಪಕಾರ್ಥವಾಗಿ ಇವು ಆಚರಣೆಯಲ್ಲಿ ಬಂದಿರಬೇಕು. ಕೆಲವೊಂದು ಹಬ್ಬಗಳು ಅಂಥ ವಿಜಯಕ್ಕೆ ಕಾರಣರಾದ ಮಹಾ ಪುರುಷರು ಹುಟ್ಟಿದ ದಿನಗಳಾಗಿವೆ. ಇವುಗಳಲ್ಲಿ ಕೆಲವು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುವುದು. ಕೆಲವು ಹಬ್ಬಗಳು ಆಯಾ ಸಂಪ್ರದಾಯದವರಿಗೆ ಮಾತ್ರ ಮೀಸಲು. ಇನ್ನು ಕೆಲವು ಅನುಕರಣೆಯಿಂದಲೂ ಬಂದಿರಬಹುದು.
* ಅಂಥವುಗಳ ಹಿಂದಿನ ಐತಿಹ್ಯವನ್ನು ಹೇಳುವುದು ಕಷ್ಟ. ಆದರೆ ಎಲ್ಲ ಹಬ್ಬಗಳಿಗೂ ಸಾಮಾನ್ಯವಾಗಿ ಒಂದಲ್ಲ ಒಂದು ಐತಿಹ್ಯವಿದ್ದೇ ಇರುತ್ತದೆ; ಇವುಗಳಿಗೆ ಪುರಾಣ, ಸ್ಮೃತಿ ಇಲ್ಲವೆ ಸಂಪ್ರದಾಯಗಳು ಹಿನ್ನೆಲೆಯಾಗಿರುತ್ತವೆ. ಕೆಲವಾರು ವ್ರತಗಳೂ ಹಬ್ಬಗಳ ಸಾಲಿನಲ್ಲಿ ಸೇರಿಹೋಗಿವೆ. ಕರಗ, ರಥೋತ್ಸವ ಮುಂತಾದುವು ಊರಿಗೆ ಊರೇ ಆಚರಿಸಲಾಗುವ ಹಬ್ಬಗಳು. ಇತ್ತೀಚೆಗೆ ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವ, ಗಾಂಧೀ ಜಯಂತಿಯಂಥ ರಾಷ್ಟ್ರೀಯ ಹಬ್ಬಗಳೂ ಆಚರಣೆಯಲ್ಲಿವೆ. ತಳಿರು ತೋರಣಗಳಿಂದ ಮನೆಯನ್ನು ಅಲಂಕರಿಸುವುದು ಹಬ್ಬದ ಕುರುಹು. ಆಗ ಎಳೆಬಟ್ಟಿನ ರಂಗವಲ್ಲಿಯಿಂದ ಮನೆಯನ್ನಲಂಕರಿಸಲಾಗುವುದು. ಮಾವಿನ ಹಸಿರೆಲೆಯ ತೋರಣ ಹಬ್ಬದ ತೋರ್ ಬೆರಳಿದ್ದಂತೆ. ಅಂಥ ಸಂದರ್ಭಗಳಲ್ಲಿ ಜನ ಮನೆಯನ್ನು ಸಾರಿಸಿ ಗುಡಿಸಿ ರಂಗುರಂಗಿನ ರಂಗವಲ್ಲಿಯಿಂದ ವಿಶೇಷವಾಗಿ ಸಿಂಗರಿಸುತ್ತಾರೆ. ಸಿಹಿ ಅಡಿಗೆಯಂತೂ ಆಗಲೇ ಬೇಕು. ಒಂದೊಂದು ಹಬ್ಬದಲ್ಲೂ ವಿಶಿಷ್ಟವಾದ ಪೂಜೆ ಇತ್ಯಾದಿ ಇದ್ದೇ ಇರುತ್ತದೆ. ಪೂಜೆಗಾಗಿ ಆರತಿಯನ್ನು ಸಿದ್ಧಪಡಿಸುವುದೂ ವಾಡಿಕೆ. ಹೀಗೆ ಹಬ್ಬದ ಆಚರಣೆಯಲ್ಲಿ ಕಲೋಪಾಸನೆಗೂ ಸೌಂದರ್ಯಪ್ರಜ್ಞೆಗೂ ರಸಿಕತೆಗೂ ಸಾಮಾಜಿಕ ಚೈತನ್ಯದ ಜಾಗೃತಿಗೂ ಸಾಕಷ್ಟು ಎಡೆ ದೊರೆತಿದೆ.
ಲೇಖನ ಸಂಗ್ರಹ - ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
manjuamazing7@gmail.com

Comments
Post a Comment