ಕನ್ನಡಿಗರಿಗೆ ತಮಿಳಿನಲ್ಲಿ ತಮಿಳಿನ 'ಅವೈ'ಳ ಕಥೆ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ನಿರಂತರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಯೋಗದಲ್ಲಿ ಏಪ್ರೀಲ್ ೨೮ ರಿಂದ ಮೇ ೪ ರವರಗೆ ನಡೆಯುತ್ತಿರುವ ಸಿ.ಜಿ.ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ನಿನ್ನೆ  ಪ್ರದರ್ಶನಗೊಂಡ ಮೊದಲ ನಾಟಕ ತಮಿಳ್ನಾಡಿನ ಎ.ಮಂಗೈ ನಿರ್ದೇಶನ,ಇಂಕ್ವಿಲಾಬ್ ರಚನೆ ಹಾಗೂ ಮರಪ್ಪಚ್ಚಿ ತಂಡದ "ಅವೈ".
ಸಂಗಂ ಕಾಲದಲ್ಲಿನ ಮಹಿಳಾ ಸ್ಥಿತಿ ಗತಿಗಳನ್ನು ಅವೈಯು ತಾನು ತನ್ನ ಹರೆಯ ಮತ್ತು ಮುಪ್ಪಿನಲಿ ಕಂಡುಂಡ ನೈಜ ಅನುಭವಗಳನ್ನು ಕಥೆಯಾಗಿಸಿ ತನ್ನ ಪೀಳಿಗೆಗೆ ಹೇಳುತ್ತಾ ಸಾಗುವ ಸುಂದರ ನಾಟಕವಾಗಿದೆ. ಕಥೆಯನ್ನು ಹೇಳುವ ಮತ್ತು ಕೇಳುವವರೇ ಕಥೆಯೊಳಗೆ ಹೊಕ್ಕು ಅಸ್ವಾಧಿಸುವ ವಿಭಿನ್ನ ಶೈಲಿಯಲ್ಲಿ ರಂಗಕ್ಕೆ ತೆರೆದುಕೊಳ್ಳುತ್ತದೆ. ಆರಂಭದಲ್ಲಿನ ಕಬ್ಬಡಿ ಮತ್ತು ಹಿಮ್ಮೇಳದ ಸಂಗೀತ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು, ಭಾಷೆ ಸಮಸ್ಯೆ ಮತ್ತು ಅಭಿನಯದ ಕೊರತೆಯಿಂದ ನಾಟಕದ ಅಂತ್ಯಕ್ಕೆಲ್ಲಾ ಪ್ರೇಕ್ಷಾಂಗಣವನ್ನು ಸಡಿಲಗೊಳಿಸಿಕೊಂಡಿತು.ನಾಟಕದಲ್ಲಿ ಕೇವಲ ಒಂದು ಬಟ್ಟೆ ಹಾರದಿಂದಲೇ ಅವೈಳ ಕಥೆ ಹರೆಯದಿಂದ ಮುಪ್ಪಿಗೆ ವರ್ಗವಾಗುವ ತಂತ್ರಗಾರಿಕೆ ಮತ್ತು ಯುದ್ಧದಲ್ಲಿ ಮಗನನ್ನು ಕಳೆದುಕೊಂಡು ಸ್ಮಶಾನದ ಗೋರಿ ಮುಂದೆ ತಾಯಿ "ಇವನಿಗೆ ಗರ್ಭಿಣಿ ಇರುವಾಗ ನಾನು ಮಣ್ಣಿನ ರುಚಿ ನೋಡಿದೆ, ಈಗ ಅದೇ ಮಣ್ಣು ಇವನ ರುಚಿ ನೋಡಿತು " ಎಂದು ರೋಧಿಸುವ ದೃಶ್ಯ ಎಂತವರನ್ನೂ ಸೆಳೆಯುವಂತದ್ದು.ಅವೈಳ ಇಡೀ ಬದುಕು ಬಿತ್ತಾರಗೊಳ್ಳಲು ರಂಗದಲ್ಲಿ ಬಳಕೆಯಾದದ್ದು ಕೇವಲ ನಾಲ್ಕು ಏಣಿಯಿಂದ ಜೋಡಿಸಿದ ಪುಟ್ಟ ವೇದಿಕೆ ಮತ್ತು ನಾಲ್ಕು ಚಿಕ್ಕ ಡಯಾಸ್ ಗಳು.ಅವುಗಳನ್ನೇ ಕಥೆಯ ಪ್ರತಿ ಹಂತಕ್ಕೂ ಸಾಂಕೇತಿಕವಾಗಿ ಬಳಸಿಕೊಳ್ಳುವಲ್ಲಿ ಕಲಾವಿದರು ಯಶಸ್ವಿಯಾದರು.ಸಾಹಿತ್ಯ ಅಥವಾ ಭಾಷೆ ಯಾವುದಾದರೂ ಭಾವನೆಗಳು ಒಂದೇ, ಅವು ಎಂಥವರಿಗೂ ಮನ ಕಲಕುತ್ತವೆ ಎಂಬುದಕ್ಕೆ ಈ ನಾಟಕವೇ ನೈಜ ನಿದರ್ಶನವಾದದ್ದು ವಿಶೇಷ. ಇಲ್ಲಿ ರಚನೆಕಾರ ಮತ್ತು ನಿರ್ದೇಶಕರು ಸ್ತ್ರೀ ಸಂವೇದನೆಗಳನ್ನು ಅರಿತು ಬೆರತಿರುವದರಿಂದ ಅವುಗಳನ್ನು ಯಶಸ್ವಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.