ಕಲಾವಿದರು ಸರ್ವಕಾಲಕ್ಕೂ ಸಲ್ಲುವ ಅತಿ ಶ್ರೇಷ್ಠರು - ಡಾ.ಕೆ.ಆರ್.ವೇಣುಗೋಪಾಲ್

ಕಲಾವಿದರು ಎಲ್ಲರನ್ನೂ ಪ್ರಭಾವಿತಗೊಳಿಸುವ ಮೂಲಕ ಎಲ್ಲರಿಂದ ಪ್ರಶಂಸನೆಗೊಳ್ಳುತ್ತಾರೆ. ಅಲ್ಲದೇ ತಮ್ಮ ಅಭಿನಯದ ಮೂಲಕವೇ ಜನ್ನ ಮನ್ನಣೆ ಪಡೆದು ಸರ್ವಕಾಲಕ್ಕೂ ಸಲ್ಲುವ ಅತಿಶ್ರೇಷ್ಠರೆನಿಸುತ್ತಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್ ಅಭಿಪ್ರಾಯಪಟ್ಟರು.
ವಿ.ವಿಯ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ನೃತ್ಯ ವಿಭಾಗದ ವಿದ್ಯಾರ್ಥಿಗಳ ಪರೀಕ್ಷಾರ್ಥ ನೃತ್ಯ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಾ ಕಲೆ ಕೇವಲ ವಿಲಾಸಕ್ಕಲ್ಲದೇ ಅದು ಮನುಷ್ಯನ ಉತ್ತಮ ವಿಕಾಸಕ್ಕೂ ಪೂರಕವಾಗಿದೆ. ಆ ಮೂಲಕವೇ ಮಾನವರ ಸರ್ವಾಗೀಣ ಅಭಿವೃದ್ಧಿಯು ಸಾಧ್ಯ. ಆದ್ದರಿಂದ ಕಲಾಸಕ್ತರಾಗುವ ಅಥವಾ ಕಲಾವಿದರಾಗುವ ಮೂಲಕ ಸಮಾಜಮುಖಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಂತರ ಕುಲಸಚಿವ ಡಾ.ಬಿ.ಕೆ.ರವಿ ಮಾತಾನಾಡಿ ಇಡೀ ಬೆಂಗಳೂರು ವಿಶ್ವವಿದ್ಯಾಲಯದ ಘನತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊಳಗುವಂತೆ ಮಾಡಿದ ಕೀರ್ತಿ ಪ್ರದರ್ಶನ ಕಲಾ ವಿಭಾಗಕ್ಕೆ ಸಲ್ಲುತ್ತದೆ. ಅಲ್ಲದೇ ವಿಶ್ವ ಥಿಯೇಟರ್ ಒಲಂಪಿಕ್‌ನಲ್ಲಿ  ದಕ್ಷಿಣ ಭಾರತದಿಂದ ಭಾಗವಹಿಸಿದ ಏಕೈಕ ವಿಶ್ವವಿದ್ಯಾಲಯವೆಂಬ ಗೌರವವನ್ನು ಹೊಂದಿದೆ.ಈ ಎಲ್ಲ ಸಾಧನೆಗೆ ಪ್ರಮುಖ ಕಾರಣವೆಂದರೆ ಅದು ಕಲೆ. ಅಂತೆಯೇ ಕಲೆಯನ್ನು ಶಕ್ತಿವಿದ್ಯೆ ಎಂದಿದ್ದಾರೆ ಎಂದು ಅವರು ನುಡಿದರು.
ವಿಭಾಗದ ಮುಖ್ಯಸ್ಥ ಡಾ.ಕೆ.ರಾಮಕೃಷ್ಣಯ್ಯ ಮಾತಾನಾಡುತ್ತಾ ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದ ಅಡಗಿರುತ್ತಾನೆ.ಆದರೆ ಅವನ ಅನ್ವೇಷಣೆಗೊಂದು ಸೂಕ್ತ ವೇದಿಕೆ ದೊರಕಿದ್ದೆಯಾದರೆ ಚಿಪ್ಪಿನೊಳಗಿನ ಮುತ್ತು ಹೊಳೆದಂತಾಗುತ್ತದೆ. ಅಲ್ಲದೇ ಇಂದು ಶಿಕ್ಷಣದಲ್ಲಿ ರಂಗಭೂಮಿಯ ಬೆರೆಕೆ ಅತ್ಯಗತ್ಯವಾಗಿರುವದರಿಂದ ಶಿಕ್ಷಕರೊಂದಿಗೆ ರಂಗಶಿಕ್ಷಕರ ನೇಮಕಕ್ಕೂ ಆದೇಶ ನೀಡುವಂತಾಗಬೇಕು. ಅಲ್ಲದೇ ಸಂಗೀತ-ನೃತ್ಯ-ನಾಟಕ ಇವು ಮೂರು ಅವಿನಾಭಾವ ಸಂಭಂದ ಹೊಂದಿರುವ್ಯದರಿಂದಲೇ ಇವುಗಳನ್ನು ಒಟ್ಟುಗೂಡಿಸಿ ಪ್ರದರ್ಶನ ಕಲೆ ಎನ್ನಲಾಗಿದೆ ಎಂದು ಪ್ರಸ್ಥಾಪಿಸಿದರು.
ಕಾರ‍್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ಹಂಸಿನಿ ನಾಗೇಂದ್ರ, ಪ್ರೊ.ಸುಶೀಲ, ಪ್ರೊ.ಜಯಶ್ರೀ, ಡಾ.ರಶ್ಮೀ, ಡಾ.ಜನಾರ್ಧನ್, ಡಾ.ಪಿಳ್ಳಪ್ಪ, ಡಾ.ಪವಿತ್ರ, ಡಾ.ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.