ರಂಗ ಮಾಲಿಕೆ - ೧. ಡಾ.ಸುಭದ್ರಮ್ಮ ಮನ್ಸೂರ್


 ಬಣ್ಣದ ಬದುಕು

ರಂಗ ಮಾಲಿಕೆ -೧



“ಉಭಯ ಕಲಾ ಶಾರದೆ”

 ಸುಭದ್ರಮ್ಮ ಮನ್ಸೂರ್


  ಬಳ್ಳಾರಿಯ ಬಹುತೇಕ ರಂಗಸ್ಥಳಗಳಲ್ಲಿ ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ...’ ಎಂಬ ಗಾಯನ ಕೇಳಿ ಬಂತೆAದರೆ ಅಂದು ರಂಗ ಮಂದಿರವೆಲ್ಲ ಹೌಸ್‌ಫುಲ್ ಅದಕ್ಕೆ ಕಾರಣ ಎಂತವರನ್ನಾದರೂ ಮಂತ್ರಮುಗ್ಧರನ್ನಾಗಿಸುವ ಕಂಠದ ‘ಉಭಯ ಕಲಾ ಶಾರದೆ ಮನ್ಸೂರು ಸುಭದ್ರಮ್ಮನವರು. ಇವರ ಪ್ರತಿಭೆ ಎಷ್ಟೊಂದು ಎತ್ತರದ್ದು ಎಂಬುದರ ಪರಿಚಯ (ಪ್ರಚಾರದ ಕೊರತೆಯಿಂದ) ನಮ್ಮ ಸಾರಸ್ವತ ಲೋಕಕ್ಕೆ ಆಗಿಲ್ಲ. ಸಂಗೀತದಲ್ಲಿ ಸಾಧನೆ ಸಿದ್ಧಿ ಕಂಡವರಿರಬಹುದು, ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು, ಆದರೆ ಹಾಡುಗಾರಿಕೆ ಮತ್ತು ಅಭಿನಯ ಎರಡರಲ್ಲೂ ಸಾಧನೆಯ ಶಿಖರಕ್ಕೇರಿದ ಕಲಾವಿದರೆಂದರೆ, ಕರ್ನಾಟಕದಲ್ಲಿ ಅದು ಈಗ ಶ್ರೀಮತಿ ಸುಭದ್ರಮ್ಮ ಮನ್ಸೂರು ಅವರೇ ಎಂದರೆ ತಪ್ಪಾಗಲಾರದು. ತಂದೆ ತಾಯಿಯವರಿಂದಲೇ ಸಂಗೀತದ ಶಿಕ್ಷಣ ಪಡೆದ ಸುಭದ್ರಮ್ಮನವರದು ಎಂತಹ ಮಧುರ ಕಂಠ ಎಂದರೆ ಹಾಡುಗಾರಿಕೆಯಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ರಾಷ್ಟç-ಅಂತರರಾಷ್ಟಿçÃಯ ಮಟ್ಟದ ಕೀರ್ತಿ ಪಡೆದಿದ್ದಾರೆ. ಹಾಗೆಂದಾಕ್ಷಣ ಅಭಿನಯದಿಂದ ಅವರ ಸಂಗೀತದ ಬೆಳವಣಿಗೆಗೆ ಕುಂದುAಟಾಗಿಲ್ಲ. ಈಗಲೂ ಅವರದು ರಾಷ್ಟç-ಅಂತರರಾಷ್ಟಿçÃಯ ಮಟ್ಟದ ಪ್ರತಿಭೆಯೇ. ಅಭಿನಯ ಮತ್ತು ಗಾಯನದಲ್ಲಿ ಒಟ್ಟೊಟ್ಟಿಗೇ ಸಾಧನೆಯ ಶಿಖರಕ್ಕೇರಿದವರು ಇಲ್ಲವೆನ್ನುವಷ್ಟು ವಿರಳ. ಈ ವಿರಳರಲ್ಲಿ ವಿರಳರಾಗಿರುವ ಸುಭದ್ರಮ್ಮನವರ ಈ ಬೆಳವಣಿಗೆಗೆ ಅವರು ಬೆಳೆದು ಬಂದ ಪರಿಸರವೇ ಕಾರಣ ಎನ್ನುವುದೊಂದು ಕುತೂಹಲಕಾರಿ ಅಂಶವಾಗಿದೆ.

   ಬಳ್ಳಾರಿಯ ಸಣ್ಣ ಕುಟುಂಬಕ್ಕೆ ಸೇರಿದ ಜ್ವಾಲಾಪತಿ ಮತ್ತು ಭಾಗ್ಯಮ್ಮ ಎಂಬುವರಿಗೆ ೧೯೩೯ರಲ್ಲಿ ಸುಭದ್ರಮ್ಮ ಜನಿಸಿದರು. ತಾಯಿ ದಕ್ಷಿಣಾದಿ ಸಂಗೀತ ವಿದೂಷಿ. ತಂದೆ ಮೆಕ್ಯಾನಿಕ್ ಹಾಗೂ ಹರ‍್ಮೋನಿಯಂ ವಾದಕರು. ಇಂತಹ ಪರಿಸರದಲ್ಲಿ ಸುಭದ್ರಮ್ಮನವರಿಗೆ ಬಾಲ್ಯದಲ್ಲಿಯೇ ಸಂಗೀತದಲ್ಲಿ ಕುತೂಹಲ ಮೂಡಿತು. ತಾಯಿಯಿಂದ ಸಂಗೀತ ಕಲಿತರು.ಬಳ್ಳಾರಿಯ ಜನ ಏಕಕಾಲಕ್ಕೆ ಕನ್ನಡ ಮತ್ತೆ ತೆಲುಗು ಮಾತಾನಾಡುವ ದ್ವಿಭಾಷಿಗಳು. ಸುಭದ್ರಮ್ಮ ತೆಲುಗು ಶಾಲೆಯಲ್ಲಿ ೬ನೇ ತರಗತಿಯವರೆಗೆ ಕಲಿತರು. ಸುತ್ತಲಿನ ಪರಿಸರದ ಪ್ರಭಾವದಿಂದ ಕನ್ನಡ ಓದು ಬರಹವನ್ನು ಕ್ರಮೇಣವಾಗಿ ಕಲಿತರು. ತಂದೆಯ ಆಕಸ್ಮಿಕ ಮರಣವು ಈ ಕುಟುಂಬವನ್ನು ಕೆಳಮಧ್ಯಮ ವರ್ಗದಿಂದ ಕೆಳವರ್ಗಕ್ಕೆ ನೂಕಿತು. ತಾಯಿಗೆ ಸಂಗೀತ ಕಚೇರಿಯಿಂದ ಬರುತ್ತಿದ್ದುದು ತೀರಾ ಕಡಿಮೆ ಆದಾಯ.

ಆಗಷ್ಟೇ ಬಳ್ಳಾರಿಗೆ ಮಂಗಳೂರು ಕಡೆಯಿಂದ “ಸುಮಂಗಲ ನಾಟ್ಯ ಸಂಘ” ಎಂಬ ಕಂಪನಿ ನಾಟಕ ಬಂದಿತ್ತು. ಮಗಳನ್ನು ನಾಟಕ ಕಂಪನಿಗೆ ಸೇರಿಸುವಂತೆ ಭಾಗ್ಯಮ್ಮನ ಹಿತೈಷಿಗಳು ಸಲಹೆ ಮಾಡಿದರು. ವೃತ್ತಿರಂಗಭೂಮಿ (ಕಂಪನಿ ನಾಟಕ) ಶ್ರೀಮಂತವಾಗಿದ್ದ ಆ ದಿನಗಳಲ್ಲಿ ಕಲಾವಿದರಿಗೆ ಚೆನ್ನಾಗಿ ಹಾಡಲು ಬರಬೇಕಾಗಿತ್ತು. ಎಲ್ಲ ಪಾತ್ರಧಾರಿಗಳು ಸ್ವತಃ ತಾವೇ ಹಾಡುತ್ತಿದ್ದ ಹಾಗೂ ತುಂಬಿದ ಮುಖ ಅಭಿವ್ಯಕ್ತಿಯ ಅಪಾರ ಸಾಧ್ಯತೆ ಪಡೆದಿದ್ದ ಕಣ್ಣುಗಳ, ಕಪ್ಪು ಸುಂದರಿ  ಸುಭದ್ರಮ್ಮ ಸಂದರ್ಶನದಲ್ಲಿ ಉತ್ತಿರ್ಣರಾಗಿ ನಾಟಕ ಕಂಪನಿ ಸೇರಿದಾಗ ಅವರಿಗಿನ್ನೂ ೧೨ ವರ್ಷ. ಬಾಲನಟಿಯಾಗಿ “ಟಿಪ್ಪು ಸುಲ್ತಾನ” ನಾಟಕದಲ್ಲಿ ಟಿಪ್ಪುವಿನ ಮಗನ ಪಾತ್ರ, “ಸತ್ಯ ಹರಿಶ್ಚಂದ್ರ” ನಾಟಕದಲ್ಲಿ  ಹರಿಶ್ಚಂದ್ರನ ಮಗ ಲೋಹಿತಾಶ್ವನಾಗಿ ಸುಭದ್ರಮ್ಮ ಅಭಿನಯಿಸಲು ಆರಂಭಿಸಿದರು. ಆಗಿನ ಕಾಲದಲ್ಲಿ ವಾರಕ್ಕೆ ೧ ರೂ. ಸಂಬಳ ಕೊಡುತ್ತಿದ್ದರು. ೨ ವರ್ಷಕ್ಕೆ ಕಂಪನಿ ಮುಚ್ಚಿತು. ಕಂಪನಿ ನಾಟಕಗಳ ವೈಭವದ ಕಾಲ ಅದು. ಅಪಾರ ಸಂಖ್ಯೆಯ ಕಂಪನಿ ನಾಟಕಗಳು ಆಗ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದವು-ಮುಚ್ಚುತ್ತಿದ್ದವು. ಇವುಗಳ ಮಧ್ಯೆ ಗಟ್ಟಿಯಾಗಿ ತಳವೂರಿದ ಕೆಲವು ಕಂಪನಿಗಳು ಈಗ ಇತಿಹಾಸ ನಿರ್ಮಿಸಿವೆ.

   ಸುಭದ್ರಮ್ಮ ಅವರಿಗೆ ೧೪ ವರ್ಷ. ಸತತ ಕಂಪನಿ ನಾಟಕಗಳಲ್ಲಿ ಅಭಿನಯಿಸುತ್ತ ಬಂದ ಶ್ರೇಷ್ಟ ನಟ ಲಿಂಗರಾಜ ಮನಸೂರರ ಪರಿಚಯ ಸುಮಂಗಲ ನಾಟಕ ಕಂಪನಿಯಲ್ಲಿ ಆಗಿತ್ತು. (ಲಿಂಗರಾಜ ಮನಸೂರರು ದೇಶದ ಖ್ಯಾತ ಹಾಡುಗಾರ ಮಲ್ಲಿಕಾರ್ಜುನ ಮನ್ಸೂರರ ಸಂಬAಧಿ) ಪರಿಚಯ ಪ್ರೀತಿಯಾಗಿ ತಮ್ಮ ೧೪ನೇ ವಯಸ್ಸಿನಲ್ಲಿ ತಮಗಿಂತ ೨೫ ವರ್ಷ ದೊಡ್ಡವರಾದ ಲಿಂಗರಾಜ ಮನಸೂರರನ್ನು ಮದುವೆಯಾದರು. ಅಲ್ಲದೇ ಇವರಿಗೆ ಲತಾ, ಜ್ಯೋತಿ, ಮಂಜುನಾಥ ಮತ್ತು ರಾಘವೇಂದ್ರ ಎಂಬ ನಾಲ್ಕು ಮಕ್ಕಳ ಪ್ರಾಪ್ತಿಯಾಗಿ ಯಶಸ್ವಿ ಗೃಹಿಣಿಯೆನಿಸಿದರು.

  ಸತಿ-ಪತಿಗಳಿಬ್ಬರೂ ಬೆಳಗಾವಿಯಲ್ಲಿದ್ದ ಏಣಿಗಿ ಬಾಳಪ್ಪ ಅವರ “ಕಲಾವೈಭವ ನಾಟ್ಯ ಸಂಘ” ಸೇರಿದರು. ಸತಿ-ಪತಿಯರಿಬ್ಬರೂ ಅಭಿನಯಿಸುತ್ತಿದ್ದರು. ಎಂಟು ವರ್ಷಗಳ ಕಾಲ ಇವರು ಆ ಕಂಪನಿಯಲ್ಲಿದ್ದರು. ಈ ಅವಧಿಯಲ್ಲಿ ಕಂಪನಿ ಹುಬ್ಬಳ್ಳಿ, ಗದಗ, ಬೆಳಗಾವಿ, ಮೀರಜ್, ಸಾಂಗ್ಲಿ ಮುಂತಾದ ಕಡೆ ಕ್ಯಾಂಪು ಮಾಡಿತ್ತು. “ಬಸವೇಶ್ವರ”, “ಭಕ್ತ ಕುಂಬಾರ”, “ಹೇಮರೆಡ್ಡಿ ಮಲ್ಲಮ್ಮ”, “ಕುರುಕ್ಷೇತ್ರ”, “ರಾಮಾಯಣ”–ಮುಂತಾದ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ಈ ನಾಟಕಗಳಲ್ಲಿ ಸತಿ-ಪತಿರರಿಬ್ಬರೂ ಪ್ರಮುಖ ಪಾತ್ರವಹಿಸಿದರು. ೮ ವರ್ಷಗಳ ನಂತರ ಬಾಳಪ್ಪನವರ ಕಂಪನಿ ತೊರೆದು, ಹಿರಿಯಣ್ಣನವರ ಪ್ರಸಿದ್ದ ನಾಟಕ “ದೇವದಾಸಿ”ಯಲ್ಲಿ ದೇವದಾಸಿ ಪಾತ್ರ “ಹೆಣ್ಣು ಹರಾಜು” ನಾಟಕದಲ್ಲಿ ಚಿನ್ನಿ ಪಾತ್ರವನ್ನು ಸುಭದ್ರಮ್ಮ ನಿರ್ವಹಿಸುತ್ತಿದ್ದರು.

    ಮಾ.ಹಿರಣ್ಣಯ್ಯ ಅವರ ಕಂಪನಿಗಳಲ್ಲಿ ಅವರೊಬ್ಬರಿಗೇ (ಅಥವಾ ಅವರ ಕುಂಟುAಬ) ಪ್ರಾಧಾನ್ಯ ಯಾವತ್ತಿನಿಂದಲೂ ಇದ್ದದ್ದೇ. ಪ್ರವರ್ಧಮಾನಕ್ಕೆ ಬರುತ್ತಿದ್ದ ಸುಭದ್ರಮ್ಮನವರ ಪ್ರಸಿದ್ಧಿಯನ್ನು ಜೀರ್ಣಸಿಕೊಳ್ಳುವುದು ಹಿರಿಣ್ಣಯ್ಯನವರಿಗೆ ಕಷ್ಟವಾಯಿತು. ನಾಲ್ಕೇ ವರ್ಷಕ್ಕೆ ಅವರು ಕಂಪನಿ ತೊರೆದು ಬಳ್ಳಾರಿಗೆ ಬಂದು ನೆಲೆಸಿದರು. ಮುಂದೆ ಜೀವನೋಪಾಯಕ್ಕೆ ಬೇರೆ ಮಾರ್ಗ ಇಲ್ಲದೆ ನಿರುದ್ಯೋಗ-ಹಸಿವು ಒಮ್ಮೆಲೇ ತಲೆದೋರಿತು. ಈಗಿರುವಾಗ ಒಮ್ಮೆ ರೈಲ್ವೆ  ಇಲಾಖೆಯವರು “ಮನೆ ಅಳಿಯ” ಎಂಬ ಏಕಾಂಕ ನಾಟಕದಲ್ಲಿ ಸುಭದ್ರಮ್ಮನವರಿಂದ ಪಾತ್ರ ಮಾಡಿಸಿದರು. ಸುಭದ್ರಮ್ಮ ನಾಟಕದಲ್ಲಿ ಅಭಿನಯಿಸುತ್ತಾರೆ ಎಂದು ಗೊತ್ತಾದ ಬಳ್ಳಾರಿ ಸಮೀಪದ ಮಲ್ಲಿಕೇತಿ ಎಂಬ ಗ್ರಾಮದವರು ಒಮ್ಮೆ “ಕುರುಕ್ಷೇತ್ರ” ಎಂಬ ನಾಟಕದ ದ್ರೌಪದಿ ಪಾತ್ರಕ್ಕೆ ಕರೆದೊಯ್ದು (೬೦ ರೂ.) ಮಲ್ಲಿಕೇತಿ  ಗ್ರಾಮದ “ಕುರುಕ್ಷೇತ್ರ”ದಿಂದ ಒಂದು ರೀತಿಯ ಹಳ್ಳಿಗಾಡಿನ ಹವ್ಯಾಸಿ ನಾಟಕಕ್ಕೆ ಸುಭದ್ರಮ್ಮನವರು ಪಾದಾರ್ಪಣೆ ಮಾಡಿದಾಗ ಈ ಕ್ಷೇತ್ರದ ಮೂಲಕ ಕರ್ನಾಟಕದಲ್ಲೇ ಮುಂದೆ ಪ್ರಸಿದ್ಧಿ ಗಳಿಸುತ್ತಾರೆಂಬುದು ಅವರ ಕನಸು-ಮನಸಿನಲ್ಲೂ ಇರಲಿಲ್ಲ. ಅಷ್ಟಕ್ಕೂ ಹೊಟ್ಟೆಪಾಡಿಗಾಗಿ ಈ ರಂಗ ಪ್ರವೇಶಿಸಿದವರಲ್ಲವೇ? ಮುಂದೆ ಒಂದೊAದೇ ಕರೆ ಬಂದವು. ಸುತ್ತ ಹಳ್ಳಿಗಳಲ್ಲಿ ಸುಭದ್ರಮ್ಮ ಚೆನ್ನಾಗಿ ಅಭಿನಯಿಸುತ್ತಾರೆ ಎಂದು ಪ್ರಸಿದ್ದಿಯಾದರು. ಆರಂಭದಲ್ಲಿ ಲಿಂಗರಾಜ ಅವರನ್ನು ಅಲ್ಲೊಂದು ಇಲ್ಲೊಂದು ನಾಟಕಕ್ಕೆ ಕರೆದೊಯ್ಯುತ್ತಿದ್ದರು. ಯಾವುದಾದರೂ ಕಂಪನಿ ನಾಟಕಗಳಲ್ಲಿ ಕೆಲದಿನಗಳ ಮಟ್ಟಿಗೆ ಲಿಂಗರಾಜ ಮನ್ಸೂರರಿಗೆ ಕರೆ ಬರುತ್ತಿತ್ತು. ಆದರೆ ಕ್ರಮೇಣ ಲಿಂಗರಾಜ ಮನಸೂರ ಅವರ ಬೇಡಿಕೆ ತಗ್ಗಿತು. ಮುಂದೆ ನಾಲ್ಕಾರು ವರ್ಷಗಳಲ್ಲಿ ಸುಭದ್ರಮ್ಮ ಮನ್ಸೂರು ಅವರ ಬೇಡಿಕೆ ಹೇಗೆ ಹೆಚ್ಚಾಯಿತೆಂದರೆ ಒಮ್ಮೊಮ್ಮೆ ತಿಂಗಳ ೩೦ ದಿನವೂ ನಾಟಕಗಳಿರುತ್ತಿದ್ದವು. ಪತಿ ಲಿಂಗರಾಜ ಮನಸೂರ ಅವರು ಪತ್ನಿಯೊಂದಿಗೆ ಮಕ್ಕಳನ್ನು ಹೊತ್ತುಕೊಂಡು ನಾಟಕಗಳಿಗೆ ಹೋಗುತ್ತಿದ್ದರು. ನಾಲ್ವರು ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಪತಿ ಲಿಂಗರಾಜ ಅವರದು. ಅಭಿನಯ ಸುಭದ್ರಮ್ಮನವರದು.

ತಮ್ಮ ಮಹಾಭಾರತದ ನಾಟಕಗಳ ಟ್ರಾಜಿಕ್ ಅಂಶದಿAದಾಗಿ ಕರ್ನಾಟಕದ ಶೇಕ್ಸ್ಪಿಯರ್ ಎಂದು ಪ್ರಸದ್ದರಾಗಿರುವ ಕಂದಗಲ್ಲ ಹನುಮಂತರಾವ್ ಅವರ “ಬಾಣಸಿಗ ಭೀಮ”, “ಕುರುಕ್ಷೇತ್ರ”, “ರಕ್ತರಾತ್ರಿ”, “ನರವೀರ ಪಾರ್ಥ” - ನಾಟಕಗಳಲ್ಲಿ ದ್ರೌಪದಿ ಪಾತ್ರ. ಕಂದಗಲ್ಲರಷ್ಟೇ ಖ್ಯಾತರಾದ ಮತ್ತೊಬ್ಬ ನಾಟಕಕಾರ ನಲವಡಿ ಶ್ರೀಕಂಠಶಾಸ್ತಿçÃಗಳ “ಹೇಮರೆಡ್ಡಿ ಮಲ್ಲಮ್ಮ” ನಾಟಕದಲ್ಲಿ ಮಲ್ಲಮ್ಮ. “ಬಸವೇಶ್ವರ” ನಾಟಕದ ಗಂಗಾAಬಿಕೆ. ಮತ್ತೊಬ್ಬ ಕನ್ನಡದ ಬಹುಮುಖ್ಯ ನಾಟಕಕಾರ ಬಿ. ಪುಟ್ಟಸ್ವಾಮಯ್ಯ ಅವರ “ಕುರುಕ್ಷೇತ್ರ” ನಾಟಕದ “ಕುಂತಿ” ಮತ್ತು “ಗಾಂಧಾರಿ” ಪಾತ್ರಗಳಿಗೆ ತಮ್ಮದೇ ಆದ ಅಭಿನಯದ ಮುದ್ರೆಯನ್ನು ಕನ್ನಡ ರಂಗಭೂಮಿಯಲ್ಲಿ ಶಾಶ್ವತವಾಗಿ ಒತ್ತಿದವರು ಸುಭದ್ರಮ್ಮನವರು.“ರಕ್ತರಾತ್ರಿ” ನಾಟಕದಲ್ಲಿ ಅಶ್ವತ್ಥಾಮನ ಕೈಯಿಂದ ಮಕ್ಕಳು ಹತರಾದಾಗ ದ್ರೌಪದಿ ಪ್ರತೀಕಾರ ಕೈಗೊಳ್ಳುವ ದೃಶ್ಯವೊಂದು ಬರುತ್ತದೆ. ಈ ದೃಶ್ಯದಲ್ಲಿ ಸುಭದ್ರಮ್ಮನವರ ಅಭಿನಯ ಕನ್ನಡ ರಂಗಭೂಮಿಯಲ್ಲೇ ಅನನ್ಯವಾದುದು. ಖ್ಯಾತ ಕಂಪನಿ ನಾಟಕ ಕಲಾವಿದ ಯಲಿವಾಳ ಸಿದ್ದಯ್ಯಸ್ವಾಮಿ ಅಶ್ವತ್ಥಾಮನ ಪಾತ್ರದಲ್ಲಿ, ಸುಭದ್ರಮ್ಮ ದ್ರೌಪದಿಯಾಗಿ “ರಕ್ತರಾತ್ರಿ” ಕಂಗೊಳಿಸುವುದನ್ನು ನೋಡಿಯೇ ಅನುಭವಿಸಬೇಕು – ಎಂದು ಆಗಿನ ಕಾಲದ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಈ ನಾಟಕಗಳಿಂದ ಸುಭದ್ರಮ್ಮ ಇಡೀ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಂತೂ ಇವರು ಮನೆ ಮಾತಾಗಿದ್ದಾರೆ. ಇವರನ್ನು ಕರೆಯದ ಹಳ್ಳಿಗಾಡಿನ ಹವ್ಯಾಸಿ ತಂಡಗಳೇ ಇಲ್ಲವೆನ್ನಬಹುದು.

   ಕನ್ನಡವಲ್ಲದೇ ತೆಲುಗು ಭಾಷೆಯನ್ನು ಸಹ ಚೆನ್ನಾಗಿ ಬಲ್ಲ ಸುಭದ್ರಮ್ಮ ಕೆಲವು ತೆಲುಗು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಬಳ್ಳಾರಿ ತಾಲ್ಲೂಕಿನ ಹರ‍್ಯಾಳ ಗ್ರಾಮದಲ್ಲಿ “ಪಲ್ಲೆ ಪಡುಚು” ನಾಟಕ, ಗುಂತಕಲ್ಲಿನಲ್ಲಿ “ನಟನಾಲಯಂ” ನಾಟಕ, ಎರಗುಂಟ್ಲದಲ್ಲಿ “ಗಯೋಪಾಖ್ಯಾನಂ” ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವರ್ಷಕ್ಕೆ ಒಂದು-ಎರಡು-ನಾಲ್ಕು ನಾಟಕಗಳನ್ನು ಅಭಿನಯಿಸುವ ಹಳ್ಳಿಗಾಡಿನ ಹವ್ಯಾಸಿ ನಾಟಕ ತಂಡಗಳವರು ತಮ್ಮ ಮಧ್ಯೆಯೇ ಇರುವ ಜಾನಪದ ನಾಟಕ ಶೈಲಿ (ದೊಡ್ಡಾಟ, ಬಯಲಾಟ ಇತ್ಯಾದಿ) ಅನುಸರಿಸುವುದಿಲ್ಲ. ಕಂಪನಿ ನಾಟಕ ಶೈಲಿ ಅನುಸರಿಸುತ್ತಾರೆ. ಕಂಪನಿ ನಾಟಕ ಕಳೆದ ೩ ದಶಕಗಳ ಹಿಂದೆಯೇ ತನ್ನ ಪ್ರಯೋಗಶೀಲತೆ ಕಳೆದುಕೊಂಡಿತು. ಹೀಗಾಗಿ ಹಳ್ಳಿಗರ ಹವ್ಯಾಸಿಗಳಲ್ಲಿ, ಪ್ರತಿಭೆ ಇದ್ದರೂ ಈಗಲೂ ಅವರು ಕಂಪನಿ ಶೈಲಿ ಅನುಸರಿಸುತ್ತಲೇ ಇದ್ದಾರೆ.

   ಮಲ್ಲಿಕೇತಿ ಗ್ರಾಮದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ಪಾತ್ರದ ಮುಖಾಂತರ ಗ್ರಾಮೀಣ ರಂಗಭೂಮಿಗೆ ಪಾದಾರ್ಪಣೆ ಮಾಡಿದ ೫-೬ವರ್ಷಗಳಲ್ಲಿ ಹಳ್ಳಿಗಳಲ್ಲಿ ಭಾರಿ ಬೇಡಿಕೆಯ ನಟಿಯಾಗಿ ಬಿಟ್ಟರು. ಸೊಗಸಾದ ಗಾಯನ, ಪೌರಾಣಿಕ ನಾಟಕಗಳ ಅನುಭವದಿಂದ ಕ್ಲಿಷ್ಟಕರ ಸಂಭಾಷಣೆಯ ಅಸ್ಕಲಿತ ಉಚ್ಛಾರಣೆ ನಾಟಕ ಕಂಪನಿಗಳ ಪಕ್ಕಾಗಿ ಅಭಿನಯದ ಪ್ರಬುದ್ದತೆಯಿಂದ ಸುಭದ್ರಮ್ಮನವರು ಖ್ಯಾತಿಯ ಶಿಖರವೇರಿದರು. ಹಳ್ಳಿ ಹಳ್ಳಿ ಸುತ್ತಿ ಜೀವನ ನಡೆಸಿದರು. ಮಹಾಭಾರತ ಹಾಗೂ ರಾಮಾಯಣ ಆಧರಿಸಿದ ಎಲ್ಲಾ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ನಾಯಕಿ ಪಾತ್ರ. ಕಂದಗಲ್ ಹನುಮಂತರಾಯರ ಬಾಣಸಿಗ ಭೀಮ, ಚಿತ್ರಾಂಗದ, ಪಾಂಚಾಲಿ, ನರವೀರ ಪಾರ್ಥ ಮುಂತಾದ ನಾಟಕಗಳಲ್ಲಿ ದ್ರೌಪದಿ ಪಾತ್ರದಲ್ಲಿ ಮನೆ ಮಾತಾಗಿದ್ದಲ್ಲದೆ, ರಕ್ತರಾತ್ರಿ ನಾಟಕದಲ್ಲಿ ತನ್ನ ಐವರು ಪುತ್ರರಾದ ಉಪಪಾಂಡವರನ್ನು ಅಶ್ವತ್ಥಾಮ ಸಂಹಾರ ಮಾಡಿದಾಗ ತಾಯಿ ಹೃದಯದಲ್ಲಾಗುವ ಸಂಕಟವನ್ನು ಮನಕರಗುವಂತೆ ಅಭಿನಯ ಮಾಡುತ್ತಿದ್ದರು. ನಲವಡಿ ಶ್ರೀಕಂಠ ಶಾಸ್ತಿçಗಳ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಸುಭದ್ರಮ್ಮನವರು ಸಾಕ್ಷಾತ್ ಮಲ್ಲಮ್ಮನೇ ಆಗಿರುತ್ತಾರೆ. ಹೀಗೆ ಕಳೆದ ೫೦ ವರ್ಷಗಳಲ್ಲಿ ಸಾಮಾಜಿಕ ನಾಟಕ ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಹೂವಿನ ಹಡಗಲಿ ಹವ್ಯಾಸಿ ತಂಡವಾದ ರಂಗಭಾರತಿಯಲ್ಲಿ “ಆಷಾಢದ ಒಂದು ದಿನ, ಸೂರ್ಯ ಶಿಕಾರಿ, ಯಯಾತಿ, ಜೋಕುಮಾರ ಸ್ವಾಮಿ, ಸಂಗ್ಯಾಬಾಳ್ಯಾ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಏಕತಾನತೆಯನ್ನು ಮುರಿದು ಹಾಕಿದರು. ಆದರೂ ಅವರಿಗೆ ಅಭಿರುಚಿಯ ಹಸಿವು ತೀರಿಲ್ಲ. ಇಂತಹ ನಾಟಕಗಳು ಬೇಗ ಮುಗಿದು ಬಿಡುತ್ತವೆ ಎಂಬ ಆಕ್ಷೇಪಣೆ. ಆದ್ದರಿಂದ ಅವರಿಗೆ ಅಂತಹ ನಾಟಕಗಳು ಅಷ್ಟೊಂದು ಸಮಾಧಾನ ಕೊಡುವುದಿಲ್ಲವಂತೆ! ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯ ನಾಟಕಗಳು ಯಾವ ನೀತಿ ಎತ್ತಿ ಹಿಡಿಯುತ್ತವೆ. ಜನರು ಈ ನಾಟಕಗಳಲ್ಲಿ ತಿಳಿದುಕೊಳ್ಳುವುದೇನಿದೆ ? ಎಂದು ಅವರು ಮುಗ್ಧವಾಗಿ ಪ್ರಶ್ನಿಸುತ್ತಾರೆ.

ಸಂಗೀತದೊAದಿಗಿನ ನಂಟು:

     ಸುಭದ್ರಮ್ಮನವರು ಹಿರಣ್ಣಯ್ಯನವರ ಕಂಪನಿ ನಾಟಕದಲ್ಲಿ ಬೆಂಗಳೂರಿನಲ್ಲಿ ಒಮ್ಮೆ ಅಭಿನಯಿಸುತ್ತಿದ್ದಾಗ ಸಿದ್ದಗಂಗಾಮಠದ ಶಿವಕುಮಾರ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸುಭದ್ರಮ್ಮನವರ ಕೈಯಿಂದ ವಚನ ಹಾಡಿಸಿದರೆ ಚೆನ್ನಾಗಿರುತ್ತದೆ ಎಂದು ಹಿರಣ್ಣಯ್ಯ ವಚನವೊಂದನ್ನು ಹಾಡಿಸಿದರು. ಅಕ್ಕಮಹಾದೇವಿಯ “ಬೆಟ್ಟದ ಮೇಲೊಂದು” ವಚನಕ್ಕೆ ಯೋಗಾನರಸಿಂಹರು ರಾಗ ಸಂಯೋಜಿಸಿದರು, ಸುಭದ್ರಮ್ಮ ಹಾಡಿದರು. ಈ ಹಾಡು ಎಷ್ಟು ಪ್ರಸಿದ್ಧಿಯಾಯಿತೆಂದರೆ, ಈಗಲೂ ಸುಭದ್ರಮ್ಮ ಅಭಿನಯಿಸುವ ಯಾವುದೇ ನಾಟಕದಲ್ಲಿ ಪ್ರೇಕ್ಷಕರು ಈ ಹಾಡನ್ನು ಹಾಡಲೇಬೇಕೆಂದು ಒತ್ತಾಯಿಸುತ್ತಾರೆ. ಹಾಗೆಯೇ ಬಸವಣ್ಣ, ಅಲ್ಲಮ, ದಾಸಿಮಯ್ಯ ಅವರ ಅನೇಕ ವಚನಗಳಿಗೆ ಸುಭದ್ರಮ್ಮ ಜೀವ ತುಂಬಿದ್ದಾರೆ. ಶಾಸ್ತಿçÃಯ ಸಂಗೀತ ಕಛೇರಿಗಳಂತೆ ರಂಗ ಸಂಗೀತ ಕಛೇರಿಗಳದು ಮತ್ತೊಂದು ವಿಶೇಷತೆÀ ಇತ್ತು.  ಶಾಸ್ತಿçÃಯ ಸಂಗೀತ ದೀರ್ಘ ಆಲಾಪನ ರಂಗ ಗೀತೆಗಳದೇ ಒಂದು ವಿಶೇಷ. ಕನ್ನಡ ರಂಗಭೂಮಿ ಪ್ರೇಕ್ಷಕರಿಗೆ ಇವರ ನೆನಪಿನೊಂದಿಗೆ ಬರುವುದು ಅವರ ಸುಪ್ರಸಿದ್ದ ವಚನ ಗಾಯನ “ಬೆಟ್ಟದ ಮೇಲೊಂದು ಮನೆಯ ಮಾಡಿ” ನೂರಾರು ಹಳ್ಳಿಗಳಲ್ಲಿ ಸಾವಿರಾರು ಪ್ರದರ್ಶನಗಳಲ್ಲಿ ಇವರು ಹಾಡಿಗೆ ಪ್ರೇಕ್ಷಕರ ಬೇಡಿಕೆ ಮತ್ತು ಸುಭದ್ರಮ್ಮನವರ ಕಂಠದಿAದ ಹೊರಡುವ ಆಲಾಪನೆಗಳು ಅವಿಸ್ಮರಣೀಯ. ಇವರ ಸಂಗೀತ ಗುರುಗಳು ಶ್ರೀ.ಎ.ಚಂದ್ರಶೇಖರ ಗವಾಯಿಗಳು ಬಳ್ಳಾರಿಯವರಾಗಿದ್ದಾರೆ.


ಗೌರವ ಮತ್ತು ಪುರಸ್ಕಾರಗಳು 

ಕರ್ನಾಟಕ ನಾಟಕ ಅಕಾಡೆಮಿ –೧೯೮೬

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ –೧೯೯೬.

ಕೊಟ್ರಪ್ಪಗೌಡ ಪಾಟೇಲ್ ಕಲಾರಾಧಕ ಪ್ರಶಸ್ತಿ –೧೯೯೮.

ಕನಕಪುರ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ –೧೯೯೯.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ –೨೦೦೩.

೩ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಅಮೇರಿಕಾ –೨೦೦೪.

ಮಂಗಳೂರು ಸಂದೇಶ ಪ್ರಶಸ್ತಿ –೨೦೦೫.

ಇಂಡುವಾಳು ಹೆಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಮಂಡ್ಯ –೨೦೦೫.

ಗುಬ್ಬಿ ವೀರಣ್ಣ ಪ್ರಶಸ್ತಿ –೨೦೦೭.

ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮೂಡಬಿದ್ರೆ –೨೦೧೨.

ಗಿರಿಜಾ ಲೋಕೇಶ್ ಇವರಿಂದ ಶ್ರೀಮತಿ ಲಕ್ಷಿö್ಮÃಬಾಯಿ ಪ್ರಶಸ್ತಿ –೨೦೧೩.

ಚಿಂದೋಡಿ ಲೀಲಾ ಪ್ರಶಸ್ತಿ –೨೦೧೩.

ವಿಜಯನಗರ ಶ್ರೀಕೃಷ್ಣದೇವರಾಯರ ವಿಶ್ವವಿದ್ಯಾಲಯ, ಬಳ್ಳಾರಿ ಇವರಿಂದ ಡಾಕ್ಟರ್ ಆಫ್ ಆರ್ಟ್ಸ್-೨೧.೦೬.೨೦೧೪


   ಕರ್ನಾಟಕ ನಾಟಕ ಅಕಾಡೆಮಿ ೧೯೮೬ ರಲ್ಲಿ ಸುಭದ್ರಮ್ಮನವರನ್ನು ಸನ್ಮಾನಿಸುವ ಮೂಲಕ ತನ್ನನ್ನೇ ಸನ್ಮಾನಿಸಿಕೊಂಡಿತು. ದೆಹಲಿಯ ಕರ್ನಾಟಕ ಸಂಘ, ಆಂಧ್ರ ಕಲಾಸಂಘಗಳೂ ಅವರನ್ನು ಸನ್ಮಾನಿಸಿವೆ. ಬಳ್ಳಾರಿ ಜಿಲ್ಲೆಯಲ್ಲಿಅಪಾರ ಸಂಖ್ಯೆಯ ವೃತ್ತಿಕಲಾವಿದೆಯರು (ಕೂಡ್ಲ್ಲಿಗಿ, ಮರಿಯಮ್ಮನಹಳ್ಳಿ) ಪ್ರತಿಭಾಗಣಿಯಾಗಿದ್ದಾರೆ. ಈ ನಟಿಯರಲ್ಲಿ ಅನೇಕರು ಸುಭದ್ರಮ್ಮನವರಿಂದ ಸ್ವಯಂಶಿಸ್ತು, ತಾದಾತ್ಮತೆ, ನಿಷ್ಠೆ ಮುಂತಾದ ಗುಣಗಳನ್ನು ಕಲಿತರು. ಇದರಿಂದ ನಟಿಯರ ಗೌರವ ಮತ್ತಷ್ಟು ಹೆಚ್ಚಿತು. ಹೀಗೆ ವೃತ್ತಿ ನಟಿಯರಿಗೆ ಘನತೆ ತಂದು ಕೊಟ್ಟ ಸುಭದ್ರಮ್ಮ ಈ ಎಲ್ಲ ನಟಿಯರ ಹಿರಿಯಕ್ಕ ಮಾರ್ಗದರ್ಶಿಯಾಗಿ ಹೆಸರನ್ನು ಗಳಿಸಿದ್ದಾರೆ. ಅಪಾರ ಬಂಧು ಬಳಗದ ಜವಾಬ್ದಾರಿ ಹೊತ್ತ ಇವರು ಈ ಕಾರಣಕ್ಕೆ ನೋವು-ಸಂಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಸದಾ ಹಸನ್ಮುಖಿ. ಚಿತ್ರದುರ್ಗಕ್ಕೆ ಒಮ್ಮೆ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ವತಿಯಿಂದ ರಂಗಗೀತೆ ಕಾರ್ಯಕ್ರಮ ನೀಡಲು ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ಬಂಧು ಬಳಗದಲ್ಲೊಂದು ಸಂಕಷ್ಟದಲ್ಲಿ ಪಾಲ್ಗೊಳ್ಳಬೇಕಿತ್ತು. ಅದೇ ಹೊತ್ತಿಗೆ ಆಕಾಶವಾಣಿಯವರು ಸುಭದ್ರ÷್ಮನವರನ್ನು ಸಂದರ್ಶಿಸಲು ಅನುಮತಿ ಬೇಡಿದರು. ತಮ್ಮ ಬಂಧುಗಳ ಕರೆಗೆ ಓಗೊಟ್ಟು ಆಕಾಶವಾಣಿ ಸಂದರ್ಶನ ತಿರಸ್ಕರಿಸಿ ಹೊರಟು ಹೋದರು. ಟಿ.ವಿ.–ಆಕಾಶವಾಣಿಯಲ್ಲಿ ಅವಕಾಶ ಸಿಕ್ಕರೆ ಸಾಕೆಂದು ಹಪಹಪಿಸುವ ಜನರ ಮಧ್ಯೆ ಸುಭದ್ರಮ್ಮ ಎಂತಹ ವಿರಳರು! ಚಿತ್ರದುರ್ಗ ಅಭಿಮಾನಿಗಳು ಸಮೀಪದ ಹಳ್ಳಿಯ ನಾಟಕವೊಂದರಲ್ಲಿ ಸುಭದ್ರಮ್ಮನವರ ಸನ್ಮಾನ ಇಟ್ಟುಕೊಂಡಿದ್ದರು. ಅದೇ ಬೇರೆ ಊರಲ್ಲಿ ಸುಭದ್ರಮ್ಮನವರ ನಾಟಕ ಇತ್ತು. ನಾಟಕ ಕೈಬಿಟ್ಟು ಸನ್ಮಾನಕ್ಕೆ ಬರಬಹುದಿತ್ತು. ಆದರೆ ಸನ್ಮಾನಕ್ಕೆ ಬರಲಿಲ್ಲ. ನಾಟಕದ ಜನ ನನಗೆ ಸಾಕಷ್ಟು ಸನ್ಮಾನ ಮಾಡಿದ್ದಾರೆ ಸಾಕು ಬಿಡ್ರಿ ಎಂದು ವಿನಮ್ರವಾಗಿ ತಿರಸ್ಕರಿಸಿದರು. ಹಳ್ಳಿಗಾಡಿನ ಜನರ ಬಗ್ಗೆ ಸುಭದ್ರಮ್ಮನವರಿಗೆ ಎಲ್ಲಿಲ್ಲದ ಗೌರವ. ನನಗೆ ಹೊಟ್ಟೆ ತುಂಬಾ ಊಟ ಕೊಟ್ಟರು. ಗೌರವ-ಮರ್ಯಾದೆ ಕೊಟ್ಟರು ಎಂದು ಈಗಲೂ ನಿಷ್ಕಲ್ಮಷವಾದ ಹೃದಯದಿಂದ ಸ್ಮರಿಸುತ್ತಾರೆ. ರಂಗಗೀತೆಗಳಿಗೆ ಕರ್ನಾಟಕದಲ್ಲಿ ಈಗ ಇರುವುದು ಒಂದೇ ಹೆಸರು ಸುಭದ್ರಮ್ಮ, ಅಭಿನಯದಲ್ಲೂ ಯಾವ ಶ್ರೇಷ್ಟನಟಿಗೂ ಕಡಿಮೆ ಇಲ್ಲದ ಅಭಿನಯ.“ಪರಿಶ್ರಮ ಮತ್ತು ಬದ್ಧತೆಯಿಂದಲೇ ಪ್ರತಿಫಲ ಸಾಧ್ಯ”ಎಂಬುದು ಇಂದಿನ ಉದಯೋನ್ಮುಖ ಕಲಾವಿದರಿಗೆ ಅಮ್ಮನವರು ನೀಡುವ ಕಿವಿಮಾತು. 



ಲೇಖನ : ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ

ಸಾಹಿತಿ ಮತ್ತು ಬರಹಗಾರರು

mob-೯೩೭೯೮೫೭೭೭೫

manjuamazing7@gmail.com

Comments