- Get link
- X
- Other Apps
ಮಾಧ್ಯಮಗಳು ಉನ್ನತಿಗೆ ಮಾರಕವಲ್ಲ - ಡಾ.ಕೆ.ರಾಮಕೃಷ್ಣಯ್ಯ
ಬಹುತೇಕ ಚಿಂತನಾಶೀಲರ ಪ್ರಕಾರ ಮಾಧ್ಯಮಗಳು ಯುವಕರನ್ನು ಹಾಳುಗೆಡುತ್ತವೆ ಎನ್ನುತ್ತಾರೆ ಆದರೆ ಯಾವುದೇ ಮಾಧ್ಯಮಗಳಾಗಲಿ ವ್ಯಕ್ತಿಯ ಉನ್ನತಿಗೆ ಮಾರಕವಲ್ಲ ಬದಲಾಗಿ ಪೂರಕವೆನಿಸಿವೆ ಎಂಬುದಕ್ಕೆ ಈ ಹಾಸ್ಟೆಲ್ ಕಿರುಚಿತ್ರವೇ ಸಾಕ್ಷಿ ಎಂದು ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾದ ಡಾ.ಕೆ.ರಾಮಕೃಷ್ಣಯ್ಯ ಅಭಿಪ್ರಾಯ ಪಟ್ಟರು.
ಬೆಂಗಳೂರು ವಿಶ್ವವಿದ್ಯಾಲಯದ ಕಲಾಭವನದಲ್ಲಿ ಕಾರಂತ ರಂಗಲೋಕ ® ಸಂಸ್ಥೆ ಹಮ್ಮಿಕೊಂಡಿದ್ದ " ದಿ ಹಾಸ್ಟೆಲ್ " ಕಿರುಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತಾನಾಡುತ್ತಾ ಯುವಕರು ಮೊಬೈಲ್ ದಾಸರಾಗುವ ಮೂಲಕ ತಮ್ಮ ಕರ್ತವ್ಯಗಳು ಮರೆತಿದ್ದಾರೆ ಎನ್ನುವ ಜನರೇ ಹೇರಳವಾಗಿದ್ದಾರೆ ಆದರೆ ಅದಕ್ಕೆ ಅಪವಾದವೆಂಬಂತೆ ಬಳ್ಳಾರಿಯ ಈ ಮೂರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಓದಲು ಬಂದು ಓದಿನ ಜೊತೆಯಲ್ಲಿ ತಮ್ಮ ಸಿನಿಮಾ ಮಾಡಬೇಕೆಂಬ ಕನಸನ್ನು ತಮ್ಮಲ್ಲಿದ್ದ ಮೊಬೈಲ್ ಬಳಸಿ "ದಿ ಹಾಸ್ಟೆಲ್ "ಎಂಬ ಈ ಕಿರುಚಿತ್ರದ ಮೂಲಕ ನನಸಾಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ನಂತರ ಮಾತಾನಾಡಿದ ಸಿ.ಡಿ.ಸಿ ಮುಖ್ಯಸ್ಥ ಡಾ.ವಿ.ನಾಗೇಶ್ ಬೆಟ್ಟಕೋಟೆ ಮಾತಾನಾಡಿ ಕನಸು ಕಾಣುವುದು ಮುಖ್ಯವಲ್ಲ ಬದಲಾಗಿ ಅವುಗಳ ಸಾಕಾರಕ್ಕೆ ಮಾಡುವ ಪ್ರಯತ್ನ. ಅತ್ಯಾವಶ್ಯಕ.ಅವಕಾಶಗಳು ಎಲ್ಲರಿಗೂ ಒದಗುವವು ಆದರೆ ಅವುಗಳ ಬಳಕೆ ಕೆಲವರಿಗೆ ಮಾತ್ರ ಸಿದ್ಧಿಸುತ್ತದೆ ಅಂತಹ ಹಾದಿಯಲ್ಲಿ ಯುವಕರ ನಡೆ ಸಾಗಬೇಕು ಎಂದು ನುಡಿದರು.ನಂತರ ಕಿರುಚಿತ್ರಗಳ ನಿರ್ದೇಶಕ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ಮಾತಾನಾಡಿ ನಾನು ಪಿಯುಸಿಯಿಂದಲೂ ಬಣ್ಣದ ಲೋಕದ ಬಗೆಗೆ ಬಣ್ಣ ಬಣ್ಣದ ಕನಸು ಕಟ್ಟಿದವನು.ಆದರೆ ಕನಸಿಗೆ ಸಾಕಾರ ನೀಡುವ ಅವಕಾಶಗಳು ಚಿತ್ರರಂಗದಲ್ಲಿ ಕಾಣದೆ ಕೊನೆಗೆ ಮೊಬೈಲ್ ಮೂಲಕ ನನಸಾಗಿಸಿಕೊಂಡೆ.ಈ ಚಿತ್ರವನ್ನು ಬಳ್ಳಾರಿಯಲ್ಲಿ ಬಿಡುಗಡೆ ಮಾಡುವರೆಂದು ಉತ್ಸುಕರಾದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಜನಾರ್ಧನ, ಪವಿತ್ರ,ಚಿತ್ರನಟರಾದ ಅರುಣ್ ಮಾನ್ವಿ, ಜಿ.ಮಲ್ಲಿಕಾರ್ಜುನಗೌಡ,ಚಂದ್ರಶೇಖರ ಮೇಟಿ,ಹುಲುಗಪ್ಪ ನಾಯ್ಕರ್ ಭಾಗವಹಿಸಿದ್ದರು.

Comments
Post a Comment