ಮನುಕುಲಕ್ಕೆ ಅಳಿವಿದೆ..ಜನಪದಕ್ಕೆ ಅಳಿವಿಲ್ಲ - ಪ್ರೊ.ಸುಧೀಂದ್ರ ಶರ್ಮ
       





ಬೆಂಗಳೂರು.ಜುಲೈ.೧೭. ಹಳೆ ಪಾತ್ರೆ ಹಳೆ ಕಬ್ಬಣ ಎಂಬ ಪಡ್ಡೆ ಹುಡುಗರ ಮೈ ಕುಣಿಸುವ ಹಾಡುಗಳು ಬರ‍್ತಾವೆ ಹೋಗ್ತಾವೆ. ಆದರೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿರುವ ಜನಪದಗಳಿಗೆ ಅಳಿವಿಲ್ಲ ಎಂದು ಪ್ರೊ.ಸುಧೀಂದ್ರ ಶರ್ಮ ಅಭಿಪ್ರಾಯ ಪಟ್ಟರು.
   ಕಲಾಮೈತ್ರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಅನೂಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಪ್ರೊ.ವೆಂಕಟಗಿರಿಗವಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕೋತ್ಸವ -೨೦೧೭ನ್ನು ಉದ್ಘಾಟಿಸಿ ಮಾತಾನಾಡಿದ ಅವರು ಥಿಯೇಟರ್ ಈಸ್ ಟೀಮ್ ವರ್ಕ್ ಆದ್ದರಿಂದ ನಾಟಕ ಕಟ್ಟಲು ಒಂದು ಕೈಯಿಂದ ಸಾಧ್ಯವಿಲ್ಲ.ಅಂತೆಯೇ ಒಂದು ತಂಡ ಕಟ್ಟಿದ ಮೇಲೆ ಅದರ ಉಸ್ತುವಾರಿ ಅಷ್ಟೇ ಕಷ್ಟ. ಸಮಾಜದಲ್ಲಿ ಮಾಡುವ ಕಾರ‍್ಯದಲ್ಲಿ ಯಾರಿಗಾದರೂ ತೃಪ್ತಿ ಇರಲಿ ಕಲಾವಿದರಿಗೆ ಮಾತ್ರ ಇರಬಾರದು. ಒಬ್ಬ ನಟನಾದವನು ಒಂದು ಸಾರಿ ಬೆಳ್ಳಿತೆರೆ ಮೇಲೆ ಮಿಂಚಿದರೆ ಸಾಕು ಅವರ ಹಾವಭಾವವೇ ಬದಲಾಗುತ್ತದೆ. ಆದರೆ ರಂಗನಟರಲ್ಲಿ ಈ ಆಹಂಭಾವ ಇರುವುದಿಲ್ಲ, ಆದರೆ ಇತ್ತೀಚಿಗೆ ಈ ರೋಗ ರಂಗನಟರಿಗೂ ಆವರಿಸುತ್ತಿರುವುದು ವಿಷಾಧನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
  ಗ್ರಾಮೀಣ ಜನರಿಂದಲೇ ಜನಪದ ರಂಗಭೂಮಿ ನಿಂತಿರುವುದು. ಜನಪದ ಕಲೆಗಳಲ್ಲಿ ಅತ್ಯಾಕರ್ಷಣೆ ಇದೆ. ಅದು ಎಂತವರನ್ನು ಕೆರಳಿಸಿ ಕುಣಿಯುವಂತೆ ಮಾಡಿ ಬಿಡುತ್ತದೆ. ಅಂತಹ ಅದಮ್ಯ ಶಕ್ತಿ ಕೇವಲ ಡೋಲು, ನಗಾರಿ ತಮಟೆ ಇನ್ನಿತರೆ ಜನಪದ ವಾದ್ಯಗಳಲ್ಲಿ ಅಡಿಗಿದೆ ಅಂತಹ ಸದ್ದನ್ನು ದ್ವಿಗೊಳಿಸುವ ಅನಿವಾರ್ಯತೆ ಎದುರಾಗಿವುದರಿಂದ ನಾವೆಲ್ಲರೂ ಪಣ ತೋಡಬೇಕಾಗಿದೆ ಎಂದು ಮಹಿಳಾ ಅಧ್ಯಯನ ನಿರ್ದೇಶಕ ಡಾ.ಸಿದ್ದಪ್ಪ ಬೆಳಗಟ್ಟಿ ಹೇಳಿದರು. 
  ತದನಂತರ ಕಲಾ ನಿಕಾಯದ ಡೀನ್ ಪ್ರೊ.ಬಿ.ಎಂ.ಜಯಶ್ರೀ ಮಾತಾನಾಡುತ್ತಾ ಯಾವ ಶಾಲಾ - ಕಾಲೇಜುಗಳಲ್ಲಿ ಓದದ ಜನಪದರಿಗೆ ಓದು ಬರಹ ಬಾರದಿದ್ದರು, ಅವರಿಗೆ ಕುಮಾರವ್ಯಾಸ, ಲಕ್ಷ್ಮೀಶರಂತಹ ಕವಿಗಳ ಮಹಾನ್ ಕಾವ್ಯಗಳನ್ನು ನಿರರ್ಗಳವಾಗಿ ಹೇಳುವ ಜಾಣ್ಮೆಯನ್ನು ಉಳ್ಳವರು. ಆದರೆ ವಿಶ್ವವಿದ್ಯಾಲಯವನ್ನು ಕಂಡ ಅನೇಕರಿಗೆ ಹೊಸಗನ್ನಡದ ಸಾಲುಗಳನ್ನೂ ಸಹ ಸರಿಯಾಗಿ ಓದಲು ಬರುವುದಿಲ. ಆಗಿದ್ದಾಗ ಜನಪದರಿಗೆ ಆ ಶಕ್ತಿ ಬಂದುದಾದರು ಎಲ್ಲಿಂದ ಅದು ಕೇವಲ ಜನಪದದಿಂದಲೇ ದೊರಕುವಂತಾಯಿತು ಎಂದು ನುಡಿದರು.
 ಇದೇ ಸಂದರ್ಭದಲ್ಲಿ ಪ್ರಾಧಾಪಕರಾದ ಡಾ.ಜಯರಾಂ ನಾಯಕ್ ಮಾತಾನಾಡಿ ನಟನೆ ಎಂಬುದು ಮಾನವ ನಾಗರೀಕತೆ ಹುಟ್ಟಿದಾಗಿನಿಂದ ಮನುಷ್ಯನ ಜೊತೆ ಜೊತೆಯಲ್ಲಿ ಬೆಳೆದು ತನ್ನ ತುಮುಲಗಳನ್ನು ಹೇಳಿಕೊಳ್ಳಲು ನಟನೆಯ ಮೊರೆ ಹೋಗಿರುವುದನ್ನು ಕಾಣಬಹುದು. ಅಂತೆಯೇ ಅದನ್ನು  ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಕಲೆ ಎಂಬುದು ಕೇವಲ ವಿಲಾಸಕಲ್ಲ ಬದಲಾಗಿ ಅದು ಮನುಕುಲದ ವಿಕಾಸಕ್ಕಾಗಿ ಅಗತ್ಯವಾಗಿದೆ. ಆದರೆ ಇಂದು ಮೂಲೆ ಸೇರುತ್ತಿರುವ ಜನಪದವನ್ನು ಈ ಮೂಲಕವಾದರೂ ನಾವು ಉಳಿಸದೇ ಹೋದರೆ ಮುಂದಿನ ಪೀಳಿಗೆಗೆ ಜನಪದ ಕೇವಲ ಅದೊಂದು ಅವಶೇಷವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲವೆಂದು ಹೇಳಿದರು.
ಅಭಿವೃದ್ಧಿಯೆಂದರೆ ಕೇವಲ ಕಾಂಕ್ರೀಟ್ ನಾಡನ್ನು ಕಟ್ಟುವುದೊಂದೆ ಅಲ್ಲ ಮೇಲಾಗಿ ಸರ್ವತೋಮುಖ ಸ್ವಸ್ಥತೆಯಿಂದ ಕೂಡಿರುವುದೇ ನಿಜವಾದ ಅಭಿವೃದ್ಧಿ. ಯಾವ ಪ್ರದೇಶದಲ್ಲಿ ರಂಗ ಚಟುವಟಿಕೆಗಳು ಹೇರಳವಾಗಿರುತ್ತವೆಯೋ ಆ ನಾಡು ಸಮೃದ್ಧವಾಗಿರುತ್ತದೆ.ಆದ್ದರಿಂದ ಮನುಕುಲದ ಬದುಕಿಗೆ ಆಸರೆಯಾದ ಕಲೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಡಾ.ಚಿತ್ತಯ್ಯ ಪೂಜಾರಿ ಮಾತಾನಾಡಿದರು.
  ಕಾರ‍್ಯಕ್ರಮದಲ್ಲಿ ನಾಟ್ಯಯೋಗ ಸಾಲಾಪೂರ ತಂಡದಿಂದ ಮಹಂತೇಶ್ ರಂಗರೂಪ ಮತ್ತು ನಿರ್ದೇಶನದ ನವಿಲೂರು ನಿಲ್ದಣ ನಾಟಕವನ್ನು ಪ್ರದರ್ಶಿಸಲಾಯಿತು ನಾಟಕದಲ್ಲಿ ಕಲಾವಿದರಾದ ರೂಪ.ಸಿ.ಆರ್, ಸತೀಶ್.ಪಂಚಗೌರಿ, ಸವಿತಾ ಕಾಳಿ, ನವೀನ್ ಭೂಮಿ, ಅರುಣ್ ಶೆಟ್ಟಿ, ಅಶೋಕ್.ಕೆ.ಟಿ, ರಂಜನಿ.ಎ.ಜಿ ಮತ್ತು ಸಂಚಾಲಕ ಕಲ್ಲಪ್ಪ ಪ್ರಜಾರ್ ಮನೋಜ್ಞವಾಗಿ ಅಭಿನಯಿಸಿದರು. ಗೌರಿ ಬಿದನೂರಿನ ಪ್ರತಾಪ್ ಮತ್ತು ತಂಡದಿಂದ ಡೊಳ್ಳು ಕುಣಿತ, ಗಂಗಾಧರ ಮತ್ತು ತಂಡದಿಂದ ಉರುಮೆ ವಾದನ, ಮಲ್ಲೇಶ್ ಮತ್ತು ತಂಡದಿಂದ ತಮಟೆ ವಾದನ, ಗಂಗಣ್ಣ.ಬಿ.ಸಿ ಮತ್ತು ತಂಡದಿಂದ ರಂಗಗೀತೆಗಳ ಗಾಯನ ಕಾರ‍್ಯಕ್ರಮಗಳು ಮನಸೋರೆಗೊಂಡವು.
  ಕಾರ‍್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಡಾ.ರಾಮಕೃಷ್ಣಯ್ಯ, ಎನ್.ಗೋಪಾಲಕೃಷ್ಣಪ್ಪ, ಡಾ.ಜನಾರ್ಧನ್, ಎಸ್.ಶಿವಣ್ಣ , ಶಂಕರ್ ಮೆಟ್ರಿ, ಆರ್.ಪಿ.ಮಂಜುನಾಥ್, ಹಿದಾಯತ್ ಅಹ್ಮದ್, ಚಂದ್ರಶೇಖರ್ ಮೇಟಿ ಇತರರಿದ್ದರು.ಮುಂತಾದವರು ಇದ್ದರು.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.