ರಂಗ ಮಾಲಿಕೆ -೨೪ ಗಡಿಭಾಗದ ಕನ್ನಡದ ರಂಗಕಟ್ಟಾಳು - ಬದಿನೆಹಾಳ್ ಭೀಮಣ್ಣನವರು


ಮೂರು ತಲೆಮಾರಿನಿಂದಲೂ ರಂಗಭೂಮಿಯ ನಂಟು ಹೊಂದಿರುವ ಈ ಕುಟುಂಬದಲ್ಲಿ ಕಲೆ ರಕ್ತಗತವಾಗಿಯೇ ಸಿದ್ದಿಸಿದೆ.ಎಲ್ಲರೂ ಅವರವರ ತಂದೆಯೊಂದಿಗೆ ಅಭಿನಯಿಸಿ ರಂಗ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ.ಅಂತೆಯೇ ಭೀಮಣ್ಣನವರು ನಟನಾ ಪ್ರವೃತ್ತಿ ಶಾಲಾ ಹಂತದಿಂದಲೇ ಪ್ರಾರಂಭವಾಗಿ 1978ರಲ್ಲಿ ಏಕಪಾತ್ರಾಭಿನಯದ ಮೂಲಕ ಗುರುತಿಸಲ್ಪಟ್ಟು ,ಮೊದಲ ಬಾರಿಗೆ 1980ರಲ್ಲಿ ಬದಿನೇಹಾಳ್ ರಂಗನಗೌಡರು ಕಟ್ಟಿ ಬೆಳೆಸಿದ ಶ್ರೀ ಮಲ್ಲಿಕಾರ್ಜುನಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ವರನೋಡಿ ಹೆಣ್ಣು ಕೊಡು ಎಂಬ ನಾಟಕದಲ್ಲಿ ಇವರ ರಂಗ ಗುರು ತಿಮ್ಮಪ್ಪ ಮಾಸ್ತರರ ನೇತೃತ್ವದಲ್ಲಿ ಸಣ್ಣ ಪಾತ್ರದ ಮೂಲಕ ಬಣ್ಣ ಹಚ್ಚಿ ಕಲಾರಸಿಕರ ಮನಗೆದ್ದರು.ಈ ಮೂಲಕ ಆರಂಭವಾದ ರಂಗ ಪಯಣದಲ್ಲಿ ಕನಕದಾಸರು, ವಿಜಯದಾಸರು,ಪುರಂದರದಾಸ,ಶ್ರೀಕೃಷ್ಣ ದೇವರಾಯ,ಹೇಮರೆಡ್ಡಿ ಮಲ್ಲಮ್ಮ,ದಾರಿದೀಪ,ವಿದ್ಯಾವತಿ,ಗೌರಿ ಗೆದ್ದಳು,ಗೌಡ್ರ ಗದ್ಲ, ನರ್ತಕಿ ನಾಯಕಿ, ವಾತ್ಸಲ್ಯ,ದೇವಿ ಮಹಾತ್ಮೆ,ಕವಿಖೈದಿಯಾದ ಹೀಗೆ ಸುಮಾರು 600 ಕ್ಕೂ ಹೆಚ್ಚಿನ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕ ಪ್ರಯೋಗ,ಹತ್ತಾರು ಪ್ರಶಸ್ತಿ ಪುರಸ್ಕಾರಗಳನ್ನು ಕಾಣಬಹುದಾಗಿದೆ.
 ರತ್ನ ಮಾಂಗಲ್ಯದಲ್ಲಿ ರಂಜನಾಗಿ, ಅಣ್ಣ ತಂಗಿಯಲ್ಲಿ ಖಾಸಿಂನಾಗಿ,ಕುರುಕ್ಷೇತ್ರ ಮತ್ತು ರಕ್ತರಾತ್ರಿಯಲ್ಲಿ ದುರ್ಯೋಧನ,ಕನಕದಾಸದಲ್ಲಿ ಕನಕದಾಸರಾಗಿ,ಟಿಪ್ಪು ಸುಲ್ತಾನನಾಗಿ, ಬಯಲಾಟದ ಶಚಿಯಾಗಿ,ಅಲ್ಲೂರಿ ಸೀತಾರಾಮನಾಗಿ,ಶಕುನಿಯಾಗಿ  ಆಂಧ್ರಪ್ರದೇಶ,ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ಬಹುತೇಕ ನಾಲ್ಕು ರಾಜ್ಯಗಳ ತುಂಬೆಲ್ಲ ಸಂಚರಿಸಿ,ಸುಮಾರು 10 ನಾಟಕ ತಂಡಗಳಲ್ಲಿ ತಮ್ಮ ಅದ್ಭುತವಾದ ಅಭಿನಯದಿಂದಾಗಿ ಖ್ಯಾತಿ ಗಳಿಸಿದ್ದಾರೆ. ಈ ಮೂಲಕ ಚಲನಚಿತ್ರ ನಟರಾದ ಸುದೀರ್,ಡಿಂಗ್ರಿ ನಾಗರಾಜ್,ರಾಮಕೃಷ್ಣ, ರಮೇಶ್ ಭಟ್ ಮುಂತಾದ ಷತವರೊಂದಿಗೆ ಚಂದನ ವಾಹಿನಿಯ ದಾಸನಾಗು ವಿಶೇಷನಾಗು ಎಂಬ ಧಾರಾವಾಹಿ ಹಾಗೂ ವಿಜಯದಾಸರು, ಹೇಮರೆಡ್ಡಿ ಮಲ್ಲಮ್ಮ,ಅಕ್ಕ ಮಹಾದೇವಿ ಮರೋಜನ್ಮಂ ಎಂಬ ಕಿರುಚಿತ್ರಗಳ ಮೂಲಕ ನಟನ ಸಖ್ಯ ಹೊಂದಿದ್ದಾರೆ.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.