ಯಶಸ್ವಿಯಾದ ಕಂಪನಿಯ ಕೃಷ್ಣಾಲೀಲೆ
ಬೆಂಗಳೂರು.ಆ.೨೩. ಬೆಂಗಳೂರಿನ ಹೃದಯ ಭಾಗದಲ್ಲಿರುವ ಸಾಂಸ್ಕೃತಿಕ ಕೇಂದ್ರ ಮತ್ತು ಕಲಾವಿದರ ತಾಣವಾಗಿರುವ ರವೀಂದ್ರ ಕಲಾಕ್ಷೇತ್ರವು ಆಗಸ್ಟ್ ೨೩ ರಂದು ಹಬ್ಬದ ವಾತವರಣದಿಂದ ಕೂಡಿತ್ತು. ಕಾರಣ ಈ ಮೆಟ್ರೋ ನಗರದಲ್ಲಿ ಅದು ಆಧುನಿಕ ಜಗತ್ತಿಗೆ ತಲೆಬಾಗಿರುವ ಭಾರತದ ಪ್ರಭಾವಿ ನಗರಗಳಲ್ಲಿ ಒಂದಾದ ಈ ಬೆಂಗಳೂರಿನಲ್ಲಿ ಸದಾ ಸಮೂಹ ಮಾಧ್ಯಮಗಳಿಗೆ ದಾಸರಾಗಿದ್ದ ಜನರನ್ನು ರಂಗಭೂಮಿಯತ್ತ ಸೆಳೆಯುವ ಕಾರ್ಯ ೭೦ರ ದಶಕದಿಂದೀಚಿಗೆ ಭರದಿಂದ ಸಾಗಿದೆ. ಅದೇ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ಮತ್ತು ಶ್ರೀ ಗಂಗಾಧರೇಶ್ವರ ಕಲಾ ಸಂಘ, ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಕನ್ನಡ ನಾಡು ಕಂಡ ಕಂಪನಿ ನಾಟಕದ ದಿಗ್ಗಜರಲ್ಲಿ ಒಬ್ಬರಾದ ಮತ್ತು ದಕ್ಷಿಣ ಭಾರತದಲ್ಲಿ ಪ್ರಸ್ತುತ ಏಕೈಕ ಕಂಪನಿ ನಾಟಕ ನಿರ್ದೇಶಕರಾದ ರಂಗ ಸಂಗೀತ ತಜ್ಞ ವಿದ್ವಾನ್ ಆರ್.ಪರಮಶಿವನ್ ರ ನಿರ್ದೇಶನದ ಮತ್ತು ಬೆಳ್ಳಾವೆ ನರಹರಿಶಾಸ್ತ್ರಿಗಳ ರಚನೆಯ ಶ್ರೀ ಕೃಷ್ಣಾಲೀಲೆ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.
ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ಮತ್ತು ಶ್ರೀ ಗಂಗಾಧರೇಶ್ವರ ಕಲಾ ಸಂಘ, ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಸತತವಾಗಿ ೧೫ ದಿನಗಳ ಕಾಲ ಕಂಪನಿ ನಾಟಕ ತರಬೇತಿ ಕಾರ್ಯಗಾರವನ್ನು ಪ್ರದರ್ಶನ ಕಲಾ ವಿಭಾಗದಲ್ಲಿ ಹಮ್ಮಿಕೊಂಡು ರಂಗ-ಸಂಗೀತ-ನೃತ್ಯ ವಿಭಾಗದ ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸಿಕೊಂಡು ೩೫ ವರ್ಷಗಳ ನಂತರ ಪುನಃ ನಿರ್ದೇಶನಕ್ಕೆ ಕೈ ಹಾಕಿದ ೮೫ ರ ಹರೆಯದ ಆರ್.ಪರಮಶಿವನ್ರು ಸತತವಗಿ ದಿನಕ್ಕೆ ೩ ಗಂಟೆಗಳ ಕಾಲ ಖುದ್ದಾಗಿ ಹಾಜರಿದ್ದು ತರಬೇತಿ ನೀಡಿದ್ದರು. ಅಲ್ಲದೇ ವಿದ್ಯಾರ್ಥಿಗಳೆಲ್ಲ ಪ್ರತಿನಿತ್ಯ ರಂಗ ತಾಲೀಮಿನೊಂದಿಗೆ ಕಂಪನಿ ಶೈಲಿಯ ರಂಗ ಸಂಗೀತವನ್ನು ರೂಡಿಸಿಕೊಂಡಿದ್ದರು. ಅದರ ಪ್ರಾಯೋಗಿಕ ಪ್ರದರ್ಶನ ಕಳೆದ ಆಗಸ್ಟ್ ೨೩ ರಂದು ಮದ್ಯಾಹ್ನ ೨ ಗಂಟೆಯಿಂದ ೫ ಗಂಟೆಯವರೆಗೆ ಯಶಸ್ವಿಯಾಗಿ ನೆಡೆಯಿತು. ಈ ಮೂಲಕ ವಿದ್ಯಾರ್ಥಿಗಳ ೧೫ ದಿನಗಳ ಪ್ರಯತ್ನ ಮತ್ತು ನಿರ್ದೇಶಕರ ಕಾರ್ಯಕ್ಕೆ ತಕ್ಕ ಪ್ರತಿಫಲ ದೊರಕುವ ಮೂಲಕ ಎಲ್ಲರಲ್ಲೂ ಸಾರ್ಥಕ ಮನೋಭಾವವು ಕಂಡು ಬಂತು. ಸದಾ ಕ್ರಿಯಾಶೀಲವಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ಹೊಸದೊಂದು ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತದ್ದು ಸಾಧನೆಯೇ ಸರಿ ಎಂದು ವಿಭಾಗದ ಮುಖ್ಯಸ್ಥರಾದ ಡಾ.ಕೆ.ರಾಮಕೃಷ್ಣಯ್ಯನವರು ಅನುಭವವನ್ನು ಹಂಚಿಕೊಂಡರು.
ನಾಟಕದಲ್ಲಿ ನಾರದನಾಗಿ ಬಿ.ಸಿ.ಗಂಗಣ, ಕೃಷ್ಣನಾಗಿ ಅಂಜಲಿ ದೇಸಾಯಿ, ವಸುದೇವನಾಗಿ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ದೇವಕಿಯಾಗಿ ರೋಹಿಣಿ ಹಾಸನ, ಕಂಸನಾಗಿ ಕೆ.ಶಂಕರ್ ಮೆಟ್ರಿ, ಮಕರಂದನಾಗಿ ಜಿ.ಮಲ್ಲಿಕಾರ್ಜುನಗೌಡ, ಬಲರಾಮನಾಗಿ ನವಶ್ರೀ, ಸುನಾಮನಾಗಿ ಸದಾಶಿವ ಎಕ್ಕುಂಡಿಮಠ, ಯಶೋಧೆಯಾಗಿ ಸಿತಾರ ದೇಸಾಯಿ, ಅಕ್ರೂರನಾಗಿ ನಾಗರಾಜ ಪತ್ತಾರ್, ಲಲಿತೆಯಾಗಿ ಮಾಧುರ್ಯ, ಸುಂದರಿಯಾಗಿ ಲತಿಕ ಬೈಜು, ರಾಧೆಯಾಗಿ ಸುಪ್ರಿಯ ಹರಿಪ್ರಸಾದ್, ಅಗಸನಾಗಿ ಮಹೇಶ್ ರೌಡಕುಂದ, ವಿಷ್ಣುನಾಗಿ ಮಹಮದ್ ಅಲಿ, ಬ್ರಹ್ಮನಾಗಿ ಅನಂತಕುಮಾರ್ ದೊರೆ, ವರುಣನಾಗಿ ಜಿ.ಪ್ರತಾಪ, ಅಗ್ನಿಯಾಗಿ ಚಂದ್ರಶೇಖರ್ ಮಟ್ಟೂರ್, ದೇವೇಂದ್ರನಾಗಿ ಮಾಲತೇಶ್, ಲಕ್ಷ್ಮಿಯಾಗಿ ತನುಶ್ರೀಶಂಕರ್, ಪೂತನಿಯಾಗಿ ಶಿಲ್ಪ, ಕಲಾವತಿಯಾಗಿ ಅಮರಾವತಿ, ಬಾಲಕೃಷ್ಣನಾಗಿ ವಂದ್ಯ ಕುಂಬಾಶಿ, ಕಾಂಚನಾಮಾಲಳಾಗಿ ಪ್ರಯದರ್ಶಿನಿ ಶ್ರೀ ರಾಮ್, ವನಮಾಲಳಾಗಿ ಸೂರ್ಯಕುಮಾರಿ, ಮಧುಮಾಲಳಾಗಿ ಸುಗುಣ, ಮಣಿಮಾಲಿನಿಯಾಗಿ ಎಸ್.ಯಶಸ್ವಿನಿ, ಕಲಾವಾಣಿಯಾಗಿ ಹೆಚ್.ಆರ್.ರೋಜ, ಮಧುಮಂಜರಿಯಾಗಿ ಅಂಕಿತಮಾಜಿಕ್, ಬ್ರಾಹ್ಮಣರಾಗಿ ಹಿದಾಯತ್ ಅಹಮದ್, ಚಂದ್ರಶೇಖರ್ ಮೇಟಿ, ಆಕಾಶ್ ಶ್ರೀನಿವಾಸ್, ಗೋಪಾಲಕರಾಗಿ ಅರುಣ್ ಮಾನ್ವಿ, ಹೇಮೇಶ್ವರ್, ಎಸ್.ಜಿ.ಚಂದನ್, ಕೆ.ಎಸ್.ನವೀನ್ ಕುಮಾರ್, ದಿದಾರ್, ಪೀರಪ್ಪ, ದೂತನಾಗಿ ಚಂದ್ರಶೇಖರ್, ಪೈಲ್ವಾನರಾಗಿ ನಂಜಪ್ಪ.ಡಿ.ಎಸ್, ಸಂಜಯ್, ನರ್ತಕಿಯರಾಗಿ ಜುವರೆಯಾ ಮೌಲಿ, ಮಹಾಲಕ್ಷ್ಮಿ, ಕಾವ್ಯ.ಜಿ.ರಾವ್,ಆರ್.ಶಾಲಿನಿ, ಹರ್ಷಿತಾ ದೊರೆಸ್ವಾಮಿ, ಸಿಂಧು ಬಿ.ಎನ್ ಮತ್ತು ಹಿನ್ನಲೆಯಲ್ಲಿ ಹಾರ್ಮೋನಿಯಂ ಆರ್.ಪರಮಶಿವನ್, ತಬಲ ಬಿ.ಸುಧೀರ್.ಬೆಂಗಳೂರು, ಪಿಟೀಲು ರಾಜೇಶ್.ಬೆಂಗಳೂರು, ಕ್ಲಾರಿಯೋನೆಟ್ ನಾಗೇಂದ್ರ.ಬೆಂಗಳೂರು, ರಂಗಸಜ್ಜಿಕೆ/ವಸ್ತ್ರ ವಿನ್ಯಾಸ ಗಣೇಶ್ ಶ್ರೀ ಲತಾ ಡ್ರಾಮಾ ಸೀನರಿ. ತುಮಕೂರು ಉತ್ತಮವಾಗಿ ಪಾತ್ರ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ನಾಗೇಶ್ ವಿ ಬೆಟ್ಟಕೋಟೆ, ಡಾ.ಸುಶೀಲ, ಡಾ.ಜನಾರ್ಧನ್, ಅಧ್ಯಕ್ಷರಾದ ಜೆ.ಆರ್.ಶ್ರೀಧರಮುರ್ತಿ ಮತ್ತಿತರರು ಅತಿಥ್ಯವನ್ನು ವಹಿಸಿದ್ದರು.

Comments
Post a Comment