ಯೋಗ ಹುಟ್ಟಿದ ದೇಶದಲ್ಲೇ ಯೋಗಕ್ಕೆ ಮಾನ್ಯತೆಯಿಲ್ಲ - ಕುಲಪತಿ ಪ್ರೊ.ವೇಣುಗೋಪಾಲ್ ಯೋಗ ಕೇವಲ ಇಂದು ವಯೋವೃದ್ಧರಿಗೆ ಸೀಮಿತ ಎನ್ನುವಂತಾಗಿದೆ ಆದರೆ ಮುಪ್ಪಿನ ವಯಸ್ಸಿನಲ್ಲಿ ಅದನ್ನು ಒಲೈಸಿಕೊಳ್ಳಲು ಪರದಾಡುವ ಬದಲು ಅದನ್ನು ನಮ್ಮ ಬಾಲ್ಯದ ಜೊತೆಯಲ್ಲೇ ರೂಡಿಸಿಕೊಂಡರೆ ನಾವೆಲ್ಲ ನಿರೋಗಿಗಳಾಗುತ್ತೇವೆ ಎಂದು ಅಭಿಪ್ರಾಯ ಪಟ್ಟರು.ವಿ.ವಿ ಯ ಯೋಗ ಕೇಂದ್ರದ ಸಹಯೋಗದಲ್ಲಿ ಜ್ಞಾನ ಭಾರತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನವನ್ನು ಉದ್ದೇಶಿಸಿ ಮಾತಾನಾಡುತ್ತಾ ಒಂದನ್ನೊಂದು ಕಾಲದಲ್ಲಿ ಹಾವು ಹಿಡಿಯುವವರ ದೇಶವಾಗಿದ್ದ ಭಾರತ ಇಂದು ಯೋಗ ದೇಶವೆಂದು ಕರೆಯಲಾಗಿದೆ ಅದರ ಮಾನ್ಯತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಅಲ್ಲದೆ ಶಾಲಾ ಹಂತದಿಂದಲೇ ಯೋಗ ಶಿಕ್ಷಣ ನೀಡುವಂತಾದರೆ ಬಹುಬೇಗ ನಿರೋಗಿ ದೇಶ ನಿರ್ಮಾಣ ಮಾಡಬಹುದು ಎಂದರು.ತದನಂತರ ವಿತ್ತಾಧಿಕಾರಿ ಪ್ರೊ.ಎ.ಲೋಕೇಶ್ ಮಾತಾನಾಡಿ ವಿಶ್ವದಾದ್ಯಂತ ಎಲ್ಲೆಡೆ ಪಾಶ್ಚಾತ್ಯ ಸಂಸ್ಕೃತಿ ಆವರಿಸಿ ಮನುಷ್ಯರನ್ನು ಅಧೋಗತಿಗೆ ಇಳಿಸಿದೆ.ಅದಕ್ಕಾಗಿಯೇ ಮನುಜನ ಏಳ್ಗೆಗೆ ಮತ್ತು ಅವನ ಬದುಕಿನ ಅನೇಕ ಜಂಜಾಟಗಳ ವಿಮುಕ್ತಿಗೆ ಯೋಗವೊಂದೇ ಪರಿಹಾರ. ಅಂತೆಯೇ ಅದರ ಮಹತ್ವ ಅರಿತು ಪ್ರಧಾನಿಯವರು ವಿಶ್ವಸಂಸ್ಥೆಯಲ್ಲಿ ವಿಶ್ವ ಮಾನ್ಯತೆಯ ಮುನ್ನುಡಿಯಾಡಲು ಇಡೀ ವಿಶ್ವವೇ ಒಕ್ಕೊರಲಿನಿಂದ ಮನ್ನಿಸಿ ಮರು ವರ್ಷವೇ ಇಡೀ ವಿಶ್ವವೇ ಅನ್ವಯಿಸಿಕೊಂಡರು ಎಂದು ನುಡಿದರು.ನಂತರ ಮಾತಾನಾಡಿದ ಕುಲಸಚಿವ ಪ್ರೊ.ಬಿ.ಕೆ.ರವಿ ಯೋಗ ಇದ್ದವರಿಗೆ ಯೋಗ ಒಲಿಯುತ್ತದೆ ಅಲ್ಲದೆ ಅದರ ವ್ಯಾಪ್ತಿ ಇಡೀ ಮನುಜ ಕುಲವನ್ನು ಆವರಿಸುವಂತಹದ್ದು ಆದರೆ ಪ್ರಕ್ಷುಬ್ಧ ವಾತಾವರಣದಿಂದಾಗಿ ಅದನ್ನೂ ಸಹ ಕೆಲವೇ ಧರ್ಮಗಳಿಗೆ ಸೀಮಿತಗೊಳಿಸುವ ಉನ್ಮಾದ ನಡೆಯುತ್ತಿದೆ ಇದನ್ನು ಕುಡಿಮೂಲದಿಂದಲೇ ಕೀಳಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರದರ್ಶನ ಕಲಾ ವಿಭಾಗ ಮತ್ತು ಯೋಗ ಕೇಂದ್ರದ ಮುಖ್ಯಸ್ಥ ಪ್ರೊ.ಕೆ.ರಾಮಕೃಷ್ಣಯ್ಯ,ಪ್ರಾಧ್ಯಾಪಕ ಗಂಗಾಧರ್,ಸಿದ್ದಪ್ಪ,ರಮೇಶ್, ವಿಭಾಗದ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.
ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'
ಬಣ್ಣದ ಬದುಕು ರಂಗ ಮಾಲಿಕೆ -೩೭ ನಡೆದಾಡುವ ರಕ್ತರಾತ್ರಿ 'ನಾಡಂಗ ಬಸವರಾಜ' ಬಾನಲ್ಲಿ ಹಾರುವ ಬಣ್ಣದ ಗಾಳಿಪಟ ಎಲ್ಲರಿಗೂ ಕಾಣುತ್ತದೆ ಮತ್ತು ಅಷ್ಟೇ ಕ್ಷಿಪ್ರವಾಗಿ ಅಕರ್ಷಣಗೊಳಪಡುತ್ತದೆ.ಆದರೆ ಅದು ಹಾರಲಿಕ್ಕೆ ಸಹಾಯಕವಾದ ಅದರ ಬಾಲಂಗೋಚಿ ದಾರ ಬಹುತೇಕರ ಕಣ್ಣಿಂದ ಮರೆಯಾಗಿ ಹೋಗುತ್ತದೆ.ಈ ಸ್ಥಿತಿ ರಂಗಭೂಮಿಗೆ ಅನ್ವಯಿಸಿದರೆ ವೇದಿಕೆ ಮೇಲಿನ ನಟರು ಬಹುಬೇಗ ಎಲ್ಲರಿಗೂ ಪರಿಚಿತರಾಗುತ್ತಾರೆ.ಆದರೆ ಅವರ ನಟನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಿದ ಅನೇಕ ಹಿನ್ನಲೆ ನಟರು ಪ್ರೇಕ್ಷಕರಿಂದ ದೂರ ಉಳಿಯುತ್ತಾರೆ.ಬಳ್ಳಾರಿ ರಂಗಭೂಮಿ ಇತಿಹಾಸದಲ್ಲೂ ಹಾಗೆ ಮರೀಚಿಕೆಯಾಗಿ ಉಳಿದ ಅನೇಕರಲ್ಲಿ 'ನಾಡಂಗ ಬಸವರಾಜ' ಒಬ್ಬರು. ಇವರು ರಂಗದ ಹಿಂದೆ ಪರದೆ ಎಳೆಯಲಲಿಳಿಸಲು,ಕಥಾ ಸಂಚಾಲಕರಾಗಿ ಮತ್ತು ಅವಸರಕ್ಕೆ ಒದುಗುವ ದೀಢಿರ್ ನಟರಾಗಿ ಅನೇಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ರಂಗನಟರಾಗಿದ್ದರು. ಇವರು ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ವಿರುಪಾಪುರದಲ್ಲಿ ಕ್ರಿ.ಶ.೧೯೪೨ ರಲ್ಲಿ ಹೆಚ್.ಚೆನ್ನಬಸವನಗೌಡ ಮತ್ತು ಹೆಚ್.ಬಸವಲಿಂಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಮೂಲತಃ ಇವರು ಬಡ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ವಿದ್ಯಾಭ್ಯಾಸಕ್ಕಾಗಲಿ ಮತ್ತು ಕಲಾಭ್ಯಾಸಕ್ಕಾಗಲಿ ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ.ಆದ್ದರಿಂದ ಇವರ ಸೋದರ ಮಾವನ ಸಹಾಯದಿಂದ ಎಸ್.ಎಸ್.ಎಲ್.ಸಿಯವರೆಗೂ ಓದಿದರು. ಊರಲ್ಲಿ ಆಗಾಗ ನಡೆಯುತ್ತಿದ್ದ ರಂಗ ಚಟುವಟಿಕ...



Comments
Post a Comment