ಶಿಕ್ಷಕರ ನೇಮಕಾತಿಗೆ ಒತ್ತಾಯ
*ಗೆಳೆಯರೇ ದಯವಿಟ್ಟು ಇದನ್ನು ಓದಿ. ಇದು ನಮ್ಮ ನಿಮ್ಮೆಲ್ಲರ ಸಮಸ್ಯೆ*
ಸ್ನೇಹಿತರೇ, ಇಲ್ಲಿಗೆ ಶಿಕ್ಷಕರ ನೇಮಕಾತಿ ಮಾಡಿ ಮೂರು ವರ್ಷಗಳಾಗುತ್ತಿವೆ.ಅಲ್ಲದೆ ರಾಜ್ಯದಲ್ಲಿ ಸದ್ಯ 16,000ಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಇದ್ದರೂ ಮತ್ತು ಲಕ್ಷ ಲಕ್ಷ ಜನ ಶಿಕ್ಷಕ ಆರ್ಹತೆಯನ್ನು ಗಳಿಸಿದ್ದರು ಇದುವರೆಗೂ ಯಾವುದೇ ಶಿಕ್ಷಕ ನೇಮಕಾತಿ ನೆಡೆಸದೇ ಕೇವಲ ಗೌರವ ಶಿಕ್ಷಕರ ನೇಮಕಾತಿಯಂತಹ ಹಸಿದವನ ಬಾಯಿಗೆ ಬೆಣ್ಣೆ ಹಚ್ಚುವ ಕಾರ್ಯದಲ್ಲಿ ಸತತ 3 ವರ್ಷದಿಂದ ನಮ್ಮ ರಾಜ್ಯ ಸರ್ಕಾರ ಮುಳುಗಿ ಬಿಟ್ಟಿದೆ. ಅಲ್ಲದೇ ಕಳೆದ ಡಿಸೆಂಬರ್ ನಿಂದ ಶಿಕ್ಷಕರ ನೇಮಕಾತಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದೆವೆ.ಅಲ್ಲದೆ ಈಗಾಗಲೇ ಕೆಲವು ಸ್ನೇಹಿತರು ಕಳೆದ ಏಪ್ರೀಲ್ ತಿಂಗಳಲ್ಲಿ ನೇರವಾಗಿ ಶಿಕ್ಷಣ ಸಚಿವರಿಗೆ ಪೋನ್ ಮೂಲಕ ಕೇಳಿದಾಗ ಸ್ವತಃ ಮಂತ್ರಿಗಳೇ " ಈಗಾಗಲೇ ಶಿಕ್ಷಕರ ನೇಮಕಾತಿಗೆ ಹಣ ಬಿಡುಗಡೆಗೊಂಡಿದೆ ಮುಂದಿನ ಜೂನ್ ಮೊದಲ ವಾರದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತದೆ" ಎಂದೇಳಿದ ಧ್ವನಿಯನ್ನು ವಾಟ್ಸಪ್ ಮೂಲಕ ಎಲ್ಲರೂ ಕೇಳಿರುತ್ತೇವೆ.ಅಂತೆಯೇ ನಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳ ನಡುವೆ ಇದ್ದ ಅರೆಕಾಲೀಕ ಕೆಲಸಕ್ಕೂ ತಿಲಾಂಜಲಿ ಹೇಳಿ ಪ್ರಾಮಾಣಿಕ ಪ್ರಯತ್ನ ನೆಡೆಸುವ ಮಧ್ಯದಲ್ಲಿ ಈಗ ಮತ್ತೆ ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರರ್ಥ ಪೂರ್ಣ ಶಿಕ್ಷಕರ ನೇಮಕಾತಿಗೆ ವಿಷಯವನ್ನು ಕೈ ಬಿಡುವ ಮೂಲಕ " ಮುಂದೂಡುವ ಭಾಗ್ಯ" ಉದ್ಘಾಟನೆ ಮಾಡಿದಂತಿದೆ.ಅಲ್ಲದೆ ಇಂದಿನ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯಲು,ಮುಚ್ಚಲು ಮತ್ತು ಖಾಸಗಿ ಶಾಲೆಗಳು ಹೆಚ್ಚುತ್ತಿರುವುದಕ್ಕೆ ಕಾರಣ ನಮ್ಮ ಈಗಿನ ಸರ್ಕಾರವೇ ನೇರ ಹೊಣೆ. ಸ್ನೇಹಿತರೇ ಇನ್ನೆಷ್ಟು ದಿನ ಹೀಗೆ ಅತಿಥಿಗಳಾಗಿರೋದು. ನಾವು ಹೀಗೆ ಸೂತ್ರದ ಬೊಂಬೆಗಳಾದರೆ ನಾವು ಸಾಯುವವರೆಗೂ ಅತಿಥಿಗಳಾಗಿ, ಅವಿವಾಹಿತರಾಗಿ,ಯಾರಿಗೂ ಬೇಡದವರಿಗಾಗಿ ಇರಬೇಕಾದ ಪರಿಸ್ಥಿತಿ ದೂರವಿಲ್ಲ.ಆದ್ದರಿಂದ ನಾವು ಶಿಕ್ಷಕರ ನೇಮಕಾತಿ ಆಗುವವರೆಗೂ ಅತಿಥಿ ಶಿಕ್ಷಕ ಹುದ್ದೆಗೆ ಹೋಗುವುದಿಲ್ಲವೆಂದು ದೃಢ ನಿರ್ಧಾರ ಮಾಡಬೇಕಾಗಿದೆ.ಈ ಮೂಲಕವಾದರೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಲಿ.ಸ್ನೇಹಿತರೇ, ದುಡಿಯುವವನಿಗೆ ಸರ್ಕಾರಿ ನೌಕರಿಯೊಂದೆ ಮಾರ್ಗವಲ್ಲ ಅದರ ಬದಲಾಗಿ ಸಾಲ ಮಾಡಿಯಾದರೂ ಒಂದು ಕಿರಾಣಿ, ಪುಸ್ತಕ, ದಿನಸಿ, ತರಕಾರಿ ಅಂಗಡಿ ಅಥವಾ ಕೌಶಲ್ಯ ತರಬೇತಿ ಶಾಲೆಯಾದರೂ ಇಟ್ಕೊಂಡು ದುಡಿದರು ಶಾಶ್ವತವಾಗಿ ನೆಮ್ಮದಿಯಾಗಿ ಬದುಕಬಹುದು. ಆದರೆ ಇವತ್ತೋ, ನಾಳೆ ಕೈ ಬಿಡುವ ಅತಿಥಿ ಕೆಲಸ ನಂಬಿ ತಿಥಿಯಾಗದಿರಿ. ಸರ್ಕಾರಕ್ಕೆ ಕವಿದ *ಮಂಜು* ಸರಿಯುವುದಿಲ್ಲ ಬದಲಾಗಿ ಸರಿಸಬೇಕಾದವರು ನಾವು.ದಿನಕ್ಕೊಂದು ಮತಹೀನ ಭಾಗ್ಯಗಳನ್ನು ಕೊಡುವ ಮೂಲಕ ಮುಗ್ಧ ಜನತೆಗೆ ಮೋಸ ಮಾಡುತ್ತಿರುವ ಸರ್ಕಾರಕ್ಕೆ ನಮ್ಮದೊಂದು ಧಿಕ್ಕಾರವಿರಲಿ..!!
*ಈ ಸಂದೇಶ ಸತ್ಯವೆನಿಸಿದಲ್ಲಿ , ನಿಮ್ಮ ಬೆಂಬಲವಿದ್ದಲ್ಲಿ ಇತರೆ ಸಂಬಂಧಪಟ್ಟರಿಗೆ ತಲುಪವರೆಗೆ ಶೇರ್ ಮಾಡಿ.ಇಂತೀ ನೊಂದ ಉದ್ಯೋಗಕಾಂಕ್ಷಿಗಳು.*

Comments
Post a Comment