ಮನುಷ್ಯನ ಪರಿಪೂರ್ಣತೆಗೆ ಪ್ರದರ್ಶಕ ಕಲೆಗಳು ಸಹಾಯಕ- ಪ್ರೊ.ಐ.ಎಸ್.ಶಿವಕುಮಾರ್
ಮನುಷ್ಯನು ತನ್ನ ಆಂತರ್ಯದಲ್ಲಿ ಕಲ್ಮಶಗಳಿಂದ ಅಪೂರ್ಣನಾಗಿರುತ್ತಾನೆ ಆದರೆ ಅವನನ್ನು ಪರಿಪೂರ್ಣನನ್ನಾಗಿಸುವಲ್ಲಿ ಪ್ರದರ್ಶಕ ಕಲೆಗಳು ಸಹಕಾರಿಯಾಗುತ್ತವೆ ಎಂದು ಕುಲಪತಿ ಪ್ರೊ.ಐ.ಎಸ್.ಶಿವಕುಮಾರ್ ಅಭಿಪ್ರಾಯ ಪಟ್ಟರು.
ಪ್ರದರ್ಶನ ಕಲಾ ವಿಭಾಗದ ವತಿಯಿಂದ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ''ವಿಶ್ವ ನೃತ್ಯ ದಿನಾಚರಣೆ''ಯನ್ನು ಉದ್ಘಾಟಿಸಿ ಮಾತಾನಾಡುತ್ತಾ ಪ್ರತಿಯೊಬ್ಬರಲ್ಲೂ ತನ್ನದೇ ಆದ ಅಂತಃಶಕ್ತಿಗಳಿರುತ್ತವೆ.ಅವುಗಳನ್ನು ಗುರುತಿಸಿ ಪ್ರಚೋದಿಸುವ ಕಾರ್ಯಗಳು ಹೇರಳವಾಗಬೇಕಾಗಿವೆ. ಅಲ್ಲದೇ ಪ್ರದರ್ಶಿಸುವ ಕಲೆಗಳೆಂದರೆ ನೃತ್ಯ ಸಂಗೀತ ನಾಟಕ ವಿಭಾಗಳನ್ನು ಒಳಗೊಂಡಿದೆ. ಅವುಗಳಿಗೆ ಸೂಕ್ತ ಗೌರವ, ಮಾನ್ಯತೆ ದೊರಕುವ ವ್ಯವಸ್ಥೆ ಸಮಾಜದಿಂದ ಆಗದಿರುವುದು ವಿಷಾದನೀಯ ಎಂದು ಹೇಳಿದರು. ನಂತರ ಕುಲಸಚಿವ(ಮೌಲ್ಯ ಮಾಪನ) ಶಿವರಾಜ್ ಮಾತಾನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಪ್ರದರ್ಶಕ ಕಲೆಗಳನ್ನು ಅಳವಡಿಸಿಕೊಂಡರೆ ಆಗಾಧ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬಹುದೆಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರೊ .ಪದ್ಮಾಮೂರ್ತಿಯವರು ಮನುಷ್ಯ ತನ್ನನ್ನು ತಾನು ಕಲೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನಸ್ಸಿನ ತುಮುಲಗಳನ್ನು ನಿವಾರಿಸಿಕೊಂಡು ನಿರಾಳನಾಗುತ್ತಾನೆ.ಆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು. ಅಲ್ಲದೆ ಸಂಸ್ಕೃತಿಯ ಇರುವಿಕೆಯನ್ನು ಅರಿಯಲು ಈ ಕಲೆಗಳು ತುಂಬಾ ಸಹಾಯಕ ಎಂದು ತಮ್ಮ ಸ್ವ ಅನುಭವಗಳನ್ನು ಹಂಚಿಕೊಂಡರು.ನಂತರ ಪ್ರದರ್ಶಕ ಕಲೆಗಳಲ್ಲಿ ಜೀವಮಾನ ಸಾಧನೆಗೈದ ವಿದುಷಿ ಬಿ.ಕೆ.ವಸಂತಲಕ್ಷ್ಮೀ,ಪ್ರೊ.ಉಷಾ ದಾತಾರ್,ಪ್ರೊ.ಡಿ.ಎಸ್.ಕಾಮತ್,ಪ್ರೊ.ಆರ್.ಟಿ.ರಮಾ,ಪ್ರೊ.ಕೆ.ಆರ್.ಸುಧೀಂದ್ರಶರ್ಮ,ಪ್ರೊ.ಬಿ.ಎಂ.ಜಯಶ್ರೀಯವರನ್ನು "ಪ್ರದರ್ಶನ ಕಲಾ ಚೇತನಗಳು" ಎಂಬ ಬಿರುದುಗಳಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ವಿಭಾಗದ ಅತಿಥಿ ಪ್ರಾಧ್ಯಾಪಕರಿಂದ ಮತ್ತು ವಿದ್ಯಾರ್ಥಿಗಳಿಂದ ಭಾರತೀಯ ವಿಭಿನ್ನ ನೃತ್ಯ ಪ್ರಕಾರಗಳನ್ನು ಪ್ರಚುರಪಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಸ್ಥರಾದ ಡಾ.ಕೆ.ರಾಮಕೃಷ್ಣಯ್ಯ,ಪ್ರೊ.ಎಸ್.ಎನ್.ಸುಶೀಲಾ,ಪ್ರೊ.ಹಂಸೀನಿ ನಾಗೇಂದ್ರ ಹಾಗೂ ಮತ್ತತರರು ಭಾಗವಹಿಸಿದ್ದರು.

Comments
Post a Comment